• Home
 • »
 • News
 • »
 • national-international
 • »
 • Delhi Liquor Policy Case: ಅರಬಿಂದೋ ಫಾರ್ಮಾ ನಿರ್ದೇಶಕ ಶರತ್ ರೆಡ್ಡಿ ಸೇರಿ ಇನ್ನೋರ್ವ ಉದ್ಯಮಿ ಬಂಧನ

Delhi Liquor Policy Case: ಅರಬಿಂದೋ ಫಾರ್ಮಾ ನಿರ್ದೇಶಕ ಶರತ್ ರೆಡ್ಡಿ ಸೇರಿ ಇನ್ನೋರ್ವ ಉದ್ಯಮಿ ಬಂಧನ

ಅರಬಿಂದೋ ಫಾರ್ಮಾ ನಿರ್ದೇಶಕ ಶರತ್ ರೆಡ್ಡಿ

ಅರಬಿಂದೋ ಫಾರ್ಮಾ ನಿರ್ದೇಶಕ ಶರತ್ ರೆಡ್ಡಿ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿ ಮತ್ತು ಪೆರ್ನೋಡ್ ರಿಕಾರ್ಡ್‌ನ ಬೆನೊಯ್ ಬಾಬು ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಬುಧವಾರ ತಡರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದೆ.

 • Share this:

  ನವದೆಹಲಿ(ನ. 10): ಇದೀಗ ರದ್ದುಗೊಂಡಿರುವ ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ (Delhi Liquor Policy Case) ಸಂಬಂಧಿಸಿದಂತೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ (Money Laundering Case) ತನಿಖೆಯಲ್ಲಿ ಜಾರಿ ನಿರ್ದೇಶನಾಲಯ (Enforcement Directorate) ಹೈದರಾಬಾದ್‌ನ ಫಾರ್ಮಾ ಕಂಪನಿಯ (Hyderabad-based Pharma company) ಇಬ್ಬರು ಉನ್ನತ ಅಧಿಕಾರಿಗಳನ್ನು ಬಂಧಿಸಿದೆ. ಕಂಪನಿಯ ಇಬ್ಬರು ಕಾರ್ಯನಿರ್ವಾಹಕರನ್ನು ಇಡಿ ಬಂಧಿಸಿದೆ ಎಂದು ಅಧಿಕೃತ ಮೂಲಗಳು ಗುರುವಾರ ತಿಳಿಸಿವೆ.


  ಶರತ್ ರೆಡ್ಡಿ ಮತ್ತು ಬೆನೊಯ್ ಬಾಬು ಬಂಧನ


  ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಅರಬಿಂದೋ ಫಾರ್ಮಾದ ನಿರ್ದೇಶಕ ಶರತ್ ರೆಡ್ಡಿ ಮತ್ತು ಪೆರ್ನೋಡ್ ರಿಕಾರ್ಡ್‌ನ ಬೆನೊಯ್ ಬಾಬು ಅವರನ್ನು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ (ಪಿಎಂಎಲ್‌ಎ) ಸೆಕ್ಷನ್‌ಗಳ ಅಡಿಯಲ್ಲಿ ಬುಧವಾರ ತಡರಾತ್ರಿ ಜಾರಿ ನಿರ್ದೇಶನಾಲಯ ಬಂಧಿಸಿದೆ.


  ಈ ಹಿಂದೆಯೂ ಶರತ್ ರೆಡ್ಡಿ ಮನೆ ಮೇಲೆ ದಾಳಿ ನಡೆಸಿದ್ದ ಇಡಿ


  ಶರತ್ ರೆಡ್ಡಿ ವಿರುದ್ಧ ಲಭಿಸಿರುವ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ಇಡಿ ಮೂಲಗಳು ತಿಳಿಸಿವೆ. ಆಮ್ ಆದ್ಮಿ ಪಕ್ಷಕ್ಕೆ ಸೇರಿದ ದೆಹಲಿಯ ಕೆಲವು ರಾಜಕಾರಣಿಗಳೊಂದಿಗೆ ಶರತ್ ರೆಡ್ಡಿಗೆ ನಿಕಟ ಸಂಪರ್ಕವಿದೆ ಎಂದು ಅವರು ಆರೋಪಿಸಿದ್ದಾರೆ.


  ಇದನ್ನೂ ಓದಿ:  Dakshina Kannada: ಭೂಮಿಯಿಂದ ಚಿಮ್ಮುತ್ತೆ ಬಿಸಿನೀರಿನ ತೀರ್ಥ, ಇದರಿಂದ ಸ್ನಾನ ಮಾಡಿದ್ರೆ ಚರ್ಮರೋಗ ಮಾಯ!


  ಸಂಸ್ಥೆಯ ಅಧಿಕೃತ ವೆಬ್‌ಸೈಟ್ ಪ್ರಕಾರ, ಶರತ್ ರೆಡ್ಡಿ ಅವರು  ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್‌ನ ಪದವೀಧರರಾಗಿದ್ದು ಮತ್ತು ಎರಡನೇ ತಲೆಮಾರಿನ ಉದ್ಯಮಿಯಾಗಿದ್ದಾರೆ. ಶರತ್ ರೆಡ್ಡಿ, ಅರಬಿಂದೋ ಫಾರ್ಮಾನ ನಿರ್ದೇಶಕರಾಗಿದ್ದಲ್ಲದೇ, ಇತರೆ ಹತ್ತಕ್ಕೂ ಹೆಚ್ಚು ಸಂಸ್ಥೆಗಳೊಂದಿಗೆ ಸಂಪರ್ಕ ಹೊಂದಿದ್ದಾರೆ ಎನ್ನಲಾಗಿದೆ. ತನಿಖಾ ಸಂಸ್ಥೆ ಈ ಹಿಂದೆ ವ್ಯವಸ್ಥಾಪಕ ನಿರ್ದೇಶಕ ಶರತ್ ರೆಡ್ಡಿ ಅವರ ಮನೆ ಮೇಲೆ ದಾಳಿ ನಡೆಸಿ ಶೋಧ ನಡೆಸಿತ್ತು. ಬಳಿಕ ಅವರನ್ನು ಎರಡು ಬಾರಿ ವಿಚಾರಣೆ ನಡೆಸಿತ್ತು.


  ನ್ಯಾಯಾಲಯದ ಕಸ್ಟಡಿಗೆ ಇಬ್ಬರು ಆರೋಪಿಗಳು


  ಬಿನೋಯ್ ಬಾಬು ದೆಹಲಿಯ ಅಬಕಾರಿ ನೀತಿಯಲ್ಲಿ ಇತರ ಆರೋಪಿಗಳೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಮೂಲಗಳು ತಿಳಿಸಿವೆ. ತನಿಖೆಯ ವೇಳೆ ಬಾಬು ಸರಿಯಾಗಿ ಸಹಕರಿಸದೇ ಇದ್ದದ್ದಕ್ಕಾಗಿ ಅವರನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಅರೆಸ್ಟ್‌ ಆಗಿರುವ ಇಬ್ಬರೂ ಆರೋಪಿಗಳನ್ನು ದೆಹಲಿಯ ನ್ಯಾಯಾಲಯ ಕಸ್ಟಡಿಗೆ ಹಾಜರುಪಡಿಸಲಾಗುವುದು.


  ಇದುವರೆಗೂ ಮೂವರು ಅರೆಸ್ಟ್


  ಜಾರಿ ನಿರ್ದೇಶನಾಲಯವು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಹಲವು ದಾಳಿಗಳನ್ನು ನಡೆಸಿದ್ದು, ಪ್ರಕರಣದಲ್ಲಿ ಮೂವರನ್ನು ಬಂಧಿಸಿದೆ. ಸೆಪ್ಟೆಂಬರ್‌ನಲ್ಲಿ, ಮದ್ಯ ತಯಾರಿಕಾ ಕಂಪನಿ ಇಂಡೋಸ್ಪಿರಿಟ್‌ನ ವ್ಯವಸ್ಥಾಪಕ ನಿರ್ದೇಶಕ ಸಮೀರ್ ಮಹಂದ್ರು ಅವರನ್ನು ಬಂಧಿಸಿತ್ತು.


  ಮನೀಶ್ ಸಿಸೋಡಿಯಾ ಅವರ ಆಪ್ತ ದಿನೇಶ್ ಅರೋರಾ ಮೇಲೂ ದಾಳಿ


  ಈ ತಿಂಗಳ ಆರಂಭದಲ್ಲಿ ದೆಹಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಆಪ್ತ ದಿನೇಶ್ ಅರೋರಾ ಮೇಲೂ ಅಧಿಕಾರಿಗಳು ದಾಳಿ ನಡೆಸಿದ್ದರು. ಮನಿ ಲಾಂಡರಿಂಗ್‌ ಪ್ರಕರಣ ದಾಖಲಾದ ನಂತರ ಉಪಮುಖ್ಯಮಂತ್ರಿ ಮತ್ತು ದೆಹಲಿ ಸರ್ಕಾರದ ಕೆಲವು ಅಧಿಕಾರಿಗಳ ಕಚೇರಿಗಳ ಮೇಲೆ ಸಿಬಿಐ ದಾಳಿ ನಡೆಸಿತ್ತು.


  ಇದನ್ನೂ ಓದಿ:  IT BT Shock: ಒಂದೇ ಮಳೆಗೆ ಸಿಲಿಕಾನ್ ಸಿಟಿ ಬರ್ಬಾದ್! 255 ಕೋಟಿ ನಷ್ಟ, ಐಟಿ ಕಂಪೆನಿಗಳಿಂದ ಬೆಂಗಳೂರು ತೊರೆಯುವ ಎಚ್ಚರಿಕೆ


  ಈಗ ರದ್ದಾದ ಅಬಕಾರಿ ನೀತಿಯಲ್ಲಿನ ಅಕ್ರಮಗಳ ಬಗ್ಗೆ ಅಕ್ರಮ ಹಣ ವರ್ಗಾವಣೆ ತನಿಖೆಗೆ ಸಂಬಂಧಿಸಿದಂತೆ ಇಡಿ ಶನಿವಾರ ಮನೀಶ್ ಸಿಸೋಡಿಯಾ ಅವರ ಆಪ್ತ ಸಹಾಯಕನನ್ನು ಪ್ರಶ್ನಿಸಿದೆ. ತನಿಖಾ ಸಂಸ್ಥೆಗಳು ತನ್ನ ವಿರುದ್ಧ "ಸುಳ್ಳು" ಪ್ರಕರಣವನ್ನು ಹೂಡಿದೆ ಮತ್ತು ಇಡಿ ತನ್ನ ಪಿಎ ಮನೆ ಮೇಲೆ ದಾಳಿ ನಡೆಸಿ ಬಂಧಿಸಿದೆ ಎಂದು ಸಿಸೋಡಿಯಾ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.


  11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದ ಎಲ್‌ಜಿ


  ದೆಹಲಿಯ ಅಬಕಾರಿ ನೀತಿ 2021-22ರ ಅನುಷ್ಠಾನದಲ್ಲಿನ ಅಕ್ರಮಗಳ ಕುರಿತು ದೆಹಲಿ ಲೆಫ್ಟಿನೆಂಟ್ ಗವರ್ನರ್ ಸಿಬಿಐ ತನಿಖೆಗೆ ಶಿಫಾರಸು ಮಾಡಿದ್ದರು. ಇದಾದ ನಂತರ ತನಿಖಾ ಸಂಸ್ಥೆಗಳು ಅಬಕಾರಿ ಯೋಜನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ಆರಂಭಿಸಿದವು. ಲೆಫ್ಟಿನೆಂಟ್ ಗವರ್ನರ್ ಕೂಡ 11 ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿದ್ದರು.

  Published by:Precilla Olivia Dias
  First published: