ದೆಹಲಿ ಚುನಾವಣೆಯಲ್ಲಿ ಶೇ. 62.59 ಮತದಾನ: ಸಾಕಷ್ಟು ವಿಳಂಬದ ಬಳಿಕ ಚುನಾವಣಾ ಆಯೋಗ ಅಧಿಕೃತ ಘೋಷಣೆ

ಗರಿಷ್ಠ ಮತದಾನವಾಗಿರುವುದು ದೆಹಲಿಯ ಬಾಲಿಮರನ್ ವಿಧಾನಸಭಾ ಕ್ಷೇತ್ರದಲ್ಲಿ. ಇಲ್ಲಿ ಶೇ. 71.6 ವೋಟಿಂಗ್ ಆಗಿದೆ. ದೆಹಲಿ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಶೇ. 45.4 ಮತದಾನ ಆಗಿರುವುದು ಕನಿಷ್ಠ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ದೆಹಲಿ ಚುನಾವಣಾ ಅಧಿಕಾರಿಗಳು

ದೆಹಲಿ ಚುನಾವಣಾ ಅಧಿಕಾರಿಗಳು

  • News18
  • Last Updated :
  • Share this:
ನವದೆಹಲಿ(ಫೆ. 09): ನಿನ್ನೆ ನಡೆದ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಶೇ. 62.59ರಷ್ಟು ಮತದಾನ ಆಗಿದೆ ಎಂದು ಇವತ್ತು ದೆಹಲಿ ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡಿದೆ. ಕೆಲ ತಿಂಗಳ ಹಿಂದೆ ನಡೆದಿದ್ದ ಲೋಕಸಭಾ ಚುನಾವಣೆಯಲ್ಲಿ ನಡೆದ ಮತದಾನಕ್ಕಿಂತಲೂ ಈ ಚುನಾವಣೆಯಲ್ಲಿ ಶೇ. 2 ಹೆಚ್ಚು ಮತದಾನ ಆಗಿದೆ ಎಂದು ದೆಹಲಿ ಮುಖ್ಯ ಚುನಾವಣಾಧಿಕಾರಿ ರಣಬೀರ್ ಸಿಂಗ್ ತಿಳಿಸಿದ್ದಾರೆ.

ಮತದಾನ ಮುಗಿದು ಹಲವು ಗಂಟೆಗಳು ಕಳೆದರೂ ಅಂಕಿ ಅಂಶ ಇನ್ನೂ ಬಿಡುಗಡೆ ಮಾಡಿಲ್ಲ ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಸೇರಿದಂತೆ ಆಮ್ ಆದ್ಮಿ ಪಕ್ಷದ ಹಲವು ಮುಖಂಡರು ಅನುಮಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಚುನಾವಣಾ ಆಯೋಗ, ಅಂಕಿ ಅಂಶ ಅಧಿಕೃತವಾಗಿ ಬಿಡುಗಡೆಯಾಗಲು ವಿಳಂಬವಾಗುವುದರಲ್ಲಿ ಯಾವುದೇ ಅಸಹಜತೆ ಏನಿಲ್ಲ. ಬಹುಮಟ್ಟಗಳಲ್ಲಿ ಪರಿಶೀಲನೆ ನಡೆಸುವುದರಿಂದ ಕೆಲವೊಮ್ಮೆ ವಿಳಂಬವಾಗುತ್ತದೆ. ಚುನಾವಣೆ ನಡೆದು ಒಂದು ದಿನದ ಬಳಿಕ ಫಲಿತಾಂಶ ಪ್ರಕಟವಾದರೆ ಅಚ್ಚರಿ ಪಡುವಂಥದ್ದೇನಿಲ್ಲ ಎಂದು ತಿಳಿಸಿದೆ.

ಇದನ್ನೂ ಓದಿ: Exit Poll Result 2020: ದೆಹಲಿ ಮತಗಟ್ಟೆ ಸಮೀಕ್ಷೆ; ಮತ್ತೊಮ್ಮೆ ಮುಖ್ಯಮಂತ್ರಿ ಗದ್ದುಗೆಯತ್ತ ಅರವಿಂದ ಕೇಜ್ರಿವಾಲ್?

ನಿನ್ನೆ 3 ಗಂಟೆಯವರೆಗೂ ಮತದಾನ ಪ್ರಮಾಣ ಕಡಿಮೆಯೇ ಇತ್ತು. ಆ ಬಳಿಕ 7:30ರವರೆಗೆ ಹಲವು ಮತಗಟ್ಟೆಗಳಲ್ಲಿ ಮತದಾರರು ಉದ್ದುದ್ದ ಕ್ಯೂನಲ್ಲಿ ನಿಂತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಮತ ಪರಿಶೀಲನೆ ನಡೆಸಲು ವಿಳಂಬವಾಗಿರುವ ಸಾಧ್ಯತೆ ಇರಬಹುದು ಎನ್ನಲಾಗಿದೆ.

ಗರಿಷ್ಠ ಮತದಾನವಾಗಿರುವುದು ದೆಹಲಿಯ ಬಾಲಿಮರನ್ ವಿಧಾನಸಭಾ ಕ್ಷೇತ್ರದಲ್ಲಿ. ಇಲ್ಲಿ ಶೇ. 71.6 ವೋಟಿಂಗ್ ಆಗಿದೆ. ದೆಹಲಿ ಕಂಟೋನ್ಮೆಂಟ್ ಕ್ಷೇತ್ರದಲ್ಲಿ ಶೇ. 45.4 ಮತದಾನ ಆಗಿರುವುದು ಕನಿಷ್ಠ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.

ಕೆಲ ಕಡೆ ಇವಿಎಂ ಮೆಷೀನ್​ಗಳನ್ನು ಅನಧಿಕೃತವಾಗಿ ಸಾಗಿಸಲಾಗಿದೆ. ಮತಯಂತ್ರಗಳ ಮಾಹಿತಿ ತಿರುಚುವ ಪ್ರಯತ್ನ ಇದಾಗಿದೆ ಎಂದು ಆಮ್ ಆದ್ಮಿ ಮತ್ತು ಕಾಂಗ್ರೆಸ್ ಪಕ್ಷಗಳ ಮುಖಂಡರು ನಿನ್ನೆ ರಾತ್ರಿಯಿಂದಲೂ ಆರೋಪ ಮಾಡುತ್ತಾ ಬಂದಿದ್ದರು.

ಇದನ್ನೂ ಓದಿ: ಇನ್ನಷ್ಟು ಬ್ಯಾಂಕುಗಳ ವಿಲೀನ? ಸುಳಿವು ನೀಡಿದ ಕೇಂದ್ರ ಸಚಿವ ಅನುರಾಗ್ ಠಾಕೂರ್

ಬಿಜೆಪಿಯವರು ಮತದಾನ ಪ್ರಮಾಣ ಎಷ್ಟು ಎಂದು ಹೇಳುತ್ತಿದ್ದಾರೆ. ಮತದಾನವಾಗಿ 24 ಗಂಟೆಯಾದರೂ ಚುನಾವಣಾ ಆಯೋಗಕ್ಕೆ ಮಾತ್ರ ಅಂತಿಮ ವೋಟಿಂಗ್ ಪ್ರಮಾಣ ತಿಳಿಸಲು ಸಾಧ್ಯವಾಗುತ್ತಿಲ್ಲ. ಏನಾಗುತ್ತಿದೆ ಇಲ್ಲಿ? ಬಿಜೆಪಿ ಕಚೇರಿಯಿಂದ ನಿಮಗೆ ಅಂತಿಮ ಅಂಕಿಅಂಶ ಬಂದಿಲ್ಲವಾ? ಎಂದು ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಚುನಾವಣಾ ಆಯೋಗವನ್ನು ಪ್ರಶ್ನೆ ಮಾಡಿದ್ದರು.

ನಿನ್ನೆ ಚುನಾವಣೆ ನಡೆದ ನಂತರ ಬಿಡುಗಡೆಯಾಗಿದ್ದ ವಿವಿಧ ಮತಗಟ್ಟೆ ಸಮೀಕ್ಷೆಗಳ ಪ್ರಕಾರ ಆಮ್ ಆದ್ಮಿ ಪಕ್ಷ ಭರ್ಜರಿ ಬಹುಮತದೊಂದಿಗೆ ಮತ್ತೊಮ್ಮೆ ಅಧಿಕಾರ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಬಹುತೇಕ ಎಲ್ಲಾ ಸಮೀಕ್ಷೆಗಳೂ ಎಎಪಿಗೆ 45ಕ್ಕಿಂತ ಹೆಚ್ಚು ಸ್ಥಾನ ಸಿಗಬಹುದು ಎಂದು ಅಂದಾಜು ಮಾಡಿವೆ. ಒಂದು ವೇಳೆ ಈ ಸಮೀಕ್ಷೆಗಳು ನಿಜವಾದರೆ ಅರವಿಂದ್ ಕೇಜ್ರಿವಾಲ್ ಅವರು ಸತತ ಮೂರನೇ ಬಾರಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಫೆ. 11, ಮಂಗಳವಾರದಂದು ಫಲಿತಾಂಶ ಪ್ರಕಟವಾಗಲಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್​ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್​ಬುಕ್ ಮೆಸೆಂಜರ್​ನಲ್ಲಿ ಸಬ್ಸ್​ಕ್ರೈಬ್ ಮಾಡಿ.

First published: