Private Liquor Shops: ಅಕ್ಟೋಬರ್ 1ರಿಂದ ರಾಜ್ಯದ ಎಲ್ಲ ಖಾಸಗಿ ಮದ್ಯದಂಗಡಿಗಳು 45 ದಿನ ಕ್ಲೋಸ್: ಕಾರಣವೇನು ಗೊತ್ತಾ?

ಇದು ನಗರದಲ್ಲಿ ಮದ್ಯ ಮಾರಾಟ ಮಳಿಗೆಗಳ ಏಕರೂಪದ ವಿತರಣೆಗಾಗಿ ಪ್ರತಿ ಪುರಸಭೆಯ ವಾರ್ಡ್‌ನಲ್ಲಿ ಕನಿಷ್ಠ ಎರಡು ಹವಾನಿಯಂತ್ರಿತ ಮಾರಾಟ ಮಳಿಗೆಗಳು, ಐದು ಸೂಪರ್ ಪ್ರೀಮಿಯಂ ಅಂಗಡಿಗಳು ಮತ್ತು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಮಳಿಗೆಗಳನ್ನು ಒಳಗೊಂಡಿರಲಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಕೊರೋನಾ ಲಾಕ್​ಡೌನ್​ ವೇಳೆಯಲ್ಲಿ ಈಡೀ ದೇಶವೇ  ಬಂದ್ ಆಗಿತ್ತು. ಅದರಂತೆ ಎಲ್ಲ ಮದ್ಯದ ಅಂಗಡಿಗಳನ್ನು ಬಂದ್ ಮಾಡಲಾಗಿತ್ತು. ಮದ್ಯಕ್ಕಾಗಿ ಜನರು ಹಾಹಾಕಾರ ಪಡುವಂತಹ ಪರಿಸ್ಥಿತಿ ಉಂಟಾಯಿತು. ಒಂದಕ್ಕೆ ಹತ್ತರಷ್ಟು ದರ ತೆತ್ತು ಉಳಿದಿದ್ದ ಅಲ್ಪಸ್ವಲ್ಪ ಮದ್ಯವನ್ನು ಖರೀದಿಸುವಂತಾಗಿತ್ತು. ಕೆಲವರು ಮದ್ಯ ಸಿಗದ ಕಾರಣಕ್ಕೆ ಆತ್ಮಹತ್ಯೆ ಕೂಡ ಮಾಡಿಕೊಂಡರು, ಮತ್ತೆ ಹಲವರು ಭಟ್ಟಿ ತಯಾರಿಸುವ ಅಕ್ರಮ ಮಾರ್ಗವನ್ನು ಕಂಡುಕೊಂಡಿದ್ದರು. ಇದೆಲ್ಲ ಘಟನೆಗಳು ಎಲ್ಲರಿಗೂ ಗೊತ್ತಿರುವಂತಹದ್ದೆ. ಇದೀಗ ಅಕ್ಟೋಬರ್ 1ರಿಂದ ಸತತ ಒಂದೂವರೆ ತಿಂಗಳುಗಳ ಕಾಲ ರಾಜ್ಯದ ಎಲ್ಲ ಖಾಸಗಿ ಲಿಕ್ಕರ್ ಶಾಪ್​​ಗಳು ಬಂದ್​​ ಆಗಲಿವೆ. ಅದಕ್ಕೆ ಕಾರಣವೂ ಇದೆ. ಅಂದ ಹಾಗೆ ಲಿಕ್ಕರ್ ಅಂಗಡಿ ಬಂದ್​ ಆಗುತ್ತಿರುವುದು ದೆಹಲಿಯಲ್ಲಿ.

  ದೆಹಲಿಯ ಮದ್ಯದ ಅಂಗಡಿಗಳು ಖಾಲಿ ಖಾಲಿಯಾಗಿವೆ. ಅಲ್ಲಿಯ ಅಂಗಡಿಯ ಕಪಾಟುಗಳು ಖಾಲಿಯಾಗಿವೆ. ದೆಹಲಿಯ ಜನರು ತಮ್ಮ ಇಷ್ಟದ ಲಿಕ್ಕರ್ ಪಡೆಯಲು ಕಷ್ಟಪಡುತ್ತಿದ್ದಾರೆ. ನವೆಂಬರ್ 16 ರಿಂದ ದೆಹಲಿಯಲ್ಲಿ ಹೊಸ ಮದ್ಯ ಪರವಾನಗಿ ನೀತಿ ಜಾರಿಗೆ ಬರಲಿದೆ. ನವೆಂಬರ್ 16 ರಿಂದ ಹೊಸ ಮದ್ಯ ನೀತಿ ಜಾರಿಗೆ ಬರುವ ಕಾರಣ, ಎಲ್ಲಾ ಖಾಸಗಿ ಮದ್ಯದಂಗಡಿಗಳು ಅಕ್ಟೋಬರ್ 1 ರಿಂದ ನವೆಂಬರ್ 16 ರವರೆಗೆ ಬಂದ್ ಆಗಿರಲಿವೆ. ಇದು ಸಹಜವಾಗಿ ದೆಹಲಿಯಲ್ಲಿ ಮದ್ಯದ ಬಿಕ್ಕಟ್ಟಿಗೆ ಕಾರಣವಾಗುತ್ತದೆ. ಸರ್ಕಾರದ ಹೊಸ ಅಬಕಾರಿ ನೀತಿಯಡಿಯಲ್ಲಿ, 32 ವಲಯಗಳಲ್ಲಿ ಅತಿಹೆಚ್ಚು ಬಿಡ್ಡರ್‌ಗಳಿಗೆ ಚಿಲ್ಲರೆ ಮದ್ಯ ಮಾರಾಟ ಪರವಾನಗಿಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಪ್ರತಿಯೊಂದು 10 ವಾರ್ಡ್‌ಗಳು ಮತ್ತು 27 ಮದ್ಯ ಮಾರಾಟಗಾರರನ್ನು ಹೊಂದಿದೆ. ಪ್ರಸ್ತುತ, ದೆಹಲಿಯಲ್ಲಿ 849 ಮದ್ಯದಂಗಡಿಗಳಿವೆ. ಅದರಲ್ಲಿ 276 ಖಾಸಗಿ ನಡೆಸುತ್ತಿವೆ. ಉಳಿದವುಗಳನ್ನು ದೆಹಲಿ ಸರ್ಕಾರದ ಏಜೆನ್ಸಿಗಳು ನಿರ್ವಹಿಸುತ್ತಿವೆ.

  ಆದ್ದರಿಂದ ಅಕ್ಟೋಬರ್ 1 ರಿಂದ, ಸರ್ಕಾರ ನಡೆಸುತ್ತಿರುವ ಮದ್ಯದ ಅಂಗಡಿಗಳು ಮಾತ್ರ ತೆರೆದಿರುತ್ತವೆ ಮತ್ತು ನವೆಂಬರ್ 16 ರವರೆಗೆ ಖಾಸಗಿ ಮದ್ಯದ ಅಂಗಡಿಗಳು ಮುಚ್ಚಲ್ಪಡಲಿವೆ. ಇದು ದೆಹಲಿಯ 106 ಮುನ್ಸಿಪಲ್ ವಾರ್ಡ್‌ಗಳಿಗೆ ಅನ್ವಯವಾಗಲಿದೆ. ಇಲ್ಲಿ ನವೆಂಬರ್ ವರೆಗೆ ಯಾವುದೇ ಮದ್ಯದ ಅಂಗಡಿ ತೆರೆಯುವುದಿಲ್ಲ. ದೆಹಲಿ ನಗರದಲ್ಲಿ ಯಾವುದೇ ಮದ್ಯ ಮಾರಾಟವಿಲ್ಲದೆ ಸುಮಾರು 80 ವಾರ್ಡ್‌ಗಳಿವೆ. 26 ವಾರ್ಡ್‌ಗಳಲ್ಲಿ, ಪ್ರಸ್ತುತ ಖಾಸಗಿ ಒಡೆತನದ ಮದ್ಯ ಮಾರಾಟದ ಅಂಗಡಿಗಳು ಅಕ್ಟೋಬರ್ 1 ರಿಂದ ಮುಚ್ಚಲ್ಪಡುತ್ತವೆ. 26 ಮುನ್ಸಿಪಲ್ ವಾರ್ಡ್‌ಗಳಲ್ಲಿ ಖಾಸಗಿ ಮದ್ಯ ಮಾರಾಟ ಮಳಿಗೆಗಳು ಮಾತ್ರ ಇವೆ, ಇದರಲ್ಲಿ ಆರ್‌ಕೆ ಪುರಂ, ಆಂಡ್ರ್ಯೂಸ್ ಗಂಜ್, ಲಜಪತ್ ನಗರ, ಪತ್ಪರ್ಗಂಜ್, ರಾಜೌರಿ ಗಾರ್ಡನ್, ತುಘಲಕಾಬಾದ್, ಕೋಟ್ಲಾ ಮುಬಾರಕಪುರ, ಇಂದರ್‌ಪುರಿ, ರಾಣಿ ಬಾಗ್, ರೋಹ್ತಾಶ್ ನಗರ, ಜಿಲ್ಮಿಲ್ ಮತ್ತು ಪಾಂಡವ್ ನಗರ ಸೇರಿವೆ.

  ಇದನ್ನು ಓದಿ: Bharat Bandh| ರೈತರು ಕರೆ ನೀಡಿರುವ ಭಾರತ್ ಬಂದ್; ಪಂಜಾಬ್-ಹರಿಯಾಣ-ಬಂಗಾಳ ಸ್ತಬ್ಧ, ಚೆನ್ನೈನಲ್ಲಿ ರೈಲ್ ರೋಖೋ!

  ಏನಿದು ಹೊಸ ಮದ್ಯ ನೀತಿ?

  ದೆಹಲಿ ಸರ್ಕಾರವು ತನ್ನ ಹೊಸ ಮದ್ಯ ನೀತಿಯನ್ನು ಈ ವರ್ಷದ ಜುಲೈನಲ್ಲಿ ಸಾರ್ವಜನಿಕಗೊಳಿಸಿತು. ಇದು ನಗರದಲ್ಲಿ ಮದ್ಯ ಮಾರಾಟ ಮಳಿಗೆಗಳ ಏಕರೂಪದ ವಿತರಣೆಗಾಗಿ ಪ್ರತಿ ಪುರಸಭೆಯ ವಾರ್ಡ್‌ನಲ್ಲಿ ಕನಿಷ್ಠ ಎರಡು ಹವಾನಿಯಂತ್ರಿತ ಮಾರಾಟ ಮಳಿಗೆಗಳು, ಐದು ಸೂಪರ್ ಪ್ರೀಮಿಯಂ ಅಂಗಡಿಗಳು ಮತ್ತು ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 10 ಮಳಿಗೆಗಳನ್ನು ಒಳಗೊಂಡಿರಲಿದೆ. ಇದರೊಂದಿಗೆ ಸರ್ಕಾರವು ಮದ್ಯ ಮಾರಾಟ ಮಾಡುವ ವ್ಯಾಪಾರದಿಂದ ನಿರ್ಗಮಿಸುತ್ತದೆ ಎಂದು ನೀತಿ ಸ್ಪಷ್ಟಪಡಿಸಿದೆ.

  ಮದ್ಯಕ್ಕೆ ಅತಿ ದುಬಾರಿ ದರ ನಿಗದಿ ಮಾಡುವುದು ಮತ್ತು ಬ್ರಾಂಡ್​ಗಳ ಪ್ರಭಾವ ಕಡಿಮೆ ಮಾಡುವ ಉದ್ದೇಶದಿಂದ ಸರ್ಕಾರ ಸಿಂಡಿಕೇಟ್ ರಚನೆ ಮಾಡಿತು. ಹೊಸ ಮದ್ಯದ ನೀತಿಯ ಅಡಿಯಲ್ಲಿ ಚಿಲ್ಲರೆ ಮಾರಾಟ ಕೇಂದ್ರಗಳನ್ನು ಸ್ಥಾಪಿಸಲು ಸರ್ಕಾರ ಬಿಡ್‌ಗಳನ್ನು ಆಹ್ವಾನಿಸಿ ಟೆಂಡರ್‌ಗಳನ್ನು ಕರೆಯಿತು. ಆದರೆ ಹಳೆಯ ನೀತಿಗೆ ವ್ಯತಿರಿಕ್ತವಾಗಿ ಪರವಾನಗಿದಾರರಿಗೆ ಯಾವುದೇ ರಿಯಾಯಿತಿ, ಎಂಆರ್‌ಪಿಯಲ್ಲಿ ರಿಯಾಯಿತಿ ನೀಡಲು ಅವಕಾಶವಿರಲಿಲ್ಲ. ಈಗ ಹೊಸ ಪಾಲಿಸಿಯು ಈ ವಿಷಯಗಳ ಬಗ್ಗೆ ನಿರ್ಧರಿಸಲು ಪರವಾನಗಿದಾರರು ಮುಕ್ತರಾಗಿದ್ದಾರೆ.
  Published by:HR Ramesh
  First published: