• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Minister Arrest: ಆಮ್ ಆದ್ಮಿ ಸರ್ಕಾರಕ್ಕೆ ಇಡಿ ಶಾಕ್! ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅರೆಸ್ಟ್

Minister Arrest: ಆಮ್ ಆದ್ಮಿ ಸರ್ಕಾರಕ್ಕೆ ಇಡಿ ಶಾಕ್! ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅರೆಸ್ಟ್

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್

ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್

ಕಳೆದ 2015-16ನೇ ಸಾಲಿನಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ. ಇದೇ ಪ್ರಕರಣದಲ್ಲಿ ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿದೆ.

  • Share this:

ದೆಹಲಿ: ರಾಷ್ಟ್ರ ರಾಜಧಾನಿ (Capital) ದೆಹಲಿ ಸರ್ಕಾರಕ್ಕೆ (Delhi Government) ಭಾರೀ ಮುಜುಗರ ಎದುರಾಗಿದೆ. ಅರವಿಂದ್ ಕೇಜ್ರಿವಾಲ್ (Aravind Kejriwal) ನೇತೃತ್ವದ ಆಮ್ ಆದ್ಮಿ ಸರ್ಕಾರಕ್ಕೆ (Aam Admi Government) ಜಾರಿ ನಿರ್ದೇಶನಾಲಯ (ED) ಶಾಕ್ (Shock) ಕೊಟ್ಟಿದೆ. ದೆಹಲಿ ಆರೋಗ್ಯ ಸಚಿವ (Health Minister) ಸತ್ಯೇಂದ್ರ ಜೈನ್ (Satyendra Jain) ಅವರನ್ನು ಇಡಿ ಅಧಿಕಾರಿಗಳು (Officers) ನಿನ್ನೆ ಬಂಧಿಸಿದ್ದಾರೆ. ಕಳೆದ 2015-16ನೇ ಸಾಲಿನಲ್ಲಿ ಕೋಲ್ಕತ್ತಾ (Kolkata) ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ (Havala business) ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ. ಇದೇ ಪ್ರಕರಣದಲ್ಲಿ (Case) ಸತ್ಯೇಂದ್ರ ಜೈನ್ ಅವರನ್ನು ಬಂಧಿಸಲಾಗಿದೆ.


ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಅರೆಸ್ಟ್


ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್‌ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶಾಕ್ ಕೊಟ್ಟಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸಿದ್ದಾರೆ. ಕಳೆದ 2015-16ನೇ ಸಾಲಿನಲ್ಲಿ ಕೋಲ್ಕತ್ತಾ ಮೂಲದ ಸಂಸ್ಥೆಯೊಂದಿಗೆ ಹವಾಲಾ ವ್ಯವಹಾರದಲ್ಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಭಾಗಿಯಾಗಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಸಿದ್ದಾರೆ.


4.81 ಕೋಟಿ ರೂಪಾಯಿ ಅವ್ಯವಹಾರ ಶಂಕೆ


ಜೈನ್ ಅವರ ಕುಟುಂಬದ 4.81 ಕೋಟಿ ರೂಪಾಯಿ ಮೌಲ್ಯದ ಆಸ್ತಿ ತನಿಖೆ ಮತ್ತು ಅವರ ವಿರುದ್ಧ ಮನಿ ಲಾಂಡರಿಂಗ್ ಆರೋಪ ಇದೆ. ಇದರ ತನಿಖೆಯ ಭಾಗವಾಗಿ ಅವರು "ಲಾಭದಾಯಕವಾಗಿ ಮಾಲೀಕತ್ವ ಮತ್ತು ನಿಯಂತ್ರಣದಲ್ಲಿರುವ ಕಂಪನಿಗಳನ್ನು ತಾತ್ಕಾಲಿಕವಾಗಿ ಲಗತ್ತಿಸಲಾಗಿದೆ ಎಂದು ಸಂಸ್ಥೆ ಕಳೆದ ತಿಂಗಳು ಹೇಳಿತ್ತು.


ಇದನ್ನೂ ಓದಿ: Belly Fat: ನಿಮ್ಮ ಮಧ್ಯಪ್ರದೇಶವೇಕೆ ದೊಡ್ಡದಿದೆ? TMC ಮುಖಂಡನ ಹೊಟ್ಟೆ ನೋಡಿ ಮಮತಾ ಹೇಳಿದ್ದೇನು?


4.81 ಕೋಟಿ ಮೌಲ್ಯದ ಆಸ್ತಿ ಮುಟ್ಟುಗೋಲು


2018ರಲ್ಲಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಸತ್ಯೇಂದ್ರ ಜೈನ್ ಅವರನ್ನು ವಿಚಾರಣೆ ನಡೆಸಲಾಗಿತ್ತು. ಆಮ್ ಆದ್ಮಿ ಪಕ್ಷದ ನಾಯಕ ಮತ್ತು ಅವರ ಕುಟುಂಬದ ಒಡೆತನದಲ್ಲಿ ಇರುವ ಒಟ್ಟು 4.81 ಕೋಟಿ ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡ ಸುಮಾರು ಎರಡು ತಿಂಗಳ ನಂತರದಲ್ಲಿ ಅವರನ್ನು ಬಂಧಿಸಲಾಗಿದೆ.


2017ರಲ್ಲಿ ದಾಖಲಾಗಿತ್ತು ಎಫ್ಐಆರ್


ಜೈನ್ ಅವರು ಆಮ್ ಆದ್ಮಿ ಪಕ್ಷದ ನೇತೃತ್ವದ ದೆಹಲಿ ಸರ್ಕಾರದಲ್ಲಿ ಆರೋಗ್ಯ, ಗೃಹ, ವಿದ್ಯುತ್ ಮತ್ತು PWD ಸಚಿವರಾಗಿದ್ದಾರೆ. ಎಎಪಿ ಸಚಿವರ ವಿರುದ್ಧ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 2017ರಲ್ಲಿ ಸಿಬಿಐ ಎಫ್‌ಐಆರ್ ದಾಖಲಿಸಿತ್ತು. ಇದೀಗ ಅದೇ ಪ್ರಕರಣದಲ್ಲಿ ಇಡಿ ಅಧಿಕಾರಿಗಳು ಅವರನ್ನು ಬಂಧಿಸಿದ್ದಾರೆ.


ಹಲವು ಕಂಪನಿಗಳಲ್ಲಿ ಇವರದ್ದೇ ಮಾಲಿಕತ್ವ


4.81 ಕೋಟಿ ಮೌಲ್ಯದ ಸ್ಥಿರಾಸ್ತಿಗಳು ಅಕಿಂಚನ್ ಡೆವಲಪರ್ಸ್ ಪ್ರೈ.ಲಿ. ಲಿಮಿಟೆಡ್, ಇಂಡೋ ಮೆಟಲ್ ಇಂಪೆಕ್ಸ್ ಪ್ರೈವೇಟ್ ಲಿಮಿಟೆಡ್, ಪರ್ಯಾಸ್ ಇನ್ಫೋಸೊಲ್ಯೂಷನ್ಸ್ ಪ್ರೈ. ಲಿಮಿಟೆಡ್, ಮಂಗಳಾಯತನ್ ಪ್ರಾಜೆಕ್ಟ್ಸ್ ಪ್ರೈ. ಲಿಮಿಟೆಡ್, JJ ಐಡಿಯಲ್ ಎಸ್ಟೇಟ್ ಪ್ರೈ. ಲಿಮಿಟೆಡ್ ಇವರ ಮಾಲೀಕತ್ವದಲ್ಲೇ ಇದೆ.


ತನಿಖೆಯಲ್ಲಿ ಅಕ್ರಮ ಸಾಬೀತು


ಸತ್ಯೇಂದ್ರ ಕುಮಾರ್ ಜೈನ್ ಅವರು ಸಾರ್ವಜನಿಕ ಸೇವಕರಾಗಿದ್ದಾಗ 2015-16ರ ಅವಧಿಯಲ್ಲಿ ಕೋಲ್ಕತ್ತಾ ಮೂಲದ ಪ್ರವೇಶಕ್ಕೆ ವರ್ಗಾವಣೆಯಾದ ನಗದು ವಿರುದ್ಧ ಶೆಲ್ ಕಂಪನಿಗಳಿಂದ 4.81 ಕೋಟಿ ರೂ.ಗಳ ವಸತಿ ನಮೂದುಗಳನ್ನು ಲಾಭದಾಯಕವಾಗಿ ಮಾಲೀಕತ್ವದ ಮತ್ತು ಅವರ ನಿಯಂತ್ರಣದಲ್ಲಿರುವ ಕಂಪನಿಗಳು ಸ್ವೀಕರಿಸಿವೆ ಎನ್ನುವುದು ಸಾಬೀತಾಗಿದೆ ಎನ್ನಲಾಗಿದೆ.


ಸಚಿವರ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರ


ಸಚಿವ ಸತ್ಯೇಂದ್ರ ಜೈನ್ ಬಂಧನದ ಹಿಂದೆ ರಾಜಕೀಯ ಷಡ್ಯಂತ್ರ ಇದೆ ಅಂತ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹೇಳಿದ್ದಾರೆ. ಜೈನ್ ಅವರು ಎಎಪಿ ಉಸ್ತುವಾರಿಯಾಗಿರುವ ಹಿಮಾಚಲ ಪ್ರದೇಶದಲ್ಲಿ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಂಧಿಸಲಾಗಿದೆ ಎಂದು ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.


ಇದನ್ನೂ ಓದಿ: Sri Lanka Crisis: ಸಾಲದ ಸುಳಿಯಲ್ಲಿ ಸಿಲುಕಿದ ಶ್ರೀಲಂಕಾ! ದ್ವೀಪರಾಷ್ಟ್ರದ ಮುಂದಿನ ಗತಿಯೇನು?


ಇದು ಸರ್ಕಾರಿ ಸಂಸ್ಥೆಯ ದುರುಪಯೋಗ


ಜೈನ್ ಬಂಧನದ ಕುರಿತು ಪ್ರತಿಕ್ರಿಯಿಸಿದ ಎಎಪಿ ಶಾಸಕ ಸೋಮನಾಥ್ ಭಾರ್ತಿ, ಸಂಸ್ಥೆಯನ್ನು "ದುರುಪಯೋಗ" ಪಡಿಸಿಕೊಂಡಿದೆ ಎಂದು ಬಿಜೆಪಿಯನ್ನು ಟೀಕಿಸಿದ್ದಾರೆ.

First published: