Delhi Covid: ಮೂರನೇ ಅಲೆ ಬಂದಾಗಿದೆ; ದೆಹಲಿಯಲ್ಲಿ ಇಂದು ಪಾಸಿಟಿವಿಟಿ ದರ ಶೇ 10ರಷ್ಟು ಆಗುವ ಸಾಧ್ಯತೆ; ಆರೋಗ್ಯ ಸಚಿವರು

ಇದೇ ವೇಳೆ ದೆಹಲಿ ವಾಸಿಗಳಿಗೆ ಅವರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು. ಓಮೈಕ್ರಾನ್​ ಸೋಂಕು ಸೌಮ್ಯವಾಗಿದ್ದರೂ ಜನರು ತಪ್ಪದೇ ಕೋವಿಡ್​ ನಿಯಮಾವಳಿಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ದೆಹಲಿ (ಜ. 5):  ದಿನದಿಂದ ದಿನಕ್ಕೆ ದೆಹಲಿಯಲ್ಲಿ (Delhi) ಸೋಂಕಿನ ಏರಿಕೆ ಆಗುತ್ತಲೇ ಇದ್ದು, ಇಂದು ಸುಮಾರು 10,000 ಹೊಸ ಕೋವಿಡ್ ಪ್ರಕರಣಗಳು ವರದಿಯಾಗುವ ಸಾಧ್ಯತೆಯಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಹೇಳಿದ್ದಾರೆ. ಪಾಸಿಟಿವಿಟಿ ದರ (Positivity Rate) ಕೂಡ ಏರಿಕೆ ಕಾಣಲಿದ್ದು, ಕೋವಿಡ್ ಪರೀಕ್ಷೆಗೆ ಒಳಗೊಳ್ಳುವ 100 ಜನರಲ್ಲಿ 10 ಮಂದಿಗೆ ಸಕಾರತ್ಮಕತೆ ವರದಿ ಬರಬಹುದು ಎಂದು ತಿಳಿಸಿದ್ದಾರೆ. ನಿನ್ನೆ ಕೋವಿಡ್​ ಪಾಸಿಟಿವಿಟಿ ದರ ದರವು ಶೇಕಡಾ 8.3 ರಷ್ಟಿತ್ತು, ಸೋಮವಾರ ಶೇಕಡಾ 6.46 ಇತ್ತು. ಈ ದರ ಇಂದು ಮತ್ತೆ ಜಾಸ್ತಿಯಾಗಲಿದೆ. ಇನ್ನು ಇದೇ ವೇಳೆ ದೇಶದಲ್ಲಿ ಕೋವಿಡ್​ ಮೂರಲೇ ಅಲೆ ಎದ್ದಿದೆ ಎಂದು ತಜ್ಞರು ತಿಳಿಸಿದ್ದಾರೆ. ಆದರೆ, ದೆಹಲಿಗೆ ಇದು ಐದನೇ ಅಲೆ ಆಗಿದೆ ಎಂದರು.

    ಕೋವಿಡ್ ನಿಯಮ ಪಾಲನೆಗೆ ಮನವಿ

    ಇದೇ ವೇಳೆ ದೆಹಲಿ ವಾಸಿಗಳಿಗೆ ಅವರು ಎಚ್ಚರಿಕೆಯಿಂದ ಇರುವಂತೆ ಸೂಚನೆ ನೀಡಿದರು. ಓಮೈಕ್ರಾನ್​ ಸೋಂಕು ಸೌಮ್ಯವಾಗಿದ್ದರೂ ಜನರು ತಪ್ಪದೇ ಕೋವಿಡ್​ ನಿಯಮಾವಳಿಗಳನ್ನು ಪಾಲನೆ ಮಾಡಬೇಕು ಎಂದು ಮನವಿ ಮಾಡಿದರು.
    ರಾಷ್ಟ್ರರಾಜಧಾನಿಯಲ್ಲಿ ಕೋವಿಡ್​ ಎರಡನೇ ಅಲೆಯಲ್ಲಿ ಉಂಟಾದ ವೈದ್ಯಕೀಯ ಬಿಕ್ಕಟ್ಟು ಎದುರಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಈ ಹಿನ್ನಲೆ ಖಾಸಗಿ ಆಸ್ಪತ್ರೆಗಳಲ್ಲಿ 40 ಪ್ರತಿಶತ ಹಾಸಿಗೆಗಳನ್ನು ಕಾಯ್ದಿರಿಸಲಾಗಿದೆ.



    ಜೊತೆಗೆ ದೆಹಲಿಯಿಂದ ಕೇವಲ 300-400 ಮಾದರಿಗಳನ್ನು ಮಾತ್ರ ಜಿನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ ಏಕೆಂದರೆ ಎಲ್ಲಾ ಮಾದರಿಗಳ ಅನುಕ್ರಮವು ಸಾಧ್ಯವಿಲ್ಲ. ಸಂಶೋಧನೆ ಉದ್ದೇಶದಿಂದಾಗಿ ಇದನ್ನು ಮಾಡಲಾಗುತ್ತಿದೆ. ದೇಶದಲ್ಲಿ ಓಮೈಕ್ರಾನ್​ ಸೋಂಕು ಈಗಾಗಲೇ ಹಬ್ಬಿದೆ. ಈ ಹಿನ್ನಲೆ ಕೇವಲ 300-400 ಮಾದರಿಗಳನ್ನು ಜೀನೋಮ್ ಅನುಕ್ರಮಕ್ಕಾಗಿ ಕಳುಹಿಸಲಾಗುತ್ತಿದೆ. ಇದರ ಜೊತೆಗೆ ಕೋವಿಡ್​ ಟೆಸ್ಟ್​ ಅನ್ನು ಕೂಡ ಹೆಚ್ಚಿಸಲಾಗಿದೆ. ದಿನಕ್ಕೆ 90 ಸಾವಿರ ಕೋವಿಡ್​​ ಟೆಸ್ಟ್​ ಮಾಡಲಾಗುತ್ತಿದೆ.

    ಇದನ್ನು ಓದಿ: Corona ಪಿಡುಗು ಕೊನೆಯಾಗುವುದು ಯಾವಾಗ..?`ಎಂಡ್‌ಗೇಮ್‌' ಬಗ್ಗೆ ಸಂಕೇತ ನೀಡುತ್ತಿದೆಯೇ ಓಮೈಕ್ರಾನ್..?

    ದೇಶದಲ್ಲಿ ಹೆಚ್ಚಾದ ಓಮೈಕ್ರಾನ್​ ಪ್ರಕರಣ

    ರಾಜ್ಯದಲ್ಲಿ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನಲೆ ವೀಕೆಂಡ್​ ಕರ್ಫ್ಯೂ ಸೇರಿದಂತೆ ಈಗಾಗಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಲಾಗಿದೆ. ಈ ನಡುವೆಯೂ ನಿನ್ನೆ 5,481 ಕರೋನವೈರಸ್ ಪ್ರಕರಣಗಳು ಮತ್ತು ಮೂರು ಕೋವಿಡ್​ ಸಂಬಂಧ ಸಾವು ಸಂಭವಿಸಿದೆ.
    24 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಇಲ್ಲಿಯವರೆಗೆ ಕೋವಿಡ್ ರೂಪಾಂತರ ತಳಿ ಓಮೈಕ್ರಾನ್ ಪ್ರಕರಣಗಳು ಒಟ್ಟು 2, 135 ಮಂದಿಯಲ್ಲಿ ಪತ್ತೆಯಾಗಿವೆ, ಅದರಲ್ಲಿ 828 ಮಂದಿ ಚೇತರಿಸಿಕೊಂಡಿದ್ದಾರೆ ಅಥವಾ ವಲಸೆ ಹೋಗಿದ್ದಾರೆ. ಮಹಾರಾಷ್ಟ್ರದಲ್ಲಿ ಗರಿಷ್ಠ 653 ಪ್ರಕರಣಗಳು ದಾಖಲಾಗಿದ್ದು, ದೆಹಲಿಯಲ್ಲಿ 464, ಕೇರಳ 185, ರಾಜಸ್ಥಾನ 174, ಗುಜರಾತ್ 154 ಮತ್ತು ತಮಿಳುನಾಡಿನಲ್ಲಿ 121 ಪ್ರಕರಣಗಳು ದಾಖಲಾಗಿವೆ.

    ಇದನ್ನು ಓದಿ: ಮುಂದಿನ ವಾರದಿಂದ ಎಲ್ಲಾ ಕಡೆ ಕೋವಿಡ್ ಮಾತ್ರೆ ಲಭ್ಯ, ಬೆಲೆ ಎಷ್ಟು? ಎಲ್ಲಿ ಸಿಗುತ್ತದೆ? ಫುಲ್ ಡೀಟೆಲ್ಸ್

    ಆಸ್ಪತ್ರೆಗಳಲ್ಲಿ ಹೆಚ್ಚುತ್ತಿರುವ ಸೋಂಕಿತರು

    ದೆಹಲಿಯ ದೊಡ್ಡ ಮತ್ತು ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಹೆಚ್ಚೆಚ್ಚು  ಕೊರೋನಾ ಕೇಸ್ ಗಳು ಪತ್ತೆಯಾಗಿವೆ. ನ್ಯೂಸ್ 18ಗೆ ಲಭ್ಯವಾಗಿರುವ ಮಾಹಿತಿಗಳ ಪ್ರಕಾರ ಸಫ್ದರ್ ಜಂಗ್ ಆಸ್ಪತ್ರೆಯಲ್ಲಿ 23 ಪ್ರಕರಣಗಳು, ಲೇಡಿ ಹಾರ್ಡಿಂಗ್ ಮೆಡಿಕಲ್ ಕಾಲೇಜಿನಲ್ಲಿ 15 ಕೇಸುಗಳು, ಪ್ರತಿಷ್ಠಿತ ಏಮ್ಸ್ ಆಸ್ಪತ್ರೆಯಲ್ಲಿ 6 ಪ್ರಕರಣಗಳು, ರಾಮಮನೋಹರ ಲೋಹಿಯಾ ಆಸ್ಪತ್ರೆಯಲ್ಲಿ 5 ಕೇಸುಗಳು, ಲೋಕನಾಯಕ್ ಜಯಪ್ರಕಾಶ್ ಆಸ್ಪತ್ರೆಯಲ್ಲಿ 5 ಕೇಸುಗಳು ಹಾಗೂ ಮ್ಯಾಕ್ಸ್ ಆಸ್ಪತ್ರೆಯಲ್ಲಿ 4 ಪ್ರಕರಣಗಳು ಪತ್ತೆ ಆಗಿವೆ. ಈ‌ ಆಸ್ಪತ್ರೆಗಳ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗಳಿಗೆ ಕೊರೋನಾ ಪಾಸಿಟಿವ್ ಬಂದಿದೆ. ಇದರಿಂದ ಸಹಜವಾಗಿಯೇ ದೆಹಲಿಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

    ದೆಹಲಿಯಲ್ಲಿ ಕೊರೋನಾ ಹಾಗೂ ಓಮೈಕ್ರಾನ್ ಸೋಂಕು ವೇಗವಾಗಿ ಹರಡುತ್ತಿರುವುದರಿಂದ ಮತ್ತು ಆಸ್ಪತ್ರೆಗಳಲ್ಲೂ ಕೊರೋನಾ ಪ್ರಕರಣಗಳು ಪತ್ತೆ ಆಗುತ್ತಿರುವುದರಿಂದ ಮುನ್ನೆಚ್ಚರಿಕಾ ಕ್ರಮವಾಗಿ ದೆಹಲಿಯಲ್ಲಿ ರೆಡ್ ಅಲರ್ಟ್ (Red Alert) ಘೋಷಿಸುವ ಮತ್ತು ಇನ್ನಷ್ಟು ಬಿಗಿ ನಿಯಮಗಳು ಜಾರಿಗೊಳಿಸುವ ಸಾಧ್ಯತೆ ಕಂಡುಬರುತ್ತಿದೆ.
    Published by:Seema R
    First published: