HOME » NEWS » National-international » DELHI MINORITIES COMMISSION CHAIRMAN ZAFARUL ISLAM SLAPPED WITH SEDITION CHARGES OVER PROVOCATIVE POST SNVS

ದೆಹಲಿ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು

Delhi Lockdown Extension News: ತಾವು ಮಾಡಿದ ಟ್ವೀಟನ್ನು ಕೆಲ ವರ್ಗದ ಮಾಧ್ಯವಗಳು ತಿರುಚಿ ತಪ್ಪು ಅಭಿಪ್ರಾಯ ಬರುವಂತೆ ಪ್ರಸಾರ ಮಾಡಿವೆ. ಈ ನಿಟ್ಟಿನಲ್ಲಿ ಸುದ್ದಿ ವಾಹಿನಿಯೊಂದರ ವಿರುದ್ಧ ಕಾನೂನು ಕ್ರಮದ ನೋಟೀಸ್ ಜಾರಿಗೊಳಿಸಿದ್ದೇವೆ ಎಂದು ಖಾನ್ ಹೇಳಿದ್ಧಾರೆ.

news18
Updated:May 2, 2020, 11:54 AM IST
ದೆಹಲಿ ಅಲ್ಪಸಂಖ್ಯಾತರ ಆಯೋಗ ಅಧ್ಯಕ್ಷರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ದೆಹಲಿ ಪೊಲೀಸ್
  • News18
  • Last Updated: May 2, 2020, 11:54 AM IST
  • Share this:
ನವದೆಹಲಿ(ಮೇ 02): ಸೋಷಿಯಲ್ ಮೀಡಿಯಾದಲ್ಲಿ ಉದ್ರೇಕಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ದೆಹಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಫಾರುಲ್ ಇಸ್ಲಾಮ್ ಖಾನ್ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 124ಎ (ದೇಶದ್ರೋಹ) ಮತ್ತು 153ಎ (ದ್ವೇಷ ಪ್ರಚೋದನೆ ಮತ್ತು ಸೌಹಾರ್ದತೆಗೆ ಧಕ್ಕೆ ತರುವ ಪ್ರಯತ್ನ) ಅಡಿಯಲ್ಲಿ ಅವರ ವಿರುದ್ಧ ಎಫ್​ಐಆರ್ ದಾಖಲಾಗಿದೆ ಎಂದು ದೆಹಲಿ ಜಂಟಿ ಪೊಲೀಸ್ ಆಯುಕ್ತ ನೀರಜ್ ಠಾಕೂರ್ ಹೇಳಿದರೆಂದು ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಮಾಧ್ಯಮದವರು ಜಫಾರುಲ್ ಇಸ್ಲಾಮ್ ಖಾನ್ ಅವರನ್ನು ಸಂಪರ್ಕಿಸಿದಾಗ ಈ ವಿಚಾರ ತನಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. “ನಾನು ಎಫ್​ಐಆರ್ ನೋಡಿಲ್ಲ. ಅದನ್ನು ನೋಡಿದ ಬಳಿಕ ಮಾತನಾಡುತ್ತೇನೆ” ಎಂದು ಖಾನ್ ಸ್ಪಷ್ಟಪಡಿಸಿದ್ಧಾರೆ.

ಏನು ಕಮೆಂಟ್ ಮಾಡಿದ್ದರು?

ಭಾರತದಲ್ಲಿ ಮುಸ್ಲಿಮ್ ವಿರೋಧಿ ಭಾವನೆ ನೆಲಸಿದೆ. ಅಂತಾರಾಷ್ಟ್ರೀಯ ಸಮುದಾಯ ಮಧ್ಯ ಪ್ರವೇಶಿಸಿ ಮುಸ್ಲಿಮರನ್ನು ರಕ್ಷಿಸಬೇಕಿದೆ ಎಂದು ಕುವೇತ್ ದೇಶವು ಹೇಳಿಕೆ ನೀಡಿತ್ತು. ದೆಹಲಿ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ಜಫಾರುಲ್ ಇಸ್ಲಾಮ್ ಖಾನ್ ಅವರು ಈ ಬೆಳವಣಿಗೆ ಬಗ್ಗೆ ಏಪ್ರಿಲ್ 28ರಂದು ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯಿಸಿ, ಕುವೇತ್ ದೇಶಕ್ಕೆ ಥ್ಯಾಂಕ್ಸ್ ಹೇಳಿ ಟ್ವೀಟ್ ಮಾಡಿದ್ದರು.

 ಇದನ್ನೂ ಓದಿ: Coronavirus Update: ವಿಶ್ವಾದ್ಯಂತ ಕೊರೋನಾಗೆ 2.39 ಲಕ್ಷ ಬಲಿ; 34 ಲಕ್ಷಕ್ಕೂ ಅಧಿಕ ಸೋಂಕಿತರು

ಇದಾದ ಕೆಲ ದಿನಗಳಲ್ಲಿ ಮತ್ತೊಂದು ಟ್ವೀಟ್ ಮಾಡಿದ ಅವರು, ತಮ್ಮ ಹೇಳಿಕೆಯಿಂದ ಯಾರಿಗಾದರೂ ನೋವಿದ್ದರೆ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದರು.

“ನಾನು ಮಾಡಿದ ಟ್ವೀಟ್ ಸಾಂದರ್ಭಿಕವಾಗಿರಲಿಲ್ಲ. ದೇಶದಲ್ಲಿ ವೈದ್ಯಕೀಯ ತುರ್ತು ಸ್ಥಿತಿ ಇರುವಾಗ ನಾನು ಆ ವಿಚಾರ ಮಾತನಾಡಬಾರದಿತ್ತು. ನನ್ನಿಂದ ಯಾರ ಭಾವನೆಗಾದರೂ ನೋವಾಗಿದ್ದರೆ ಕ್ಷಮೆ ಇರಲಿ” ಎಂದು ಅವರು ಟ್ವೀಟ್ ಮಾಡಿದ್ದರು.ಆದರೆ, ತಾವು ಮಾಡಿದ ಟ್ವೀಟನ್ನು ಕೆಲ ವರ್ಗದ ಮಾಧ್ಯವಗಳು ತಿರುಚಿ ತಪ್ಪು ಅಭಿಪ್ರಾಯ ಬರುವಂತೆ ಪ್ರಸಾರ ಮಾಡಿವೆ. ಈ ನಿಟ್ಟಿನಲ್ಲಿ ಸುದ್ದಿ ವಾಹಿನಿಯೊಂದರ ವಿರುದ್ಧ ಕಾನೂನು ಕ್ರಮದ ನೋಟೀಸ್ ಜಾರಿಗೊಳಿಸಿದ್ದೇವೆ ಎಂದು ಖಾನ್ ಹೇಳಿದ್ಧಾರೆ.

Youtube Video
First published: May 2, 2020, 10:37 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories