5ಜಿ (5G) ನೆಟ್ವರ್ಕ್ (Network) ವಿರುದ್ಧ ಅರ್ಜಿ ಸಲ್ಲಿಸಿ ಸುದ್ದಿಯಾಗಿದ್ದ ಬಾಲಿವುಡ್ ನಟಿ (Bollywood Actress) ಜೂಹಿ ಚಾವ್ಲಾ (Juhi Chawla) ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಕಳೆದ ವರ್ಷ ಜೂಹಿ ಚಾವ್ಲಾ 5ಜಿ ವಿರುದ್ಧ ಅರ್ಜಿ ಸಲ್ಲಿಸಿ ಸುದ್ದಿಯಾಗಿದ್ದರು. ಬಳಿಕ ವಿಚಾರಣೆ ನಡೆಸಿದ್ದ ನ್ಯಾಯಪೀಠ ಬಾಲಿವುಡ್ ನಟಿಗೆ ದಂಡವನ್ನೂ ವಿಧಿಸಿತ್ತು. ಇದೀಗ ಅದೇ 5ನೇ ವಿರುದ್ಧದ ಅರ್ಜಿ ವಿಚಾರಕ್ಕೆ ಜೂಹಿ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹತ್ವದ ಬೆಳವಣಿಗೆ ನಡೆಯಿತು. ಈ ಬಗ್ಗೆ ದಾಖಲಾದ ಅರ್ಜಿ ವಿಚಾರಣೆ ನಡೆಸಿರುವ ದೆಹಲಿ ಹೈಕೋರ್ಟ್ (Delhi High Court) ನಟಿ ಜೂಹಿ ಚಾವ್ಲಾಗೆ ಬಿಗ್ ರಿಲೀಫ್ ನೀಡಿದೆ. ಹಾಗಿದ್ರೆ ದೆಹಲಿ ಹೈಕೋರ್ಟ್ ಜೂಹಿ ಚಾವ್ಹಾಗೆ ಹೇಳಿದ್ದೇನು? ಹೇಗೆ ನಡೆಯಿತು ಅರ್ಜಿ ವಿಚಾರಣೆ ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ…
5ಜಿ ವಿರುದ್ಧ ಸಮರ ಸಾರಿದ್ದ ಜೂಹಿ ಚಾವ್ಲಾ
2021ರಲ್ಲಿ ನಟಿ ಜೂಹಿ ಚಾವ್ಲಾ 5ಜಿ ನೆಟ್ ವರ್ಕ್ ವಿರುದ್ಧ ಸಮರವನ್ನೇ ಸಾರಿದ್ದರು. 5ಜಿ ವೈರ್ಲೆಸ್ ಸಂವಹನ ತಂತ್ರಜ್ಞಾನ ಆರೋಗ್ಯಕ್ಕೆ ಬಹಳ ಅಪಾಯಕಾರಿಯಾಗಿದೆ ಅಂತ ಜೂಹಿ ಚಾವ್ಲಾ ಆರೋಪಿಸಿದ್ದರು. 5 ಜಿ ತಂತ್ರಜ್ಞಾನದಿಂದಾಗಿ ಮನುಷ್ಯ, ಪ್ರಾಣಿ, ಪಕ್ಷಿ ಸೇರಿದಂತೆ ಭೂಮಿಯ ಮೇಲಿರುವ ಸಸ್ಯ ಸಂಕುಲ ಇದರಿಂದ ಹೊರ ಸೂಸುವ ವಿಕಿರಣದಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಈ ತಂತ್ರಜ್ಞಾನದಿಂದ ಅಪಾಯವೇ ಹೆಚ್ಚು ಎಂದು ಜೂಹಿ ಚಾವ್ಲಾ ಅವರು ದೆಹಲಿ ಹೈ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿದ್ದರು. ಭಾರತದಲ್ಲಿ ಅದಕ್ಕೆ ಅವಕಾಶ ನೀಡಬಾರದು ಎಂದು ನಟಿ ಜೂಹಿ ಚಾವ್ಲಾ ಅರ್ಜಿ ಸಲ್ಲಿಸಿದ್ದರು.
ದಂಡ ವಿಧಿಸಿ, ಎಚ್ಚರಿಕೆ ನೀಡಿದ್ದ ಹೈಕೋರ್ಟ್
2021ರ ಜೂನ್ 4ರಂದು ಜೂಹಿ ಚಾವ್ಲಾ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್, ಇದು ಕ್ಷುಲ್ಲಕ ಅರ್ಜಿ ಅಂತ ಅರ್ಜಿಯನ್ನು ತಿರಸ್ಕರಿಸಿತ್ತು. ಜೂಹಿ ಚಾವ್ಲಾ ಪ್ರಚಾರ ಬಯಸಿ ಈ ರೀತಿ ಮಾಡುತ್ತಿದ್ದಾರೆ ಅಂತ ತರಾಟೆಗೆ ತೆಗೆದುಕೊಂಡಿತ್ತು. ಅಲ್ಲದೇ ನ್ಯಾಯಾಲಯದ ಸಮಯ ಹಾಳು ಮಾಡಿದ್ದಕ್ಕೆ 20 ಲಕ್ಷ ರೂ ದಂಡ ವಿಧಿಸಲಾಗಿತ್ತು.
ಇದನ್ನೂ ಓದಿ: Shruti Haasan Birthday: ನಟಿ ಬರ್ತ್ಡೇಗೆ `ಸಲಾರ್’ ಚಿತ್ರತಂಡದಿಂದ ಬಿಗ್ ಗಿಫ್ಟ್, ಶ್ರುತಿ ಹಾಸನ್ ಫಸ್ಟ್ ಲುಕ್ ರಿವೀಲ್!
ನಟಿಗೆ ಬಿಗ್ ರಿಲೀಫ್ ಕೊಟ್ಟ ದೆಹಲಿ ಹೈಕೋರ್ಟ್
ಹೈಕೋರ್ಟ್ ಆದೇಶದಿಂದ ನಟಿ ಜೂಹಿ ಚಾವ್ಲಾ ಕಂಗಾಲಾಗಿದ್ದರು. ತಾವು ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದು ಕ್ಷಮೆ ಕೇಳಿದ್ದರು. ಅಲ್ಲದೇ ದಂಡದ ಮೊತ್ತ ಇಳಿಸುವಂತೆ ಮತ್ತೊಮ್ಮೆ ಹೈಕೋರ್ಟ್ ಮೊರೆ ಹೋಗಿದ್ದರು.
ಈ ಅರ್ಜಿ ವಿಚಾರಣೆ ದೆಹಲಿ ಹೈಕೋರ್ಟ್ ನಲ್ಲಿ ವರ್ಚ್ಯುವಲ್ ಆಗಿ ನಡೆಯಿತು. ವಿಚಾರಣೆ ವೇಳೆ ನ್ಯಾಯಾಲಯವು, ದೆಹಲಿ ಕಾನೂನು ಸೇವೆಗಳ ಪ್ರಾಧಿಕಾರದ ಸ್ವಯಂ ಕಾರ್ಯಕರ್ತೆಯಾಗಿ ಜೂಹಿ ಚಾವ್ಲಾ ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಗಮನಿಸಿತು. ಸಮಾಜದ ಅಂಚಿನದಲ್ಲಿರುವ ವರ್ಗದ ಸಬಲೀಕರಣ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದನ್ನು ಕೋರ್ಟ್ ಗಮನಿಸಿ, ದಂಡದ ಮೊತ್ತವನ್ನು ಇಳಿಸಿತು.
ದಂಡದ ಮೊತ್ತ 20 ಲಕ್ಷದಿಂದ 2 ಲಕ್ಷಕ್ಕೆ ಇಳಿಕೆ
ಜೂಹಿ ಚಾವ್ಲಾ ಅವರ ಅರ್ಜಿಯನ್ನು ನ್ಯಾಯಮೂರ್ತಿಗಳಾದ ವಿಪಿನ್ ಸಂಘಿ ಮತ್ತು ಜಸ್ಮೀತ್ ಸಿಂಗ್ ಅವರನ್ನು ಒಳಗೊಂಡ ನ್ಯಾಯಪೀಠ ವಿಚಾರಣೆ ನಡೆಸಿತು. ಈ ವೇಳೆ ನಟಿಯ ಸಾಮಾಜಿಕ ಸೇವೆಯನ್ನು ಗಮನದಲ್ಲಿರಿಸಿ ಅರ್ಜಿ ಮಾನ್ಯ ಮಾಡಿತು. ಬಳಿಕ ದಂಡದ ಮೊತ್ತವನ್ನು 20 ಲಕ್ಷದಿಂದ 2 ಲಕ್ಷ ರೂಪಾಯಿಗೆ ಇಳಿಸಿ, ನ್ಯಾಯಪೀಠ ಆದೇಶಿಸಿತು.
ಇದನ್ನೂ ಓದಿ: Malavika Avinash: ಬರ್ತ್ ಡೇ ಸಂಭ್ರಮದಲ್ಲಿ ಮಾಳವಿಕಾ, ಪ್ರತಿಭಾನ್ವಿತ ನಟಿಗೆ ಅಭಿಮಾನಿಗಳಿಂದ ಶುಭಾಶಯ
ಕೋರ್ಟ್ ಆದೇಶಕ್ಕೆ ಜೂಹಿ ಚಾವ್ಲಾ ಸಂತಸ
ದೆಹಲಿ ನ್ಯಾಯಪೀಠ ನೀಡಿದ ಆದೇಶವನ್ನು ನಟಿ ಜೂಹಿ ಚಾವ್ಲಾ ಸ್ವಾಗತಿಸಿದ್ದಾರೆ. "ನ್ಯಾಯಪೀಠದ ಆದೇಶವನ್ನು ಪಾಲಿಸುತ್ತೇನೆ" ಅಂತ ಅವರು ಹೇಳಿದ್ದಾರೆ. ಅಲ್ಲದೇ "ಇನ್ನು ಮುಂದೆಯೂ ತಾವು ಸಾರ್ವಜನಿಕ ಹಿತಾಸಕ್ತಿಯ ಯಾವುದೇ ವಿಚಾರದಲ್ಲಿ ಸಹಾಯ ಮಾಡುತ್ತೇನೆ" ಅಂತ ಪುನರುಚ್ಚರಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ