ಪೌರತ್ವದ ಕಾಯ್ದೆ ಕಿಚ್ಚು: ಶಾಹೀನ್‌ ಬಾಗ್ ಸಮೀಪ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು

ಇಂದು ಭಾನುವಾರ ಬೆಳಗ್ಗೆ ಸುಮಾರು 9.30ಕ್ಕೆ ಶಾಹೀನ್‌ ಬಾಗ್ ಸಮೀಪ ಪೆಟ್ರೋಲ್ ತುಂಬಿದ ಐದಾರು ಬಾಟಲಿಗಳನ್ನು ಎಸೆಯಲಾಗಿದೆ. ಇದನ್ನು ಪತ್ತೆ ಹಚ್ಚಿದ ಪೊಲೀಸರು, ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.

news18-kannada
Updated:March 22, 2020, 3:51 PM IST
ಪೌರತ್ವದ ಕಾಯ್ದೆ ಕಿಚ್ಚು: ಶಾಹೀನ್‌ ಬಾಗ್ ಸಮೀಪ ಪೆಟ್ರೋಲ್ ಬಾಂಬ್ ಎಸೆದ ದುಷ್ಕರ್ಮಿಗಳು
ಶಾಹೀನ್​ ಬಾಗ್​
  • Share this:
ನವದೆಹಲಿ(ಮಾ.22): ಕೊರೋನಾ ವೈರಸ್​​ ಭೀತಿ ನಡುವೆಯೂ ಪಟ್ಟು ಬಿಡದಂತೆ ಪೌರತ್ವ ತಿದ್ದಪಡಿ ಕಾಯ್ದೆ (ಸಿಎಎ) ಮತ್ತು ನಾಗರಿಕ ನೋಂದಣಿ (ಎನ್​​ಪಿಆರ್) ವಿರುದ್ಧ ದೆಹಲಿಯ ಶಾಹೀನ್​​ಬಾಗ್​​ನಲ್ಲಿ ಹೋರಾಟ ಮುಂದುವರೆದಿದೆ. ಆದರೀಗ, ಸಿಎಎ ಮತ್ತು ಎನ್​​ಆರ್​ಸಿ ವಿರೋಧಿಸಿ ಮಹಿಳೆಯರು ಪ್ರತಿಭಟನೆ ನಡೆಸುತ್ತಿರುವ ಶಾಹೀನ್​​ ಬಾಗ್​​ ಬಳಿ ದುಷ್ಕರ್ಮಿಯೋರ್ವ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಇಂದು ಭಾನುವಾರ ಬೆಳಗ್ಗೆ ಸುಮಾರು 9.30ಕ್ಕೆ ಶಾಹೀನ್‌ ಬಾಗ್ ಸಮೀಪ ಪೆಟ್ರೋಲ್ ತುಂಬಿದ ಐದಾರು ಬಾಟಲಿಗಳನ್ನು ಎಸೆಯಲಾಗಿದೆ. ಇದನ್ನು ಪತ್ತೆ ಹಚ್ಚಿದ ಪೊಲೀಸರು, ಯಾರಿಗೂ ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿಸಿದ್ದಾರೆ.



ಇತ್ತೀಚೆಗೆ ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಲ್ಲಿನ ಶಾಹೀನ್​​ ಬಾಗ್​​ನಲ್ಲಿ ಹೋರಾಟ ಮಾಡುತ್ತಿರುವ ಪ್ರತಿಭಟನಾಕಾರರ ಮನವೊಲಿಸುವಂತೆ ಕನ್ನಡಿಗ ವಕೀಲ ಸಂಜಯ್​​ ಹೆಗ್ಡೆಯವರಿಗೆ ಸುಪ್ರೀಂಕೋರ್ಟ್​ ವಿನಂತಿಸಿತ್ತು. ಶಾಹೀನ್​​ ಬಾಗ್ ಪ್ರತಿಭಟನಾಕಾರರ ತೆರವುಗೊಳಿಸಿ ಎಂದು ಸ್ಥಳೀಯರು ಸುಪ್ರೀಂಕೋರ್ಟ್​ ಮೆಟ್ಟಿಲೇರಿದ್ದರು. ಈ ಸಂಬಂಧದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್​​, "ಪ್ರಜಾಪ್ರಭುತ್ವ ದೇಶದಲ್ಲಿ ಪ್ರತಿಭಟನೆ ಮೂಲಕ ತಮ್ಮ ನಿಲುವು ವ್ಯಕ್ತಪಡಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ ಎಲ್ಲದಕ್ಕೂ ಒಂದು ಇತಿಮಿತಿ ಇರುತ್ತದೆ. ರಸ್ತೆ ತಡೆ ಹಿಡಿಯುವ ಹಕ್ಕೂ ಯಾರಿಗೂ ಇಲ್ಲ. ಇದು ನಾಳೆ ಯಾವುದಾದರೂ ಅನಾಹುತಕ್ಕೆ ಕಾರಣವಾಗಬುದು. ಹಾಗಾಗಿ ಯಾವುದೇ ಅನಾಹುತ ಸಂಭವಿಸುವ ಮುನ್ನವೇ ಮುನ್ನೆಚ್ಚರಿಕೆಯಿಂದ ಮಧ್ಯಪ್ರವೇಶಿಸಿ ಶಾಹೀನ್​​ ಬಾಗ್​​ ಪ್ರತಿಭಟನಾಕಾರರ ಮನವೊಲಿಸಿ" ಎಂದು ವಕೀಲ ಸಂಜಯ್​​ ಹೆಗ್ಡೆಯವರಿಗೆ ಸುಪ್ರೀಂಕೋರ್ಟ್​​ ಮನವಿ ಮಾಡಿತ್ತು.

ನಂತರ ಸುಪ್ರೀಂ ಆದೇಶವನ್ನು ಪ್ರತಿಭಟನಾಕಾರರಿಗೆ ವಿವರಿಸುವ ಮೂಲಕ ವಕೀಲ ಸಂಜಯ್ ಹೆಗ್ಡೆ ಪ್ರತಿಭಟನಾಕಾರರ ಮನವೊಲಿಕೆಗೆ ಯತ್ನಿಸಿದ್ದರು. “ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ನೂರಾರು ಜನ ಅದರಲ್ಲೂ ವಿಶೇಷವಾಗಿ ಮಹಿಳೆಯರು ಇಲ್ಲಿ ಕಳೆದ ಎರಡು ತಿಂಗಳಿನಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಹೀಗಾಗಿ ಈ ಭಾಗದ ರಸ್ತೆಯನ್ನು ಸಂಚಾರಕ್ಕೆ ನಿರ್ಬಂಧಿಸಿದ್ದು, ನಗರ ಸಂಚಾರ ದಟ್ಟಣೆಯನ್ನು ಎದುರಿಸುತ್ತಿದೆ. ನಾವು ಯಾರ ಪರವಾಗಿಯೂ ಕೆಲಸ ನಿರ್ವಹಿಸಲು ಇಲ್ಲಿಗೆ ಆಗಮಿಸಿಲ್ಲ. ಆದರೆ, ಎಲ್ಲರ ಸಹಕಾರದೊಂದಿಗೆ ಈ ವಿಷಯವನ್ನು ಪರಿಹರಿಸಲು ನಾವು ಆಶಿಸುತ್ತೇವೆ” ಎಂದು ತಿಳಿಸಿದ್ದರು. ಆದರೆ, ಇದಕ್ಕೆ ಪ್ರತಿಭಟನಾಕಾರು ಜಗ್ಗದೆ ಪ್ರತಿಭಟನೆ ಮುಂದುವರಿಸಿದರು.ಇದನ್ನೂ ಓದಿ: ‘ಕೊರೋನಾ ವಿರುದ್ಧದ ಹೋರಾಟಕ್ಕೆ ವಿಶೇಷ ಬಜೆಟ್​​​ ಮೀಸಲಿಡಬೇಕು‘: ಕೇಂದ್ರಕ್ಕೆ ಸೋನಿಯಾ ಗಾಂಧಿ ಆಗ್ರಹ

ಶಾಹೀನ್​ ಬಾಗ್​​ ಪ್ರತಿಭಟನೆಯಿಂದ ದೆಹಲಿ-ನೋಯ್ಡಾ ಹೆದ್ದಾರಿಯೂ ಬಹುತೇಕ ಬಂದ್ ಆದಂತಿದೆ. ದೆಹಲಿ ಪ್ರಮುಖ ರಸ್ತೆಗಳಿಗೆ ಹಾದು ಹೋಗುವ ಶಾಹೀನ್​​ ಬಾಗ್​​ನಲ್ಲೇ ನಿರಂತರ ಪ್ರತಿಭಟನೆಗಳು ನಡೆಯುತ್ತಿರುವ ಕಾರಣ ಸಂಚಾರ ದಟ್ಟಣೆ ತೀವ್ರಗೊಂಡಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಪ್ರತಿಭಟನಾಕಾರರನ್ನು ಅಲ್ಲಿಂದ ತೆರವುಗೊಳಿಸುವಂತೆ ಸೂಚಿಸಿ ಎಂದು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

 

 
First published:March 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading