HOME » NEWS » National-international » DELHI HIGH COURT GIVES ONE MONTH TIME TO UNION GOVERNMENT TO REPORT FIRS ON HATE SPEECHES GNR

ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮದ ಬಗ್ಗೆ ಮಾಹಿತಿ; ಕೇಂದ್ರಕ್ಕೆ 1 ತಿಂಗಳ ಕಾಲಾವಕಾಶ; ಹೈಕೋರ್ಟ್​

ಪರಿಸ್ಥಿತಿ ತಹಬದಿಗೆ ತರಲು ಕಂಡಲ್ಲಿ ಗುಂಡಿಗೆ ಆದೇಶ ಹೊರಡಿಸಲಾಗಿದೆ. ಈಶಾನ್ಯ ದೆಹಲಿಯಲ್ಲಿ 1 ತಿಂಗಳು 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದರ ಜತೆಗೆ ದೆಹಲಿಯ ಹಲವೆಡೆ ಕರ್ಫ್ಯೂ ಹೇರಲಾಗಿದೆ. ಕಲ್ಲುತೂರಾಟ, ವಾಹನಗಳು ಮತ್ತು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ, ಪರಸ್ಪರ ಗುಂಡಿನ ದಾಳಿಗಳಿಂದಾಗಿ ಇಡೀ ದೆಹಲಿಯಲ್ಲಿ ಪ್ರಕ್ಷ್ಯುಬ್ದ ಪರಿಸ್ಥಿತಿ ನೆಲೆಸಿದೆ.

news18-kannada
Updated:February 27, 2020, 9:21 PM IST
ಪ್ರಚೋದನಕಾರಿ ಭಾಷಣ ಮಾಡಿದವರ ವಿರುದ್ಧ ಕ್ರಮದ ಬಗ್ಗೆ ಮಾಹಿತಿ; ಕೇಂದ್ರಕ್ಕೆ 1 ತಿಂಗಳ ಕಾಲಾವಕಾಶ; ಹೈಕೋರ್ಟ್​
ಅಮಿತ್​ ಶಾ
  • Share this:
ನವದೆಹಲಿ(ಫೆ.27): ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹಿಂಸಾಚಾರ ಸಂಭವಿಸುವಂತೆ ಪ್ರಚೋದನಕಾರಿ ಭಾಷಣಗಳನ್ನು ಮಾಡಿದವರ ವಿರುದ್ಧ ಕೈಗೊಂಡ ಕ್ರಮದ ಬಗ್ಗೆ ಒಂದು ತಿಂಗಳಲ್ಲಿ ವರದಿ ನೀಡಬೇಕೆಂದು ಇಲ್ಲಿನ ಹೈಕೋರ್ಟ್​ ಆದೇಶಿಸಿದೆ. ಹೀಗೆ ಖಡಕ್​​ ಆದೇಶ ಹೊರಡಿಸಿ ಹೈಕೋರ್ಟ್​ ನ್ಯಾಯಮೂರ್ತಿ ಎಸ್. ಮುರಳೀಧರ್ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರಕ್ಕೆ ಒಂದು ತಿಂಗಳು ಕಾಲಾವಕಾಶ ನೀಡಿದೆ.

ಸಿಎಎ ಮತ್ತು ಎನ್​​ಆರ್​​ಸಿ ವಿರೋಧಿ ಗುಂಪುಗಳಿಂದ ಸಂಭವಿಸಿದ ಹಿಂಸಾಚಾರದಿಂದ ದೆಹಲಿಯಲ್ಲಿ ಇಲ್ಲಿಯವರೆಗೂ 38 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಸಾಯುವವರ ಸಂಖ್ಯೆ ಏರುತ್ತಲೇ ಇದೆ. 200ಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ. ಈ ಕುರಿತಂತೆ ಅಸಮಾಧಾನ ಹೊರಹಾಕಿದ ಜಸ್ಟೀಸ್​​​ ಎಸ್. ಮುರಳೀಧರ್ ನೇತೃತ್ವದ ನ್ಯಾಯಪೀಠ ದೆಹಲಿ ಪೊಲೀಸರಿಗೆ ಛೀಮಾರಿ ಹಾಕಿದೆ. ಪ್ರಚೋದನಕಾರಿ ಭಾಷಣ ಮಾಡುವವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ತರಾಟೆ ತೆಗೆದುಕೊಂಡಿದೆ.

ಪೌರತ್ವ ತಿದ್ದುಪಡಿ ಕಾಯ್ದೆ ಪರ-ವಿರೋಧ ಸಂಘರ್ಷದಲ್ಲಿ ಭುಗಿಲೆದ್ದ ಹಿಂಸಾಚಾರ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಂಡಿದೆ. ಸಂಘರ್ಷದಲ್ಲಿ ಬಲಿಯಾದವರ ಸಂಖ್ಯೆ ಏರುತ್ತಲೇ ಇದೆ. ಈ ನಡುವೆ ಹೈಕೋರ್ಟ್​ ಆದೇಶದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ 106 ಮಂದಿಯನ್ನು ಬಂಧಿಸಲಾಗಿದ್ದು, 18 ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ದೆಹಲಿ ಹಿಂಸಾಚಾರ; ಬೇಜವಾಬ್ದಾರಿ ಹೇಳಿಕೆ ನೀಡದಂತೆ ಇಸ್ಲಾಮಿಕ್ ಸಂಘಟನೆಗಳಿಗೆ ಸೂಚನೆ ನೀಡಿದ ಕೇಂದ್ರ ಸರ್ಕಾರ

ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ, ಗಾಯಗೊಂಡವರಿಗೆ ಚಿಕಿತ್ಸಾ ವೆಚ್ಚ ಭರಿಸಲಾಗುವುದು. ಮೃತಪಟ್ಟ ಪೊಲೀಸ್​​ ಕಾನ್ಸ್​​ಟೇಬಲ್​​ ಕುಟುಂಬಕ್ಕೆ 1 ಕೋಟಿ ರೂ. ಪರಿಹಾರ ಮತ್ತು ಕುಟುಂಬದ ಒಬ್ಬರಿಗೆ ಸರಕಾರಿ ನೌಕರಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ ಘೋಷಿಸಿದ್ದಾರೆ.

ಪರಿಸ್ಥಿತಿ ತಹಬದಿಗೆ ತರಲು ಕಂಡಲ್ಲಿ ಗುಂಡಿಗೆ ಆದೇಶ ಹೊರಡಿಸಲಾಗಿದೆ. ಈಶಾನ್ಯ ದೆಹಲಿಯಲ್ಲಿ 1 ತಿಂಗಳು 144 ಸೆಕ್ಷನ್ ಜಾರಿ ಮಾಡಲಾಗಿದೆ. ಇದರ ಜತೆಗೆ ದೆಹಲಿಯ ಹಲವೆಡೆ ಕರ್ಫ್ಯೂ ಹೇರಲಾಗಿದೆ. ಕಲ್ಲುತೂರಾಟ, ವಾಹನಗಳು ಮತ್ತು ಅಂಗಡಿ ಮುಂಗಟ್ಟುಗಳಿಗೆ ಬೆಂಕಿ, ಪರಸ್ಪರ ಗುಂಡಿನ ದಾಳಿಗಳಿಂದಾಗಿ ಇಡೀ ದೆಹಲಿಯಲ್ಲಿ ಪ್ರಕ್ಷ್ಯುಬ್ದ ಪರಿಸ್ಥಿತಿ ನೆಲೆಸಿದೆ.
First published: February 27, 2020, 9:10 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories