HOME » NEWS » National-international » DELHI RAIN UPDATES HEAVY RAIN IN DELHI IMD ISSUED ORANGE ALERT FOR 3 DAYS SCT

Delhi Rain: ದೆಹಲಿಯಲ್ಲಿ ಇನ್ನು 3 ದಿನ ಭಾರೀ ಮಳೆ ಸಾಧ್ಯತೆ; ಆರೆಂಜ್ ಅಲರ್ಟ್​ ಘೋಷಣೆ

Delhi Monsoon: ಇನ್ನು ಮೂರು ದಿನ ದೆಹಲಿಯಲ್ಲಿ ಮಳೆ ಹೆಚ್ಚಾಗಲಿರುವುದರಿಂದ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ. ಭಾರತದಲ್ಲಿ ಮೇಘಾಲಯದ ಚಿರಾಪುಂಜಿಯಲ್ಲಿ ಅತಿಹೆಚ್ಚು ಮಳೆ ದಾಖಲಾಗಿದೆ. ಉಳಿದಂತೆ ಅರುಣಾಚಲ ಪ್ರದೇಶ, ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ.

news18-kannada
Updated:July 20, 2020, 7:36 PM IST
Delhi Rain: ದೆಹಲಿಯಲ್ಲಿ ಇನ್ನು 3 ದಿನ ಭಾರೀ ಮಳೆ ಸಾಧ್ಯತೆ; ಆರೆಂಜ್ ಅಲರ್ಟ್​ ಘೋಷಣೆ
ಮಳೆ
  • Share this:
ನವದೆಹಲಿ (ಜು. 20): ಶನಿವಾರ ರಾತ್ರಿಯಿಂದ ನವದೆಹಲಿಯಲ್ಲಿ ಸುರಿಯುತ್ತಿರುವ ಮಳೆಯಿಂದ ಪ್ರವಾಹದ ಆತಂಕ ಎದುರಾಗಿದೆ. ಇನ್ನೂ 3 ದಿನಗಳ ಕಾಲ ಆರೆಂಜ್ ಅಲರ್ಟ್​ ಘೋಷಿಸಿದೆ. ನಿನ್ನೆ ಸುರಿದ ಮಳೆಯಲ್ಲಿ ಮೂವರು ಕೊಚ್ಚಿಹೋಗಿದ್ದಾರೆ. ಮೊನ್ನೆ ರಾತ್ರಿಯಿಂದ ನಿನ್ನೆ ಬೆಳಗಿನವರೆಗೆ ಸುರಿದ ಮಳೆಯಿಂದ ಮನೆಗಳೇ ಕೊಚ್ಚಿಕೊಂಡು ಹೋಗಿದೆ. ಹೀಗಾಗಿ, ದೆಹಲಿಯಲ್ಲಿ ಮಳೆಯ ತೀವ್ರತೆ ಹೆಚ್ಚಾಗುವ ಸಾಧ್ಯತೆ ಇರುವುದರಿಂದ ಆರೆಂಜ್ ಅಲರ್ಟ್​ ಘೋಷಿಸಲಾಗಿದೆ.

ಭಾನುವಾರ ದೆಹಲಿಯಲ್ಲಿ ಭಾರೀ ಮಳೆಯಾಗಿತ್ತು. ಅಸ್ಸಾಂ, ಒರಿಸ್ಸಾ, ಬಿಹಾರ, ಉತ್ತರಾಖಂಡ, ಮಹಾರಾಷ್ಟ್ರದ ಬಳಿಕ ದೆಹಲಿಯತ್ತ ಮಳೆ ಪ್ರಯಾಣ ಬೆಳೆಸಿದೆ. ಇದರಿಂದಾಗಿ ದೆಹಲಿಯಲ್ಲಿ ಒಂದು ಮಗು ಸೇರಿದಂತೆ ಇಬ್ಬರು ಸಾವನ್ನಪ್ಪಿದ್ದರು. ಹೀಗಾಗಿ ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹವಾಮಾನ ಇಲಾಖೆಯ ಮುಖ್ಯಸ್ಥ ಕುಲದೀಪ್ ಶ್ರೀವಾಸ್ತವ ಈ ಬಗ್ಗೆ ಮಾಹಿತಿ ನೀಡಿದ್ದು, ಮೂರು ದಿನಗಳ ಕಾಲ ದೆಹಲಿಯಲ್ಲಿ ಮಳೆ ಹೆಚ್ಚಾಗಲಿದೆ. ಮಂಗಳವಾರ ಬೆಳಗ್ಗೆ ಹೆಚ್ಚಿನ ಮಳೆಯಾಗಲಿದೆ ಎಂದಿದ್ದಾರೆ.


ಭಾನುವಾರ ಚರಂಡಿಯ ನೀರು ಹೋಗುವ ರಾಜಕಾಲುವೆಯ ಪಕ್ಕದಲ್ಲಿದ್ದ ಮನೆ ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿತ್ತು. ಶನಿವಾರ ರಾತ್ರಿಯಿಂದ ನಿನ್ನೆ ಮುಂಜಾನೆಯವರೆಗೆ ದೆಹಲಿಯಲ್ಲಿ ಭಾರೀ ಮಳೆಯಾಗಿತ್ತು. ಇದರಿಂದ ಮಳೆ ನೀರು ಹೆಚ್ಚಾಗಿ ಮನೆಯೇ ಕೊಚ್ಚಿಕೊಂಡು ಹೋಗಿತ್ತು. ಇದರ ವಿಡಿಯೋಗಳು ಎಲ್ಲೆಡೆ ಹರಿದಾಡಿತ್ತು.



ಭಾರತದಲ್ಲಿ ಮೇಘಾಲಯದ ಚಿರಾಪುಂಜಿಯಲ್ಲಿ ಅತಿಹೆಚ್ಚು ಮಳೆ ದಾಖಲಾಗಿದೆ. ಉಳಿದಂತೆ ಅರುಣಾಚಲ ಪ್ರದೇಶ, ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆ ದಾಖಲಾಗಿದೆ. ಜೂನ್ 1ಕ್ಕೆ ಕೇರಳದಲ್ಲಿ ಮಾನ್ಸೂನ್ ಆಗಮನವಾಗಿತ್ತು. ಅದರ ಬಳಿಕ ಎಲ್ಲ ರಾಜ್ಯಗಳಲ್ಲಿ ಮುಂಗಾರು ಶುರುವಾಗಿತ್ತು
Published by: Sushma Chakre
First published: July 20, 2020, 7:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories