Viral Video: ದೀಪಾವಳಿ ದಿನ ಬಿರಿಯಾನಿ ಶಾಪ್​ ತೆರೆಯಲು ಅನುಮತಿ ನೀಡಿದ್ಯಾರು​?; ವ್ಯಾಪಾರಿಗೆ ಬೆದರಿಕೆ

ಇದು ಹಿಂದೂ ಪ್ರದೇಶ ಎಂದು ನಿಮಗೆ ತಿಳಿದಿಲ್ಲವೇ? ಇಂದು ದೀಪಾವಳಿ . ಮೊದಲು ಅಂಗಡಿ ಮುಚ್ಚಿ. ಇದೇನು  ನಿಮ್ಮ ಪ್ರದೇಶ. ಇದು ಜಾಮಾ ಮಸೀದಿಯೇ? ಇದು ಸಂಪೂರ್ಣ 'ಹಿಂದೂ' ಪ್ರದೇಶ.

ಅಂಗಡಿ ಬಂದ್​ ಮಾಡುವಂತೆ ಎಚ್ಚರಿಕೆ

ಅಂಗಡಿ ಬಂದ್​ ಮಾಡುವಂತೆ ಎಚ್ಚರಿಕೆ

  • Share this:
    ದೆಹಲಿಯ ಸಂತ ನಗರ ಪ್ರದೇಶದಲ್ಲಿ (Delhi Santa Nagar) ದೀಪಾವಳಿಯಂದು (Deepavali) ಬಿರಿಯಾನಿ ಅಂಗಡಿಯನ್ನು(Biriyani Shop) ತೆರೆದಿದ್ದಕ್ಕಾಗಿ ಮುಸ್ಲಿಂ ವ್ಯಕ್ತಿಗೆ ಮತ್ತು ಹೋಟೆಲ್ ಸಿಬ್ಬಂದಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಈ ಘಟನೆ ವಿಡಿಯೋ ವೈರಲ್ ಆದ ಬಳಿಕ ಪೊಲೀಸರು ಸ್ವಯಂ ಪ್ರೇರಿತವಾಗಿ ಇಂದು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅಂಗಡಿ ತೆರೆದ ವ್ಯಕ್ತಿಗೆ ನಿಂದಿಸಿದ್ದು, ಹಿಂದೂಗಳ ಪ್ರದೇಶದಲ್ಲಿ ದೀಪಾವಳಿಯಂದು ಬಿರಿಯಾನಿ ಅಂಗಡಿ ತೆರೆದಿದ್ದಕ್ಕೆ ಬೆದರಿಕೆ ಹಾಕಿದ್ದಾರೆ. ವಿಡಿಯೋದಲ್ಲಿ ಎಚ್ಚರಿಕೆ ನೀಡಿರುವ ವ್ಯಕ್ತಿ ಬಜರಂಗದಳದ ಸದಸ್ಯ (Bajarangadal) ತನ್ನ ಹೆಸರು ನರೇಶ್ ಕುಮಾರ್ ಸೂರ್ಯವಂಶಿ ಎಂದು ಹೇಳಿಕೊಂಡಿದ್ದಾನೆ.

    ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಬೆದರಿಕೆ ಬೆನ್ನಲ್ಲೇ ಅಂಗಡಿ ಮಾಲೀಕರು ಮತ್ತು ಅವರ ಕೆಲಸಗಾರರು ಅಂಗಡಿಯನ್ನು ಮುಚ್ಚಿದ್ದಾರೆ. ಬಳಿಕ ಈ ಘಟನೆ ವಿಡಿಯೋ ಶೀಘ್ರದಲ್ಲೇ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದನ್ನು ಅನೇಕ ಮಂದಿ ದೆಹಲಿ ಪೊಲೀಸರಿಗೆ ಟ್ಯಾಗ ಮಾಡಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಜನರು ಟ್ವಿಟರ್‌ನಲ್ಲಿ ಒತ್ತಾಯಿಸಿದರು.

    ವಿಡಿಯೋದಲ್ಲಿ ಏನಿದೆ?
    ಮೂರು ನಿಮಿಷಗಳ ಈ ವಿಡಿಯೋದಲ್ಲಿ ನರೇಶ್ ಕುಮಾರ್ ದೀಪಾವಳಿಯ ಸಂದರ್ಭದಲ್ಲಿ ತನ್ನ ಅಂಗಡಿಯನ್ನು ತೆರೆಯಲು ಅನುಮತಿ ನೀಡಿದ ಬಿರಿಯಾನಿ ಮಾರಾಟಗಾರನ್ನು ಯಾಕೆ ಎಂದು ಪ್ರಶ್ನೆಸುತ್ತಾನೆ. ಇದು ಹಿಂದೂ ಪ್ರದೇಶವಾಗಿದ್ದು, ಅಂಗಡಿ ತೆರೆದಿದ್ದಕ್ಕಾಗಿ ಅಂಗಡಿಕಾರರ ಮೇಲೆ ನಿಂದಿಸಿದ್ದಾನೆ. ಅಲ್ಲದೇ, ದೀಪಾವಳಿ ದಿನ ಅಂಗಡಿ ತೆಗೆದಿದ್ದು, ಮುಚ್ಚದಿದ್ದರೆ ಬೆಂಕಿ ಹಚ್ಚುವುದಾಗಿಯೂ ಬೆದರಿಕೆ ಹಾಕಿದ್ದಾರೆ. "ಇದು ಜಾಮಾ ಮಸೀದಿಯೇ" ಎಂದು ಆತ ಪ್ರಶ್ನಿಸಿರುವುದು ವಿಡಿಯೋದಲ್ಲಿ ದಾಖಲಾಗಿದೆ.

    ಇದು ಹಿಂದೂ ಪ್ರದೇಶ

    ನಿನಗೆ ಭಯವಿಲ್ಲವೇ? ಇದೇನು ನಿನ್ನ ಈದ್? ನಿನ್ನ ಬಗ್ಗೆ ನಿನಗೆ ಏನನಿಸುತ್ತದೆ?. ನಿಮ್ಮ ಅಂಗಡಿಯನ್ನು ಹೇಗೆ ತೆರೆದಿದ್ದೀರಿ? ಯಾರು ನಿಮಗೆ ಅನುಮತಿ ನೀಡಿದರು? ಇದು ಹಿಂದೂ ಪ್ರದೇಶ ಎಂದು ನಿಮಗೆ ತಿಳಿದಿಲ್ಲವೇ? ಇಂದು ದೀಪಾವಳಿ . ಮೊದಲು ಅಂಗಡಿ ಮುಚ್ಚಿ. ಇದೇನು  ನಿಮ್ಮ ಪ್ರದೇಶ. ಇದು ಜಾಮಾ ಮಸೀದಿಯೇ? ಇದು ಸಂಪೂರ್ಣ 'ಹಿಂದೂ' ಪ್ರದೇಶ ಎಂದಿದ್ದಾರೆ.

    ಇದನ್ನು ಓದಿ: Mukesh Ambani & ಫ್ಯಾಮಿಲಿ ಭಾರತ ಬಿಟ್ಟು ಹೋಗಲ್ಲ: ವದಂತಿಗಳಿಗೆ ಫುಲ್ ಸ್ಟಾಪ್​ ಇಟ್ಟ ರಿಲಯನ್ಸ್​

    ಧಮಕಿ ಹಾಕಿದ ವಿಡಿಯೋ ವೈರಲ್

    ಜೊತೆಗೆ ವಿಡಿಯೋದಲ್ಲಿ ಮಾತನಾಡಿರುವ ಬಜರಂಗದಳದ ಸದಸ್ಯ ಎಂದು ಹೇಳಿಕೊಂಡಿರುವ ವ್ಯಕ್ತಿ, ಗಾಢ ನಿದ್ರೆಯಲ್ಲಿ ಇರುವ ಹಿಂದೂಗಳೇ ಎಚ್ಚರಗೊಳ್ಳಿ, ಈ ಜನರು ಲವ್ ಜಿಹಾದ್ ಮಾಡುತ್ತಾರೆ. ಯಾವುದೇ ಹಿಂದೂ ಹಬ್ಬದ ಸಂದರ್ಭದಲ್ಲಿ ಅಂಗಡಿ ತೆರೆಯಬೇಡಿ ಎಂದು ಧಮಕಿ ಹಾಕಿದ್ದಾರೆ. ಇದೇ ವೇಳೆ ನರೇಶ್ ಕುಮಾರ್ ಅವರು ಹೂವುಗಳನ್ನು ಖರೀದಿಸಲು ಆ ಪ್ರದೇಶಕ್ಕೆ ಹೋಗಿದ್ದಾಗಿ ತಿಳಿಸಿದ್ದಾರೆ.

    ಇದನ್ನು ಓದಿ: ಮುಂಬರುವ ವಿಧಾನಸಭಾ ಚುನಾವಣೆಗಳ ಬಗ್ಗೆ ರಣತಂತ್ರ ರೂಪಿಸಲಿರುವ ಕಾರ್ಯಕಾರಿಣಿ

    ಕ್ರಮಕ್ಕೆ ನಾಗರಿಕರ ಒತ್ತಾಯ

    ಇನ್ನು ಈ ವಿಡಿಯೋದ ಕುರಿತು ನ್ನು ಪರಿಶೀಲಿಸಿದ ನಂತರ, ಬುರಾರಿ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 295A (ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯಗಳು ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಅವಮಾನಿಸುವ ಮೂಲಕ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶದಿಂದ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ. ಆರೋಪಿಯ ಗುರುತು ಪತ್ತೆ ಹಚ್ಚಿ ಮತ್ತು ಆತನನ್ನು ಬಂಧಿಸಲು ತನಿಖೆ ನಡೆಸಲಾಗುತ್ತಿದೆ. ಘಟನೆ ಕುರಿತು ಕಾನೂನಿನ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದು ಡಿಸಿಪಿ (ಉತ್ತರ), ಸಾಗರ್ ಸಿಂಗ್ ಕಲ್ಸಿ ಹೇಳಿದ್ದಾರೆ.
    Published by:Seema R
    First published: