• Home
  • »
  • News
  • »
  • national-international
  • »
  • Delhi Pollution: ವಾಯುಮಾಲಿನ್ಯದ ಕಾರಣಕ್ಕೆ ದೆಹಲಿಯಂತೆ ನೋಯಿಡಾದಲ್ಲೂ ಶಾಲೆಗಳು ಬಂದ್

Delhi Pollution: ವಾಯುಮಾಲಿನ್ಯದ ಕಾರಣಕ್ಕೆ ದೆಹಲಿಯಂತೆ ನೋಯಿಡಾದಲ್ಲೂ ಶಾಲೆಗಳು ಬಂದ್

ಡೆಲ್ಲಿ ಮಾಲಿನ್ಯದ ಒಂದು ದೃಶ್ಯ

ಡೆಲ್ಲಿ ಮಾಲಿನ್ಯದ ಒಂದು ದೃಶ್ಯ

Schools closed in Noida- ಅಪಾಯಕಾರಿ ಮಟ್ಟದಲ್ಲಿ ವಾಯುಮಾಲಿನ್ಯ ಇರುವ ಕಾರಣ ದೆಹಲಿಗೆ ಹೊಂದಿಕೊಂಡಂತಿರುವ ನೋಯಿಡಾದಲ್ಲಿನ ಶಾಲೆಗಳನ್ನ ಅನಿರ್ದಿಷ್ಟಾವಧಿಯವರೆಗೆ ಬಂದ್ ಮಾಡಲಾಗಿದೆ.

  • Share this:

ನವದೆಹಲಿ, ನ. 17: ರಾಷ್ಟ್ರ ರಾಜಧಾನಿ ದೆಹಲಿ (National Capital Delhi) ಹಾಗೂ ಅದರ ಸುತ್ತಲಿನ ಪ್ರದೇಶಗಳಲ್ಲಿ  ತೀವ್ರ ವಾಯು ಮಾಲಿನ್ಯ (Air Pollution) ಉಂಟಾಗಿ ಜನ ಉಸಿರಾಡುವುದೇ ಕಷ್ಟ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ದಾರುಣ ಪರಿಸ್ಥಿತಿಯ ಬಗ್ಗೆ ತುರ್ತು ಅರ್ಜಿ ವಿಚಾರಣೆ ನಡೆಸಿದ ದೇಶದ ಸರ್ವೋಚ್ಚ ನ್ಯಾಯಾಲಯ (Supreme Court) ಅಗತ್ಯ ಬಿದ್ದರೆ ದೆಹಲಿಯಲ್ಲಿ ಎರಡು ದಿನಗಳ ಲಾಕ್ಡೌನ್ (Lockdown) ಮಾಡಿ ಮತ್ತು ನೆರೆಯ ರಾಜ್ಯಗಳ ಜೊತೆ ತುರ್ತು ಸಭೆ (Emergency Meeting) ಕರೆದು ಚರ್ಚಿಸಿ ಎಂದು ದೆಹಲಿ ಹಾಗೂ ಕೇಂದ್ರ ಸರ್ಕಾರಕ್ಕೆ (Union Government) ಸೂಚನೆ ನೀಡಿತ್ತು. ಮತ್ತು ಮಾಲಿನ್ಯ ನಿಯಂತ್ರಣಕ್ಕೆ ಪರಿಹಾರ ಮಾರ್ಗಗಳನ್ನು ಕೈಗೊಳ್ಳಿ ಎಂದು ಹೇಳಿತ್ತು. ಈ‌ ಹಿನ್ನೆಲೆಯಲ್ಲಿ ಈಗ ದೆಹಲಿಯ ಮಾದರಿಯಂತೆ ನೋಯಿಡಾ (NOIDA)ದಲ್ಲೂ ಶಾಲೆಗಳಿಗೆ ಬಂದ್ ಮಾಡಲಾಗಿದೆ.


ಸುಪ್ರೀಂ ಕೋರ್ಟ್ ಸೂಚನೆ ಮೇರೆಗೆ ನಿನ್ನೆ (ನವೆಂಬರ್ 16ರಂದು) ದೆಹಲಿ (Dehli), ಹರಿಯಾಣ (Haryana), ಉತ್ತರ ಪ್ರದೇಶ (Uttar Pradesh) ಮತ್ತು ಪಂಜಾಬ್ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳ ಜೊತೆ ಮಾಲಿನ್ಯ ನಿಯಂತ್ರಣ ಆಯೋಗವು ಸಭೆ ನಡೆಸಿತ್ತು. ಸಭೆಯಲ್ಲಿ ದೆಹಲಿ ಅಲ್ಲದೆ ಎನ್ ಸಿ ಆರ್ ಪ್ರದೇಶಗಳಲ್ಲಿ ಮತ್ತು ಹೊಂದಿಕೊಂಡಿದ್ದ ಇತರೆ ರಾಜ್ಯಗಳ ಕೆಲವು ಕಡೆ ಲಾಕ್ಡೌನ್ ಮಾಡುವ ಬಗ್ಗೆ ಚರ್ಚೆ ನಡೆಸಲಾಗಿತ್ತು. ಶಾಲೆಗಳನ್ನು ಆನ್ ಲೈನ್ (Online) ಮೂಲಕ ನಡೆಸುವ ಬಗ್ಗೆ, ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಂ (Work From Home) ನೀಡುವ ಕುರಿತು ಕೂಡ ಸಮಾಲೋಚನೆ ನಡೆಸಲಾಗಿತ್ತು. ವಾಹನಗಳ ಸಂಚಾರ ನಿಯಂತ್ರಣ ಮಾಡಿದರೆ ವಾಯು ಮಾಲಿನ್ಯ ಕೂಡ ನಿಯಂತ್ರಣಕ್ಕೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಈ ರೀತಿ ಚರ್ಚೆ ನಡೆಸಲಾಗಿತ್ತು.


ಬುಧವಾರ ಮತ್ತೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೂಡ ಮಾಲಿನ್ಯ ನಿಯಂತ್ರಣಕ್ಕೆ ಅಲ್ಪಾವಧಿ ಮತ್ತು ದೀರ್ಘಾವಧಿಯಲ್ಲಿ ತೆಗೆದುಕೊಳ್ಳಬಹುದಾದ ಪರಿಹಾರಗಳನ್ನು ಪರಿಶೀಲಿಸಿತು. ಶಾಲೆಗಳನ್ನು ಮುಚ್ಚುವ ಬಗ್ಗೆ ಕೂಡ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ದೆಹಲಿಯ ನಂತರ ನೋಯ್ಡಾದಲ್ಲೂ ಶಾಲೆಗಳನ್ನು ಬಂದ್ ಮಾಡುವಂತೆ ಆದೇಶಿಸಲಾಗಿದೆ. ಖಾಸಗಿ, ಸರ್ಕಾರಿ ಮತ್ತು ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಮುಂದಿನ ಆದೇಶದವರೆಗೆ ಮುಚ್ಚಬೇಕೆಂದು ಗೌತಮ್ ಬುದ್ಧನಗರದ ಜಿಲ್ಲಾಧಿಕಾರಿ ಸುಹಾಸ್ ಎಲ್ ಯತಿರಾಜ್ (Suhas L Yatiraj) ಆದೇಶಿಸಿದ್ದಾರೆ. ಆನ್ ಲೈನ್ ಮೂಲಕ ಶಿಕ್ಷಣ ನೀಡುವಂತೆ ಸೂಚನೆ ನೀಡಿದ್ದಾರೆ.


ಹಿಂದಿನ ವಿಚಾರಣೆ ವೇಳೆ ನಗರದಲ್ಲಿ ಶಾಲೆಗಳು ತೆರೆದಿದ್ದು, ಮಕ್ಕಳು ತೀವ್ರ ಮಾಲಿನ್ಯಕ್ಕೆ ಒಳಗಾಗುತ್ತಿದ್ದಾರೆ ಎಂದು ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿತ್ತು. ಆಗ ದೆಹಲಿ ಸರ್ಕಾರದ ವಕೀಲರು ಒಂದು ವಾರ ಶಾಲೆಗಳನ್ನು ಮುಚ್ಚಲು, ಕಟ್ಟಡ ಕಾಮಗಾರಿ ಕೆಲಸ ನಿಷೇಧಿಸಲು ಮತ್ತು ಸರ್ಕಾರಿ ನೌಕರರು ಮನೆಯಿಂದಲೇ ಕೆಲಸ ಮಾಡಲು ಕ್ರಮ ಕೈಗೊಂಡಿರುವುದಾಗಿ ತಿಳಿಸಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ವಾಯು ಮಾಲಿನ್ಯ ತಡೆಯಲು, ಇಂಗಾಲ ಹೊರಸೂಸುವಿಕೆ ನಿಯಂತ್ರಿಸಲು ಸಂಪೂರ್ಣ ಲಾಕ್‌ಡೌನ್‌ನಂತಹ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧ. ಜೊತೆಗೆ ಇಂಥ ಕ್ರಮಗಳು ಎನ್‌ಸಿಆರ್‌ ಪ್ರದೇಶದಲ್ಲಿ ಕೂಡ ಜಾರಿಗೆ ಬಂದರೆ ಒಳ್ಳೆಯದು ಎಂದು ಹೇಳಿದ್ದರು.


ಇದನ್ನೂ ಓದಿ: Kangana- ಎರಡು ಕೆನ್ನೆಗೆ ಹೊಡೆಸಿಕೊಳ್ಳುವವರಿಂದ ಸಿಗೋದು ಸ್ವಾತಂತ್ರ್ಯವಲ್ಲ, ಭಿಕ್ಷೆ: ಮತ್ತೆ ಕೆಣಕಿದ ಕಂಗನಾ


ದೀಪಾವಳಿ ಹಬ್ಬವಾಗಿ ವಾರ ಕಳೆದರೂ ದೆಹಲಿಯ ವಾಯುಮಾಲಿನ್ಯದಲ್ಲಿ ಮಾತ್ರ ಸುಧಾರಣೆ ಆಗಿಲ್ಲ. ಗಾಳಿಯ ಗುಣಮಟ್ಟದಲ್ಲಿ ತೀವ್ರ ಕುಸಿತ ಕಂಡಿದ್ದು ಸದ್ಯ ದೆಹಲಿಯಲ್ಲಿ ಉಸಿರಾಟಕ್ಕೆ ಅನರ್ಹವಾಗಿರುವ ಗಾಳಿ ಇದೆ. ಬೆಳಿಗ್ಗೆ 9, 10 ಗಂಟೆಯಾದರೂ ಸೂರ್ಯನನ್ನು ನೋಡಲಾಗದ ರೀತಿಯಲ್ಲಿ ಮಂಜು ಮುಸುಕಿದೆ. ವಾಯು ಗುಣಮಟ್ಟದ ಸೂಚ್ಯಂಕ (Air Quality Index) 100ರ ಒಳಗೆ ಇದ್ದರೆ ಅದು ಒಳ್ಳೆಯ ಗಾಳಿ ಎಂದು ಅರ್ಥ. 200ರ ಒಳಗೆ ಇದ್ದರೆ ಹೇಗೋ ಅಡ್​ಜಸ್ಟ್ ಮಾಡಿಕೊಳ್ಳಬಹುದು. 300ರವರೆಗೆ ತಲುಪಿದರೆ ಅತ್ಯಂತ ಕೆಟ್ಟ ಗಾಳಿ ಎಂದು ಅರ್ಥ. ಉಸಿರಾಡಲು ಅನರ್ಹ ಎಂದು ಅರ್ಥ. 400 ತಲುಪಿದರೆ ಯಾವ ಕಾರಣಕ್ಕೂ ಆ ಗಾಳಿಯನ್ನು ಉಸಿರಾಡಬಾರದು ಎನ್ನಲಾಗುತ್ತದೆ. ಆದರೆ ದೆಹಲಿಯಲ್ಲಿ ಈಗ ಪ್ರತಿದಿನ 400ಕ್ಕಿಂತ ಹೆಚ್ಚು ಕೆಲವೊಮ್ಮೆ 500ಕ್ಕಿಂತ ಹೆಚ್ಚಾಗಿದೆ. ಪರಿಣಾಮ ದೆಹಲಿ ಎಂಬ ನಗರ ಅಕ್ಷರಶಃ ಗ್ಯಾಸ್ ಚೇಂಬರ್ ನಂತಾಗಿದೆ.


ವರದಿ: ಧರಣೀಶ ಬೂಕನಕೆರೆ

Published by:Vijayasarthy SN
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು