Monkeypox: ಟ್ರಾವೆಲ್ ಹಿಸ್ಟರಿ ಇಲ್ಲದಿದ್ರೂ ದೆಹಲಿ ಮೂಲದ ವ್ಯಕ್ತಿಗೆ ಮಂಕಿಪಾಕ್ಸ್ ತಗುಲಿದ್ದೇಗೆ?

ಭಾರತದಲ್ಲಿ ನಾಲ್ಕನೇ ಮಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ. ದೆಹಲಿಯ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಬಂದಿರುವದು ದೃಢವಾಗಿದೆ. ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ ಅಂದ್ರೂ ದೆಹಲಿ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ತಗುಲಿದೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಆತಂಕ ಹೆಚ್ಚಾಗಿದೆ.

ಸಾಂಕೇತಿಕ ಚಿತ್ರ

ಸಾಂಕೇತಿಕ ಚಿತ್ರ

  • Share this:
ಹಲವು ದೇಶಗಳಲ್ಲಿ ಮಂಕಿಪಾಕ್ಸ್ (Monkeypox) ಅಬ್ಬರ ಹೆಚ್ಚಾಗುತ್ತಿದೆ. ಭಾರತದ (India)ಲ್ಲೂ ಮಂಕಿಪಾಕ್ಸ್ ಆತಂಕ ಶುರುವಾಗಿದೆ. ಈಗಾಗಲೇ ಮೂರು ಪ್ರಕರಣಗಳು ಕೇರಳ (Kerala)ದಲ್ಲೇ ಪತ್ತೆಯಾಗಿದ್ದವು. ಕೇರಳದ ಹಲವು ಜಿಲ್ಲೆಗಳಲ್ಲಿ ಹೈ ಅಲರ್ಟ್ ಘೋಷಿಸಲಾಗಿತ್ತು. ಈಗ ಭಾರತದಲ್ಲಿ ನಾಲ್ಕನೇ ಮಂಕಿಪಾಕ್ಸ್ ಕೇಸ್ (4th Monkeypox Case) ಪತ್ತೆಯಾಗಿದೆ. ದೆಹಲಿ (Delhi)ಯ ವ್ಯಕ್ತಿಯೊಬ್ಬರಿಗೆ ಮಂಕಿಪಾಕ್ಸ್ ಬಂದಿರುವದು ದೃಢವಾಗಿದೆ. ಯಾವುದೇ ಟ್ರಾವೆಲ್ (Travel) ಹಿಸ್ಟರಿ (History) ಇಲ್ಲ ಅಂದ್ರೂ ದೆಹಲಿ ವ್ಯಕ್ತಿಗೆ ಮಂಕಿಪಾಕ್ಸ್ ಸೋಂಕು ತಗುಲಿದೆ. ಇದರಿಂದ ರಾಷ್ಟ್ರ ರಾಜಧಾನಿಯಲ್ಲಿ ಆತಂಕ ಹೆಚ್ಚಾಗಿದೆ. ಯಾವುದೇ ವಿದೇಶಕ್ಕೂ ಹೋಗದೇ ಇದ್ರೂ ಹೇಗೆ ಈ ವ್ಯಕ್ತಿಗೆ ಮಂಗನ ಕಾಯಿಲೆ ಬಂತು ಎಂದು ಪತ್ತೆ ಹಚ್ಚಲಾಗುತ್ತೆದೆ. ಈಗಾಗಲೇ ವಿಶ್ವದ ಹಲವೆಡೆ ಮಂಕಿಪಾಕ್ಸ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆ!
ಮಂಕಿಪಾಕ್ಸ್ ಕೇಸ್‍ಗಳು ಹಲವೆಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿವೆ. ಕೇರದಲ್ಲಿ ಮಾತ್ರ ಇದ್ದ ಸೋಂಕು, ಈಗ ದೆಹಲಿಗೆ ಹಬ್ಬಿದೆ. ದೆಹಲಿಯ 34 ವರ್ಷದ ವ್ಯಕ್ತಿ ಮಂಕಿಪಾಕ್ಸ್ ಟೆಸ್ಟ್ ಮಾಡಿಸಿದ್ದು, ವರದಿಯು ಪಾಸಿಟಿವ್ ಆಗಿ ಬಂದಿದೆ. ಈ ಮೂಲಕ ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ದೃಢವಾಗಿದೆ. ಯಾವುದೇ ವಿದೇಶಕ್ಕೂ ಹೋಗದಿದ್ದರೂ ಕಾಯಿಲೆ ಬಂದಿರೋದ್ರಿಂದ ದೆಹಲಿಯಲ್ಲಿ ಆತಂಕ ಹೆಚ್ಚಾಗಿದೆ.

ಮೂರು ದಿನಗಳ ಹಿಂದೆ ಮನಾಲಿಯಲ್ಲಿ ಪಾರ್ಟಿ
ಸೋಂಕು ದೃಢಪಟ್ಟಿರುವ ವ್ಯಕ್ತಿ, ಪಶ್ಚಿಮ ದೆಹಲಿಯಲ್ಲಿ ವಾಸಿಸುತ್ತಿದ್ದಾರೆ. ಕಳೆದ 3 ದಿನಗಳ ಹಿಂದೆ ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸ್ಟಾಗ್ ಪಾರ್ಟಿಯಲ್ಲಿ ಭಾಗವಹಿಸಿದ್ದರು ಎಂದು ತಿಳಿದು ಬಂದಿದೆ. ಅವರಿಗೆ ಜ್ವರ ಬಂದ ಕಾರಣ ಮೌಲಾನಾ ಆಜಾದ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಂಕಿಪಾಕ್ಸ್ ಟೆಸ್ಟ್ ಮಾಡಿಸಿದ್ದರು. ಅವರ ಮಾದರಿಗಳನ್ನು ನಿನ್ನೆ ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳಿಸಿಲಾಗಿತ್ತು. ಇಂದು ಅವರಿಗೆ ಮಂಕಿಪಾಕ್ಸ್ ಇರುವುದು ದೃಢವಾಗಿದೆ.

ಇದನ್ನೂ ಓದಿ: Monkeypox: ಹೆಚ್ಚುತ್ತಿರುವ ಮಂಕಿಪಾಕ್ಸ್: ವಿಶ್ವಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO

ಭಾರತದಲ್ಲಿ 4ನೇ ಮಂಕಿಪಾಕ್ಸ್ ಕೇಸ್
ಭಾರತದಲ್ಲಿ ಅಂದ್ರೆ ಕೇರಳದಲ್ಲೇ 3 ಮಂಕಿಪಾಕ್ಸ್ ಪ್ರಕರಣಗಳು ಪತ್ತೆಯಾಗಿದ್ದವು. 3ನೇ ಪ್ರಕರಣವು ಯುಎಇಯಿಂದ ಮಲಪ್ಪುರಂಗೆ ಜುಲೈ 6ರಂದು ಕೇರಳಕ್ಕೆ ವಾಪಸ್ ಆಗಿದ್ದ ವ್ಯಕ್ತಿಯಲ್ಲಿ ಸೋಂಕು ಇರೋದು ದೃಢವಾಗಿತ್ತು. ಈ ಹಿಂದೆಯೂ ಕೇಸ್ ಸಹ ಕೇರಳದಲ್ಲೇ ಪತ್ತೆಯಾಗಿದ್ದವು. ಇದೀಗ ದೆಹಲಿಯಲ್ಲಿ ಮೊದಲ ಮಂಕಿಪಾಕ್ಸ್ ಕೇಸ್ ಪತ್ತೆಯಾಗಿದೆ. ಈ ಮೂಲಕ ಭಾರತದಲ್ಲಿ 4ನೇ ಮಂಕಿಪಾಕ್ಸ್ ಕೇಸ್ ದೃಢವಾಗಿದೆ. ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಾಗಿದೆ.

ವಿಶ್ವಾದ್ಯಂತ ಆರೋಗ್ಯ ತುರ್ತು ಪರಿಸ್ಥಿತಿ ಘೋಷಿಸಿದ WHO
ವಿಶ್ವ ಆರೋಗ್ಯ ಸಂಸ್ಥೆ ನಿನ್ನೆಯಷ್ಟೇ ಜಾಗತಿಕ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ತುರ್ತು ಪರಿಸ್ಥಿತಿ ಘೋಷಿಸುವ ಮೂಲಕ ಮಂಕಿಪಾಕ್ಸ್ ಹೆಚ್ಚಳದ ಬಗ್ಗೆ ಇಡೀ ವಿಶ್ವವನ್ನು ಎಚ್ಚರಿಸಿದೆ. ಮಂಕಿಪಾಕ್ಸ್ ತಜ್ಞರು ಕಳೆದ ಗುರುವಾರ ವಿಶ್ವ ಆರೋಗ್ಯ ಸಂಸ್ಥೆಯು ಏಕಾಏಕಿ ಜಾಗತಿಕ ಆರೋಗ್ಯ ಎಂದು ವರ್ಗೀಕರಿಸಬೇಕೆ ಎಂದು ಚರ್ಚಿಸಿದ್ದರು. ತಜ್ಞರ ಸಮಿತಿಯು ಅಂತಿಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಜವಾಬ್ದಾರಿಯನ್ನು ಹೊಂದಿರುವ WHO ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್ ಅವರಿಗೆ ಸಲಹೆಯನ್ನು ನೀಡಲಾಯಿತು. ಈ ಹಿನ್ನೆಲೆಯಲ್ಲಿ WHO ರೋಗದ ಬಗ್ಗೆ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ.

ಇದನ್ನೂ ಓದಿ: Monkeypox: ಮಕ್ಕಳನ್ನೂ ಕಾಡುತ್ತಿದೆ ಮಂಕಿಪಾಕ್ಸ್, ಅಂಬೆಗಾಲಿಡುವ ಮಗುವಲ್ಲೂ ಪತ್ತೆಯಾಯ್ತು ಸೋಂಕು!

ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‍ಒ) ಮಹಾನಿರ್ದೇಶಕ ಟೆಡ್ರೊಸ್ ಅಧಾನೊಮ್ ಘೆಬ್ರೆಯೆಸಸ್, "ಜಾಗತಿಕ ಮಂಗನ ಕಾಯಿಲೆಯು ಅಂತರರಾಷ್ಟ್ರೀಯ ಕಾಳಜಿಯ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂದು ನಾನು ನಿರ್ಧರಿಸಿದ್ದೇನೆ" ಎಂದು ಹೇಳಿದರು.

ಹೆಚ್ಚುತ್ತಿರುವ ಕಾಯಿಲೆ, ಸಾವು
ಇಲ್ಲಿಯವರೆಗೆ, 60 WHO ಸದಸ್ಯ ರಾಷ್ಟ್ರಗಳಿಂದ 16,000 ಕ್ಕೂ ಹೆಚ್ಚು ಮಂಕಿಪಾಕ್ಸ್ ಪ್ರಕರಣಗಳು ಮತ್ತು ಐದು ಸಾವುಗಳು ವರದಿಯಾಗಿವೆ. ಮಂಕಿಪಾಕ್ಸ್ ಅನ್ನು ಎದುರಿಸಲು ಪರಿಣಾಮಕಾರಿ ಮಾಹಿತಿ ಮತ್ತು ಸೇವೆಗಳನ್ನು ವಿನ್ಯಾಸಗೊಳಿಸಬೇಕಿದೆ. ಈ ಹಿನ್ನೆಲೆ ಎಲ್ಲಾ ದೇಶಗಳು ನಿಕಟವಾಗಿ ಕೆಲಸ ಮಾಡುವುದು ಅತ್ಯಗತ್ಯವಾದ ಕಾರಣ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗುತ್ತಿದೆ ಎಂದು ಆರೋಗ್ಯ ಸಂಸ್ಥೆ ಹೇಳಿದೆ.

ಮಂಕಿಪಾಕ್ಸ್‍ಗೆ ಪ್ರಸ್ತುತ ಯಾವುದೇ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಿಗಳು ಸಾಮಾನ್ಯವಾಗಿ ತಜ್ಞ ಆಸ್ಪತ್ರೆಯಲ್ಲಿ ಉಳಿಯಬೇಕಾಗುತ್ತದೆ,ಆದ್ದರಿಂದ ಸೋಂಕು ಹರಡುವುದಿಲ್ಲ. ಸಾಮಾನ್ಯ ರೋಗಲಕ್ಷಣಗಳಿಗೆ ಚಿಕಿತ್ಸೆ ನೀಡಬಹುದು ಎಂದು ಹೇಳಿದೆ.
Published by:Savitha Savitha
First published: