ಕೇಜ್ರೀವಾಲ್​ ಹಲ್ಲಿಲ್ಲದ ಚಿರತೆಯಂತೆ, ದೆಹಲಿ ರಾಜಕೀಯ ಮಾಲಿನ್ಯದಿಂದ ಯಾವಾಗ ಮುಕ್ತಿ ಪಡೆಯುತ್ತದೆ?: ಶಿವಸೇನೆ


Updated:June 18, 2018, 8:53 AM IST
ಕೇಜ್ರೀವಾಲ್​ ಹಲ್ಲಿಲ್ಲದ ಚಿರತೆಯಂತೆ, ದೆಹಲಿ ರಾಜಕೀಯ ಮಾಲಿನ್ಯದಿಂದ ಯಾವಾಗ ಮುಕ್ತಿ ಪಡೆಯುತ್ತದೆ?: ಶಿವಸೇನೆ
ಶಿವಸೇನಾ ಪಕ್ಷದ ಅಧ್ಯಕ್ಷ ಉದ್ಧವ್ ಠಾಕ್ರೆ

Updated: June 18, 2018, 8:53 AM IST
ನ್ಯೂಸ್ 18 ಕನ್ನಡ

ಮುಂಬೈ(ಜೂ.18): ಶಿವಸೇನೆಯ ಮುಖವಾಣಿ 'ಸಾಮ್​ನಾ' ಮೂಲಕ ದೆಹಲಿಯಲ್ಲಿ ನಡೆಯುತ್ತಿರುವ ಘಟಣಾವಳಿಗಳ ಕುರಿತಾಗಿ ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತವಾಗಿದೆ. ಶಿವಸೇನೆಯು ದೆಹಲಿಯ ಮುಖ್ಯಮಂತ್ರಿ ಹಾಗೂ ಲೆಫ್ಟಿನೆಂಟ್​ ಗವರ್ನರ್​ ನಡುವಿನ ಸಮರವನ್ನು ರಾಜಕೀಯ ಮಾಲಿನ್ಯ ಎಂದು ಸಂಭೋದಿಸಿದೆ. ರಾಜಕೀಯ ಮಂಜು ದೆಹಲಿ ನಿವಾಸಿಗರ ಬದುಕನ್ನು ಕಠಿಣವಾಗಿಸಿದೆ. AAP ವರ್ಸಸ್​ ಬಿಜೆಪಿ ಹಾಗೂ ಇತರ ಪಕ್ಷಗಳ ಈ ರಾಜಕೀಯ ಮಾಲಿನ್ಯದಿಂದ ದೆಹಲಿ ಯಾವಾಗ ಮುಕ್ತವಾಗುತ್ತದೆ? ಎಂದು ಪ್ರಶ್ನಿಸಲಾಗಿದೆ.

ಅಲ್ಲದೇ ಶಿವಸೇನೆಯ ಈ ಪತ್ರಿಕೆಯಲ್ಲಿ ಬಿಜೆಪಿ ಹಾಗೂ ಕೇಜ್ರೀವಾಲ್​ ನಡುವಿನ ಈ ಹೋರಾಟವನ್ನು ರಾಜಕೀಯ ಡ್ರಾಮಾ ಎಂದೂ ಕರೆಯಲಾಗಿದೆ. ಅಲ್ಲದೇ ಈ ನಾಟಕದಿಂದ ಎರಡೂ ಪಕ್ಷಗಳಿಗೆ ನಷ್ಟವುಂಟಾಗಲಿದೆ ಎಂದೂ ತಿಳಿಸಲಾಗಿದೆ. ದೆಹಲಿಯಲ್ಲಿ ಆಗುತ್ತಿರುವ ಎಲ್ಲಾ ಸಮಸ್ಯೆಗಳಿಗೆ ಆಮ್​ ಆಸ್ಮಿ ಪಕ್ಷ ಹಾಗೂ ಬಿಜೆಪಿಯೇ ಕಾರಣವೆಂದು ಟೀಕಿಸಲಾಗಿದೆ.

ಇನ್ನು ದೆಹಲಿಯ ಕಾನೂನು ಸುವ್ಯವಸ್ಥೆಯ ಎಲ್ಲಾ ಅಧಿಕಾರಗಳು ಕೇಂದ್ರ ಸರ್ಕಾರದ ಬಳಿ ಇರುವುದರಿಂದ ಸದ್ಯ ಕೇಜ್ರೀವಾಲ್​ ಪರಿಸ್ಥಿತಿ ಶೋಪೀಸ್​ನಂತಾಗಿದೆ, ಅರವಿಂದ್​ ಕೇಜ್ರೀವಾಲ್​ ಹಲ್ಲಿಲ್ಲದ ಚಿರತೆಯಂತಾಗಿದ್ದಾರೆ ಎಂದೂ ಹಣಿಯಲಾಗಿದೆ.
First published:June 18, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...