ಅಮ್ಮ ಊಟ ಮಾಡಲಿ ಎಂದು ಚೈನು ಎಳೆದು ಶತಾಬ್ದಿ ರೈಲನ್ನೇ ನಿಲ್ಲಿಸಿದ ಮಗ

ರೈಲ್ವೆ ಕಾಯ್ದೆ 141ರ ಅಡಿಯಲ್ಲಿ ಮನೀಶ್ ಅರೋರಾ ಮೇಲೆ ಪ್ರಕರಣ ದಾಖಲಾಗಿದ್ದು, ರೈಲ್ವೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗಿ ಈತ ದಂಡ ಪಾವತಿಸಬೇಕಾಗಬಹುದು.

news18
Updated:July 6, 2019, 11:30 AM IST
ಅಮ್ಮ ಊಟ ಮಾಡಲಿ ಎಂದು ಚೈನು ಎಳೆದು ಶತಾಬ್ದಿ ರೈಲನ್ನೇ ನಿಲ್ಲಿಸಿದ ಮಗ
ಶತಾಬ್ದಿ ಎಕ್ಸ್​ಪ್ರೆಸ್
  • News18
  • Last Updated: July 6, 2019, 11:30 AM IST
  • Share this:
ನವದೆಹಲಿ: ವಿಚಿತ್ರ ಕಾರಣಕ್ಕಾಗಿ ವ್ಯಕ್ತಿಯೊಬ್ಬ ದಿಲ್ಲಿ-ಭೋಪಾಲ್ ಶತಾಬ್ದಿ ಎಕ್ಸ್​ಪ್ರೆಸ್ ಟ್ರೈನನ್ನು ಎಮರ್ಜೆನ್ಸಿ ಚೈನು ಎಳೆದು ನಿಲ್ಲಿಸಿದ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ತನ್ನ ತಾಯಿ ತಿಂಡಿ ತಿಂದು ಮುಗಿಸಲಿ ಎಂದು ಈ ವ್ಯಕ್ತಿ ರೈಲನ್ನೇ ನಿಲ್ಲಿಸಿದ್ದಾನೆ. ಆಪತ್ಕಾಲದಲ್ಲಿ ಮಾತ್ರ ಬಳಕೆಗೆಂದು ಇರುವ ಎಮರ್ಜೆನ್ಸಿ ಚೈನನ್ನ ದುರುಪಯೋಗ ಮಾಡಿಕೊಂಡ ಕಾರಣಕ್ಕೆ ದಿಲ್ಲಿ ನಿವಾಸಿ ಮನೀಶ್ ಅರೋರಾ ಅವರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿ ಬಳಿಕ ಬಿಡುಗಡೆಗೊಳಿಸಿದ್ದಾರೆ. ಜೂನ್ 30ರಂದು ಈ ಘಟನೆ ನಡೆದಿದೆ.

ಮನೀಶ್ ಅರೋರ ತನ್ನ ತಾಯಿ ಹಾಗೂ ಮತ್ತೊಬ್ಬ ಸಂಬಂಧಿಯೊಂದಿಗೆ ಈ ರೈಲಿನಲ್ಲಿ ಪ್ರಯಾಣ ಮಾಡುತ್ತಿರುತ್ತಾರೆ. ಇವರ ತಾಯಿ ತಿಂಡಿ ತಿನ್ನುತ್ತಿರುವಾಗಲೇ ಇವರು ಇಳಿದುಕೊಳ್ಳುವ ನಿಲ್ದಾಣ ಸಮೀಪಿಸುತ್ತಿರುತ್ತದೆ. ತಾಯಿ ತಿಂಡಿ ಪೂರ್ಣಗೊಳಿಸದೇ ರೈಲಿನಿಂದ ಇಳಿಯಲು ಸಾಧ್ಯವಾಗುವುದಿಲ್ಲ ಎಂದು ಭಾವಿಸಿದ ಈ ವ್ಯಕ್ತಿ, ಎಮರ್ಜೆನ್ಸಿ ಚೈನನ್ನೇ ಎಳೆದು ರೈಲು ನಿಲ್ಲುವಂತೆ ಮಾಡುತ್ತಾನೆ.

ಇದನ್ನೂ ಓದಿ: ಡ್ರಗ್ ಸೇವಿಸಿ ನಿರಂತರವಾಗಿ ಐದು ಗಂಟೆ ಲೈಂಗಿಕ ಪ್ರಕ್ರಿಯೆ ನಡೆಸಿದ ಮಹಿಳೆ ಸಾವು!

ದೆಹಲಿ ನಿಲ್ದಾಣದಲ್ಲಿದ್ಧಾಗಲೇ ಇವರಿದ್ದ ಬೋಗಿಗೆ ತಿಂಡಿ ಕೊಡಲಾಗಿತ್ತು. ಆದರೆ, ಮಥುರಾ ನಿಲ್ದಾಣ ಬರುವವರೆಗೂ ಆತನ ತಾಯಿ ತಿಂಡಿ ತಿಂದು ಮುಗಿಸಿರಲಿಲ್ಲ. ಅದಕ್ಕಾಗಿ ಆ ವ್ಯಕ್ತಿ ಚೈನು ಎಳೆದ. ಕೆಲ ನಿಮಿಷಗಳ ಕಾಲ ಶತಾಬ್ದಿ ಎಕ್ಸ್​ಪ್ರೆಸ್ ಮಾರ್ಗಮಧ್ಯೆಯೇ ನಿಂತುಕೊಂಡಿತು ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.

ರೈಲ್ವೆ ಕಾಯ್ದೆ 141ರ ಅಡಿಯಲ್ಲಿ ಮನೀಶ್ ಅರೋರಾ ಮೇಲೆ ಪ್ರಕರಣ ದಾಖಲಾಗಿದ್ದು, ರೈಲ್ವೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಹಾಜರಾಗಿ ಈತ ದಂಡ ಪಾವತಿಸಬೇಕಾಗಬಹುದು.

ನಿಮ್ಮ ನ್ಯೂಸ್ 18 ಕನ್ನಡವನ್ನು ಶೇರ್​​ಚಾಟ್​ನಲ್ಲೂ ಹಿಂಬಾಲಿಸಿ
First published:July 5, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...