Delhi Rains: ದೆಹಲಿಯಲ್ಲಿ ಧಾರಾಕಾರ ಮಳೆ; ಜಲಾವೃತಗೊಂಡ ರಸ್ತೆಗಳು; ವಾಹನ ಸಂಚಾರ ಅಸ್ತವ್ಯಸ್ತ

ದೆಹಲಿ-ಎನ್​ಸಿಆರ್​​ ಪ್ರದೇಶದಲ್ಲೂ ಸಹ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಲೋನಿ ದೆಹತ್, ಹಿಂಡನ್ ಏರ್​ಫೋರ್ಸ್​​ ಸ್ಟೇಷನ್, ಇಂದಿರಾಪುರಂ, ಮೋದಿನಗರ, ಬಾಗ್ಪತ್, ಉತ್ತರ ಪ್ರದೇಶದ ಖೇಕ್ರಾ ಪ್ರದೇಶಗಳಲ್ಲಿ ಗುರುವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ದೆಹಲಿಯಲ್ಲಿ ಮಳೆಯ ಅವಾಂತರ

ದೆಹಲಿಯಲ್ಲಿ ಮಳೆಯ ಅವಾಂತರ

  • Share this:
ನವದೆಹಲಿ(ಸೆ.2): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಭಾರೀ ಮಳೆ ಸುರಿಯುತ್ತಲೇ ಇದೆ. ಮಳೆಯ ಅಬ್ಬರಕ್ಕೆ ರಸ್ತೆಗಳು ನದಿಗಳಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಇಂದು ಬೆಳ್ಳಂ ಬೆಳಗ್ಗೆ ದೆಹಲಿಯಲ್ಲಿ ಭಾರೀ ಮಳೆ ಸುರಿದಿದೆ ಎಂದು ವರದಿಯಾಗಿದೆ. ಬುಧವಾರ ಸುರಿದ ದಾಖಲೆಯ ಮಳೆ ಬಳಿಕ, ಗುರುವಾರವೂ ಹೆಚ್ಚಿನ ಮಳೆಯಾಗಿದೆ. ಮಳೆಯ ಪ್ರಮಾಣ ಹೆಚ್ಚಾದ್ದರಿಂದ ರಸ್ತೆಗಳು ಹಾಗೂ ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದವು. ಇದರಿಂದಾಗಿ ಇಮದು ಮುಂಜಾನೆಯಿಂದಲೇ ವಾಹನ ಸವಾರರು ಪರದಾಡುವಂತಾಯಿತು.

ಗುರುವಾರ ಅಂದರೆ ಸೆ.2ರಂದು ದೆಹಲಿಯಲ್ಲಿ ಭಾರೀ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಮಳೆಯ ಮಾರುತಗಳು ಉತ್ತರ ದಿಕ್ಕಿಗೆ ಸಾಗುತ್ತಿದ್ದು, ಬೆಳಗ್ಗೆ ದೆಹಲಿಯನ್ನು ದಾಟಿ ಹೋಗಿವೆ. ಈ ವೇಳೆ ಅತೀ ಹೆಚ್ಚು ಅಂದರೆ ದಾಖಲೆಯ ಮಳೆ ಸುರಿದಿದೆ ಎಂದು ಹೇಳಲಾಗಿದೆ.

ಸುರಿದ ಭಾರೀ ಮಳೆಗೆ ದೆಹಲಿಯಾದ್ಯಂತ ಹಲವು ರಸ್ತೆಗಳು ಇಂದು ಜಲಾವೃತಗೊಂಡಿದ್ದವು. ದೆಹಲಿಯ ರಿಂಗ್​ ರೋಡ್​​ ಪ್ರದೇಶದಲ್ಲಂತೂ ನೀರು ನಿಂತು ಟ್ರಾಫಿಕ್​ ಜಾಮ್ ಉಂಟಾಗಿತ್ತು. ವಾಹನ ಸವಾರರು ಆ ರಸ್ತೆಯಲ್ಲಿ ಹೋಗಲು ಭಾರೀ ಪರದಾಟ ನಡೆಸುವಂತಾಯಿತು.

ಇದನ್ನೂ ಓದಿ:Motivational Story: 6ನೇ ಕ್ಲಾಸಲ್ಲಿ ಸ್ಕೂಲ್​​ ಬಿಟ್ಟವನು ಈಗ ಕಂಪನಿಯೊಂದರ ಸಿಇಒ; ಇದೆಲ್ಲಾ ಹೇಗೆ ಸಾಧ್ಯ ಆಯ್ತು?ಇಂದು 10 ಗಂಟೆಯ ಬಳಿಕ ದೆಹಲಿಯಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ.

ಇನ್ನು, ದೆಹಲಿ-ಎನ್​ಸಿಆರ್​​ ಪ್ರದೇಶದಲ್ಲೂ ಸಹ ಗುಡುಗು ಸಹಿತ ಧಾರಾಕಾರ ಮಳೆಯಾಗಿದೆ. ಲೋನಿ ದೆಹತ್, ಹಿಂಡನ್ ಏರ್​ಫೋರ್ಸ್​​ ಸ್ಟೇಷನ್, ಇಂದಿರಾಪುರಂ, ಮೋದಿನಗರ, ಬಾಗ್ಪತ್, ಉತ್ತರ ಪ್ರದೇಶದ ಖೇಕ್ರಾ ಪ್ರದೇಶಗಳಲ್ಲಿ ಗುರುವಾರ ಗುಡುಗು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು.

ದೆಹಲಿ-ಎನ್​ಸಿಆರ್​​​​ನ ಇತರೆ ಪ್ರದೇಶಗಳಾದ ನೋಯ್ಡಾ, ಗುರುಗ್ರಾಮ, ಫರಿದಾಬಾದ್, ಮನೇಸರ್, ಹಿಸ್ಸಾರ್, ಹರಿಯಾಣದ ಗನ್ನೌರ್ ಮತ್ತು ಉತ್ತರ ಪ್ರದೇಶದ ದೌರಲಾ, ಮೀರತ್, ಕಿತೋರ್, ಗರ್ಮುಕ್ತೇಶ್ವರ್ ಪ್ರದೇಶಗಳಲ್ಲೂ ಸಹ ಇಂದು ಬೆಳಗ್ಗೆ ಅಧಿಕ ಮಳೆಯಾಗಿದೆ.

ಬುಧವಾರ ರಾಷ್ಟ್ರ ರಾಜಧಾನಿಯಲ್ಲಿ ಅತೀ ಹೆಚ್ಚು ದಾಖಲೆಯ ಮಳೆ ಸುರಿದಿತ್ತು. ದೆಹಲಿಯೊಂದರಲ್ಲೇ ಬುಧವಾರ 112.1 ಮಿ.ಮೀ.ಮಳೆ ಸುರಿದಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹೇಳಿದೆ. ಇದು ಕಳೆದ 19 ವರ್ಷಗಳಲ್ಲೇ ಒಂದೇ ದಿನದಲ್ಲಿ ಸುರಿದ ಅಧಿಕ ಪ್ರಮಾಣದ ಮಳೆಯಾಗಿದೆ.

ಇದನ್ನೂ ಓದಿ:Gold Price Today: ಇಂದು ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ; ಬೆಳ್ಳಿ ಬೆಲೆಯಲ್ಲಿ ಇಳಿಕೆ

ದೆಹಲಿಯಲ್ಲಿ 2002ರ ಸೆ.13ರಂದು 126.8 ಮಿ.ಮೀ. ಮಳೆ ದಾಖಲಾಗಿತ್ತು. 1963ರ ಸೆ.16ರಂದು 172.6 ಮಿ.ಮೀ. ಮಳೆಯಾಗಿತ್ತು. ಇದು ಎಲ್ಲಾ ದಾಖಲೆಗಳನ್ನು ಮುರಿದಿತ್ತು. ಬುಧವಾರ ಒಂದೇ ದಿನ ದೆಹಲಿಯಲ್ಲಿ ಕೇವಲ 3 ಗಂಟೆಗಳಲ್ಲಿ 75.6 ಮಿ.ಮೀ ಮಳೆ ಸುರಿದಿದೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by:Latha CG
First published: