Flight Ticket: ವಿಮಾನ ಟಿಕೆಟ್ ಮತ್ತಷ್ಟು ದುಬಾರಿ; ಯಾವ ಊರಿಂದ ಯಾವ ಊರಿಗೆ ಎಷ್ಟಿದೆ ಟಿಕೆಟ್ ದರ?

ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಪ್ರಯಾಣ ದರವನ್ನು ಹೆಚ್ಚಿಸಿ ನಾಗರಿಕ ವಿಮಾನಯಾನ ಸಚಿವಾಲಯ ಅಧಿಕೃತವಾಗಿ ಆದೇಶ ಹೊರಡಿಸಿದೆ. ಟಿಕೆಟ್​ ದರದಲ್ಲಿ ಶೇ.9.83ರಿಂದ 12.82ರಷ್ಟು ಏರಿಕೆ ಮಾಡಲಾಗಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೇಶಕ್ಕೆ ಕೊರೋನಾ ಬಂದ ಬಳಿಕ ಬಹುತೇಕ ಉದ್ಯಮಗಳು ನಷ್ಟದಲ್ಲಿ ಮುಳುಗಿವೆ. ಇದರಿಂದ ಚೇತರಿಕೆ ಕಾಣಲು ಹರಸಾಹಸ ಪಡುತ್ತಿವೆ. ಕೊರೋನಾ ಸಾಂಕ್ರಾಮಿಕ ಪಿಡುಗಿನ ನಡುವೆ ಈಗ ದೇಶೀಯ ವಿಮಾನಗಳ ಸಂಚಾರ ದರ ಮತ್ತಷ್ಟು ದುಬಾರಿಯಾಗಿದೆ. ಹೀಗಾಗಿ ಇನ್ಮುಂದೆ ವಿಮಾನ ಪ್ರಯಾಣ ದರ ದುಬಾರಿಯಾಗಲಿದೆ. ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಪ್ರಯಾಣ ದರವನ್ನು ಹೆಚ್ಚಿಸಿ ನಾಗರಿಕ ವಿಮಾನಯಾನ ಸಚಿವಾಲಯ ಅಧಿಕೃತವಾಗಿ ಆದೇಶ ಹೊರಡಿಸಿದೆ. ಟಿಕೆಟ್​ ದರದಲ್ಲಿ ಶೇ.9.83ರಿಂದ 12.82ರಷ್ಟು ಏರಿಕೆ ಮಾಡಲಾಗಿದೆ.

  ಈಗ ಭಾರತೀಯ ವಿಮಾನಯಾನ ಸಂಸ್ಥೆಗಳು ವಿಮಾನಗಳ ಸಾಮರ್ಥ್ಯ ದರವನ್ನು ಶೇ.65ರ ಬದಲಿಗೆ ಶೇ.72.5ಕ್ಕೆ ಹೆಚ್ಚಿಸಿವೆ. ಸಚಿವಾಲಯದ ಅಧಿಕೃತ ಮಾಹಿತಿ ಪ್ರಕಾರ, ಜುಲೈ 5ರಿಂದ ಶೇ.65 ರಷ್ಟು ವಿಮಾನಗಳು ಮಾತ್ರ ಹಾರಾಟ ನಡೆಸುತ್ತಿದ್ದವು.

  ವಿಮಾನಯಾನ ಸಚಿವಾಲಯ ಗುರುವಾರ ಹೊಸ ಆದೇಶವನ್ನು ಹೊರಡಿಸಿದ್ದು, ಶೇ.65ರಷ್ಟಿದ್ದ ಸಾಮರ್ಥ್ಯವನ್ನು ಶೇ. 72.5ಕ್ಕೆ ಹೆಚ್ಚಿಸಿದೆ. ಈ ನಿಯಮ ಮುಂದಿನ ಆದೇಶ ಹೊರಡಿಸುವ ತನಕ ಜಾರಿಯಲ್ಲಿರುತ್ತದೆ ಎಂದು ಸಚಿವಾಲಯ ಹೇಳಿದೆ.

  ಇದನ್ನೂ ಓದಿ:ಅಡುಗೆ ಮಾಡುವಾಗ ಸಾಂಬಾರ್ ಉಕ್ಕಿ, ಚೆಲ್ಲುವುದನ್ನು ತಡೆಯಬೇಕೆ? ಈ ಸಿಂಪಲ್ ಟ್ರಿಕ್ ಫಾಲೋ ಮಾಡಿ, ಮ್ಯಾಜಿಕ್ ನೋಡಿ

  ಇದೇ ವೇಳೆ ಸರ್ಕಾರ, ವಿಮಾನದರವನ್ನು ಹೆಚ್ಚಿಸಿ ಪ್ರಯಾಣಿಕರಿಗೆ ಶಾಕ್ ನೀಡಿದೆ. ದೇಶೀಯ ವಿಮಾನಗಳ ಟಿಕೆಟ್​ ದರದಲ್ಲಿ ಶೇ.9.83ರಿಂದ 12.82ರಷ್ಟು ಏರಿಕೆ ಮಾಡಲಾಗಿದೆ. ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಪ್ರಯಾಣ ದರವನ್ನು ಹೆಚ್ಚಿಸಿ ನಾಗರಿಕ ವಿಮಾನಯಾನ ಸಚಿವಾಲಯ ಅಧಿಕೃತವಾಗಿ ಆದೇಶ ಹೊರಡಿಸಿದೆ.

  ಜೂನ್​ 1ರಂದು ಕೇಂದ್ರ ಸರ್ಕಾರವು ದರಗಳ ಮೇಲಿನ ಮಿತಿಯನ್ನು ಶೇ.15ರಷ್ಟು ಹೆಚ್ಚಿಸಿತ್ತು. ಇದರ ಜೊತೆಗೆ ಕನಿಷ್ಠ 2 ಬಾರಿ ಪ್ರಯಾಣ ದರ ಹೆಚ್ಚಾಗಿತ್ತು.

  ಹೆಚ್ಚಿನ ಬೇಡಿಕೆ ಮತ್ತು ಸೀಮಿತ ವಿಮಾನಗಳ ಕಾರಣದಿಂದಾಗಿ ಅಸಹಜವಾಗಿ ಟಿಕೆಟ್​​ ದರವನ್ನು ಹೆಚ್ಚಿಸಲಾಗಿದೆ. ಕೆಳದರ್ಜೆ ಮತ್ತು ಮೇಲ್ದರ್ಜೆ ವಿಮಾನಗಳ ಪ್ರಯಾಣ ದರ ಹೆಚ್ಚಾಗಿದೆ. ಇದು ವಿಮಾನಯಾನ ಸಂಸ್ಥೆಗಳ ಮೇಲೆ ಹಾಕಲಾದ ತಾತ್ಕಾಲಿಕ ಮಿತಿಯಾಗಿದೆ ಎಂದು ಹಿಂದಿನ ವಿಮಾನಯಾನ ಸಚಿವ ಹರ್ದೀಪ್​ ಸಿಂಗ್​ ಪುರಿ ತಿಳಿಸಿದ್ದಾರೆ.

  ಈ ಬೆಲೆ ಹೆಚ್ಚಳದಿಂದಾಗಿ ದೆಹಲಿ-ಮುಂಬೈ ಮಾರ್ಗದ ಒಂದು ಕಡೆಯ ಪ್ರಯಾಣ ದರ 575ರೂ. ಹೆಚ್ಚಾಗಿದೆ. ಗರಿಷ್ಠ ವಿಮಾನ ದರ ಏರಿಕೆ 1625 ರೂಪಾಯಿಗಳಾಗಿವೆ. ಕೊರೋನಾ ಸಂದರ್ಭದಲ್ಲಿ ವಿಮಾನಗಳ ಮೇಲೆ ವಿಧಿಸಲಾಗಿದ್ದ ದರ ಮಿತಿಯ​ನ್ನು ತೆಗೆಯುವಂತೆ ವಿಮಾನಯಾನ ಸಂಸ್ಥೆಗಳು ಸರ್ಕಾರಕ್ಕೆ ಮನವಿ ಮಾಡಿದ್ದವು.

  ಇದನ್ನೂ ಓದಿ:Weekly Horoscope: ತುಲಾ ರಾಶಿಯವರಿಗೆ ಈ ವಾರ ಸಮಸ್ಯೆ ಎದುರಾಗಬಹುದು, ಉಳಿದ ರಾಶಿಗಳ ವಾರ ಭವಿಷ್ಯ ಹೀಗಿದೆ..!

  ವಿಮಾನಗಳ ಸಾಮರ್ಥ್ಯಕ್ಕನುಗುಣವಾಗಿ ಕೇಂದ್ರ ಸರ್ಕಾರ ಕಳೆದ ವರ್ಷ 2 ತಿಂಗಳ ನಂತರ ಮೇ 25ರಂದು ಮತ್ತೆ ದೇಶೀಯ ವಿಮಾನಗಳ ಸಂಚಾರಕ್ಕೆ ಅನುಮತಿ ನೀಡಿತ್ತು. ಆಗ ಸಚಿವಾಲಯವು ಶೇ.33ರಷ್ಟು ವಿಮಾನಗಳು ಮಾತ್ರ ಕಾರ್ಯಾರಂಭ ಮಾಡುವಂತೆ ಹೇಳಿತ್ತು. ಡಿಸೆಂಬರ್ ವೇಳಗೆ ಈ ಮಿತಿಯನ್ನು ಶೇ.80ಕ್ಕೆ ಹೆಚ್ಚಿಸಲಾಯಿತು. ಜೂನ್​ 1ರವರೆಗೆ ಶೇ.80ರಷ್ಟು ದರ ಮಿತಿ ಜಾರಿಯಲ್ಲಿತ್ತು.

  ಬಳಿಕ ಮೇ 28ರಂದು ಈ ನಿರ್ಧಾರವನ್ನು ಬದಲಿಸಿ, ದರ ಮಿತಿಯನ್ನು ಶೇ.80ರಿಂದ ಶೇ. 50ಕ್ಕೆ ಇಳಿಸಲಾಯಿತು. ದೇಶದಲ್ಲಿ ಏಕಾಏಕಿ ಕೋವಿಡ್​ ಪ್ರಕರಣಗಳು ಹೆಚ್ಚಾದ ಹಿನ್ನೆಲೆ, ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕುಸಿದಿದ್ದರಿಂದ ಸರ್ಕಾರ ತ್ವರಿತವಾಗಿ ಈ ನಿರ್ಧಾರ ತೆಗೆದುಕೊಂಡಿತ್ತು.

  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.
  Published by:Latha CG
  First published: