HOME » NEWS » National-international » DELHI POLICE SUB INSPECTOR COMMITS SUICIDE INSIDE AMBULANCE STG MAK

Crime News: ಆ್ಯಂಬ್ಯುಲೆನ್ಸ್ ಒಳಗೆ ಆತ್ಮಹತ್ಯೆ ಮಾಡಿಕೊಂಡ ದೆಹಲಿ ಪೊಲೀಸ್‌ ಇನ್ಸ್‌ಪೆಕ್ಟರ್‌!

CATS ಆ್ಯಂಬ್ಯುಲೆನ್ಸ್‌ನಲ್ಲಿ ಬಟ್ಟೆಯ ತುಂಡು ಬಳಸಿ ನೇಣು ಹಾಕಿಕೊಂಡಿದ್ದನ್ನು ನಾವು ಕಂಡುಕೊಂಡೆವು. ಅವರು ಐದು ದಿನಗಳ ಕಾಲ ರಜೆಯಲ್ಲಿದ್ದರು ಮತ್ತು ಇಂದು ಬೆಳಿಗ್ಗೆ ಡಿಸ್ಟ್ರಿಕ್ಟ್‌ ಲೈನ್ಸ್‌ನಲ್ಲಿ ಗೈರು ಹಾಜರಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

news18-kannada
Updated:February 13, 2021, 5:50 PM IST
Crime News: ಆ್ಯಂಬ್ಯುಲೆನ್ಸ್ ಒಳಗೆ ಆತ್ಮಹತ್ಯೆ ಮಾಡಿಕೊಂಡ ದೆಹಲಿ ಪೊಲೀಸ್‌ ಇನ್ಸ್‌ಪೆಕ್ಟರ್‌!
ಪ್ರಾತಿನಿಧಿಕ ಚಿತ್ರ.
  • Share this:
ನವ ದೆಹಲಿ (ಫೆಬ್ರವರಿ 13); ದೆಹಲಿಯ ಗುರು ತೇಜ್ ಬಹದ್ದೂರ್ ಆಸ್ಪತ್ರೆ ಬಳಿ 39 ವರ್ಷದ ದೆಹಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ CATS ಆ್ಯಂಬ್ಯುಲೆನ್ಸ್ ಒಳಗೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಘಟನೆ ನಡೆದಾಗ ಆ್ಯಂಬ್ಯುಲೆನ್ಸ್ ಐಎಚ್‌ಬಿಎಎಸ್ ಆಸ್ಪತ್ರೆಗೆ ತೆರಳುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆಗ್ನೇಯ ಜಿಲ್ಲೆಯ ಡಿಸ್ಟ್ರಿಕ್ಟ್‌ ಲೈನ್ಸ್‌ಗಳಲ್ಲಿ ಕೆಲಸ ಮಾಡುತ್ತಿರುವ ಎಸ್‌ಐ ರಾಜ್‌ವೀರ್ ಸಿಂಗ್, ದ್ವಾರಕಾದ ತಮ್ಮ ಮನೆಯಿಂದ ಕ್ಯಾಟ್ಸ್ ಆಂಬ್ಯುಲೆನ್ಸ್‌ಗೆ ಶುಕ್ರವಾರ ಕರೆ ಮಾಡಿದ್ದಾರೆ.

"ಸಿಂಗ್ ಅವರನ್ನು ಮೂರು ಆಸ್ಪತ್ರೆಗಳಲ್ಲಿ ವಿವಿಧ ಕಾರಣಗಳಿಗಾಗಿ ದಾಖಲಿಸಲು ನಿರಾಕರಿಸಲಾಯಿತು. ಈ ಮಧ್ಯೆ, ಅವರು ಆಕ್ರೋಶಗೊಂಡರು. CATS ಕಾರ್ಮಿಕರು ಅವನನ್ನು ಸಮಾಧಾನಪಡಿಸಲು ಮತ್ತು ಐಬಿಎಎಎಸ್ ಆಸ್ಪತ್ರೆಗೆ ಕರೆದೊಯ್ಯಲು ಪ್ರಯತ್ನಿಸಿದರು ಆದರೆ ಸಿಂಗ್ ಆತ್ಮಹತ್ಯೆ ಮಾಡಿಕೊಂಡರು" ಎಂದು ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು‌ ವರದಿಯಾಗಿದೆ.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ ಎಂದು ಡಿಸಿಪಿ (ಆಗ್ನೇಯ) ಆರ್ ಪಿ ಮೀನಾ ತಿಳಿಸಿದ್ದಾರೆ. “CATS ಆ್ಯಂಬ್ಯುಲೆನ್ಸ್‌ನಲ್ಲಿ ಬಟ್ಟೆಯ ತುಂಡು ಬಳಸಿ ನೇಣು ಹಾಕಿಕೊಂಡಿದ್ದನ್ನು ನಾವು ಕಂಡುಕೊಂಡೆವು. ಅವರು ಐದು ದಿನಗಳ ಕಾಲ ರಜೆಯಲ್ಲಿದ್ದರು ಮತ್ತು ಇಂದು ಬೆಳಿಗ್ಗೆ ಡಿಸ್ಟ್ರಿಕ್ಟ್‌ ಲೈನ್ಸ್‌ನಲ್ಲಿ ಗೈರು ಹಾಜರಾಗಿದ್ದರು. ” ಎಂದೂ ಅವರು ಹೇಳಿದರು.

"ಹೆಚ್ಚಿನ ವಿಚಾರಣೆಯನ್ನು ಪೊಲೀಸರು ಮತ್ತು ವೈದ್ಯರು ನಡೆಸುತ್ತಿದ್ದಾರೆ, ಮತ್ತು ಸಾಕ್ಷ್ಯಗಳ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಅಧಿಕಾರಿಯೊಬ್ಬರು ಹೇಳಿದರು.

ಇದನ್ನೂ ಓದಿ: ಇಂಡಿಗೋ: ಮಾರ್ಚ್ 28 ರಿಂದ ಬೆಂಗಳೂರು, ಅಗರ್ತಲಾ ಸೇರಿ ಹಲವು ನಗರಗಳಿಗೆ 22 ಹೊಸ ವಿಮಾನ ಸೇವೆ

ಇನ್ನು, “ಘಟನೆಗಳ ಅನುಕ್ರಮದ ಬಗ್ಗೆ ನಮಗೆ ಖಚಿತವಿಲ್ಲ. ಆ್ಯಂಬ್ಯುಲೆನ್ಸ್ ಒಳಗೆ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ನಮಗೆ ತಿಳಿದಿದೆ. ಈ ವೇಳೆ 2-3 ಕಾರ್ಮಿಕರು ಇದ್ದರು ಮತ್ತು ತನಿಖೆಯಲ್ಲಿ ನಾವು ಪೊಲೀಸರೊಂದಿಗೆ ಸಮನ್ವಯ ಸಾಧಿಸುತ್ತೇವೆ.'' ಎಂದು CATS ಅಧಿಕಾರಿಯೊಬ್ಬರು ಹೇಳಿದರು.
ಮೃತ ಸಬ್ ಇನ್ಸ್‌ಪೆಕ್ಟರ್‌ಗೆ ಪತ್ನಿ ಮತ್ತು ಮಗಳು ಇದ್ದಾರೆ. ಅವನ ಪೋಷಕರು ಹರಿಯಾಣದ ಮಹೇಂದ್ರಗಢದಲ್ಲಿ ವಾಸಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.
Published by: MAshok Kumar
First published: February 13, 2021, 5:50 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories