Delhi Kidney Racket: 3 ಈಡಿಯಟ್ಸ್ ಸಿನಿಮಾದಿಂದ ಪ್ರೇರಣೆ ಪಡೆದು ಕಿಡ್ನಿ ಕಸಿ ಕಳ್ಳಸಾಗಾಣಿಕೆ!

ಈ ಕಳ್ಳಸಾಗಾಣಿಕಾ ಜಾಲವು ಗುರುದ್ವಾರ, ಆಸ್ಪತ್ರೆಗಳ ಹೊರಗೆ ಮನೆಯಿಲ್ಲದ ಮತ್ತು ಬಡ ಯುವಕರನ್ನು ಗುರಿಯಾಗಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೆಹಲಿ: ಅಕ್ರಮ ಕಿಡ್ನಿ ಕಸಿ ಕಳ್ಳಸಾಗಾಣಿಕಾ ಜಾಲವೊಂದು ಬೆಳಕಿಗೆ ಬಂದಿದ್ದು ಇಡೀ ದೇಶವೇ ಬೆಚ್ಚಿ ಬೀಳುವಂತಹ ಮಾಹಿತಿಗಳು ಹೊರಬೀಳುತ್ತಿದೆ. ಅಲ್ಲದೇ ಇನ್ನೂ ಆಘಾತಕಾರಿ ಸುದ್ದಿಯೆಂದರೆ ಈ ಕಿಡ್ನಿ ಕಸಿ ಕಳ್ಳ ಸಾಗಾಣಿಕಾ ಜಾಲವು (Delhi Kidney Racket) 3 ಈಡಿಯಟ್ಸ್ ಸಿನಿಮಾದಿಂದ (3 Idiots) ಪ್ರೇರಣೆ ಹೊಂದಿದ್ದರು ಎಂದು ಪೊಲೀಸರು (Delhi Police) ತಿಳಿಸಿದ್ದಾರೆ. ಈ ಕಳ್ಳಸಾಗಾಣಿಕಾ ಜಾಲವು ಗುರುದ್ವಾರ, ಆಸ್ಪತ್ರೆಗಳ ಹೊರಗೆ ಮನೆಯಿಲ್ಲದ ಮತ್ತು ಬಡ ಯುವಕರನ್ನು ಗುರಿಯಾಗಿಸಿಕೊಂಡಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಈ ಕಿಡ್ನಿ ಕಸಿ ಕಳ್ಳ ಸಾಗಾಣಿಕಾ ಜಾಲದಲ್ಲಿ ಇಬ್ಬರು ವೈದ್ಯರೂ ಸಹ ಆರೋಪಿಗಳಾಗಿದ್ದಾರೆ ಎಂಬ ವಿಷಯ ಪೊಲೀಸರಲ್ಲೂ ದಿಗ್ಭ್ರಮೆ ಹುಟ್ಟಿಸಿದೆ. 

    ಈ ಕಿಡ್ನಿ ಕಸಿ ಕಳ್ಳ ಸಾಗಾಣಿಕಾ ಜಾಲದಲ್ಲಿ ಪೊಲೀಸರು ಬಂಧಿಸಿದ ಓರ್ವ ವೈದ್ಯರಂತೂ ತಾನು 3 ಈಡಿಯಟ್ಸ್ ಸಿನಿಮಾದಿಂದ ಪ್ರೇರಣೆ ಪಡೆದಿರುವುದಾಗಿ ತಿಳಿಸಿದ್ದಾರೆ. ತಾನು ಜನ್ಮಜಾತ ವೈದ್ಯ, ಇತರ ವೈದ್ಯರು ಸಹಾಯಕರಾಗಿ ಕೆಲಸ ಮಾಡಲೆಮದು ಇದ್ದವರು ಎಂದು ಆತ ನಂಬಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.

    11 ಜನರ ಮೇಲೆ ಆರೋಪ ಪಟ್ಟಿ
    ದಕ್ಷಿಣ ದೆಹಲಿಯಲ್ಲಿ ಕಿಡ್ನಿ ಕಸಿ ದಂಧೆ ನಡೆಸುತ್ತಿದ್ದ ಆರೋಪದ ಮೇಲೆ ಇಬ್ಬರು ವೈದ್ಯರು ಸೇರಿದಂತೆ 11 ಜನರ ವಿರುದ್ಧ ದೆಹಲಿ ಪೊಲೀಸರು ಆರೋಪ ಪಟ್ಟಿ ಸಲ್ಲಿಸಿದ್ದಾರೆ. ದೆಹಲಿ ಮತ್ತು ಹರಿಯಾಣದಲ್ಲಿ ಹಲವಾರು ದಾಳಿಗಳ ನಂತರ ಆರೋಪಿಗಳನ್ನು  ಬಂಧಿಸಲಾಗಿದೆ. 

    6,000 ಪುಟಗಳ ಚಾರ್ಜ್ ಶೀಟ್
    ಈ ಅಕ್ರಮ ಕಿಡ್ನಿ ಕಸಿ ಕಳ್ಳಸಾಗಾಣಿಕಾ ಜಾಲದ ವಿರುದ್ಧ ಸಲ್ಲಿಸಲಾದ ಚಾರ್ಜ್‌ಶೀಟ್ ಸುಮಾರು 6,000 ಪುಟಗಳನ್ನು ಹೊಂದಿದೆ ಎಂದು ಹೌಜ್ ಖಾಸ್ ಪೊಲೀಸ್ ಠಾಣೆಯ ಮೂಲಗಳು ತಿಳಿಸಿವೆ.

    ಇದನ್ನೂ ಓದಿ: Bomb Blast: ಬಿಜೆಪಿ ರ‍್ಯಾಲಿಯಲ್ಲಿ ಬಾಂಬ್ ಸ್ಫೋಟ; ಪಶ್ಚಿಮ ಬಂಗಾಳದಲ್ಲಿ ಏನಾಗ್ತಿದೆ?

    ಆರೋಪಿಗಳು ಕಳೆದ ಆರು ತಿಂಗಳಲ್ಲಿ 14-16 ಕಿಡ್ನಿ ಕಸಿ ಮಾಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಉಲ್ಲೇಖಿಸಲಾಗಿದೆ. ಇನ್ಸ್​ಪೆಕ್ಟರ್​ಗಳು ಭರತ್ ಲಾಲ್ ಮತ್ತು ರೋಹಿತ್ ನೇತೃತ್ವದ ಪೊಲೀಸ್ ತಂಡವು ಬಂಧಿಸುವ ಮೊದಲು ಈ ಪ್ರಕರಣ ಬೇಧಿಸಲು ವಾರಗಟ್ಟಲೆ ಪ್ರಕರಣದಲ್ಲಿ ಕೆಲಸ ಮಾಡಿತ್ತು.

    ಇದನ್ನೂ ಓದಿ: Kohinoor Diamond: ಕೊಹಿನೂರ್ ವಜ್ರ ವಾಪಸ್ ಮಾಡಿ; ಭಾರತೀಯರ ಆಗ್ರಹ

    ಈ ಕಿಡ್ನಿ ಕಳ್ಳ ಸಾಗಾಣಿಕಾ ಜಾಲದಲ್ಲಿ ಸಿಕ್ಕಿಬಿದ್ದ ಇಬ್ಬರು ವೈದ್ಯರೂ ದೆಹಲಿಯ ಪ್ರಖ್ಯಾತ ಆಸ್ಪತ್ರೆಗಳಲ್ಲಿ ಕೆಲಸ ನಿರ್ವಹಿಸಿದವರೇ ಆಗಿದ್ದಾರೆ. ಆದರೆ ಇನ್ನೂ ಹೆಚ್ಚಿನ ಹಣದ ಆಸೆಯಿಂದ  ಕಿಡ್ನಿ ಕಳ್ಳ ಸಾಗಾಣಿಕಾ ಜಾಲಕ್ಕೆ ಸೇರ್ಪಡೆಗೊಂಡಿದ್ದರು ಎಂದು ತಿಳಿದುಬಂದಿದೆ. ಒಂದು ಕಿಡ್ನಿ ಕಸಿ ಚಿಕಿತ್ಸೆ ಮಾಡಿದರೆ 1.5 ರಿಂದ 2.5 ಲಕ್ಷ ಹಣವನ್ನು  ಕಿಡ್ನಿ ಕಳ್ಳ ಸಾಗಾಣಿಕಾ ಜಾಲ ಈ ವೈದ್ಯರಿಗೆ ಪಾವತಿ ಮಾಡುತ್ತಿತ್ತಂತೆ.

    ಬೆಕ್ಕಿಗೆ ಬಣ್ಣ ಹಚ್ಚಿ ಹುಲಿಮರಿ ಎಂದು ಮಾರಾಟ!
    ಬೆಕ್ಕನ್ನು ಹುಲಿಮರಿ ಎಂದು ನಂಬಿಸಿ ಮೋಸ ಮಾಡಲು ಯತ್ನಿಸಿದ್ದ ಅಪರೂಪದ ಆರೋಪದ ಕೃತ್ಯವೊಂದು ನಡೆದಿದೆ. ಬೆಕ್ಕಿಗೆ ಹುಲಿಮರಿಯ (Tiger Cub) ಬಣ್ಣ ಬಳಿದು ಹಣ ಸುಲಿಗೆ ಮಾಡಲು ಯತ್ನಿಸಿದ ಆರೋಪದ ಮೇಲೆ ತಮಿಳುನಾಡು ಮೂಲದ ಯುವಕನೊಬ್ಬನನ್ನು ಕೇರಳದ ಇಡುಕ್ಕಿಯಲ್ಲಿ ಬಂಧಿಸಲಾಗಿದೆ. ತಮಿಳುನಾಡಿನ (Tamil Nadu) ಗಡಿ ಗ್ರಾಮವಾದ ತಿರುವಣ್ಣಾಮಲ ಅರಣಿ ನಿವಾಸಿ ಪಾರ್ಥಿಬನ್ (24) ಎಂಬ ವ್ಯಕ್ತಿಯೇ ಬೆಕ್ಕಿಗೆ (Cat) ಹುಲಿ ಮರಿಯ ಬಣ್ಣ ಬಳಿದು ಮಾರಾಟ ಮಾಡಲು ಯತ್ನಿಸಿದ ಪೊಲೀಸರು ಬಂಧಿಸಿದ ಆರೋಪಿ. ಈ ಮೂಲಕ ಬೆಕ್ಕಿಗೆ ಬಣ್ಣ ಬಳಿದು ಹುಲಿಮರಿ ಎಂದು ಜನರನ್ನು ನಂಬಿಸಿಯೂ ಹಣ ಮಾಡಬಹುದು ಎಂದು ಖತರ್ನಾಕ್ ಯೋಜನೆ ರೂಪಿಸಿದ ವ್ಯಕ್ತಿ ಬಂಧನವಾಗಿದೆ.

    ಮೂರು ತಿಂಗಳ ವಯಸ್ಸಿನ ಮೂರು ಹುಲಿಮರಿಗಳು ಮಾರಾಟಕ್ಕಿವೆ ಎಂದು ಪಾರ್ಥಿಬನ್ ವಾಟ್ಸಾಪ್‌ನಲ್ಲಿ ಸ್ಟೇಟಸ್ ಹಾಕಿದ್ದ. ಪ್ರತಿ ಮರಿಗೆ 25 ಲಕ್ಷ ರೂಪಾಯಿ ನೀಡುವಂತೆ ಬೇಡಿಕೆ ಇಟ್ಟಿದ್ದು, ಖರೀದಿದಾರರ ಮನೆಗೆ ತಲುಪಿಸುವುದಾಗಿ ತಿಳಿಸಿದ್ದ. ಸ್ಟೀಲ್ ಬೌಲ್ ನಲ್ಲಿ ಹುಲಿ ಮರಿಗಳಿಗೆ ಆಹಾರ ನೀಡುತ್ತಿರುವ ಚಿತ್ರವನ್ನೂ ಹಾಕಿದ್ದ ಎಂದು ವರದಿಯಾಗಿದೆ.
    Published by:ಗುರುಗಣೇಶ ಡಬ್ಗುಳಿ
    First published: