ಜಿಯೋ ಜಾಬ್ಸ್​ ಬಗ್ಗೆ ಸುಳ್ಳು ಜಾಹೀರಾತು: ಆ್ಯಡ್​ ಹಾಕದಂತೆ ಓಎಲ್​ಎಕ್ಸ್​, ಕ್ವಿಕ್ಕರ್​ಗೆ ಹೈಕೋರ್ಟ್​ ನಿರ್ಬಂಧ

ಮುಂದಿನ ವಿಚಾರಣೆಯವರೆಗೂ ಕ್ವಿಕರ್​ನ ಗ್ರಾಹಕರು, ಏಜೆಂಟ್​ಗಳು, ಸರ್ವಂಟ್​ಗಳು ಯಾರೂ ವೆಬ್​ ಪೋರ್ಟಲ್​ನಲ್ಲಿ ಜಿಯೋ ಅಥವಾ ರಿಲಯನ್ಸ್​ ಹೆಸರು, ಲೋಗೋಗಳನ್ನು ಬಳಸುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ.

news18-kannada
Updated:May 29, 2020, 10:01 PM IST
ಜಿಯೋ ಜಾಬ್ಸ್​ ಬಗ್ಗೆ ಸುಳ್ಳು ಜಾಹೀರಾತು: ಆ್ಯಡ್​ ಹಾಕದಂತೆ ಓಎಲ್​ಎಕ್ಸ್​, ಕ್ವಿಕ್ಕರ್​ಗೆ ಹೈಕೋರ್ಟ್​ ನಿರ್ಬಂಧ
ಓಎಲ್​ಎಕ್ಸ್​ ಮತ್ತು ಕ್ವಿಕರ್
  • Share this:
ನವದೆಹಲಿ (ಮೇ 29): ರಿಲಯನ್ಸ್​ ಟ್ರೆಂಡ್ಸ್​ ಮತ್ತು ಜಿಯೋದಲ್ಲಿ ಉದ್ಯೋಗಾವಕಾಶಗಳಿವೆ ಎಂದು ನಕಲಿ ಜಾಹೀರಾತು ಹಾಕಿದ್ದ ಕಾರಣಕ್ಕೆ ಓಎಲ್​ಎಕ್ಸ್​ ಮತ್ತು ಕ್ವಿಕರ್ ಮೇಲೆ ದೆಹಲಿ ಹೈಕೋರ್ಟ್​ ನಿರ್ಬಂಧ ವಿಧಿಸಿದೆ. ರಿಲಯನ್ಸ್​ ಸಂಸ್ಥೆಯ ಬಗ್ಗೆ ಸುಳ್ಳು ಪ್ರಚಾರ ಮಾಡಿ ಜಾಹೀರಾತು ಹಾಕುವ ಮೂಲಕ ಕಂಪನಿಯ ಘನತೆಗೆ ಚ್ಯುತಿ ತಂದಿರುವುದರಿಂದ ಓಎಲ್​ಎಕ್ಸ್​ ಮತ್ತು ಕ್ವಿಕರ್​ಗೆ ರಿಲಯನ್ಸ್​ ಮತ್ತು ಜಿಯೋ ಕುರಿತ ಜಾಹೀರಾತು ಹಾಕದಂತೆ ನಿರ್ಬಂಧ ಹೇರಲಾಗಿದೆ.

ಈ ಬಗ್ಗೆ ಹೈಕೋರ್ಟ್​ ಗುರುವಾರ ಆದೇಶ ಹೊರಡಿಸಿದೆ. ರಿಲಯನ್ಸ್​ ಜಿಯೋ ಇನ್ಫೋಕಾಂ ಲಿಮಿಟೆಡ್ ಮತ್ತು ರಿಲಯನ್ಸ್​ ಇಂಡಸ್ಟ್ರೀಸ್​ ಲಿಮಿಟೆಡ್ ಯಾವುದೇ ಜಾಹೀರಾತುಗಳನ್ನು ನೀಡಿಲ್ಲ ಎಂದು ಹೇಳಿದೆ. ಈ ರೀತಿ ಸುಳ್ಳು ಜಾಹೀರಾತು ನೀಡಿ, ಆ ಕಂಪನಿಯ ಹೆಸರಿಗೆ ಮಸಿ ಬಳಿಯಲಾಗಿದೆ ಎಂದು ಆರೋಪಿಸಲಾಗಿದೆ. ರಿಲಯನ್ಸ್​ ಮತ್ತು ಜಿಯೋದ ಅನೇಕ ಗ್ರಾಹಕರು ಮತ್ತು ಉದ್ಯೋಗಾಕಾಂಕ್ಷಿಗಳಿಗೆ ಈ ಜಾಹೀರಾತಿನ ಮೂಲಕ ತಪ್ಪು ಸಂದೇಶ ನೀಡಲಾಗಿದೆ. ಇದರಿಂದ ಆ ಸಂಸ್ಥೆಯ ಪ್ರತಿಷ್ಟೆಗೆ ಧಕ್ಕೆಯಾಗಿದೆ ಎಂದು ಹೈಕೋರ್ಟ್​ ಹೇಳಿದೆ.

ಓಎಲ್​ಎಕ್ಸ್​ ಮತ್ತು ಕ್ವಿಕರ್​ನ ವೆಬ್​ ಪೋರ್ಟಲ್​ನಲ್ಲಿ ಕ್ಲಾಸಿಫೈಡ್​ ಜಾಹೀರಾತುಗಳನ್ನು ಪ್ರಕಟಿಸಲಾಗುತ್ತದೆ. ಈ ಪೋರ್ಟಲ್​ಗಳಲ್ಲಿ ಯಾವ ಗ್ರಾಹಕರು ಬೇಕಾದರೂ ಜಾಹೀರಾತು ಪ್ರಕಟಿಸಬಹುದು. ಈ ಕಾಲಂನಲ್ಲಿ ಜಿಯೋ ಜಾಬ್ಸ್​, ರಿಲಯನ್ಸ್​ ಟ್ರೆಂಡ್ಸ್​ ಜಾಬ್ಸ್​ ಎಂಬ ಶೀರ್ಷಿಕೆಯಡಿ ನಕಲಿ ಜಾಹೀರಾತು ಪ್ರಕಟಿಸಲಾಗಿದೆ. ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗಾವಕಾಶವಿದೆ ಎಂದು ಜಾಹೀರಾತು ನೀಡುವ ಮೂಲಕ ಆಸಕ್ತ ಉದ್ಯೋಗಾಕಾಂಕ್ಷಿಗಳಿಂದ ಹಣ ದೋಚಲು ಕ್ವಿಕರ್ ಹಾಗೂ ಓಎಲ್​ಎಕ್ಸ್​ ಮುಂದಾಗಿರುವ ಸಾಧ್ಯತೆಯಿದೆ.

ಇದನ್ನೂ ಓದಿ: ಜೂನ್ 1ರಿಂದ ಮಳೆಗಾಲ ಶುರು; ಇನ್ನು 3 ದಿನದಲ್ಲಿ ಕೇರಳಕ್ಕೆ ಮುಂಗಾರು ಪ್ರವೇಶ

ಈ ಬಗ್ಗೆ ಓಎಲ್​ಎಕ್ಸ್​ ಕೂಡ ಹೈಕೋರ್ಟ್​ಗೆ ದಾಖಲೆಗಳನ್ನು ಸಲ್ಲಿಸಿದೆ. ಓಎಲ್​ಎಕ್ಸ್​ ವೆಬ್​ ಪೋರ್ಟಲ್​ನಲ್ಲಿದ್ದ ಕೆಲವು ಯೂಆರ್​ಎಲ್​ಗಳನ್ನು ಡಿಲೀಟ್ ಮಾಡಲಾಗಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದ ಒಂದು ಯೂಆರ್​ಎಲ್​ ಡಿಲೀಟ್ ಮಾಡಲು ಸಾಧ್ಯವಾಗಿಲ್ಲ. ಅದನ್ನು ಕೂಡ ಡಿಲೀಟ್ ಮಾಡಲು ಪ್ರಯತ್ನಿಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದೆ. ಜಾಹೀರಾತು ಹಾಕುವವರ ತಪ್ಪಿನಿಂದಾಗಿ ಈ ಅಚಾತುರ್ಯ ನಡೆದಿದೆ ಎಂದು ಕೂಡ ಓಎಲ್​ಎಕ್ಸ್​ ಕ್ಷಮಾಪಣೆ ಕೋರಿದೆ.

ಈ ಪ್ರಕರಣದ ಬಗ್ಗೆ ದೆಹಲಿ ಹೈಕೋರ್ಟ್ ಸೂಚನೆ ನೀಡಿದ್ದು, ಮುಂದಿನ ವಿಚಾರಣೆಯವರೆಗೂ ಕ್ವಿಕರ್​ನ ಗ್ರಾಹಕರು, ಏಜೆಂಟ್​ಗಳು, ಸರ್ವಂಟ್​ಗಳು ಯಾರೂ ವೆಬ್​ ಪೋರ್ಟಲ್​ನಲ್ಲಿ ಜಿಯೋ ಅಥವಾ ರಿಲಯನ್ಸ್​ ಹೆಸರು, ಲೋಗೋಗಳನ್ನು ಬಳಸುವಂತಿಲ್ಲ ಎಂದು ನಿರ್ಬಂಧ ಹೇರಿದೆ. ಹಾಗೇ, ಕ್ವಿಕರ್ ಮತ್ತು ಓಎಲ್​ಎಕ್ಸ್​ ಇಂಡಿಯಾಗೂ ಹೈಕೋರ್ಟ್​ ಸಮನ್ಸ್​ ಜಾರಿಗೊಳಿಸಿದೆ. ಹಾಗೇ, ಸೆಪ್ಟೆಂಬರ್​ 21ಕ್ಕೆ ವಿಚಾರಣೆಯನ್ನು ಮುಂದೂಡಿದೆ.

ಅಲ್ಲದೆ, ಓಎಲ್​ಎಕ್ಸ್​ ಮತ್ತು ಕ್ವಿಕರ್​ ಸಂಸ್ಥೆಗಳು ತಮ್ಮ ನಿರ್ಲಕ್ಷ್ಯದಿಂದ ನಡೆದ ಈ ಘಟನೆಯ ಬಗ್ಗೆ ಲಿಖಿತವಾಗಿ ತಪ್ಪೊಪ್ಪಿಗೆ ಬರೆದುಕೊಡಬೇಕು. ಹಾಗೇ, ಮುಂದೆ ಈ ರೀತಿ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಇನ್ನುಮುಂದೆ ಯಾವುದೇ ಕಂಪನಿಗಳ ಹೆಸರಿನಲ್ಲಿ ಈ ರೀತಿಯ ಸುಳ್ಳು ಜಾಹೀರಾತುಗಳನ್ನು ಪ್ರಕಟಿಸಿ, ಜನರನ್ನು ತಪ್ಪುದಾರಿಗೆ ಎಳೆಯದಂತೆ ಎಚ್ಚರಿಕೆ ವಹಿಸಬೇಕು ಎಂದು ಸೂಚನೆ ನೀಡಿದೆ.
First published: May 29, 2020, 10:01 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading