ಸಿಎನ್​ಎನ್​-ನ್ಯೂಸ್​ 18 ವ್ಯವಸ್ಥಾಪಕ ಸಂಪಾದಕ ರಾಧಾಕೃಷ್ಣನ್ ನಾಯರ್​ ನಿಧನಕ್ಕೆ ದೆಹಲಿ ಪತ್ರಕರ್ತರಿಂದ ಸಂತಾಪ

ಹಿರಿಯ ಪತ್ರಕರ್ತರಾಗಿದ್ದ ನಾಯರ್ ಕಳೆದ ಮಂಗಳವಾರ​ ನಿಧನ ಹೊಂದಿದ್ದರು.  ಅವರರಿಗೆ ಇಂದು ದೆಹಲಿ ಪತ್ರಕರ್ತರು ಶ್ರದ್ಧಾಂಜಲಿ ಸಲ್ಲಿಸಿದರು.

ರಾಧಾಕೃಷ್ಣನ್​

ರಾಧಾಕೃಷ್ಣನ್​

  • Share this:
ನವದೆಹಲಿ (ನ.27): ಮಂಗಳವಾರ ಬೆಳಗ್ಗೆ ನಿಧನರಾದ ಹಿರಿಯ ಪ್ರಕರ್ತ, ಸಿಎನ್​ಎನ್​ ನ್ಯೂಸ್​ 18 ವ್ಯವಸ್ಥಾಪಕ ಸಂಪಾದಕ ರಾಧಾಕೃಷ್ಣನ್​ ನಾಯರ್​ (54) ಅವರಿಗೆ ದೆಹಲಿ ಪ್ರೆಸ್​ ಕ್ಲಬ್​ ಶನಿವಾರ ಶ್ರದ್ಧಾಂಜಲಿ ಸಲ್ಲಿಸಿತು. ಸೃಜನಶೀಲ ಪತ್ರಿಕೋದ್ಯಮಕ್ಕೆ ಒತ್ತು ನೀಡಿದ ರಾಧಾಕೃಷ್ಣನ್​, ಪತ್ರಿಕಾರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದರು. ಯುವ ಪೀಳಿಗೆಯ ಪತ್ರಕರ್ತರಿಗೆ ಮಾದರಿಯಾಗಿದ್ದ ರಾಧಾಕೃಷ್ಣನ್​ ಇಬ್ಬರು ಮಕ್ಕಳು ಹಾಗೂ ಪತ್ನಿಯನ್ನು ಅಗಲಿದ್ದಾರೆ.

1964ರಲ್ಲಿ ರಾಧಾಕೃಷ್ಣನ್​ ಜನಿಸಿದ ಇವರು ಮೂಲತಃ ಕೇರಳದವರು. ಟಿವಿ ಮಾಧ್ಯಮಕ್ಕೆ ಕಾಲಿಡುವ ಮೊದಲು ಯುನೈಟೆಡ್​ ನ್ಯೂಸ್​ ಆಫ್​ ಇಂಡಿಯಾದಲ್ಲಿ (ಯುಎನ್​ಐ) ಕೆಲ ವರ್ಷಗಳಕಾಲ ಸೇವೆ ಸಲ್ಲಿಸಿದ್ದರು. ಟಿವಿ 18 ನಿರ್ಮಾಣದ 'ಇಂಡಿಯಾ ಬ್ಯುಸಿನೆಸ್​ ರಿಪೋರ್ಟ್​​' ಕಾರ್ಯಕ್ರಮದ ನಿರ್ವಾಹಕರಾಗಿದ್ದರು.  ಸಿಎನ್​ಎನ್-ನ್ಯೂಸ್​ 18 ಹುಟ್ಟುಹಾಕಿದವರಲ್ಲಿ ಇವರು ಕೂಡ ಒಬ್ಬರು. 

ಇದನ್ನೂ ಓದಿ: ಕಣ್ಣಂಚಲಿ ನೀರಿಳಿಸಿತು ನಗರವಾಸಿಗಳಿಗೆ ರೈತರು ಬರೆದ ಪತ್ರ

ರಾಧಾಕೃಷ್ಣನ್​ ಅಗಲಿಕೆಗೆ ಸಿಎನ್​ಎನ್​-ನ್ಯೂಸ್​ 18 ಸಂಸ್ಥೆಯ ಸಿಬ್ಬಂದಿ ವರ್ಗ ಸಂತಾಪ ಸೂಚಿಸಿತ್ತು. ಅಲ್ಲದೆ, ಕೇಂದ್ರ ವಿತ್ತ ಸಚಿವ ಅರುಣ್​ ಜೇಟ್ಲಿ, ಶಶಿ ತರೂರ್​, ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​, ಪ್ರಕಾಶ್​ ಜಾವ್ಡೇಕರ್​ ಸೇರಿದಂತೆ ಅನೇಕರು ಕಂಬನಿ ಮಿಡಿದ್ದರು.

First published: