ಫಾಸ್ಟ್ಟ್ಯಾಗ್ (Fastag) ಇಲ್ಲದ ವಾಹನಗಳಿಗೆ ದುಪ್ಪಟ್ಟು ಟೋಲ್ ತೆರಿಗೆ (toll Tax) ಪಾವತಿಸುವುದನ್ನು ಕಡ್ಡಾಯಗೊಳಿಸುವ ನಿಯಮವನ್ನು ಪ್ರಶ್ನಿಸಿ ಮನವಿ ಸಲ್ಲಿಸಲಾಗಿದ್ದು ಇದೀಗ ದೆಹಲಿ ಹೈಕೋರ್ಟ್ (Delhi High court) ಶುಕ್ರವಾರ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (NHAI) ಮತ್ತು ಕೇಂದ್ರದ ಪ್ರತಿಕ್ರಿಯೆಯನ್ನು ಕೋರಿದೆ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋನಿಯಂ ಪ್ರಸಾದ್ ಅವರ ಪೀಠವು ಎನ್ಎಚ್ಎಐ (NHAI) ಮತ್ತು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ (ಎಂಒಆರ್ಟಿ ಮತ್ತು ಎಚ್) ಗೆ ನೋಟಿಸ್ ಜಾರಿ ಮಾಡಿದ್ದು, ನಗದು ರೂಪದಲ್ಲಿ ಪಾವತಿಸಿದರೆ ದುಪ್ಪಟ್ಟು ದರದಲ್ಲಿ ಟೋಲ್ ಸಂಗ್ರಹಿಸಲು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಅಧಿಕಾರ ನೀಡುತ್ತಿದ್ದು ನಿಯಮವು ತಾರತಮ್ಯ, ಅನಿಯಂತ್ರಿತ ಮತ್ತು ಸಾರ್ವಜನಿಕ ಹಿತಾಸಕ್ತಿ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ವಾದಿಸಲಾಗಿದೆ.
ಅಧಿಕಾರಿಗಳಿಗೆ ತಮ್ಮ ಉತ್ತರಗಳನ್ನು ಸಲ್ಲಿಸಲು ನಾಲ್ಕು ವಾರಗಳ ಕಾಲಾವಕಾಶವನ್ನು ಹೈಕೋರ್ಟ್ ನೀಡಿದೆ ಮತ್ತು ಏಪ್ರಿಲ್ 18 ರಂದು ಹೆಚ್ಚಿನ ವಿಚಾರಣೆ ನಡೆಯಲಿದೆ
ನಿಬಂಧನೆ ರದ್ದುಗೊಳಿಸಲು ಮನವಿ
ವಕೀಲ ಪ್ರವೀಣ್ ಅಗರವಾಲ್ ಪ್ರತಿನಿಧಿಸಿದ ಅರ್ಜಿದಾರ ರವೀಂದರ್ ತ್ಯಾಗಿ, ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆಯ ನಿರ್ಣಯ) ತಿದ್ದುಪಡಿ ನಿಯಮಗಳು, MoRT & H ಪತ್ರಗಳು ಮತ್ತು NHAI ಸುತ್ತೋಲೆಯಿರುವ 2020 ರ ನಿಬಂಧನೆಯನ್ನು ರದ್ದುಗೊಳಿಸುವಂತೆ ಕೋರಿದ್ದು, ತಮ್ಮ ವಾಹನಗಳಲ್ಲಿ ಫಾಸ್ಟ್ಟ್ಯಾಗ್ ಇಲ್ಲದೆ ಪ್ರಯಾಣಿಸುವವರು ಟೋಲ್ ತೆರಿಗೆಯನ್ನು ದುಪ್ಪಟ್ಟು ಪಾವತಿಸಲು ಬದ್ಧರಾಗಿರುತ್ತಾರೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಶುಲ್ಕ (ದರಗಳು ಮತ್ತು ಸಂಗ್ರಹಣೆ) ತಿದ್ದುಪಡಿ ನಿಯಮಗಳು, 2020 ಮತ್ತು ಜುಲೈ 19, 2019 ಮತ್ತು ಫೆಬ್ರವರಿ 16, 2021, ಮತ್ತು ಮಾರ್ಚ್ 3, 2021 ರ NHAI ಸುತ್ತೋಲೆ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯದ ಪತ್ರಗಳ ನಿಯಮ 6 ರ ಉಪ-ನಿಯಮ (3) ರ ಎರಡನೇ ನಿಬಂಧನೆಯನ್ನು ಅಗರವಾಲ್ ಪ್ರಶ್ನಿಸಿದ್ದಾರೆ.
ಫ್ಯಾಸ್ಟ್ಟ್ಯಾಗ್ ಹೇಗೆ ಕೆಲಸ ಮಾಡುತ್ತದೆ?
FASTag ಎಂಬುದು ವಾಹನವು ಚಲಿಸುತ್ತಿರುವಾಗ ನೇರವಾಗಿ ಟೋಲ್ ಪಾವತಿಗಳನ್ನು ಮಾಡಲು ರೇಡಿಯೋ ಫ್ರೀಕ್ವೆನ್ಸಿ ಐಡೆಂಟಿಫಿಕೇಶನ್ (RFID) ತಂತ್ರಜ್ಞಾನವನ್ನು ಬಳಸಿಕೊಳ್ಳುವ ಸಾಧನವಾಗಿದೆ. ಫಾಸ್ಟ್ಟ್ಯಾಗ್ (RFID ಟ್ಯಾಗ್) ಅನ್ನು ವಾಹನದ ವಿಂಡ್ಸ್ಕ್ರೀನ್ನಲ್ಲಿ ಅಂಟಿಸಲಾಗುತ್ತದೆ ಮತ್ತು ಗ್ರಾಹಕರು ಟ್ಯಾಗ್ನೊಂದಿಗೆ ಲಿಂಕ್ ಮಾಡಲಾದ ಖಾತೆಯಿಂದ ನೇರವಾಗಿ ಟೋಲ್ ಪಾವತಿಸುತ್ತಾರೆ.
ಈ ನಿಯಮಗಳು ಮತ್ತು ಸುತ್ತೋಲೆಯು ಎಲ್ಲಾ ಟೋಲ್ ಲೇನ್ಗಳನ್ನು 100% ಫಾಸ್ಟ್ಟ್ಯಾಗ್ ಲೇನ್ಗಳಾಗಿ ಪರಿವರ್ತಿಸುತ್ತದೆ, ಇದರ ಪರಿಣಾಮವಾಗಿ ಕಾರ್ಯನಿರ್ವಹಿಸುವ ಫಾಸ್ಟ್ಟ್ಯಾಗ್ ಹೊಂದಿರದ ಪ್ರಯಾಣಿಕರು ಟೋಲ್ ಮೊತ್ತವನ್ನು ದುಪ್ಪಟ್ಟು ಪಾವತಿಸಲು ಕಾರಣವಾಗುತ್ತದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.
ದುಪ್ಪಟ್ಟು ಟೋಲ್ ಪಾವತಿಸಿರುವ ಅರ್ಜಿದಾರರು
ಅರ್ಜಿದಾರರು, ವಕೀಲರು, ಟೋಲ್ನ ದುಪ್ಪಟ್ಟು ಹಣವನ್ನು ಪಾವತಿಸುವ ಕಾರಣದಿಂದ ತನ್ನ ಕಾರಿನಲ್ಲಿ ಫಾಸ್ಟ್ಟ್ಯಾಗ್ ಅಳವಡಿಸುವಂತಾಯಿತು ಎಂದು ತಿಳಿಸಿದ್ದಾರೆ.
ಫಾಸ್ಟ್ಟ್ಯಾಗ್ ಅಳವಡಿಸುವ ಮುನ್ನ ದುಪ್ಪಟ್ಟು ದರದಲ್ಲಿ ಟೋಲ್ ಟ್ಯಾಕ್ಸ್ ಪಾವತಿಸಿದ್ದಾಗಿ ಅವರು ತಿಳಿಸಿದ್ದಾರೆ. ದೆಹಲಿಯಿಂದ ಹರಿಯಾಣದ ಫರಿದಾಬಾದ್ಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಲ್ಲಿ ಪ್ರಯಾಣಿಕರು ಇದೇ ಸಮಸ್ಯೆಯನ್ನು ಎದುರಿಸಿದ್ದರು ಎಂದು ತಿಳಿಸಿದ್ದಾರೆ.
ಸಂವಿಧಾನದ ಕಾನೂನುಗಳ ಉಲ್ಲಂಘನೆ
ಅರ್ಜಿದಾರರು ಎನ್ಎಚ್ಎಐ ಮತ್ತು ಸಚಿವಾಲಯಕ್ಕೆ ಪ್ರಾತಿನಿಧ್ಯವನ್ನು ಸಲ್ಲಿಸಿದ್ದಾರೆ ಆದರೆ ಇಲ್ಲಿಂದ ಬಂದ ಪ್ರತಿಕ್ರಿಯೆಯಿಂದ ತೃಪ್ತರಾಗಿರಲಿಲ್ಲ, ಹಾಗಾಗಿ ನಂತರ ಅವರು ಉಚ್ಚ ನ್ಯಾಯಾಲಯವನ್ನು ಸಂಪರ್ಕಿಸಿದರು.
ಇದನ್ನೂ ಓದಿ: FASTag: ಕಾರ್ ಕ್ಲೀನ್ ಮಾಡೋ ನೆಪದಲ್ಲಿ ಫಾಸ್ಟ್ಯಾಗ್ನಿಂದ ಹಣ ಎಗರಿಸಿದ ಬಾಲಕ! ವಾಹನ ಮಾಲೀಕರೇ ಹುಷಾರ್
ಡಬಲ್ ಟೋಲ್ ತೆರಿಗೆ ಸಂಗ್ರಹಿಸುವ ಕ್ರಮವನ್ನು ನಿಲ್ಲಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನವನ್ನು ಕೋರಿದ ಅವರು, ಇದು ಸಂವಿಧಾನದ 14 (ಕಾನೂನಿನ ಮುಂದೆ ಸಮಾನತೆ) ಮತ್ತು 19 (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ) ಉಲ್ಲಂಘನೆಯಾಗಿದೆ ಎಂದು ಹೇಳಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ