• Home
  • »
  • News
  • »
  • national-international
  • »
  • Human Sacrifice: ಮೃತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸಿನ ಬಲಿಗೆ ಯತ್ನಿಸಿದ ಮಹಿಳೆ

Human Sacrifice: ಮೃತ ಅಪ್ಪನನ್ನು ಬದುಕಿಸಲು 2 ತಿಂಗಳ ಹಸುಗೂಸಿನ ಬಲಿಗೆ ಯತ್ನಿಸಿದ ಮಹಿಳೆ

ಮಗುವನ್ನು ರಕ್ಷಿಸಿದ ಪೊಲೀಸರು

ಮಗುವನ್ನು ರಕ್ಷಿಸಿದ ಪೊಲೀಸರು

ಈ ಮೂಢನಂಬಿಕೆಯನ್ನು ಈಡೇರಿಸಲು ಎರಡು ತಿಂಗಳ ಮಗುವನ್ನು ಅಪಹರಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

  • Share this:

ದೆಹಲಿ: ತನ್ನ ತಂದೆಯನ್ನು ಬದುಕಿಸಲು 2 ತಿಂಗಳ ಸ್ವಂತ ಹಸುಗೂಸನ್ನೇ ಬಲಿಕೊಡಲು ಪ್ರಯತ್ನಿಸಿ ಅಮಾನವೀಯ ಘಟನೆಯೊಂದು ದೆಹಲಿಯಲ್ಲಿ ನಡೆದಿದೆ. 25 ವರ್ಷದ ಮಹಿಳೆಯೊಬ್ಬರು ತನ್ನ ಮೃತ ತಂದೆ ಮರಳಿ ಬದುಕಲಿ ಎಂದು ತಮ್ಮ ಹಸುಗೂಸನ್ನೇ ನರಬಲಿ (Human Sacrifice) ನೀಡಲು ಪ್ರಯತ್ನಿಸಿದ್ದಾರೆ. ದೆಹಲಿ ಪೊಲೀಸರು (Delhi Police) ಶುಕ್ರವಾರ 24 ಗಂಟೆಗಳಲ್ಲಿ ನರಬಲಿಯಾಗುತ್ತಿದ್ದ ಮಗುವನ್ನು ರಕ್ಷಿಸಿದ್ದಾರೆ. ಅಲ್ಲದೇ ನರಬಲಿ ನೀಡಲು ಪ್ರಯತ್ನಿಸುತ್ತಿದ್ದ ಶ್ವೇತಾ ಎಂಬ ಮಹಿಳೆಯನ್ನು ಬಂಧಿಸಲಾಗಿದೆ ಎಂದು ದೆಹಲಿ ಆಗ್ನೇಯ ಪೊಲೀಸ್ ಉಪ ಆಯುಕ್ತ ಇಶಾ ಪಾಂಡೆ ಶನಿವಾರ ತಿಳಿಸಿದ್ದಾರೆ.


ಗುರುವಾರ ಸಂಜೆ 4 ಗಂಟೆಗೆ ದೆಹಲಿಯ ಗರ್ಹಿ ಪ್ರದೇಶದಿಂದ 2 ತಿಂಗಳ ಶಿಶುವನ್ನು ಅಪಹರಿಸಲಾಗಿದ್ದು, ಆಗ್ನೇಯ ಜಿಲ್ಲೆಯ ಅಮರ್ ಕಾಲೋನಿ ಪೊಲೀಸ್ ಠಾಣೆಯ ತಂಡವು ಶುಕ್ರವಾರ 24 ಗಂಟೆಗಳಲ್ಲಿ ಕೋಟ್ಲಾ ಮುಬಾರಕ್‌ಪುರ ಪ್ರದೇಶದಲ್ಲಿ ಅಪಹರಣಕಾರರಿಂದ ಸುರಕ್ಷಿತವಾಗಿ ರಕ್ಷಿಸಿದೆ ಎಂದು ಡಿಸಿಪಿ ತಿಳಿಸಿದ್ದಾರೆ.


ನಿರಂತರ ವಿಚಾರಣೆಯ ಸಮಯದಲ್ಲಿ ಬಹಿರಂಗ
ನಿಧನರಾದ ತನ್ನ ತಂದೆಯನ್ನು ಪುನಃ ಬದುಕಿಸಲು ನರಬಲಿ ನೀಡಲು ಬಾಲಕನನ್ನು ಅಪಹರಿಸಿರುವುದಾಗಿ ಆರೋಪಿಯು ನಿರಂತರ ವಿಚಾರಣೆಯ ಸಮಯದಲ್ಲಿ ಬಹಿರಂಗಪಡಿಸಿದ್ದಾರೆ ಎಂದು ಇಶಾ ಪಾಂಡೆ ಹೇಳಿದ್ದಾರೆ.


ಮಗುವನ್ನು ಅಪಹರಿಸಿದ್ದಾಗಿ ತಪ್ಪೊಪ್ಪಿಕೊಂಡ ಆರೋಪಿ
ಆರೋಪಿ ಶ್ವೇತಾ ತನ್ನ ತಂದೆ ಅಕ್ಟೋಬರ್‌ನಲ್ಲಿ ಮೃತಪಟ್ಟಿರುವುದಾಗಿ ಬಹಿರಂಗಪಡಿಸಿದ್ದಾಳೆ. ಅದೇ ಲಿಂಗದ ಶಿಶುವಿನ ನರಬಲಿ ತನ್ನ ತಂದೆಯನ್ನು ಮರಳಿ ಬದುಕಿಸಬಹುದು ಎಂದು ಆತನ ಅಂತ್ಯಕ್ರಿಯೆಯ ಸಮಯದಲ್ಲಿ ಆಕೆ ಅಂದುಕೊಂಡಿದ್ದಳು ಎಂದು ಡಿಸಿಪಿ ತಿಳಿಸಿದ್ದಾರೆ. ಈ ಮೂಢನಂಬಿಕೆಯನ್ನು ಈಡೇರಿಸಲು ಎರಡು ತಿಂಗಳ ಮಗುವನ್ನು ಅಪಹರಿಸಿದ್ದಾಗಿ ಆರೋಪಿ ತಪ್ಪೊಪ್ಪಿಕೊಂಡಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.


ಇದನ್ನೂ ಓದಿ: US Elections: ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ಇತಿಹಾಸ ಬರೆದ ಭಾರತ ಮೂಲದ ಮಹಿಳೆ!


ನರಬಲಿ ಪ್ರಕರಣಕ್ಕೆ ಬೆಚ್ಚಿಬಿದ್ದಿತ್ತು ಕೇರಳ!
ಮಹಿಳೆಯರನ್ನು ಕೊಂದು ಬಳಿಕ ಮೃತದೇಹಗಳನ್ನು 56 ಪೀಸ್ ಮಾಡಿ ಮಾಂಸ ಭಕ್ಷಣೆ ಮಾಡಿದ ವಿಕೃತ ಆರೋಪದಡಿ ದಂಪತಿಯನ್ನು ಇತ್ತೀಚಿಗಷ್ಟೇ  ಕೇರಳದಲ್ಲಿ ಬಂಧನ ಮಾಡಲಾಗಿತ್ತು. ಕೇರಳದ ಪಟ್ಟಣತಿಟ್ಟಂ ಬಳಿಯ ಎಲಂತೂರಲ್ಲಿ ವಾಮಾಚಾರಕ್ಕೆ ಮಹಿಳೆಯರನ್ನ ಬಲಿ ಕೊಟ್ಟ ದುರುಳರು ಮಹಿಳೆಯರನ್ನು ಕೊಂದ ಬಳಿಕ ಮೃತದೇಹಗಳನ್ನು ಕಟ್ ಮಾಡಿದ್ದಾರೆ ಎಂದು ಪೊಲೀಸರು ಆರೋಪಿಸಿ ಬಂಧಿಸಿದ್ದರು. ಆ ನಂತರ ಮಾಂಸವನ್ನ ಬೇಯಿಸಿಕೊಂಡು ತಿಂದಿದ್ದಾರೆ ಎಂಬ ಬಗ್ಗೆ ಪೊಲೀಸರಿಂದ ಸ್ಫೋಟಕ ಮಾಹಿತಿ ಸಿಕ್ಕಿತ್ತು. ಆರೋಪಿಗಳಾದ ಭಗವಾಲ್ ಸಿಂಗ್, ಲೈಲಾ ಹಾಗೂ ಶಫಿ ಎಂಬ ಮೂವರು ಆರೋಪಿಗಳನ್ನ ಪೊಲೀಸರು ಅರೆಸ್ಟ್ ಮಾಡಿದ್ದರು.


ಯೌವ್ವನ ಉಳಿಯಬೇಕು ಎಂದು ಮೃತದೇಹಗಳ ಮಾಂಸ ಭಕ್ಷಣೆ
ಯೌವ್ವನ ಉಳಿಯಬೇಕು ಎಂದು ಮೃತದೇಹಗಳ ಮಾಂಸ ಬೇಯಿಸಿ ತಿಂದಿದ್ದಾರೆ ಎಂದು ಕೇರಳದ ಪ್ರಕರಣದಲ್ಲಿ ಪೊಲೀಸರು ಆರೋಪಿಸಿದ್ದರು. ಹೀಗೆ ಮಾಡಿದರೆ ವೃದ್ದಾಪ್ಯ ಬರದಂತೆ ತಡೆಗಟ್ಟಬಹುದು ಎಂದು ಆರೋಪಿಗಳು ಭಾವಿಸಿದ್ದರು ಎಂದು ಪೊಲೀಸರು ತಿಳಿಸಿದ್ದರು.


ಇದನ್ನೂ ಓದಿ: Gujarat Election 2022: 10 ಲಕ್ಷ ಉದ್ಯೋಗ ಸೃಷ್ಟಿ, ಮಹಿಳೆಯರಿಗೆ 50ರಷ್ಟು ಮೀಸಲಾತಿ! ಕೈ ಪ್ರಣಾಳಿಕೆಯಲ್ಲಿ ಭರಪೂರ ಭರವಸೆ!


56 ತುಂಡುಗಳಾಗಿ ಮಹಿಳೆಯರನ್ನ ತುಂಡು ಮಾಡಿದ್ದರು
ಸೆಪ್ಟೆಂಬರ್ 26ರಂದು ಕಡವಂತ್ರದಿಂದ ನಾಪತ್ತೆಯಾಗಿದ್ದ ಪದ್ಮ ಮತ್ತು ರೋಸ್ಲಿನ್​​​ಳನ್ನೂ ಅಪಹರಿಸಿದ್ದ ಹಂತಕರು ಇಬ್ಬರು ಮಹಿಳೆಯರ ಕತ್ತು ಸೀಳಿ ನರಬಲಿ ಕೊಟ್ಟು ತುಂಡು ತುಂಡುಗಳಾಗಿ ಕತ್ತರಿಸಿದ್ದರು. 56 ತುಂಡುಗಳಾಗಿ ಮಹಿಳೆಯರನ್ನ ತುಂಡು ಮಾಡಿದ್ದರು. ನರಬಲಿ ಬಳಿಕ ದೇಹವನ್ನು ಬೇಯಿಸಿ ತಿಂದಿದ್ದರು. ಬೇರೆ ಬೇರೆ ಪ್ರದೇಶದಲ್ಲಿ ಮಹಿಳೆಯರ ಶವ ಹೂತಿದ್ದರು. ಪತ್ತಣಂತಿಟ್ಟ ಪ್ರದೇಶದ ಬೇರೆ ಬೇರೆ ಕಡೆ ಶವ ಹೂತಿದ್ದರು ಎಂದು ಪೊಲೀಸರು ತಿಳಿಸಿದ್ದರು.

Published by:ಗುರುಗಣೇಶ ಡಬ್ಗುಳಿ
First published: