Farmers Protest: ರೈತರ ಹೋರಾಟವನ್ನು ಬೆಂಬಲಿಸಿ​ ಟ್ವೀಟ್​; ಗ್ರೇಟಾ ಥನ್ಬರ್ಗ್ ವಿರುದ್ಧ ದೆಹಲಿಯಲ್ಲಿ ದಾಖಲಾಯ್ತು ಪ್ರಕರಣ

ಈ ನಡುವೆ ಟ್ವಟರ್​ಗೆ ಕಟು ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಂವೇದನಾಶೀಲ ಹ್ಯಾಷ್​ಟ್ಯಾಗ್​ಗಳಿಗೆ ಕಡಿವಾಣ ಹಾಕಿ. ಕೆಲವು ಕಮೆಂಟ್​ಗಳು ಪ್ರಲೋಭನೆ ಮತ್ತು ಪ್ರಚೋಧನೆಗೆ ಎಡೆಮಾಡಿಕೊಡುತ್ತದೆ ಎಂದು ಎಚ್ಚರಿಸಿದೆ.

ಗ್ರೇಟಾ ಥನ್ಬರ್ಗ್​.

ಗ್ರೇಟಾ ಥನ್ಬರ್ಗ್​.

  • Share this:
    ನವದೆಹಲಿ: "ಕ್ರಿಮಿನಲ್ ಪಿತೂರಿ ಮತ್ತು ಧರ್ಮದ ಆಧಾರದಲ್ಲಿ ದ್ವೇಷವನ್ನು ಉತ್ತೇಜಿಸುತ್ತಿದ್ದಾರೆ" ಎಂಬ ಆರೋಪದ ಮೇಲೆ ವಿಶ್ವ ಹವಾಮಾನ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್​ ವಿರುದ್ಧ ದೆಹಲಿಯಲ್ಲಿ ಕ್ರಿಮಿನಲ್​ ಪ್ರಕರಣ ದಾಖಲಾಗಿದೆ. ಕೇಂದ್ರದ ಕೃಷಿ ಕಾಯ್ದೆಯನ್ನು ವಿರೋಧಿಸಿ ದೇಶದ ರೈತರು ಕಳೆದ ಎರಡು ತಿಂಗಳಿನಿಂದ ದೆಹಲಿ ಹೊರ ವಲಯದಲ್ಲಿ ಹೋರಾಟದಲ್ಲಿ ನಿರತರಾಗಿದ್ದಾರೆ. ಜನವರಿ 26 ಗಣರಾಜ್ಯದ ದಿನದಂದು ದೆಹಲಿಯ ಗಲಭೆಯ ನಂತರ ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ. ಹೀಗಾಗಿ ಪರಿಸರ ಹೋರಾಟಗಾರ್ತಿ ಗ್ರೇಟಾ ಥನ್ಬರ್ಗ್​ ಬುಧವಾರ ಈ ಬಗ್ಗೆ ಟ್ವೀಟ್​ ಮಾಡುವ ಮೂಲಕ "ಎಲ್ಲರೂ ದೆಹಲಿ ರೈತ ಹೋರಾಟಗಾರರ ಬೆನ್ನಿಗೆ ನಿಲ್ಲಬೇಕಿದೆ" ಎಂದು ಅಭಿಪ್ರಾಯಪಟ್ಟಿದ್ದರು. ಈ ಟ್ವೀಟ್​ ಬೆನ್ನಿಗೆ ಇದೀಗ ಅವರ ವಿರುದ್ಧ ದೆಹಲಿಯಲ್ಲಿ ಪ್ರಕರಣ ದಾಖಲಾಗಿದೆ.



    ಅಮೆರಿಕದ ಖ್ಯಾತ ಪಾಪ್​ ಗಾಯಕಿ ರಿಹಾನ್ನಾ ಸಹ ಭಾರತದ ರೈತರ ಹೋರಾಟದ ಬಗ್ಗೆ ಟ್ವೀಟ್​ ಮೂಲಕ ವಿಶ್ವದ ಗಮನ ಸೆಳೆದಿದ್ದರು. ಆದರೆ, ರಿಹಾನ್ನಾ ಮತ್ತು ಗ್ರೇಟಾ ಥನ್ಬರ್ಗ್​ ಟೀಟ್ ಮಾಡುತ್ತಿದ್ದಂತೆ ಭಾರತದ ಅನೇಕ ಕ್ರೀಡಾಪಟುಗಳು ಹಾಗೂ ಸಿನಿ ತಾರೆಯರು ಎಚ್ಚರಾಗಿದ್ದರು. ಖ್ಯಾತ ಕ್ರಿಕೆಟರ್​ ಸಚಿನ್​ ತೆಂಡೂಲ್ಕರ್​, ರವಿಶಾಸ್ತ್ರಿ ಸಿನಿ ತಾರೆಯರಾದ ಅಕ್ಷಯ್​ ಕುಮಾರ್​, ಕಂಗನಾ ರಣಾವತ್​ ಸೇರಿದಂತೆ ಅನೇಕರು ಟ್ವೀಟ್​ ಮಾಡುವ ಮೂಲಕ "ನಮ್ಮ ದೇಶದ ಆಂತರಿಕ ಸಮಸ್ಯೆಯನ್ನು ನಾವು ಬಗೆಹರಿಸಿಕೊಳ್ಳುತ್ತೇವೆ. ಈ ವಿಚಾರದಲ್ಲಿ ವಿದೇಶಿಗರು ತಲೆ ಹಾಕುವುದು ಸರಿಯಲ್ಲ" ಎಂದಿದ್ದರು. ಈ ಮೂಲಕ ರಿಹಾನ್ನಾ ಮತ್ತು ಗ್ರೇಟಾ ಥನ್ಬರ್ಗ್​ ವಿರುದ್ಧ ಕಿಡಿಕಾರಿದ್ದರು.

    ಇದನ್ನೂ ಓದಿ: Farmers Protest: ಸಿನಿಮಾ ತಾರೆಯರು, ಕ್ರಿಕೆಟಿಗರ ಟ್ವೀಟ್​ಗಳಿಂದ ಅಸಾಂವಿಧಾನಿಕ ನಡೆಯನ್ನು ಸರಿಗಟ್ಟಲಾಗಲ್ಲ; ಶಶಿ ತರೂರ್​!

    ಭಾರತದ ಸ್ಟಾರ್​ಗಳ ಈ ಟ್ವೀಟ್​ಗೆ ಪ್ರತಿಕ್ರಿಯಿಸಿರುವ ಸಂಸದ ಶಶಿ ತರೂರ್​, "ಕೇಂದ್ರ ಸರ್ಕಾರದ ಅಸಂವಿಧಾನಿಕ ನಡೆಯಿಂದಾಗಿ ಈಗಾಗಲೇ ಭಾರತದ ಚಿತ್ರಣಕ್ಕೆ ಜಾತಿಕ ಮಟ್ಟದಲ್ಲಿ ಹಾನಿಯಾಗಿದೆ. ಇನ್ನೂ ಭಾರತದ ಸೆಲೆಬ್ರಿಟಿಗಳು ವಿದೇಶಿಗರ ಟ್ವೀಟ್​ಗೆ ಪ್ರತಿಕ್ರಿಯಿಸುವ ಮೂಲಕ ಈ ಹಾನಿಯನ್ನು ಮತ್ತಷ್ಟು ಹೆಚ್ಚು ಮಾಡುತ್ತಿದ್ದಾರೆ. ಅಸಲಿಗೆ ಸರ್ಕಾರ ಅಪ್ರಚೋದಕ ಮತ್ತು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆಗಳನ್ನು ಕ್ರಿಕೆಟಿಗರ ಅಥವಾ ಸಿನಿ ತಾರೆಯರ ಟ್ವೀಟ್​ಗಳ ಮೂಲಕ ಸರಿಪಡಿಸಲು ಸಾಧ್ಯವಿಲ್ಲ" ಎಂದು ಅಭಿಪ್ರಾಯಪಟ್ಟಿದ್ದಾರೆ.

    ಈ ನಡುವೆ ಟ್ವಟರ್​ಗೆ ಕಟು ಎಚ್ಚರಿಕೆ ನೀಡಿರುವ ಕೇಂದ್ರ ಸರ್ಕಾರ, "ರೈತ ಹೋರಾಟಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ ಸಂವೇದನಾಶೀಲ ಹ್ಯಾಷ್​ಟ್ಯಾಗ್​ಗಳಿಗೆ ಕಡಿವಾಣ ಹಾಕಿ. ಕೆಲವು ಕಮೆಂಟ್​ಗಳು ಪ್ರಲೋಭನೆ ಮತ್ತು ಪ್ರಚೋಧನೆಗೆ ಎಡೆಮಾಡಿಕೊಡುತ್ತದೆ" ಎಂದು ಎಚ್ಚರಿಸಿದೆ.
    Published by:MAshok Kumar
    First published: