ತಾಯಿಯ ಜಾತಿ ಪ್ರಮಾಣ ಪತ್ರ ಆಧರಿಸಿ ಮಕ್ಕಳು Caste Certificate ಪಡೆಯಲು ಅನುಮತಿ

ಕಳೆದ ಎಂಟು ವರ್ಷಗಳಿಂದ ತನ್ನ ಮಗುವಿಗೆ ಎಸ್‍ಸಿ ಜಾತಿ ಪ್ರಮಾಣಪತ್ರವನ್ನು ಪಡೆಯಲು ಒಂಟಿ ತಾಯಿ ಗೀತಾದೇವಿ ಎಂಬುವವರು ಹೆಣಗಾಡುತ್ತಿದ್ದರು

ಮೊದಲ ಜಾತಿ ಪ್ರಮಾಣ ಪತ್ರ ವಿತರಿಸಿದ ದೆಹಲಿ ಸರಕಾರ

ಮೊದಲ ಜಾತಿ ಪ್ರಮಾಣ ಪತ್ರ ವಿತರಿಸಿದ ದೆಹಲಿ ಸರಕಾರ

  • Share this:
ಈ ಹಿಂದೆ, ಪರಿಶಿಷ್ಟ ಜಾತಿ (Scheduled Caste) ಮತ್ತು ಪರಿಶಿಷ್ಟ ಪಂಗಡ ಜಾತಿ (Scheduled Tribes) ಪ್ರಮಾಣಪತ್ರಗಳನ್ನು ತಂದೆಯ ಜಾತಿ ಪ್ರಮಾಣಪತ್ರ (Caste Certificates) ಅಥವಾ ತಂದೆಯ ಪರವಾದ ದಾಖಲೆಗಳನ್ನು ಆಧರಿಸಿ ಮಾತ್ರ ನೀಡಲಾಗುತ್ತಿತ್ತು. ಈ ಕಾರಣದಿಂದಾಗಿ, ಹಲವಾರು ಒಬ್ಬಂಟಿ ತಾಯಂದಿರು(Mothers) ತಮ್ಮ ಮಕ್ಕಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗದೇ ಕೈ ಚೆಲ್ಲಿ ಕುಳಿತುಕೊಳ್ಳುತ್ತಿದ್ದರು. ಇಲ್ಲವಾದರೆ ಆ ಮಗುವಿನ ತಂದೆಯ ಸಂಬಂಧಿಕರನ್ನು ಗೋಗರೆದು ಕರೆದುಕೊಂಡು ಪ್ರಮಾಣ ಪತ್ರಗಳನ್ನು ಮಾಡಿಸಿಕೊಳ್ಳುತ್ತಿದ್ದರು.

ಒಬ್ಬಂಟಿ ತಾಯಿಯಂದಿರ ಪಡಿಪಾಟಲ
ಇದೀಗ ಒಬ್ಬಂಟಿ ತಾಯಿ (ಗಂಡನಿಲ್ಲದ ಪತ್ನಿ)ಗೆ ಹೊರೆಯಾಗಬಾರದೆಂಬ ಕಾರಣಕ್ಕೆ ದೆಹಲಿ ಸರ್ಕಾರವು ಒಬ್ಬಂಟಿ ತಾಯಿಯಂದಿರ ಅನುಕೂಲಕ್ಕಾಗಿ ಹಿಂದಿನ ವ್ಯವಸ್ಥೆಯಲ್ಲಿ ಬದಲಾವಣೆ ತಂದಿದ್ದು, ಕೊಂಚ ಸಮಾಧಾನ ನೀಡಿದೆ. ಹೌದು ದೆಹಲಿ ಸರ್ಕಾರವು ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿದ್ದ ಹಳೆಯ ಪದ್ಧತಿಯನ್ನು ಒಬ್ಬಂಟಿ ತಾಯಿಯಂದಿರ ಪಡಿಪಾಟಲನ್ನು ಕಂಡು ಬದಲಾವಣೆ ಮಾಡಿದೆ. ದೆಹಲಿ ಸರ್ಕಾರವು ಒಂಟಿ ತಾಯಂದಿರಿಗೆ ಜಾತಿ ಪ್ರಮಾಣಪತ್ರಗಳು ಮತ್ತು ಇತರ ಸಂಬಂಧಿತ ದಾಖಲೆಗಳನ್ನು ನೀಡಲು ಪ್ರಾರಂಭಿಸಿದ್ದು, ಅದುವೇ ತಾಯಿಯ ಜಾತಿ ಪ್ರಮಾಣ ಪತ್ರದ ಮೇಲೆ.

ಇದನ್ನೂ ಓದಿ: COVID Crisis: ದೆಹಲಿಯಲ್ಲಿ ‌ಪ್ರಮುಖ ಆಸ್ಪತ್ರೆಗಳೇ ಕೊರೋನಾ ಹಾಟ್​​ಸ್ಪಾಟ್​​ಗಳು!

ಮುಂದಿನ ದಿನಗಳಲ್ಲಿ ಒಬ್ಬಂಟಿ ತಾಯಿ ಮಕ್ಕಳು ತಾಯಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರಗಳನ್ನು ಪಡೆದುಕೊಂಡು ತಮ್ಮ ಪ್ರಮಾಣಪತ್ರಗಳನ್ನು ಮಾಡಿಸಿಕೊಳ್ಳಬಹುದಾಗಿದೆ.

ಮೊದಲ ಜಾತಿ ಪ್ರಮಾಣಪತ್ರ ಮಗುವಿಗೆ ಹಸ್ತಾಂತರ
ದೆಹಲಿಯ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ತಾಯಿಯ ಜಾತಿ ಪ್ರಮಾಣ ಪತ್ರದ ಆಧಾರದ ಮೇಲೆ ನೀಡಲಾದ ಮೊದಲ ಜಾತಿ ಪ್ರಮಾಣಪತ್ರವನ್ನು ಒಂಟಿ ತಾಯಿಯ ಮಗುವಿಗೆ ಹಸ್ತಾಂತರಿಸಿದರು. ದೆಹಲಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಒಂಟಿ ತಾಯಿಯ ಮಗು ತನ್ನ ತಾಯಿಯ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಜಾತಿ ಪ್ರಮಾಣಪತ್ರವನ್ನು ಪಡೆದಿರುವುದು ಇದೇ ಮೊದಲು.

ದೆಹಲಿ ಸರ್ಕಾರದ ಪ್ರಕಾರ, ಹಿಂದೆ, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರಗಳನ್ನು ತಂದೆಯ ಜಾತಿ ಪ್ರಮಾಣಪತ್ರ ಅಥವಾ ತಂದೆಯ ಕಡೆಯ ಪ್ರಮಾಣಪತ್ರಗಳನ್ನು ಆಧರಿಸಿ ಮಾತ್ರ ನೀಡಲಾಗುತ್ತಿತ್ತು. ಈ ಕಾರ್ಯವಿಧಾನದಿಂದಾಗಿ, ಅನೇಕ ಒಂಟಿ ತಾಯಂದಿರು ತಮ್ಮ ಮಕ್ಕಳಿಗೆ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಪ್ರಮಾಣಪತ್ರಗಳನ್ನು ಪಡೆಯಲು ಸಾಧ್ಯವಾಗಲಿಲ್ಲ.

ಸಮಸ್ಯೆಗೆ ಪರಿಹಾರ
ಕಳೆದ ಎಂಟು ವರ್ಷಗಳಿಂದ ತನ್ನ ಮಗುವಿಗೆ ಎಸ್‍ಸಿ ಜಾತಿ ಪ್ರಮಾಣಪತ್ರವನ್ನು ಪಡೆಯಲು ಒಂಟಿ ತಾಯಿ ಗೀತಾದೇವಿ ಎಂಬುವವರು ಹೆಣಗಾಡುತ್ತಿದ್ದರು. ತಂದೆಯ ಜಾತಿ ಪ್ರಮಾಣ ಪತ್ರ ಇಲ್ಲ ಎಂಬ ಕಾರಣಕ್ಕೆ ತಾಯಿಯು ಸಲ್ಲಿಸುತ್ತಿದ್ದ ಎಲ್ಲಾ ಅರ್ಜಿಗಳು ತಿರಸ್ಕೃತಗೊಳ್ಳುತ್ತಿದ್ದವು.ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕ ವಿಶೇಷ್ ರವಿ ಅವರು ದೆಹಲಿಯ ಎಸ್‍ಸಿ/ಎಸ್‍ಟಿ ಕಲ್ಯಾಣಕ್ಕಾಗಿ ಕಂದಾಯ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಮತ್ತು ಇಲಾಖೆಯೊಂದಿಗೆ ಜಾತಿ ಪ್ರಮಾಣ ಪತ್ರಕ್ಕಾಗಿ ಒಮಟಿ ತಾಯಿಯಂದಿರು ಪಡುತ್ತಿರುವ ತೊಂದರೆಗಳನ್ನು ಚರ್ಚಿಸಿದರು. ಕಂದಾಯ ಇಲಾಖೆ ಅಧಿಕಾರಿಗಳಿಗೆ ಸರಣಿ ಪತ್ರ ಬರೆದು ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿದರು.

ಇದನ್ನೂ ಓದಿ: ಅನಾರೋಗ್ಯ ಮುಚ್ಚಿಟ್ಟು ಮದುವೆಯಾಗುವುದು ಅಪರಾಧ: High Court ಮಹತ್ವದ ತೀರ್ಪು

ದೆಹಲಿ ವಿಧಾನಸಭೆ ಪ್ರಸ್ತಾಪ
2020ರಲ್ಲಿ ಒಂಟಿ ಎಸ್‍ಸಿ/ಎಸ್‍ಟಿ ತಾಯಂದಿರ ನೋವನ್ನು ಎತ್ತಿ ಹಿಡಿದ ಅವರು ದೆಹಲಿ ವಿಧಾನಸಭೆಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿದ್ದರು. ಒಂಟಿ ತಾಯಿಯ ಜಾತಿ ಪ್ರಮಾಣಪತ್ರದ ಆಧಾರದ ಮೇಲೆ ಎಸ್‍ಸಿ/ಎಸ್‍ಟಿ ಜಾತಿ ಪ್ರಮಾಣಪತ್ರ ನೀಡುವ ವಿಧಾನವನ್ನು ತಿದ್ದುಪಡಿ ಮಾಡುವ ಸುತ್ತೋಲೆಯನ್ನು ಜುಲೈ, 2020 ಜಿಎನ್‍ಸಿಟಿ ದೆಹಲಿಯ ಕಂದಾಯ ಸಚಿವರ ಪೂರ್ವಾನುಮತಿಯೊಂದಿಗೆ ಹೊರಡಿಸಲಾಗಿದೆ. ದೆಹಲಿ ಸರ್ಕಾರದ ಈ ಉತ್ತಮ ನಡೆಯೊಂದಿಗೆ ಕೊನೆಗೂ ಒಂಟಿ ತಾಯಿಯಂದಿರ ಪರದಾಟ ಕೊಂಚ ತಗ್ಗಿದಂತಾಗಿದೆ.
Published by:vanithasanjevani vanithasanjevani
First published: