news18 Updated:March 3, 2021, 12:06 PM IST
ಆಮ್ ಆದ್ಮಿ ಪಕ್ಷದ ಗೆಲುವನ್ನು ಸಂಭ್ರಮಿಸುತ್ತಿರುವ ಕಾರ್ಯಕರ್ತರು
- News18
- Last Updated:
March 3, 2021, 12:06 PM IST
ನವದೆಹಲಿ(ಮಾ. 03): ಗುಜರಾತ್ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ನಿನ್ನೆ ಅಮೋಘ ಗೆಲುವು ಸಾಧಿಸಿದ ಸಂಭ್ರಮದಲ್ಲಿದ್ದ ಭಾರತೀಯ ಜನತಾ ಪಕ್ಷಕ್ಕೆ ದೆಹಲಿಯಲ್ಲಿ ಸಣ್ಣ ಆಘಾತವಾಗಿದೆ. ರಾಜಧಾನಿ ನಗರ ಪಾಲಿಕೆಯ ಐದು ವಾರ್ಡ್ಗಳಿಗೆ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಶೂನ್ಯ ಸಂಪಾದನೆ ಮಾಡಿದೆ. ಆಡಳಿತಾರೂಢ ಆಮ್ ಆದ್ಮಿ ಪಕ್ಷ ನಾಲ್ಕು ಸ್ಥಾನಗಳಲ್ಲಿ ಜಯಭೇರಿ ಭಾರಿಸಿದರೆ, ಇನ್ನೊಂದು ಸ್ಥಾನವು ಕಾಂಗ್ರೆಸ್ ಪಾಲಾಗಿದೆ. ಎಎಪಿ ಪಕ್ಷ ಕಲ್ಯಾಣಪುರಿ, ಶಾಲಿಮಾರ್ ಬಾಗ್, ರೋಹಿಣಿ-ಸಿ ಮತ್ತು ತ್ರಿಲೋಕಪುರಿ ವಾರ್ಡ್ಗಳನ್ನ ಗೆದ್ದು ಬೀಗಿದೆ. ಕಾಂಗ್ರೆಸ್ ಪಕ್ಷ ಚೌಹಾನ್ ಬಂಗೇರ್ ವಾರ್ಡನ್ನ ಜಯಿಸಿದೆ.
ಫೆ. 28ರಂದು ಈ ಐದು ವಾರ್ಡ್ಗಳಿಗೆ ನಡೆದ ಉಪಚುನಾವಣೆಯಲ್ಲಿ ಸರಾಸರಿಯಾಗಿ ಶೇ. 52ರಷ್ಟು ಮತದಾನವಾಗಿತ್ತು. ಈ ವಾರ್ಡ್ಗಳಲ್ಲಿ ಈ ಮುಂಚೆ ನಾಲ್ಕು ಸ್ಥಾನಗಳು ಎಎಪಿ ಮತ್ತು ಒಂದು ಸ್ಥಾನ ಬಿಜೆಪಿ ಬಳಿ ಇತ್ತು. ಇದೀಗ ಬಿಜೆಪಿ ಶಾಲಿಮಾರ್ ಬಾಗ್ ಕ್ಷೇತ್ರವನ್ನು ಕಳೆದುಕೊಂಡಿದೆ. ಇದೀಗ ಇದು ಎಎಪಿ ಪಾಲಾಗಿದೆ. ಕಾಂಗ್ರೆಸ್ ಪಕ್ಷ ಚೌಹಾಣ್ ಬಾಂಗೇರ್ ಕ್ಷೇತ್ರವನ್ನು ಎಎಪಿಯಿಂದ ಕಸಿದುಕೊಂಡಿದೆ.
ಇದನ್ನೂ ಓದಿ: Manmohan Singh: ದೇಶದಲ್ಲಿ ನಿರುದ್ಯೋಗದ ಸಮಸ್ಯೆ ಹೆಚ್ಚಾಗಲು ನೋಟ್ಬ್ಯಾನ್ ನೀತಿಯೇ ಕಾರಣ; ಮನಮೋಹನ್ ಸಿಂಗ್ ಆರೋಪ
ದೆಹಲಿ ಬಳಿ ಸತತವಾಗಿ ನಡೆಯುತ್ತಿರುವ ರೈತರ ಪ್ರತಿಭಟನೆಗಳು ಹಾಗೂ ಮುಂದಿನ ವರ್ಷ ಮಹಾನಗರ ಪಾಲಿಕೆ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಸಾಕಷ್ಟು ಗಮನ ಸೆಳೆದಿತ್ತು. ಮುಂಬರಲಿರುವ ಪಾಲಿಕೆ ಚುನಾವಣೆಗೆ ಇದು ದಿಗ್ಸೂಚಿ ಆಗಿದೆ ಎಂಬುದು ಆಮ್ ಆದ್ಮಿ ಪಕ್ಷದ ವಾದ. ಈ ಬಗ್ಗೆ ಪ್ರತಿಕ್ರಿಯಿಸಿರುವ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, ದೆಹಲಿ ಜನರು ತಮ್ಮ ಸರ್ಕಾರದ ಬಗ್ಗೆ ನಂಬಿಕೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಬಗ್ಗೆ ಅವರು ವ್ಯಗ್ರಗೊಂಡಿರುವುದಕ್ಕೆ ಈ ಫಲಿತಾಂಶವೇ ಸಾಕ್ಷಿಯಾಗಿದೆ. 2022ರ ದೆಹಲಿ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿಗೆ ಹೀನಾಯ ಸೋಲಾಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ದೆಹಲಿ ಪಾಲಿಕೆ ಉಪಚುನಾವಣೆಯ ಫಲಿತಾಂಶ ಇಂದು ಸಂಜೆ ಅಥವಾ ನಾಳೆ ಅಧಿಕೃತವಾಗಿ ಪ್ರಕಟವಾಗುವ ನಿರೀಕ್ಷೆ ಇದೆ.
Published by:
Vijayasarthy SN
First published:
March 3, 2021, 12:06 PM IST