ಗಾಂಜಾ ಸೇವನೆಯಲ್ಲಿ ದೆಹಲಿಗೆ ಪ್ರಪಂಚದಲ್ಲೇ 3ನೇ ಸ್ಥಾನ; ಇಲ್ಲಿದೆ ರಾಜಧಾನಿಯ ಮತ್ತೊಂದು ರೂಪ

ಭಾರತದಲ್ಲಿ ಗಾಂಜಾ ಪರ ವಿರೋಧದ ನಿಲುವುಗಳು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಕೆಲ ಅಭಿವೃದ್ಧಿಶೀಲ ದೇಶಗಳು ವೈದ್ಯಕೀಯ ಗಾಂಜಾ ಮಾರಾಟ, ಬಳಕೆಗೆ ಅನುಮತಿ ನೀಡಿದೆ. ಆದರೆ ಅನುಮತಿಯಿಲ್ಲದಿದ್ದರೂ ಅನಧಿಕೃತವಾಗಿ ದೇಶದ ರಾಜಧಾನಿ ದೆಹಲಿಯಲ್ಲಿ ಅತಿಹೆಚ್ಚು ಜನ ಗಾಂಜಾ ಸೇವನೆ ಮಾಡುತ್ತಿದ್ದಾರೆ.

news18
Updated:September 10, 2019, 1:44 PM IST
ಗಾಂಜಾ ಸೇವನೆಯಲ್ಲಿ ದೆಹಲಿಗೆ ಪ್ರಪಂಚದಲ್ಲೇ 3ನೇ ಸ್ಥಾನ; ಇಲ್ಲಿದೆ ರಾಜಧಾನಿಯ ಮತ್ತೊಂದು ರೂಪ
ಡ್ರಗ್ಸ್​​
  • News18
  • Last Updated: September 10, 2019, 1:44 PM IST
  • Share this:
ನವದೆಹಲಿ(ಸೆ.10): ನಿಷೇಧಿತ ಗಾಂಜಾ ಬಳಕೆ ಮಾಡುವ ನಗರಗಳ ಪೈಕಿ ಭಾರತದ ರಾಜಧಾನಿ ದೆಹಲಿ ಪ್ರಪಂಚದಲ್ಲೇ ಮೂರನೇ ಅತೀ ದೊಡ್ಡ ನಗರ ಎಂದು ವರದಿಯೊಂದು ಹೇಳುತ್ತಿದೆ. ವರ್ಷಾಂತ್ಯಕ್ಕೆ ಕೇವಲ ದೆಹಲಿಯಲ್ಲೇ 38.68ಲಕ್ಷ ಮೆಟ್ರಿಕ್ ಟನ್​​ನಷ್ಟು ಕ್ಯಾನಬಿಸ್ ಸೇವನೆ ಮಾಡಲಿದ್ದಾರೆ ಎಂದು ಇತ್ತೀಚೆಗಿನ ಅಧ್ಯಯನವೊಂದು ಬಹಿರಂಗಪಡಿಸಿದೆ.

ಎಬಿಸಿಡಿ ಎಂಬ ಕಂಪನಿಯೂ "ಕ್ಯಾನಬಿಸ್​ ಬೆಲೆ ಸೂಚ್ಯಂಕ 2018" ಬಗ್ಗೆ ಅಧ್ಯಯನ ನಡೆಸಿತ್ತು. ಈ ಅಧ್ಯಯನ ಯಾವ ದೇಶ ಗಾಂಜಾ ಬಳಕೆ ಮಾಡುವದರಲ್ಲಿ ಮುಂದಿದೆ ಎಂಬುದಾಗಿತ್ತು. ಹೀಗಾಗಿಯೇ ಪ್ರಪಂಚದ ಸುಮಾರು 120 ನಗರಳ ಬಗ್ಗೆ ಅಧ್ಯಯನ ಮಾಡಲಾಗಿತ್ತು. ಇದೀಗ ಗಾಂಜಾ ಸೇವನೆ​ ಮಾಡುವ ಪ್ರಮುಖ ನಗರಗಳ ಪೈಕಿ ದೆಹಲಿ ಪ್ರಪಂಚದ ಮೂರನೇ ದೊಡ್ಡ ನಗರ ಎಂದು ತಿಳಿದು ಬಂದಿದೆ.

ಅಧ್ಯಯನದ ಪಟ್ಟಿಯಲ್ಲಿ ಪಾಕಿಸ್ತಾನ, ಅಫ್ಘಾನಿಸ್ತಾನ, ಮಯಾನ್ಮಾರ್, ಬಹಾಮಾಸ್, ಬೆಲೈಝ್, ಬೊಲಿವಿಯ, ಕೊಲಂಬಿಯಾ, ಡಾಮಿನಿಕನ್ ರಿಪಬ್ಲಿಕ್, ಇಕ್ವೆಡಾರ್ ಗ್ವಾಟೆಮಾಲ, ಎಲ್ ಸಾಲ್ವಡಾರ್, ಹೈಟಿ, ಹಾಂಡುರಸ್, ಜಮೈಕ, ಕ್ವಾಸ್ಟಾರಿಕಾ, ಲಾವೋಸ್, ಮೆಕ್ಸಿಕೋ, ನಿಕರಾಗುವಾ, ಪನಾಮ, ಪೆರು, ವೆನೆಜುವೆಲಾ ದೇಶಗಳ ಪ್ರಮುಖ ನಗರಗಳಿವೆ.

ಭಾರತದ ರಾಜಧಾನಿ ದೆಹಲಿ ಗಾಂಜಾ ಮಾಫಿಯಾದ ಕಬಂಧ ಬಾಹುಗಳಿಗೆ ಸಿಲುಕಿದೆ ಎಂದು ಈ ಅಧ್ಯಯನ ಹೇಳುತ್ತಿದೆ. ಇತ್ತೀಚೆಗೆ ನೂರಾರು ಪ್ರಕರಣಗಳು ಬೆಳಕಿಗೆ ಬಂದಿದ್ದು, ಕೋಟ್ಯಂತರ ರೂ. ಮೌಲ್ಯದ ಮಾದಕ ವಸ್ತುಗಳನ್ನು ದೆಹಲಿಯಲ್ಲಿ ವಶಪಡಿಸಿಕೊಳ್ಳಲಾಗಿತ್ತು.

ಪ್ರತಿಷ್ಠಿತ ಶಾಲಾಕಾಲೇಜುಗಳು, ಐಟಿ-ಬಿಟಿ ಕಂಪೆನಿಗಳು ಮತ್ತು ಭಾರೀ ವಹಿವಾಟು ನಡೆಸುವ ಸಂಸ್ಥೆಗಳ ಆವರಣದಲ್ಲಿ ಮಾದಕ ವಸ್ತುಗಳು ಎಗ್ಗಿಲ್ಲದೆ ಸಿಗುತ್ತಿವೆ ಎಂದು ಹೇಳಲಾಗುತ್ತಿದೆ. ಗಾಂಜಾದಿಂದ ಹಿಡಿದು ಹೆರಾಯಿನ್, ಚರಸ್, ಅಫೀಮುವರೆಗೂ ಎಲ್ಲಾ ರೀತಿಯ ಮಾದಕ ದ್ರವ್ಯ ವಿದ್ಯಾರ್ಥಿಗಳಿಗೆ ಸುಲಭವಾಗಿ ದಕ್ಕುತ್ತಿದ್ದು, ಯುವ ಸಮುದಾಯ ಹಾದಿ ತಪ್ಪಲು ಕಾರಣವಾಗುತ್ತಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಸಿಂಡಿಕೇಟ್ ಬ್ಯಾಂಕ್​​​​ ದರೋಡೆ; ಸಿನಿಮೀಯ ರೀತಿಯಲ್ಲಿ ಲಕ್ಷಾಂತರ ಹಣ ದೋಚಿ ಖತರ್ನಾಕ್​​ ಕಳ್ಳರು ಪರಾರಿ

ಕಳೆದ ಮೂರು ವರ್ಷಗಳ ಅವಧಿಯಲ್ಲಿ ದೆಹಲಿಯಲ್ಲಿ ಡ್ರಗ್ಸ್ ದಂಧೆಗೆ ಸಂಬಂಧಪಟ್ಟಂತೆ ಸಾವಿರಾರು ಪ್ರಕರಣಗಳು ದಾಖಲಾಗಿದ್ದು, 200ಕ್ಕೂ ಹೆಚ್ಚು ಮಂದಿ ವಿದೇಶಿಯರನ್ನು ಬಂಧಿಸಲಾಗಿತ್ತು. ಕೋಟ್ಯಂತರ ರೂ. ಮೌಲ್ಯದ ಡ್ರಗ್ಸ್​ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳಲ್ಲಿ ಬಹುತೇಕ ಪ್ರಕರಣಗಳು ದೆಹಲಿ ನಗರದ ಸುತ್ತಮುತ್ತ ನಡೆದಿರುವುದು ಆತಂಕದ ಸಂಗತಿಯಾಗಿದೆ.ಒಂದೆಡೆ ತಂಬಾಕು ಉತ್ಪನ್ನಗಳ ಸಂಸ್ಥೆಗಳ ಒತ್ತಡದಿಂದ ಸರ್ಕಾರಗಳು ಗಾಂಜಾ ಮೇಲೆ ನಿಷೇಧ ಹೇರಿದ್ದಾರೆ ಎಂದು ಗ್ರೇಟ್​ ಲೀಗಲೈಸೇಷನ್​ ಮೂವ್​ಮೆಂಟ್​ (ಜಿಎಲ್​ಎಮ್​) ತರದ ಗಾಂಜಾ ಪರ ವೇದಿಕೆಗಳು ಹೋರಾಡುತ್ತಿವೆ. ಇನ್ನೊಂದೆಡೆ ಅನಧಿಕೃತ ಗಾಂಜಾ ಮಾರಾಟ ದೇಶದ ರಾಜಧಾನಿಯಲ್ಲೇ ಎಗ್ಗಿಲ್ಲದೇ ನಡೆಯುತ್ತಿದೆ. ಭಾರತದಲ್ಲಿ ಪರ ವಿರೋಧದ ನಿಲುವುಗಳು ಕೇಳಿ ಬರುತ್ತಿರುವ ಈ ಹೊತ್ತಿನಲ್ಲಿ ಕೆಲ ಅಭಿವೃದ್ಧಿಶೀಲ ದೇಶಗಳು ವೈದ್ಯಕೀಯ ಗಾಂಜಾ ಮಾರಾಟ, ಬಳಕೆಗೆ ಅನುಮತಿ ನೀಡಿದೆ.

ಕ್ಷಣಕ್ಷಣದ ಬ್ರೇಕಿಂಗ್ ನ್ಯೂಸ್ ಅಲರ್ಟ್ಗಾಗಿ ನಿಮ್ಮ ನ್ಯೂಸ್18 ಕನ್ನಡವನ್ನು ಫೇಸ್ಬುಕ್ ಮೆಸೆಂಜರ್ನಲ್ಲಿ ಸಬ್ಸ್ಕ್ರೈಬ್ ಮಾಡಿ
-------------
First published:September 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ