ತಾರಕಕ್ಕೇರಿದ ದೆಹಲಿ ಹಿಂಸಾಚಾರ: ಪತ್ರಕರ್ತರ ಮೇಲೆ ಹಲ್ಲೆ, 9ಕ್ಕೇರಿದ ಸಾವಿನ ಸಂಖ್ಯೆ

ಗಲಭೆ ವರದಿ ಮಾಡಲು ತೆರಳಿದ ಪತ್ರಕರ್ತರ ಮೇಲೆ ಹಲ್ಲೆ ನಡೆಸಲಾಗಿದೆ. ಶೂಟ್​ ಮಾಡಿದ ವಿಡಿಯೋಗಳನ್ನು ಡಿಲೀಟ್​ ಮಾಡುವಂತೆ ಒತ್ತಾಯಿಸಿ ಈ ಹಲ್ಲೆ ನಡೆಸಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ಹಿಂಸಾಚಾರದಲ್ಲಿ ಸತ್ತವರ ಸಂಖ್ಯೆ 9ಕ್ಕೇರಿದೆ.

news18-kannada
Updated:February 25, 2020, 4:56 PM IST
ತಾರಕಕ್ಕೇರಿದ ದೆಹಲಿ ಹಿಂಸಾಚಾರ: ಪತ್ರಕರ್ತರ ಮೇಲೆ ಹಲ್ಲೆ, 9ಕ್ಕೇರಿದ ಸಾವಿನ ಸಂಖ್ಯೆ
ದೆಹಲಿಯ ಜಫ್ರಾಬಾದ್​ನಲ್ಲಿ ಸಿಎಎ ಹಿಂಸಾಚಾರ
  • Share this:
ನವದೆಹಲಿ (ಫೆ.25): ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರೋಧಿಸಿ ದೆಹಲಿಯಲ್ಲಿ ಕಳೆದ ಎರಡು ತಿಂಗಳಿನಿಂದ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆ ಭಾನುವಾರ ಹಿಂಸಾಚಾರಕ್ಕೆ ತಿರುಗಿತ್ತು. ಇದು ಮಂಗಳವಾರವೂ ಮುಂದುವರಿದಿದ್ದು, ಪತ್ರಕರ್ತರ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿರುವ ಘಟನೆ ದಾಖಲಾಗಿದೆ. ಜತೆಗೆ ಇತ್ತೀಚಿನ ಮಾಹಿತಿಯ ಪ್ರಕಾರ ಸಾವಿನ ಸಂಖ್ಯೆ 9ಕ್ಕೇರಿದೆ. ಪೊಲೀಸ್​ ಮತ್ತು ಪ್ಯಾರಾ ಮಿಲಿಟರಿ ಸಿಬ್ಬಂದಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹರಸಾಹಸ ಪಡುತ್ತಿದ್ದಾರೆ.

ಭಾನುವಾರ ಸಂಜೆ ಸಿಎಎ ಪ್ರತಿಭಟನೆ ವೇಳೆ ಸಿಎಎ ವಿರೋಧಿಗಳು ಮತ್ತು ಸಿಎಎ ಪರ ಇರುವ ಗುಂಪುಗಳ ನಡುವೆ ಈಶಾನ್ಯ ದೆಹಲಿಯಲ್ಲಿ ಮಾರಾಮಾರಿ ನಡೆದು ಈ ಘಟನೆ ನಂತರ ಭಾರೀ ಪ್ರಮಾಣದ ಹಿಂಸಾಚಾರಕ್ಕೆ ತಿರುಗಿತ್ತು. ಈ ವೇಳೆ ಹೆಡ್​ ಕಾನ್ಸ್​ಟೇಬಲ್ ರತನ್​ ಲಾಲ್​ (42)​​​​ ಸೇರಿ ನಾಲ್ವರು ಮೃತಪಟ್ಟಿದ್ದರು. ಸಾವಿನ ಸಂಖ್ಯೆ ಮಂಗಳವಾರ ಒಂಭತ್ತಕ್ಕೆ ಏರಿಕೆಯಾಗಿದೆ.

ಪರಿಣಾಮ ಈಶಾನ್ಯ ದೆಹಲಿಯಲ್ಲಿ  ಕಲಂ 144 ಅನ್ನು ಜಾರಿ ಮಾಡಲಾಗಿದೆ. ಈ ಮಧ್ಯೆಯೂ ಇಂದು ಮುಂಜಾನೆ ಈಶಾನ್ಯ ದೆಹಲಿಯ ಮೌಜ್​ಪುರ್​ ಭಾಗದಲ್ಲಿ ಅನೇಕ ಅಂಗಡಿ, ಕಚೇರಿ ಹಾಗೂ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ. ಹೀಗಾಗಿ ಮತ್ತೆ ಪರಿಸ್ಥಿತಿ ಉದ್ರಿಕ್ತಗೊಂಡಿದ್ದು ದೆಹಲಿ ರಕ್ಷಣಾ ಸುವ್ಯವಸ್ಥೆ ಪೊಲೀಸರ ಕೈಮೀರುತ್ತಿದೆ.

ಇನ್ನು, ಗಲಭೆ ವರದಿ ಮಾಡಲು ತೆರಳಿದ ಪತ್ರಕರ್ತರ ಮೇಲೆಯೂ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗುತ್ತಿದ್ದು, ಮತ್ತಷ್ಟು ಆಘಾತಕ್ಕೆ ಕಾರಣವಾಗಿದೆ. ಗಲಭೆ ನಡೆದಿರುವ ಸ್ಥಳದಲ್ಲಿ ಚಿತ್ರೀಕರಿಸಲಾದ ವಿಡಿಯೋವನ್ನು ಡಿಲೀಟ್​ ಮಾಡುವಂತೆ ಒತ್ತಾಯಿಸಿ ಕೆಲವು ದುಷ್ಕರ್ಮಿಗಳು ವಿಡಿಯೋ ಜರ್ನಲಿಸ್ಟ್​ಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಖಾಸಗಿ ಸುದ್ದಿ ವಾಹಿನಿಯ ಪತ್ರಕರ್ತನೋರ್ವನಿಗೆ ಗುಂಡೇಟು ತಗುಲಿರುವ ಬಗ್ಗೆಯೂ ವರದಿಯಾಗಿದೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ: ಶಾಂತಿ ಕಾಪಾಡಲು ಅಮಿತ್​ ಶಾರಿಂದ ಎಲ್ಲಾ ರೀತಿಯ ನೆರವಿನ ಭರವಸೆ; ಕೇಜ್ರಿವಾಲ್​​

ಅಮಿತ್​ ಶಾ ಜೊತೆ ಕೇಜ್ರಿವಾಲ್​ ಸಭೆ:

ಈಶಾನ್ಯ ದೆಹಲಿಯಲ್ಲಿ ಪರಿಸ್ಥಿತಿ ಕೈ ಮೀರುತ್ತಿದ್ದು ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​  ಕೇಂದ್ರ ಗೃಹ ಸಚಿವ ಅಮಿತ್​ ಶಾ ಜೊತೆ ಸಭೆ ನಡೆಸಿದ್ದಾರೆ. ಅಲ್ಲದೆ, ಪರಿಸ್ಥಿತಿ ನಿಯಂತ್ರಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವ ಬಗ್ಗೆ ಚರ್ಚೆ ನಡೆಸಿದ್ದಾರೆ.
First published: February 25, 2020, 4:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading