ಅಮಿತ್​​ ಶಾ ನಿವಾಸದತ್ತ ಜಾಥಾ ಹೊರಟ ಶಾಹೀನ್​​ ಬಾಗ್​​​ ಪ್ರತಿಭಟನಾಕಾರರು: ಪೊಲೀಸರಿಂದ ತಡೆ

ಆದರೆ ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಅಮಿತ್​ ಶಾ ಮಾತುಕತೆ ನಡೆಸುವ ಯಾವುದೇ ಮನವಿ ನಮ್ಮೆದುರು ಬಂದಿಲ್ಲ ಎಂದು ಗೃಹಸಚಿವಾಲಯದ ಮೂಲಗಳು ತಿಳಿಸಿದ್ದರು. ಪ್ರತಿಭಟನಾಕಾರರು ಹೇಳುವಂತೆ ಇಂದು ಫೆ.16ರಂದು ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ ಪ್ರಾರಂಭಿಸಬೇಕಿತ್ತು.

ಶಾಹೀನ್​​ ಬಾಗ್​​

ಶಾಹೀನ್​​ ಬಾಗ್​​

 • Share this:
  ನವದೆಹಲಿ(ಫೆ.16): ಇಂದು ಕೇಂದ್ರ ಗೃಹ ಸಚಿವ ಅಮಿತ್​​ ಶಾರ ನಿವಾಸದತ್ತ ಜಾಥ ಹೊರಡಲು ಮುಂದಾಗಿದ್ದ ಶಾಹೀನ್​ ಬಾಗ್​ ಪ್ರತಿಭಟನಾಕಾರರಿಗೆ ದೆಹಲಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ. ಹಾಗಾಗಿ ಕೇಂದ್ರ ಗೃಹ ಸಚಿವ ಅಮಿತ್​​ ಶಾ ಭೇಟಿಗೆ ಅವಕಾಶ ಸಿಕ್ಕ ನಂತರವೇ ಜಾಥಾ ಮಾಡುವುದಾಗಿ ನಿರ್ಧರಿಸಿದ ಪ್ರತಿಭಟನಾಕಾರರು ಶಾಹೀನ್ ಬಾಗ್​ನಲ್ಲೇ ತಮ್ಮ ಹೋರಾಟ ಮುಂದುವರಿಸಿದ್ದಾರೆ. 

  ಈ ಸಂಬಂಧ ನ್ಯೂಸ್​​18 ಜತೆ ಮಾತಾಡಿದ ದೆಹಲಿ ಪೊಲೀಸ್​​ ಅಧಿಕಾರಿಯೊಬ್ಬರು, "ಪೌರತ್ವ ಕಾಯ್ದೆ ಸಂಬಂಧ ಮಾತುಕತೆ ನಡೆಸಲು ಅಮಿತ್​​ ಶಾ ಭೇಟಿಗೆ ಅವಕಾಶ ಮಾಡಿಕೊಡಿ. ಕೇಂದ್ರ ಗೃಹ ಸಚಿವರ ನಿವಾಸದತ್ತ ಜಾಥ ಹಮ್ಮಿಕೊಳ್ಳಲು ಅನುಮತಿಯೂ ನೀಡಿ. ಅವರ ಭೇಟಿಗೆ ಅವಕಾಶ ನೀಡದೆ ಹೋದಲ್ಲಿ ಜಾಥ ನಡೆಸಲು ಸಾಧ್ಯವಿಲ್ಲ. ಅಮಿತ್​​ ಶಾರನ್ನು ಭೇಟಿ ಮಾಡಿ ನಮ್ಮ ಬೇಡಿಕೆಗಳ ಪಟ್ಟಿಯನ್ನು ಮುಂದಿಡಬೇಕಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಹಿಂಪಡೆಯಬೇಕು ಎಂದು ಒತ್ತಾಯಿಸಬೇಕಿದೆ. ಹಾಗಾಗಿ ನಮಗೇ ಅವಕಾಶ ನೀಡಿ" ಎಂದು ಶಾಹೀನ್​​ ಬಾಗ್​ ಪ್ರತಿಭಟನಾಕಾರರು ಬೇಡಿಕೆಯಿಟ್ಟಿದ್ದಾರೆ. ಇದರ ಬಗ್ಗೆ ನಾವು ಅಮಿತ್​​ ಶಾ ಜತೆಗೆ ಮಾತಾಡುತ್ತಿದ್ದೇವೆ. ನಮ್ಮ ಪರಿಸ್ಥಿತಿಯೂ ಆಯೋಜಕರು ಅರ್ಥ ಮಾಡಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎಂದರು.

  ಪೌರತ್ವ ತಿದ್ದುಪಡಿ ಕಾಯ್ದೆ ಜಾರಿಯಾದಾಗಿನಿಂದಲೂ ಶಾಹೀನ್​ ಬಾಗ್​ನಲ್ಲಿ ನಿರಂತರವಾಗಿ ಪ್ರತಿಭಟನೆ ನಡೆಯುತ್ತಲೇ ಇದೆ. ಸಿಎಎ ವಿರೋಧಿಸಿ ಶಾಹೀನ್ ಬಾಗ್​ನಲ್ಲಿ ಪ್ರತಿಭಟನೆ ನಡೆಸುತ್ತಿರುವವರು ನಿನ್ನೆಯೇ ಮೆರವಣಿಗೆ ಮೂಲಕ ಗೃಹ ಸಚಿವ ಅಮಿತ್​ ಶಾ ನಿವಾಸಕ್ಕೆ ತೆರಳಲಿದ್ದೇವೆ ಎಂದು ಘೋಷಣೆ ಮಾಡಿದ್ದರು. ನಮ್ಮ ಬೇಡಿಕೆಗಳ ಪಟ್ಟಿಯನ್ನು ಗೃಹಸಚಿವರ ಎದುರು ಇಡುತ್ತೇವೆ. ಅದರಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂಬುದು ನಮ್ಮ ಪ್ರಥಮ ಬೇಡಿಕೆ ಎಂದು ಹೇಳಿದ್ದರು.

  ಇದನ್ನೂ ಓದಿ: ಪೊಲೀಸರು ನಿಮ್ಮ ಶತ್ರುಗಳಲ್ಲ; ಬೇಕಾದರೆ ಟೀಕಿಸಿ, ಆದರೆ ಗೌರವಿಸಲು ಮರೆಯದಿರಿ: ಅಮಿತ್ ಶಾ

  ಆದರೆ ಶಾಹೀನ್ ಬಾಗ್ ಪ್ರತಿಭಟನಾಕಾರರೊಂದಿಗೆ ಅಮಿತ್​ ಶಾ ಮಾತುಕತೆ ನಡೆಸುವ ಯಾವುದೇ ಮನವಿ ನಮ್ಮೆದುರು ಬಂದಿಲ್ಲ ಎಂದು ಗೃಹಸಚಿವಾಲಯದ ಮೂಲಗಳು ತಿಳಿಸಿದ್ದರು. ಪ್ರತಿಭಟನಾಕಾರರು ಹೇಳುವಂತೆ ಇಂದು ಫೆ.16ರಂದು ಮಧ್ಯಾಹ್ನ 2 ಗಂಟೆಗೆ ಮೆರವಣಿಗೆ ಪ್ರಾರಂಭಿಸಬೇಕಿತ್ತು.

  ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆ ಬಗ್ಗೆ ಯಾರಿಗೆ ಏನೇ ಅನುಮಾನವಿದ್ದರೂ ನನ್ನನ್ನು ನೇರವಾಗಿ ಭೇಟಿ ಮಾಡಬಹುದು ಎಂದು ಅಮಿತ್​ ಶಾ ಹೇಳಿದ್ದರು. ಹಾಗಾಗಿ ನಾವು ಅವರ ನಿವಾಸಕ್ಕೆ ತೆರಳಿ ನಮ್ಮ ಬೇಡಿಕೆಗಳನ್ನು ಸಲ್ಲಿಸುತ್ತೇವೆ. ಶಾಹೀನ್​ ಬಾಗ್​ನಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ಅಮಿತ್​​ ಶಾ ನಿವಾಸಕ್ಕೆ ಹೋಗುತ್ತಿದ್ದೇವೆ ಎಂದು ಪ್ರತಿಭಟನಾಕಾರೊಬ್ಬರು ತಿಳಿಸಿದ್ದರು.
  First published: