ಜೆಎನ್​​​ಯು ಹಿಂಸಾಚಾರ ಕೇಸ್​: ಮುಸುಕುಧಾರಿ ಮಹಿಳೆ ಸೇರಿದಂತೆ 49 ಮಂದಿಗೆ ಪೊಲೀಸ್​​ ನೋಟಿಸ್‌

ದೆಹಲಿ ಪೊಲೀಸರು ಮೊದಲು ಫೋನಾಯಿಸಿದಾಗ ತನಿಖೆಗೆ ಸಹರಿಸುತ್ತೇವೆಂದು ಅಕ್ಷತ್​​​​​​ ಅವಸ್ತಿ ಮತ್ತು ರೋಹಿತ್​​ ಶಾ ಹೇಳಿದ್ದರು. ಆದರೀಗ ಇಬ್ಬರ ಫೋನ್‌ ಸ್ವಿಚ್ ಆಫ್‌ ಆಗಿದೆ. ಇಬ್ಬರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಾಗುವುದು ಎನ್ನುತ್ತಿವೆ ಮೂಲಗಳು.


Updated:January 13, 2020, 8:31 AM IST
ಜೆಎನ್​​​ಯು ಹಿಂಸಾಚಾರ ಕೇಸ್​: ಮುಸುಕುಧಾರಿ ಮಹಿಳೆ ಸೇರಿದಂತೆ 49 ಮಂದಿಗೆ ಪೊಲೀಸ್​​ ನೋಟಿಸ್‌
ಜೆಎನ್​​ಯು ಪ್ರತಿಭಟನೆ
  • Share this:
ನವದೆಹಲಿ(ಜ.13): ಪ್ರತಿಷ್ಠಿತ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಹಿಂಸಾಚಾರ ಪ್ರಕರಣಕ್ಕೆ ಸಂಬಂಧ ದೆಹಲಿ ಪೊಲೀಸರು 49 ಮಂದಿಗೆ ನೋಟಿಸ್​​ ಜಾರಿಗೊಳಿಸಿದ್ದಾರೆ. ಇತ್ತೀಚೆಗೆ ಜೆಎನ್​​ಯು ಕ್ಯಾಂಪಸ್​ಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದವರು ಯಾರು? ಎಂದು ಖಾಸಗಿ ಸುದ್ದಿವಾಹಿನಿಯೊಂದು ಕುಟುಕು ಕಾರ್ಯಾಚರಣೆ ನಡೆಸಿತ್ತು. ಈ ಕುಟುಕು ಕಾರ್ಯಾಚರಣೆಯಲ್ಲಿ ವಿವಿಯ ಪ್ರಥಮ ವರ್ಷದ ವಿದ್ಯಾರ್ಥಿಗಳಾದ ಅಕ್ಷತ್ ಅವಸ್ತಿ ಮತ್ತು ರೋಹಿತ್‌ ಶಾ ಎಂಬುವರು ಸಿಕ್ಕಿಬಿದ್ದಿದ್ದರು. ಈ ಇಬ್ಬರು ಸೇರಿದಂತೆ 49 ಮಂದಿಗೆ ದೆಹಲಿ ಪೊಲೀಸರು ನೋಟಿಸ್​​ ನೀಡಿದ್ಧಾರೆ.

ದೆಹಲಿ ಪೊಲೀಸರು ಮೊದಲು ಫೋನಾಯಿಸಿದಾಗ ತನಿಖೆಗೆ ಸಹರಿಸುತ್ತೇವೆಂದು ಅಕ್ಷತ್​​​​​​ ಅವಸ್ತಿ ಮತ್ತು ರೋಹಿತ್​​ ಶಾ ಹೇಳಿದ್ದರು. ಆದರೀಗ ಇಬ್ಬರ ಫೋನ್‌ ಸ್ವಿಚ್ ಆಫ್‌ ಆಗಿದೆ. ಇಬ್ಬರಿಗಾಗಿ ಪೊಲೀಸರು ಶೋಧಕಾರ್ಯ ಮುಂದುವರೆಸಿದ್ದು, ಸದ್ಯದಲ್ಲೇ ವಿಚಾರಣೆಗೆ ಒಳಪಡಿಸಲಾಗುವುದು ಎನ್ನುತ್ತಿವೆ ಮೂಲಗಳು. ಇನ್ನೊಂದೆಡೆ ಇದೇ ಪ್ರಕರಣದಲ್ಲಿ ಶಂಕಿತ ಆರೋಪಿಗಳು ಎಂದು ಗುರುತಿಸಿರುವ ವಿಕಾಸ್‌ ಪಟೇಲ್‌ ಮತ್ತು ಯೋಗೇಂದ್ರ ಭಾರದ್ವಾಜ್‌ ಎಂಬುವರು ಎಬಿವಿಪಿ ಸದಸ್ಯರು ಎಂದು ಪೊಲೀಸ್‌ ಮೂಲಗಳು ಸ್ಪಷ್ಟಪಡಿಸಿವೆ.

ಈ ಹಿಂದೆ ದೆಹಲಿ ಪೊಲೀಸರು ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕ್ಯಾಂಪಸ್​​ನೊಳಗೆ ಕಿಡಿಗೇಡಿಗಳಿಂದ ತೀವ್ರ ಹಲ್ಲೆಗೊಳಗಾದ ಜೆಎನ್​​​ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶೆ ಘೋಷ್​​​ ಸೇರಿದಂತೆ 19 ಮಂದಿ ವಿದ್ಯಾರ್ಥಿಗಳ ವಿರುದ್ಧ ಎಫ್​​ಐಆರ್​​ ದಾಖಲಿಸಿಕೊಂಡಿದ್ದರು. ಮುಸುಕುಧಾರಿಗಳು ಕ್ಯಾಂಪಸ್​​ಗೆ ನುಗ್ಗಿ ಹಿಂಸಾಚಾರ ನಡೆಸುವ ಮುನ್ನ ದಿನ ಜನವರಿ 4ನೇ ತಾರಿಕು ಜೆಎನ್​​ಯು ಸರ್ವರ್‌ ಕೊಠಡಿಯಲ್ಲಿ ಐಶೆ ಘೋಷ್​​​​​ ಸೇರಿದಂತೆ 19 ಮಂದಿ ದಾಂದಲೆ ನಡೆಸಿದರು. ಈ ಆರೋಪದ ಮೇಲೆ ಐಶೆ ಘೋಷ್​​​ ಮತ್ತಿತರ ವಿರುದ್ಧ ದೆಹಲಿ ಪೊಲೀಸರು ಎಫ್​​ಐಆರ್​​ ದಾಖಲಿಸಿಕೊಂಡಿದ್ದಾರೆ. ಕ್ಯಾಂಪಸ್​​ನಲ್ಲಿ ಹಿಂಸಾಚಾರ ತಡೆಯಲು ಪೊಲೀಸರು ಪ್ರಯತ್ನಿಸಲಿಲ್ಲ ಎಂದು ಟೀಕೆಗಳು ಕೇಳಿ ಬಂದ ಬೆನ್ನಲ್ಲೇ ಇಂತಹುದ್ದೊಂದು ಬೆಳವಣಿಗೆ ನಡೆದಿದೆ. ತೀವ್ರ ಹಲ್ಲೆಗೊಳಗಾದ ವಿದ್ಯಾರ್ಥಿಗಳ ಮೇಲೆಯೆ ಎಫ್​ಐಆರ್​​ ದಾಖಲಿಸಿಕೊಂಡ ಪೊಲೀಸರ ನಡೆಗೆ ವಿರೋಧ ವ್ಯಕ್ತವಾಗುತ್ತಿದೆ.

ಜೆಎನ್​​ಯು ವಿದ್ಯಾರ್ಥಿಗಳ ಮೇಲೆ ದುಷ್ಕರ್ಮಿಗಳ ಗುಂಪೊಂದು ನಡೆಸಿದ ದಾಳಿ ಖಂಡಿಸಿ ದೇಶಾದ್ಯಂತ ಕಾಂಗ್ರೆಸ್​​ ಸೇರಿದಂತೆ ಎಡಪಕ್ಷಗಳು ಬೀದಿಗಿಳಿದು ಪ್ರತಿಭಟಿಸುತ್ತಿವೆ. ಇದರಿಂದು ಎಚ್ಚೆತ್ತ ದೆಹಲಿ ಪೊಲೀಸರು​ ಪ್ರಕರಣ ಸಂಬಂಧ ಕಿಡಿಗೇಡಿಗಳ ಗುಂಪಿನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಆದರೆ, ಇಲ್ಲಿಯವರೆಗೂ ಯಾರ ಬಂಧನವೂ ಆಗಿಲ್ಲ. ದಾಳಿಕೋರರ ಬೆಂಬಲಕ್ಕೆ ದೆಹಲಿ ಪೊಲೀಸರೇ ನಿಂತಿದ್ದಾರೆ ಎಂಬುದು ಪ್ರತಿಭಟನಾನಿರತ ವಿದ್ಯಾರ್ಥಿಗಳ ಆರೋಪ.

ಇದನ್ನೂ ಓದಿ: JNU Violence: ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಐಶ್​​​​ ಘೋಷ್ ವಿರುದ್ಧ ಎಫ್​​ಐಆರ್​​​

ಜೆಎನ್​​ಯು ಹಿಂಸಾಚಾರ ಪ್ರಕರಣ ಸಂಬಂಧಿಸಿದಂತೆ ಯಾವುದೇ ಮಹತ್ವದ ಸುಳಿವುಗಳು ಸಿಕ್ಕಿಲ್ಲ. ಅದಕ್ಕಾಗಿ ಶೋಧಕಾರ್ಯ ಮುಂದುವರೆದಿದೆ. ಪ್ರಕರಣದ ತನಿಖೆಯನ್ನು ಕ್ರೈಮ್ ಬ್ರಾಂಚ್'ಗೆ ಹಸ್ತಾಂತರಿಸಿದ್ದೇವೆ ಎಂದು ದೆಹಲಿ ಪೊಲೀಸರು ತಿಳಿಸಿದ್ದರು.

ಏನಿದು ಘಟನೆ?: ಜೆಎನ್​​ಯು ಕ್ಯಾಂಪಸ್​​ನಲ್ಲಿ ಶಬರಮತಿ ಹಾಸ್ಟೆಲ್​​ ಬಳಿ ಐಶ್​ ಘೋಷ್​​​ ತನ್ನ ಸ್ನೇಹಿತರೊಂದಿಗೆ ನಡೆದುಕೊಂಡು ಹೋಗುತ್ತಿದ್ದಾಗ ಕಿಡಿಗೇಡಿಗಳ ಗುಂಪು ಹಲ್ಲೆ ನಡೆಸಿದ್ದಾರೆ ಎನ್ನುತ್ತಿವೆ ಮೂಲಗಳು. 50ಕ್ಕೂ ಹೆಚ್ಚು ಮಂದಿ ಗೂಂಡಾಗಳು ಗುಂಪು ವಿದ್ಯಾರ್ಥಿಗಳ ಮೇಲೆ ದಾಳಿ ಮಾಡಿದೆ. ವಾಹನಗಳನ್ನು ಧ್ವಂಸಗೊಳಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
First published:January 13, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ