HOME » NEWS » National-international » DELHI RIOTS OPPOSITION LEADERS BJP ALLIES QUESTION AMIT SHAHS CLEAN CHIT TO DELHI POLICE MAK

ದೆಹಲಿ ಗಲಭೆಯಲ್ಲಿ ಪೊಲೀಸರಿಗೆ ಕ್ಲೀನ್​ಚಿಟ್ ನೀಡಿದ ಅಮಿತ್ ಶಾ; ಕೇಂದ್ರದ ನಡೆಗೆ ವಿರೋಧ ಪಕ್ಷಗಳ ಒಕ್ಕೊರಲಿನ ಪ್ರತಿರೋಧ

ಫೆಬ್ರವರಿ 23 ದೆಹಲಿಯ ಇತಿಹಾಸದಲ್ಲಿ ಒಂದು ಕರಾಳ ದಿನ. ಕೋಮು ಬೆಂಕಿ ನಗರವನ್ನು ಆವರಿಸಿತು, ಶಸ್ತ್ರಸಜ್ಜಿತ ಗೂಂಡಾಗಳು ಮುಗ್ಧ ಹಿಂದೂಗಳು ಮತ್ತು ಮುಸ್ಲಿಮರ ಮೇಲೆ ಮನಸ್ಸೋ ಇಚ್ಚೆ ದಾಳಿ ನಡೆಸಿದರು. ಆದರೆ, ಇಂತಹ ಹಿಂಸಾಚಾರವನ್ನು ಆರಂಭದಲ್ಲೇ ತಡೆಯಬಹುದಾಗಿದ್ದ ದೆಹಲಿ ಪೊಲೀಸರು ಕನಿಷ್ಟ ಪ್ರತಿಕ್ರಿಯಿಸಲೂ ಅಸಮರ್ಪಕರಾಗಿದ್ದರು ಎಂದು ಅಕಾಲಿ ದಳ ಸಂಸದ ನರೇಶ್ ಗುಜ್ರಾಲ್ ಕಿಡಿಕಾರಿದ್ದಾರೆ.

news18-kannada
Updated:March 13, 2020, 11:24 AM IST
ದೆಹಲಿ ಗಲಭೆಯಲ್ಲಿ ಪೊಲೀಸರಿಗೆ ಕ್ಲೀನ್​ಚಿಟ್ ನೀಡಿದ ಅಮಿತ್ ಶಾ; ಕೇಂದ್ರದ ನಡೆಗೆ ವಿರೋಧ ಪಕ್ಷಗಳ ಒಕ್ಕೊರಲಿನ ಪ್ರತಿರೋಧ
ದೆಹಲಿ ಹಿಂಸಾಚಾರ
  • Share this:
ನವ ದೆಹಲಿ (ಮಾರ್ಚ್ 13); ದೆಹಲಿ ಕೋಮು ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸರಿಗೆ ಕ್ಲೀನ್​ಚಿಟ್​ ನೀಡಿರುವುದು ಇದೀಗ ಮಿತ್ರ ಪಕ್ಷ ಅಕಾಲಿ ದಳ ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳ ಆಕ್ರೋಶಕ್ಕೆ ಕಾರಣವಾಗಿದೆ.

ಗುರುವಾರ ಲೋಕಸಭಾ ಚರ್ಚೆಯ ವೇಳೆ ವಿರೋಧ ಪಕ್ಷಗಳ ನಾಯಕರು ರಾಷ್ಟ್ರ ರಾಜಧಾನಿಯಲ್ಲಿ ಇತ್ತೀಚೆಗೆ ನಡೆದ ಕೋಮು ಗಲಭೆಗಳಲ್ಲಿ ಪೊಲೀಸರ ಪಾತ್ರವನ್ನು ಟೀಕಿಸಿದ್ದರು. ಆದರೆ, ಭಾಷಣದ ವೇಳೆ ಗೃಹ ಸಚಿವ ಅಮಿತ್ ಶಾ ದೆಹಲಿ ಪೊಲೀಸರಿಗೆ ಕ್ಲಿನ್​ಚಿಟ್ ನೀಡಿದ್ದರು. ಆದರೆ, ಈ ವಿಚಾರ ಇದೀಗ ಸಂಸತ್​ನಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ರಾಜ್ಯಸಭೆಯಲ್ಲಿ ಗುರುವಾರ ಮಾತನಾಡಿದ್ದ ಬಿಜೆಪಿ ಮಿತ್ರಪಕ್ಷ ಅಕಾಲಿ ದಳದ ಸಂಸದ ನರೇಶ್ ಗುಜ್ರಾಲ್, “ನಾನು ದೂರು ನೀಡಿದ್ದ ಹೊರತಾಗಿಯೂ ಮೌಜ್ಪುರದಲ್ಲಿ ಸಿಕ್ಕಿಬಿದ್ದಿದ್ದ ಸಂತ್ರಸ್ತರನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ಈ ಕುರಿತು ದೆಹಲಿ ಪೊಲೀಸ್ ಅಯುಕ್ತರಿಗೂ ನಾನು ಪತ್ರ ಬರೆದಿದ್ದೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ಈ ಹಿಂಸಾಚಾರ 1984ರ ಸಿಖ್ ವಿರೋಧಿ ಗಲಭೆಯನ್ನು ನೆನಪಿಸುವಂತಿದೆ” ಎಂದು ಕಿಡಿಕಾರಿದರು.

"ಫೆಬ್ರವರಿ 23 ದೆಹಲಿಯ ಇತಿಹಾಸದಲ್ಲಿ ಒಂದು ಕರಾಳ ದಿನ. ಕೋಮು ಬೆಂಕಿ ನಗರವನ್ನು ಆವರಿಸಿತು, ಶಸ್ತ್ರಸಜ್ಜಿತ ಗೂಂಡಾಗಳು ಮುಗ್ಧ ಹಿಂದೂಗಳು ಮತ್ತು ಮುಸ್ಲಿಮರ ಮೇಲೆ ಮನಸ್ಸೋ ಇಚ್ಚೆ ದಾಳಿ ನಡೆಸಿದರು. ಆದರೆ, ಇಂತಹ ಹಿಂಸಾಚಾರವನ್ನು ಆರಂಭದಲ್ಲೇ ತಡೆಯಬಹುದಾಗಿದ್ದ ದೆಹಲಿ ಪೊಲೀಸರು ಕನಿಷ್ಟ ಪ್ರತಿಕ್ರಿಯಿಸಲೂ ಅಸಮರ್ಪಕರಾಗಿದ್ದರು.

ಈ ಘಟನೆಯನ್ನು ನೋಡಿದರೆ 1984ರಲ್ಲಿ ಕಾಂಗ್ರೆಸ್ ಬೆಂಬಲಿತ ಗೂಂಡಾಗಳು ದೆಹಲಿಯಲ್ಲಿ ನಡೆಸಿದ 3 ದಿನಗಳ ನಿರಂತರ ಹಿಂಸಾಚಾರದಲ್ಲಿ 300 ಅಮಾಯಕ ಸಿಖ್ಖರು ಮೃತರಾದ ಹತ್ಯಾಕಾಂಡ ನೆನಪಿಗೆ ಬರುತ್ತಿದೆ. ಹೀಗಾಗಿ ಪ್ರಸ್ತುತ ದೆಹಲಿ ಹತ್ಯಾಕಾಂಡದ ಕುರಿತು ನಿಷ್ಪಕ್ಷಪಾತ ಮತ್ತು ಪಾರದರ್ಶಕ ತನಿಖೆ ಅಗತ್ಯವಿದ್ದು, ಈ ಹೊಣೆಯನ್ನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬಲ್ಲ ಆಯೋಗಕ್ಕೆ ವಹಿಸಬೇಕು. ಆಗಲೇ ಸತ್ಯ ಬಯಲಾಗುವುದು” ಎಂದು ಒತ್ತಾಯಿಸಿದ್ದಾರೆ.

ಇದೇ ವೇಳೆ ಸದನದಲ್ಲಿ ಗದ್ದಲ ಎಬ್ಬಿಸಿದ್ದ ಸಮಾಜವಾದಿ ಪಕ್ಷದ ಜಾವೇದ್ ಅಲಿ ಖಾನ್, “ಸಂಸದ ನರೇಶ್ ಗುಜ್ರಾಲ್ ಎತ್ತಿರುವ ಮಹತ್ವದ ಪ್ರಶ್ನೆಗಳಿಗೆ ದೆಹಲಿ ಪೊಲೀಸರು ತೃಪ್ತಿದಾಯಕ ಉತ್ತರ ನೀಡುವವರೆಗೆ ನಾವು ಅವರಿಗೆ ದೆಹಲಿ ಗಲಭೆ ಸಂಬಂಧಿಸಿದಂತೆ ಕ್ಲಿನ್ಚಿಟ್ ನೀಡಲು ಸಿದ್ದರಿಲ್ಲ” ಎಂದು ಆಕ್ರೋಶ ಹೊರಹಾಕಿದರು.

ಗೃಹ ಸಚಿವ ಅಮಿತ್ ಶಾ ವಿರುದ್ಧ ಸದನಲ್ಲಿ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಹಿರಿಯ ಮುಖಂಡ ಕಪಿಲ್ ಸಿಬಲ್, “ದೆಹಲಿಯಲ್ಲಿ 47,000 ಪೊಲೀಸರು ಇದ್ದಾರೆ. ಈ ಪ್ರಮಾಣದ ಪೊಲೀಸರು ಇದ್ದಾಗ್ಯೂ ಒಂದು ಗಲಭೆಯನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎಂದಾರೆ ಈ ಪೊಲೀಸ್ ವ್ಯವಸ್ಥೆಯ ಮೇಲೆ ಅನುಮಾನ ಮೂಡುತ್ತಿದೆ” ಎಂದು ಕಿಡಿಕಾರಿದರು.ಈ ವೇಳೆ ತೃಣಮೂಲ ಕಾಂಗ್ರೆಸ್ ಸೇರಿದಂತೆ ಎಲ್ಲಾ ವಿರೋಧ ಪಕ್ಷದ ಸದಸ್ಯರು ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಇದನ್ನೂ ಓದಿ : ಕೊರೋನಾ ಮಹಾಭೀತಿ, ಷೇರುಪೇಟೆ ತಲ್ಲಣ, ಕುಸಿಯುತ್ತಿರುವ ಮೌಲ್ಯ, ವ್ಯಾಪಾರ ಸ್ತಬ್ದ
Youtube Video
First published: March 13, 2020, 11:05 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories