Dengue cases in Delhi: ದೆಹಲಿಯಲ್ಲಿ 833 ಡೆಂಗ್ಯೂ ಪ್ರಕರಣಗಳು ಪತ್ತೆ

ಈ ಹಿಂದೆ ಕಳೆದ ವರ್ಷ 2018ರಲ್ಲಿ ಸುಮಾರು 2,798 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 4 ಸಾವು ಸಂಭವಿಸಿತ್ತು. ದೆಹಲಿ ಮಹಾನಗರ ಪಾಲಿಕೆ ಸಂಸ್ಥೆಯೇ ಈ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದರು. 

news18-kannada
Updated:October 28, 2019, 10:41 PM IST
Dengue cases in Delhi: ದೆಹಲಿಯಲ್ಲಿ 833 ಡೆಂಗ್ಯೂ ಪ್ರಕರಣಗಳು ಪತ್ತೆ
ಡೆಂಗ್ಯೂ ಪ್ರಕರಣ
  • Share this:
ನವದೆಹಲಿ(ಅ.28): ದೇಶಾದ್ಯಂತ ಸಿಡಿಲು-ಮಳೆಯಿಂದಾಗಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಲೇ ಇವೆ. ಸಹಜವಾಗಿ ಈಡೀಸ್‌ ಈಜಿಪ್ಟೆ ಎಂಬ ಸೊಳ್ಳೆ ಕಡಿಯುವುದರಿಂದ ಈ ಡೆಂಗ್ಯೂ ವೈರಸ್‌ ಹರಡುತ್ತದೆ. ಹಗಲಿನಲ್ಲಿ ಸೊಳ್ಳೆಗಳು ಮನುಷ್ಯರಿಗೆ ಕಚ್ಚುತ್ತವೆ. ಇದರ ಪರಿಣಾಮ ಜ್ವರ ಉಂಟಾಗುತ್ತದೆ. ಡೆಂಗ್ಯೂ ಜ್ವರ, ಡೆಂಗ್ಯೂ ರಕ್ತಸ್ರಾವ ಜ್ವರ, ಡೆಂಗ್ಯೂ ಶಾಕ್‌ ಸಿಂಡ್ರೋಮ್‌ ಹೀಗೆ ಮೂರು ವಿಧದಲ್ಲಿ ಜ್ವರ ಹರಡುತ್ತದೆ.

ಹೀಗೆ ಈ ವರ್ಷದಲ್ಲಿ ಮಾತ್ರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪತ್ತೆಯಾದ ಡೆಂಗ್ಯೂ ಪ್ರಕರಣಗಳು 833. ಈ ಪೈಕಿ ಕಳೆದ ವಾರದಲ್ಲೇ 189 ಮಂದಿ ಡೆಂಗ್ಯೂಗೆ ತುತ್ತಾಗಿದ್ದಾರೆ. ಅ.26ರವರೆಗೂ 574 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದೆ ಎಂದು ಪ್ರಕರಣಗಳು ದಾಖಲಾಗಿದೆ. ಅಲ್ಲದೇ ಅ.19ರವರೆಗೂ 644 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಬಳಿಕ 189 ಪ್ರಕರಣಗಳು ದಾಖಲಾಗಿದೆ ಎಂದು ಸಿಎಂ ಅರವಿಂದ್​ ಕೇಜ್ರಿವಾಲ್​​ ನೇತೃತ್ವದ ದೆಹಲಿ ಸರ್ಕಾರ ತಿಳಿಸಿದೆ.

ಈ ಹಿಂದೆ ಕಳೆದ ವರ್ಷ 2018ರಲ್ಲಿ ಸುಮಾರು 2,798 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 4 ಸಾವು ಸಂಭವಿಸಿತ್ತು. ದೆಹಲಿ ಮಹಾನಗರ ಪಾಲಿಕೆ ಸಂಸ್ಥೆಯೇ ಈ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದ್ದರು.

ಡೆಂಗ್ಯೂ ಲಕ್ಷಣಗಳು: ಜ್ವರ ಕಾಣಿಸಿಕೊಂಡ 7 ದಿನಗಳೊಳಗೆತೀವ್ರ ತಲೆನೋವು, ಕಣ್ಣುಗುಡ್ಡೆಯಲ್ಲಿ ನೋವು, ಸ್ನಾಯು ಸೆಳೆತ (ಮೈ-ಕೈ ನೋವು), ಕೀಲು ನೋವು, ಚರ್ಮ ಕೆಂಪಾಗುವುದು, ಮೂಗು ಮತ್ತು ವಸಡುಗಳಲ್ಲಿ ರಕ್ತಸ್ರಾವ ಲಕ್ಷಣಗಳು ಕಂಡುಬಂದರೆ ವೈದ್ಯರಲ್ಲಿ ತೋರಿಸಿಕೊಳ್ಳುವುದು ಒಳಿತು.

ಇದನ್ನೂ ಓದಿ: ತಿಹಾರ್​​ ಜೈಲಿನಲ್ಲಿದ್ದ ಪಿ. ಚಿದಂಬರಂ ಮತ್ತೆ ಅನಾರೋಗ್ಯ: ದೆಹಲಿಯ ಏಮ್ಸ್​ ಆಸ್ಪತ್ರೆಗೆ ದಾಖಲು

ತುಂಬಾ ಹೊಟ್ಟೆನೋವು, ಚರ್ಮದ ಮೇಲಿನ ಕೆಂಪುಗುಳ್ಳೆ ಅಥವಾ ಮಚ್ಚೆ, ಬಾಯಿ ಅಥವಾ ಮೂಗಿನಿಂದ ರಕ್ತಸ್ರಾವ, ರಕ್ತ ಮಿಶ್ರಿತ ವಾಂತಿ, ಕಪ್ಪುಬಣ್ಣದ ಮಲ ವಿಸರ್ಜನೆ, ತುಂಬಾ ಸಪ್ಪೆಯಾಗಿ ವರ್ತಿಸುವುದು, ತಣ್ಣಗಾದ ಅಥವಾ ಒಣ ಚರ್ಮ, ಉಸಿರಾಟಕ್ಕೆ ತೊಂದರೆ. ಇಂತಹ ಸಂದರ್ಭದಲ್ಲಿ ಮಾಡಬೇಕಾದದ್ದು ಪ್ರತಿ ಗಂಟೆಗೊಮ್ಮೆ ರೋಗಿ ತಪಾಸಣೆ, ಪ್ಲೇಟ್‍ಲೆಟ್ ಚೆಕ್ ಮಾಡುವುದು, ಇವಿ ಪ್ಯೂಯೆಡ್ಸ್ ಅಥವಾ ಪ್ಲೇಟ್‍ಲೆಟ್ ಮರುಪೂರಣ ಮಾಡಬಹುದು.
------------
First published: October 28, 2019, 10:26 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading