ದೆಹಲಿ ಹಿಂಸಾಚಾರ: ಪ್ರಚೋದನಕಾರಿ ಹೇಳಿಕೆ ಆರೋಪ ಹೊತ್ತ ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ವೈ+ ಭದ್ರತೆ

ಕಪಿಲ್​​ ಮಿಶ್ರಾಗೆ ಪ್ರಾಣ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವೈ + ವರ್ಗದ ಭದ್ರತೆಯಡಿ ಸಶಸ್ತ್ರ ಸಿಬ್ಬಂದಿಗಳಿಂದ 24 ಗಂಟೆಗಳ ಕಾಲ ಭದ್ರತೆ ಒದಗಿಸಲಾಗಿದೆ ಎಂದು ದೆಹಲಿ ಪೊಲೀಸ್​ ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರು ಹೀಗೆ ಅಧಿಕೃತ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವಾಲಯ ಕಪಿಲ್​​ ಮಿಶ್ರಾಗೆ ವೈ + ವರ್ಗದ ಭದ್ರತೆ ನೀಡುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎನ್ನುವ ಮೂಲಕ ಗೊಂದಲ ಸೃಷ್ಟಿಸಿದೆ.

ಬಿಜೆಪಿ ನಾಯಕ ಕಪಿಲ್ ಮಿಶ್ರಾ

ಬಿಜೆಪಿ ನಾಯಕ ಕಪಿಲ್ ಮಿಶ್ರಾ

 • Share this:
  ನವದೆಹಲಿ(ಮಾ.03): ರಾಷ್ಟ್ರೀಯ ನಾಗರಿಕ ನೋಂದಣಿ ಮತ್ತು ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಾಕಾರರಿಗೆ ಗುಂಡಿಕ್ಕಿ ಎಂದು ಪ್ರಚೋದನಕಾರಿ ಹೇಳಿಕೆ ನೀಡಿದ್ದರು ಎಂಬ ಆರೋಪ ಹೊತ್ತ ಬಿಜೆಪಿ ನಾಯಕ ಕಪಿಲ್ ಮಿಶ್ರಾಗೆ ವೈ + ಶ್ರೇಣಿಯ ಭದ್ರತೆ ನೀಡಲಾಗಿದೆ. ಕಪಿಲ್​​ ಮಿಶ್ರಾಗೆ ಪ್ರಾಣ ಬೆದರಿಕೆ ಬಂದ ಹಿನ್ನೆಲೆಯಲ್ಲಿ ವೈ + ವರ್ಗದ ಭದ್ರತೆಯಡಿ ಸಶಸ್ತ್ರ ಸಿಬ್ಬಂದಿಗಳಿಂದ 24 ಗಂಟೆಗಳ ಕಾಲ ಭದ್ರತೆ ಒದಗಿಸಲಾಗಿದೆ ಎಂದು ದೆಹಲಿ ಪೊಲೀಸ್​ ಮೂಲಗಳು ತಿಳಿಸಿವೆ. ದೆಹಲಿ ಪೊಲೀಸರು ಹೀಗೆ ಅಧಿಕೃತ ಹೇಳಿಕೆ ನೀಡಿದ ಬೆನ್ನಲ್ಲೇ ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಗೃಹ ಸಚಿವಾಲಯ ಕಪಿಲ್​​ ಮಿಶ್ರಾಗೆ ವೈ + ವರ್ಗದ ಭದ್ರತೆ ನೀಡುತ್ತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎನ್ನುವ ಮೂಲಕ ಗೊಂದಲ ಸೃಷ್ಟಿಸಿದೆ.

  ಈ ಹಿಂದೆಯೂ ಫೆ.8ನೇ ತಾರೀಕಿನಂದು ನಡೆದ ದೆಹಲಿ ವಿಧಾನಸಭಾ ಚುನಾವಣೆಗೂ ಮುನ್ನ ಕಪಿಲ್​​ ಮಿಶ್ರಾ ವಿವಾದಾತ್ಮಕ ಟ್ವೀಟ್​​ ಮಾಡಿದ್ದರು. ದೆಹಲಿ ವಿಧಾನಸಭಾ ಚುನಾವಣೆಯೂ ಭಾರತ ಮತ್ತು ಪಾಕಿಸ್ತಾನದ ನಡುವಿನ ಹೋರಾಟ ಎಂದು ಬಿಜೆಪಿ ಮುಖಂಡ ಕಪಿಲ್ ಮಿಶ್ರಾ ಮಾಡಿದ್ದ ವಿವಾದಾತ್ಮಕ ಟ್ವೀಟ್​​ ಭಾರೀ ಚರ್ಚೆಗೆ ಗ್ರಾಸವಾಗಿತ್ತು.

  ಪೌರತ್ವ ಕಾಯ್ದೆ ವಿರುದ್ಧ ದೆಹಲಿಯ ಶಾಹೀನ್​​ ಬಾಗ್​​ನಲ್ಲಿ ಹೋರಾಟ ನಡೆಯುತ್ತಿತ್ತು. ದೆಹಲಿಯ ಶಾಹೀನ್​​ ಬಾಗ್​​ಗೆ ಪಾಕಿಸ್ತಾನ ಪ್ರವೇಶಿಸಿದೆ. ಅದರ ಜತೆಗೆ ಇಲ್ಲಿ ಸಣ್ಣಸಣ್ಣ ಪಾಕಿಸ್ತಾನಗಳು ಶುರುವಾಗಿವೆ. ಶಾಹೀನ್​​ ಬಾಗ್​, ಚಾಂದ್​​ ಬಾಗ್​​​, ಇಂದರ್​​ ಲೋಕ್​​ ಪ್ರದೇಶದಲ್ಲಿ ಭಾರತ ಕಾನೂನು ಪಾಲನೆಯಾಗುತ್ತಿಲ್ಲ ಎಂದು ಕಪಿಲ್​​ ಮಿಶ್ರಾ ಮತ್ತೊಂದು ಟ್ವೀಟ್​ ಮಾಡಿದ್ದರು. ಕಪಿಲ್​​ ಮಿಶ್ರಾರ ಆ ಟ್ವೀಟ್ ಕೂಡ​​ ಭಾರೀ ವಿವಾದಕ್ಕೀಡಾಗಿತ್ತು.

  ಇದನ್ನೂ ಓದಿ: ದೆಹಲಿ ಚುನಾವಣೆ ಭಾರತ ಮತ್ತು ಪಾಕಿಸ್ತಾನ ನಡುವಿನ ಹೋರಾಟ: ಬಿಜೆಪಿ ಅಭ್ಯರ್ಥಿ ಕಪಿಲ್​​ ಮಿಶ್ರಾ

  ದೆಹಲಿಯಲ್ಲಿ ಎರಡು ತಿಂಗಳು ನಿರಂತರವಾಗಿ ಸಿಎಎ ವಿರೋಧಿ ಪ್ರತಿಭಟನೆ ನಡೆಯುತ್ತಿರುವ ವೇಳೆ ಕಪಿಲ್ ಮಿಶ್ರಾ, ಅನುರಾಗ್ ಠಾಕೂರ್ ಮೊದಲಾದ ಬಿಜೆಪಿ ನಾಯಕರು ಮತ್ತು ಬೆಂಬಲಿಗರು ಗೋಲಿಮಾರೋ ಘೋಷಣೆಗಳನ್ನು ಕೂಗಿ ಪ್ರಚೋದನೆಗೆ ಕಾರಣರಾದರೆಂಬ ಆರೋಪವಿದೆ. ದೆಹಲಿಯಲ್ಲಿ ಈಗ ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಗೋಲಿಮಾರೋ ಘೋಷಣೆಗಳನ್ನ ಬಳಕೆ ಮಾಡುವ ಟ್ರೆಂಡ್ ಸೃಷ್ಟಿಯಾಗಿದೆ. ನಂತರ ಇದೇ ದೆಹಲಿಯ ರಾಜೀವ್ ಚೌಕ್ ಮೆಟ್ರೋ ಸ್ಟೇಷನ್​ನಲ್ಲಿ ಪುನಾವರ್ತನೆಯಾಗಿತ್ತು.

  ಕೋಮುದಳ್ಳುರಿಯಲ್ಲಿ ಬೇಯುತ್ತಿರುವ ದೇಶದ ರಾಜಧಾನಿಯಲ್ಲಿ ದ್ವೇಷದ ಘೋಷಣೆಗಳ ಕೂಗು ಕೇಳಿ ಬರುತ್ತಲೇ ಇವೆ. ಬಿಜೆಪಿ ಬೆಂಬಲಿಗರು ದೇಶದ್ರೋಹಿಗಳನ್ನು ಗುಂಡಿಟ್ಟು ಕೊಲ್ಲಿ ಎಂದು ಬಹಿರಂಗವಾಗಿಯೇ ಘೋಷಣೆ ಕೂಗುತ್ತಿದ್ದಾರೆ. ಹೀಗೆ ದ್ವೇಷಪೂರಿತ ಘೋಷಣೆ ಕೂಗಿದ 125ಕ್ಕೂ ಹೆಚ್ಚು ಮಂದಿ ಎಫ್​​ಐಆರ್​​ ದಾಖಲಾಗಿದೆ.
  First published: