HOME » NEWS » National-international » DELHI HIGH COURT TO PRONOUNCE ORDER ON CENTRE PLEA CHALLENGING STAY ON EXECUTION OF CONVICTS IN NIRBHAYA CASE GNR

ನಿರ್ಭಯಾ ಕೇಸ್​​: ಗಲ್ಲುಶಿಕ್ಷೆ ತಡೆ ಪ್ರಶ್ನಿಸಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರ; ಇಂದು ತೀರ್ಪು​ ಸಾಧ್ಯತೆ

ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾದ ಅಪಾರಾಧಿಯೋರ್ವ ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣ ನೀಡಿದ್ದಾನೆ. ಈ ಮೂಲಕ ಮರಣದಂಡನೆ ವಿಳಂಬ ಮಾಡಲು ಯತ್ನಿಸುತ್ತಿದ್ದಾನೆ. ಹೀಗಾಗಿ ಇನ್ನೂ ಮರಣದಂಡನೆ ತಡವಾದರೆ, ಆರೋಪಿ ಮೇಲೆ ಅಮಾನವೀಯ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತುಷಾರ್​​ ವಾದ ಮಂಡಿಸಿದ್ದರು.

news18-kannada
Updated:February 5, 2020, 7:24 AM IST
ನಿರ್ಭಯಾ ಕೇಸ್​​: ಗಲ್ಲುಶಿಕ್ಷೆ ತಡೆ ಪ್ರಶ್ನಿಸಿ ದೆಹಲಿ ಹೈಕೋರ್ಟ್​ ಮೆಟ್ಟಿಲೇರಿದ್ದ ಕೇಂದ್ರ ಸರ್ಕಾರ; ಇಂದು ತೀರ್ಪು​ ಸಾಧ್ಯತೆ
ರೇಖಾಚಿತ್ರ- ಮೀರ್ ಸುಹೈಲ್
  • Share this:
ನವದೆಹಲಿ(ಫೆ.05): ನಿರ್ಭಯಾ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಳಂಬ ಪ್ರಶ್ನಿಸಿ ಕೇಂದ್ರ ಸರ್ಕಾರ ಸಲ್ಲಿಸಿರುವ ಅರ್ಜಿ ಕುರಿತಾದ ತೀರ್ಪು ಬುಧವಾರ(ಇಂದು) ದೆಹಲಿ ಹೈಕೋರ್ಟ್​ ಪ್ರಕಟಿಸಲಿದೆ. ಎರಡು ದಿನಗಳ ಹಿಂದೆಯಷ್ಟೇ ಪ್ರಕರಣದಲ್ಲಿ ಆರೋಪಿಗಳಿಗೆ ನೀಡಲಾದ ಮರಣದಂಡನೆ ಯಾವುದೇ ಕಾರಣಕ್ಕೂ ತಡವಾಗಬಾರದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ದೆಹಲಿ ಹೈಕೋರ್ಟ್​​ಗೆ ತಿಳಿಸಿದ್ದರು. ಪ್ರಕರಣ ಸಂಬಂಧ ನಾಲ್ವರು ಅಪರಾಧಿಗಳಿಗೆ ವಿಧಿಸಿದ್ದ ಮರಣದಂಡನೆ ಆದೇಶಕ್ಕೆ ತಡೆ ನೀಡಿರುವ ಕುರಿತಂತೆ ದೆಹಲಿ ಹೈಕೋರ್ಟ್​​ನಲ್ಲಿ ವಿಶೇಷ ಕಲಾಪ ನಡೆಯಿತು. ಈ ವಿಶೇಷ ಕಲಾಪದಲ್ಲಿ ತಮ್ಮ ವಾದ ಮಂಡಿಸುವ ವೇಳೆ ತುಷಾರ್​​ ಮೆಹ್ತಾ ಹೀಗೆ ದೆಹಲಿ ಹೈಕೋರ್ಟ್​ಗೆ ಮನವಿ ಮಾಡಿದರು.

ನಿರ್ಭಯಾ ಅತ್ಯಾಚಾರ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೊಳಗಾದ ಅಪಾರಾಧಿಯೋರ್ವ ಕ್ಷಮಾದಾನದ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣ ನೀಡಿದ್ದಾನೆ. ಈ ಮೂಲಕ ಮರಣದಂಡನೆ ವಿಳಂಬ ಮಾಡಲು ಯತ್ನಿಸುತ್ತಿದ್ದಾನೆ. ಹೀಗಾಗಿ ಇನ್ನೂ ಮರಣದಂಡನೆ ತಡವಾದರೆ, ಆರೋಪಿ ಮೇಲೆ ಅಮಾನವೀಯ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತುಷಾರ್​​ ವಾದ ಮಂಡಿಸಿದ್ದರು.

ಇನ್ನು ನಿರ್ಭಯಾ ಹಂತಕರಿಗೆ ಫೆಬ್ರವರಿ 01ರಂದು ವಿಧಿಸಬೇಕಾಗಿದ್ದ ಗಲ್ಲು ಶಿಕ್ಷೆಗೆ ಶುಕ್ರವಾರದಂದು ತಡೆ ನೀಡಿದ್ದ ಪಟಿಯಾಲ ಹೌಸ್ ನ್ಯಾಯಾಲಯ ಆದೇಶವನ್ನು ಪ್ರಶ್ನಿಸಿ ಕೇಂದ್ರ ಗೃಹ ಸಚಿವಾಲಯ ದೆಹಲಿ ಹೈಕೋರ್ಟ್​​ ಮೆಟ್ಟಿಲೇರಿತ್ತು. ನಂತರ ಕೇಂದ್ರ ಸಲ್ಲಿಸಿದ್ದ ಮನವಿ ಅರ್ಜಿಯ ವಿಚಾರಣೆ ಮುಕ್ತಾಯಗೊಂಡಿದ್ದು ನ್ಯಾಯಾಧೀಶರು ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು. ಈ ಅರ್ಜಿಯ ತೀರ್ಪು ಇಂದು ಹೊರಬೀಳಲಿದೆ.

ಇದನ್ನೂ ಓದಿ: ನಿರ್ಭಯಾ ಕೇಸ್​​​: ಮರಣದಂಡನೆ ವಿಳಂಬ ಮಾಡದಂತೆ ಕೇಂದ್ರ ಮನವಿ; ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ಈ ಹಿಂದೆಯೇ ಅಪರಾಧಿ ವಿನಯ್ ಶರ್ಮಾ ಎಂಬಾತ ತಾನು ರಾಷ್ಟ್ರಪತಿಗಳಿಗೆ ಇನ್ನೂ ಕ್ಷಮಾದಾನದ ಅರ್ಜಿ ಸಲ್ಲಿಸದ ಕಾರಣ ಮರಣದಂಡನೆ ತೀರ್ಪಿಗೆ ತಡೆ ನೀಡಬೇಕೆಂದು ಮನವಿ ಸಲ್ಲಿಸಿದ್ದ. ಈ ಮನವಿ ಪುರಸ್ಕರಿಸಿದ್ದ ನ್ಯಾಯಲಯವೂ ಮುಂದಿನ ಆದೇಶ ಬರುವವರೆಗೂ ಮರಣದಂಡನೆ ಶಿಕ್ಷೆಗೆ ತಡೆ ನೀಡಿತ್ತು.

2012ರ ಡಿ. 16ರಂದು 23 ವರ್ಷದ ಅರೆ ವೈದ್ಯಕೀಯ ವಿದ್ಯಾರ್ಥಿನಿಯ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಬಸ್ಸಿನೊಳಗೆ ಈ ಪೈಶಾಚಿಕ ಕೃತ್ಯ ಎಸಗಿ ಆಕೆಯನ್ನು ತೀರಾ ಗಂಭೀರವಾಗಿ ಗಾಯಗೊಳಿಸಿದ ಬಳಿಕ ಬಸ್ಸಿನಿಂದ ಹೊರ ಎಸೆದುಹೋಗಿದ್ದರು. ಬಹು ಅಂಗಾಂಗ ವೈಫಲ್ಯಗೊಂಡು ಈ ವಿದ್ಯಾರ್ಥಿನಿಯ ಕೆಲ ದಿನಗಳ ಬಳಿಕ ಅಸು ನೀಗಿದ್ದರು. ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದ ಎಲ್ಲಾ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಲ್ಲಿ ಒಬ್ಬಾತ ಬಾಲಾಪರಾಧಿಯಾಗಿದ್ದ. ರಾಮ್ ಸಿಂಗ್ ಎಂಬ ಮತ್ತೊಬ್ಬ ಆರೋಪಿ ತಿಹಾರ್ ಜೈಲಿನ ಕೋಣೆಯಲ್ಲೇ ನೇಣಿಗೆ ಶರಣಾಗಿದ್ದ. ಉಳಿದ ನಾಲ್ವರಿಗೆ ಮರಣದಂಡನೆ ಶಿಕ್ಷೆ ವಿಧಿಸಲಾಗಿದೆ.
Youtube Video
First published: February 5, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories