ಗಂಡನಿಗೆ ಕಿಸ್ ಮಾಡಬೇಕು ಅದಕ್ಕೆ ಮಾಸ್ಕ್ ಹಾಕಿಲ್ಲ ಏನ್ಮಾಡ್ತೀರಾ..? ಖಾಕಿ ಜೊತೆ ಕಿರಿಕ್ ಮಾಡಿದವರು ಕಂಬಿ ಹಿಂದೆ!

ಮಾಸ್ಕ್ ಧರಿಸದೇ ಕಾರಿನಲ್ಲಿ ಬಂದ ಜೋಡಿಯನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಇದಕ್ಕೆ ಗರಂ ಆದ ಪತ್ನಿ ತಾನು ಗಂಡನಿಗೆ ಮುತ್ತು ಕೊಡಬೇಕು ಅದಕ್ಕೆ ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರೊಂದಿಗೆ ಬೇಜಬ್ದಾರಿತನದಿಂದ ನಡೆದುಕೊಂಡಿದ್ದಾರೆ.

ಪೊಲೀಸರೊಂದಿಗೆ ಮಹಿಳೆ ತಕರಾರು

ಪೊಲೀಸರೊಂದಿಗೆ ಮಹಿಳೆ ತಕರಾರು

 • Share this:
  ನವದೆಹಲಿ (ಏ. 19): ಕೊರೋನಾ 2ನೇ ಅಲೆಗೆ ರಾಷ್ಟ್ರ ರಾಜಧಾನಿಯೂ ನಲುಗುತ್ತಿದೆ. ಸೋಂಕಿಗೆ ಕಡಿವಾಣ ಹಾಕಲು ನಿನ್ನೆವರೆಗೆ ವೀಕೆಂಡ್ ಕರ್ಫ್ಯೂ ಹೇರಿದ್ದ ದೆಹಲಿ ಸರ್ಕಾರ ಇಂದಿನಿಂದ 1 ವಾರಗಳ ಕಾಲ ಕರ್ಫ್ಯೂ ಜಾರಿಗೊಳಿಸಿದ್ದಾರೆ. ನಿಯಮಗಳ ಕಟ್ಟುನಿಟ್ಟಿನ ಜಾರಿಗೆ ಪೊಲೀಸರು ಹಗಲಿರುಳು ಶ್ರಮಿಸುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಮಾಸ್ಕ್ ಧರಿಸದೇ ಕಾರಿನಲ್ಲಿ ಬಂದ ದಂಪತಿ ಪೊಲೀಸರಿಗೇ ಅವಾಜ್ ಹಾಕಿರುವ ಘಟನೆ ಇಲ್ಲಿನ ಧರಿಯಾನ್ ಗಂಜ್ನಲ್ಲಿ ನಡೆದಿದೆ. ಗಂಡನಿಗೆ ಕಿಸ್ ಮಾಡಬೇಕು ಅದಕ್ಕೆ ಮಾಸ್ಕ್ ಹಾಕಿಲ್ಲ ಏನ್ಮಾಡ್ತೀರಾ ಎಂದು ಕಿರಿಕ್ ಮಾಡಿದ ಜೋಡಿಯನ್ನು ಪೊಲೀಸರು ಬಂಧಿಸಿ ಕಂಬಿ ಹಿಂದೆ ನಿಲ್ಲಿಸಿದ್ದಾರೆ.

  ನಿನ್ನೆ ಧರಿಯಾನ್ ಗಂಜ್ ಪ್ರದೇಶದಲ್ಲಿ ಮಾಸ್ಕ್ ಧರಿಸದೇ ಕಾರಿನಲ್ಲಿ ಬಂದ ಜೋಡಿಯನ್ನು ಪೊಲೀಸರು ತಡೆದು ಪ್ರಶ್ನಿಸಿದ್ದಾರೆ. ಇದಕ್ಕೆ ಗರಂ ಆದ ಪತ್ನಿ ತಾನು ಗಂಡನಿಗೆ ಮುತ್ತು ಕೊಡಬೇಕು ಅದಕ್ಕೆ ಮಾಸ್ಕ್ ಧರಿಸಿಲ್ಲ ಎಂದು ಪೊಲೀಸರೊಂದಿಗೆ ಬೇಜಬ್ದಾರಿತನದಿಂದ ನಡೆದುಕೊಂಡಿದ್ದಾರೆ. ಮಾಸ್ಕ್ ಧರಿಸಲ್ಲ ಏನು ಮಾಡುತ್ತೀರಾ ಎಂದು ಬೀದಿ ರಂಪಾಟ ಮಾಡಿದ್ದಾರೆ. ಮಾಸ್ಕ್ ಧರಿಸಿ ಪ್ರಯಾಣಿಸಿ ಎಂದ ಪೊಲೀಸರನ್ನೇ ನಿಂದಿಸಿದ್ದಾರೆ.

  ಪೊಲೀಸರೊಂದಿಗಿನ ಮಹಿಳೆಯ ರಂಪಾಟದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ಗ್ರಾಸವಾಗಿತ್ತು. ಕೊರೋನಾ ಸಮಯದಲ್ಲಿ ಜೀವವನ್ನೂ ಲೆಕ್ಕಿಸದೇ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರಿಗೆ ಮಾಡಿದ ಅಪಮಾನವಿದು ಎಂದು ನೆಟ್ಟಿಗರು ಕಿಡಿಕಾರಿದ್ದರು. ಘಟನೆ ಬಳಿಕ ನಿನ್ನೆಯೇ ಪತಿಯನ್ನು ಬಂಧಿಸಿದ್ದ ಪೊಲೀಸರು, ಇಂದು ಪತ್ನಿಯನ್ನೂ ಬಂಧಿಸಿ ಕೋರ್ಟ್​ಗೆ ಒಪ್ಪಿಸಿದ್ದಾರೆ.  ಪೊಲೀಸರೊಂದಿಗೆ ಕಿರಿಕ್ ಮಾಡಿದ ಜೋಡಿ ದೆಹಲಿಯ ಪಟೇಲ್​ನಗರದ ನಿವಾಸಿಗಳಾದ ಪಂಕಜ್-ಅಭಾ ಎಂದು ಗುರುತಿಸಲಾಗಿದೆ. ಕೋವಿಡ್ ನಿಯಮ ಉಲ್ಲಂಘನೆ, ಅನುಚಿತ ವರ್ತನೆ, ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪದಡಿ ದಂಪತಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

  ಇದನ್ನು ಓದಿ: ಬಾರ್​ಗಳ ಎದುರು ಮದ್ಯಕ್ಕಾಗಿ ಮುಗಿಬಿದ್ದ ದೆಹಲಿಯ ಜನ; ಔಷಧಿ ಬೇಡ ಮದ್ಯವೇ ಬೇಕು ಎಂದ ಮಹಿಳೆ!

  ದೆಹಲಿಯಲ್ಲಿ ಕೊರೋನಾ ಪರಿಸ್ಥಿತಿ ಕೈ ಮೀರಿ ಹೋಗಿದೆ. ಹೀಗಾಗಿ ವಾರಾಂತ್ಯಕ್ಕೆ ಮಾತ್ರ ನಿಗದಿಯಾಗಿದ್ದ ಕರ್ಫ್ಯೂವನ್ನು ಒಂದು ವಾರ ಕಾಲ ವಿಸ್ತರಿಸಿ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ. ಇಂದು ರಾತ್ರಿ 10 ಗಂಟೆಯಿಂದ ಮುಂದಿನ ಸೋಮವಾರ ಬೆಳಗ್ಗೆ 5 ಗಂಟೆವರೆಗೂ ಅಂದರೆ ಒಂದು ವಾರ ಕಾಲ ದೆಹಲಿಯಲ್ಲಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಇದೊಂದು ಚಿಕ್ಕ ಲಾಕ್​ಡೌನ್​ ಆಗಿದ್ದು ದೆಹಲಿಯನ್ನು ತೊರೆಯಬೇಡಿ ಎಂದು ವಲಸಿಗರಲ್ಲಿ ಸಿಎಂ ಕೇಜ್ರಿವಾಲ್ ಮನವಿ ಮಾಡಿಕೊಂಡಿದ್ದಾರೆ.

  ದೆಹಲಿಯಲ್ಲಿ ಭಾನುವಾರ ಒಂದೇ ದಿನ ಒಟ್ಟು 25,462 ಹೊಸ ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. 161 ಮಂದಿ ಮೃತಪಟ್ಟಿದ್ದರು. ದೆಹಲಿಯಲ್ಲಿ ಪಾಸಿಟಿವಿಟಿ ದರ ಶೇ. 29.74ರಷ್ಟಿದೆ. ಸುಮಾರು 20,259 ಮಂದಿ ಈವರೆಗೆ ಕೊರೋನಾದಿಂದ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೆಹಲಿಯಲ್ಲಿ ಒಟ್ಟು 74,941 ಸಕ್ರಿಯ ಪ್ರಕರಣಗಳಿವೆ. ಈವರೆಗೆ ಒಟ್ಟು 12,121 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

  (ವರದಿ: ಕಾವ್ಯಾ. ವಿ)
  Published by:Seema R
  First published: