• Home
 • »
 • News
 • »
 • national-international
 • »
 • Crime News: ಅಪ್ಪ, ಅಮ್ಮ, ಅಕ್ಕ, ಅಜ್ಜಿಯನ್ನು ಕೊಂದ 'ಕುಲಪುತ್ರ': ಮತ್ತೊಂದು ಕೊಲೆ ಪ್ರಕರಣಕ್ಕೆ ತತ್ತರಿಸಿದ ದೆಹಲಿ!

Crime News: ಅಪ್ಪ, ಅಮ್ಮ, ಅಕ್ಕ, ಅಜ್ಜಿಯನ್ನು ಕೊಂದ 'ಕುಲಪುತ್ರ': ಮತ್ತೊಂದು ಕೊಲೆ ಪ್ರಕರಣಕ್ಕೆ ತತ್ತರಿಸಿದ ದೆಹಲಿ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದೆಹಲಿಯ ಪಾಲಂ ಪ್ರದೇಶದಲ್ಲಿ ಒಂದೇ ಮನೆಯಲ್ಲಿ ನಾಲ್ವರ ಮೃತದೇಹಗಳು ಪತ್ತೆಯಾಗಿದ್ದು, ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಆದರೆ ಇದೊಂದು ಸಾಮೂಹಿಕ ಹತ್ಯೆಯಲ್ಲ, ಕೊಲೆ ಪ್ರಕರಣ ಎಂದು ಪೊಲೀಸರು ತಿಳಿಸಿದ್ದಾರೆ. ತಂದೆ-ತಾಯಿ ಹಾಗೂ ಅಜ್ಜಿ ಹಾಗೂ ಸಹೋದರಿಯನ್ನು ಆ ಮನೆಯ ಮಗನೇ ಕೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ಆರೋಪಿ ಬಾಲಕನನ್ನು ಬಂಧಿಸಿದ್ದು, ಅಪರಾಧಕ್ಕೆ ಬಳಸಿದ ಆಯುಧವನ್ನೂ ವಶಪಡಿಸಿಕೊಂಡಿದ್ದಾರೆ. ಸದ್ಯ ಪೊಲೀಸ್ ತಂಡ ಕೊಲೆಗೆ ಕಾರಣ ಹುಡುಕುವಲ್ಲಿ ನಿರತವಾಗಿದೆ.

ಮುಂದೆ ಓದಿ ...
 • Share this:

  ನವದೆಹಲಿ(ನ.23): ಶ್ರದ್ಧಾ ವಾಕರ್ ಹತ್ಯೆ ಪ್ರಕರಣದ (Shraddha Walker Murder Case) ಕರಾಳತೆ ಮಾಸುವ ಮುನ್ನವೇ ದೇಶದ ರಾಜಧಾನಿ ದೆಹಲಿ ಮತ್ತೊಂದು ಸಂಚಲನಕಾರಿ ಕೊಲೆ ಪ್ರಕರಣಕ್ಕೆ ಸಾಕ್ಷಿಯಾಗಿದೆ. ಹೌದು ದೆಹಲಿಯ (Delhi) ನೈಋತ್ಯ ಜಿಲ್ಲೆಯ ಪಾಲಂ (Palam) ಪ್ರದೇಶದ ಮನೆಯೊಂದರಿಂದ ನಾಲ್ವರ ಶವಗಳು ಪತ್ತೆಯಾದ ನಂತರ ಕೋಲಾಹಲ ಉಂಟಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಇದು ಆತ್ಮಹತ್ಯೆಯಲ್ಲ, ಕೊಲೆ (Murder) ಪ್ರಕರಣ ಎನ್ನಲಾಗಿದೆ. ಮೂಲಗಳ ಪ್ರಕಾರ, ಒಬ್ಬ ಬಾಲಕ ತನ್ನ ಹೆತ್ತವರು, ಸಹೋದರಿ ಮತ್ತು ಅಜ್ಜಿಯನ್ನು ಕೊಂದಿದ್ದಾನೆ. ಸದ್ಯ ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.


  ವರದಿಗಳನ್ವಯ ಮಂಗಳವಾರ ರಾತ್ರಿ 10.31 ನಿಮಿಷಗಳ ಸುಮಾರಿಗೆ ಪಾಲಂನ ರಾಜ್ ನಗರ ಭಾಗ-2 ಪ್ರದೇಶದಲ್ಲಿ ಈ ಕೊಲೆ ಪ್ರಕರಣ ನಡೆದಿದೆ. ಆರೋಪಿಯ ಸೋದರಿಯ ಕಿರುಚಾಟ ಕೇಳಿದ ಸಂಬಂಧಿ ಪೊಲೀಸರಿಗೆ ಕರೆ ಮಾಡಿದ್ದಾನೆ. ಈ ವೇಳೆ ಆರೋಪಿ ಕೇಶವ್ ಈದು ನಮ್ಮ ಕುಟುಂಬದ ವಿಚವಾರ ಎಂದು ಸಂಬಂಧಿಗೆ ಬೆದರಿಕೆ ಹಾಕಿದ್ದಾನೆ. ಅಷ್ಟರಲ್ಲಾಗಲೇ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಸದ್ಯ ಆರೋಪಿ ಬಾಲಕನನ್ನು ಪೊಲೀಸರು ಬಂಧಿಸಿದ್ದು, ಆತ ತನ್ನದೇ ಸ್ವಂತ ಕುಟುಂಬದ ಸದಸ್ಯರನ್ನು ಕೊಂದಿದ್ದೇಕೆ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.


  Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


  ಚಾಕುವಿನಿಂದ ಇರಿದು ಕೊಲೆ


  ಮಾಹಿತಿ ಪ್ರಕಾರ ಆರೋಪಿ ನಾಲ್ವರನ್ನೂ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ. ಆರೋಪಿ ಬಾಲಕ ಮಾದಕ ವ್ಯಸನಿಯಾಗಿದ್ದು, ಇತ್ತೀಚೆಗಷ್ಟೇ ಮಾದಕ ವ್ಯಸನ ಕೇಂದ್ರದಿಂದ ಹೊರ ಬಂದಿದ್ದ. ಇದಾದ ಬಳಿಕವೇ ಆತ ಈ ಕುಕೃತ್ಯ ಎಸಗಿದ್ದಾನೆ. ಆರೋಪಿ ಬಾಲಕನ ಹೆಸರು ಕೇಶವ್ ಎನ್ನಲಾಗಿದ್ದು, ಆತ ಈ ಕೃತ್ಯಕ್ಕೆ ಬಳಸಿದ್ದ ಆಯುಧವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.


  ಹತ್ಯೆಗೀಡಾದವರ ಗುರುತು ಬಹಿರಂಗಪಡಿಸಿದ ಪೊಲೀಸರು


  1. ದಿವಾನೋ (ಆರೋಪಿಯ ಅಜ್ಜಿ)
  2. ದಿನೇಶ್ ಕುಮಾರ್ (ಆರೋಪಿಯ ತಂದೆ)
  3. ದರ್ಶನ್ ರಾಣಿ (ಆರೋಪಿಯ ತಾಯಿ)
  4. ಊರ್ವಶಿ (ಆರೋಪಿಯ ಸಹೋದರಿ)


  ತನ್ನಿಚ್ಛೆಗೆ ವಿರುದ್ಧವಾಗಿ ಮದುವೆಯಾದ ಮಗಳನ್ನು ಕೊಂದ ತಂದೆ, ಸೂಟ್​ಕೇಸ್​ನಲ್ಲಿ ಶವ ತುಂಬಿಸಿದ ಅಮ್ಮ!


  ಉತ್ತರ ಪ್ರದೇಶವು ಕಳೆದ ವಾರ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ ಬಳಿ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾದ 21 ವರ್ಷದ ಯುವತಿಯ ಹತ್ಯೆಯ ಹಿಂದಿನ ರಹಸ್ಯವನ್ನು ಭೇದಿಸಿದ್ದಾರೆ. ಇದೊಂದು ಮರ್ಯಾದಾ ಹತ್ಯೆ ಎಂದು ಶಂಕಿಸಿರುವ ಪೊಲೀಸರು ಆಕೆಯ ಪೋಷಕರನ್ನು ಬಂಧಿಸಿದ್ದಾರೆ.


  ಹೆತ್ತವರ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣ ಮನೆಯವರು ಅಸಮಾಧಾನಗೊಂಡಿದ್ದರು. ಇದೇ ಕೋಪದಲ್ಲಿ ಮೃತ ಯುವತಿಯ ತಂದೆಯೇ ಆಕೆಯನ್ನು ಕೊಂದಿದ್ದಾರೆ. ಬಳಿಕ ಆಕೆಯ ತಾಯಿ ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಯುಷಿ ಯಾದವ್ ಸಹೋದರನಿಗೂ ಕೊಲೆಯ ಬಗ್ಗೆ ತಿಳಿದಿತ್ತು ಎಂಬ ವಿಚಾರವೂ ಬಹಿರಂಗಗೊಂಡಿದೆ. ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


  ಇದನ್ನೂ ಓದಿ: Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!


  ನವೆಂಬರ್ 17 ರಂದು ಆಯುಷಿ ತನ್ನ ತಂದೆಯೊಂದಿಗೆ ಜಗಳವಾಡಿದ್ದಳು. ಆಕೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಿದ್ದಳು, ಇದರಿಂದಾಗಿ ಅವಳ ಕುಟುಂಬವು ಅತೃಪ್ತವಾಗಿತ್ತು. ಈ ವಿಚಾರವಾಗಿ ಕೋಪಗೊಂಡ ಆಕೆಯ ತಂದೆ ನವೆಂಬರ್ 17 ರಂದು ಜಗಳವಾಡಿದ್ದಾರೆ. ಬಳಿಕ ಎರಡು ಬಾರಿ ಗುಂಡು ಹಾರಿಸಿ ಆಯುಚಿಯನ್ನು ಕೊಂದಿದ್ದಾರೆ ಎಂದು ಹಂಗಾಮಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ಹೇಳಿದ್ದಾರೆ.

  Published by:Precilla Olivia Dias
  First published: