ಐಎನ್‌ಎಕ್ಸ್‌ ಪ್ರಕರಣ: ಪಿ. ಚಿದಂಬರಂಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​​

ತಿಹಾರ್​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪಿ. ಚಿಂದಂಬರಂ ಜಾಮೀನು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿರುವ ಹೈಕೋರ್ಟ್​​ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದಿದೆ.

news18
Updated:September 30, 2019, 3:55 PM IST
ಐಎನ್‌ಎಕ್ಸ್‌ ಪ್ರಕರಣ: ಪಿ. ಚಿದಂಬರಂಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದ ದೆಹಲಿ ಹೈಕೋರ್ಟ್​​
ಪಿ. ಚಿದಂಬರಂ
  • News18
  • Last Updated: September 30, 2019, 3:55 PM IST
  • Share this:
ನವದೆಹಲಿ(ಸೆ.30): ಬಹುಕೋಟಿ ಹಗರಣ ಐಎನ್‌ಎಕ್ಸ್‌ ಮೀಡಿಯಾ ಪ್ರಕರಣದ ಪ್ರಮುಖ ಆರೋಪಿ ಮಾಜಿ ಕೇಂದ್ರ ಸಚಿವ ಮತ್ತು ಕಾಂಗ್ರೆಸ್​​​ ಹಿರಿಯ ಮುಖಂಡ ಪಿ. ಚಿದಂಬರಂಗೆ ಜಾಮೀನು ನೀಡಲು ದೆಹಲಿ ಹೈಕೋರ್ಟ್​​ ನಿರಾಕರಿಸಿದೆ. ತಿಹಾರ್​ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪಿ. ಚಿಂದಂಬರಂ ಜಾಮೀನು ಕೋರಿ ದೆಹಲಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಇದನ್ನು ವಿಚಾರಣೆ ನಡೆಸಿರುವ ಹೈಕೋರ್ಟ್​​ ಆರೋಪಿಗೆ ಜಾಮೀನು ನೀಡಲು ಸಾಧ್ಯವಿಲ್ಲ ಎಂದಿದೆ. ಅಲ್ಲದೇ ಪಿ. ಚಿದಂಬರಂಗೆ ಜಾಮೀನು ನೀಡಿದರೆ, ಪ್ರಕರಣದ ಪ್ರಮುಖ ಸಾಕ್ಷಿಗಳ ಮೇಲೆ ಪರಿಣಾಮ ಬೀರಬಹುದು ಎಂದು ಹೇಳಿದೆ.

ಈ ಹಿಂದೆ ಜಾರಿ ನಿರ್ದೇಶನಾಲಯಕ್ಕೆ ಶರಣಾಗುವುದಾಗಿ ಸಿಬಿಐ ವಿಶೇಷ ಕೋರ್ಟ್​ಗೆ ಚಿದಂಬರಂ ಮಾಡಿಕೊಂಡ ಮನವಿಯನ್ನು ಕೂಡ ಸಿಬಿಐ ವಿಶೇಷ ಕೋರ್ಟ್ ತಿರಸ್ಕರಿಸಿತ್ತು. ಮಾಜಿ ಕೇಂದ್ರ ಸಚಿವರಾದ ಅವರು ತಿಹಾರ್ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿ ಮುಂದುವರಿಯಬೇಕು ಎಂದು ಆದೇಶಿಸಿತ್ತು.

ಐಎನ್​ಎಕ್ಸ್ ಪ್ರಕರಣದಲ್ಲಿ ಇನ್ನೂ ಸಾಕಷ್ಟು ವಿಚಾರಗಳನ್ನು ಕಲೆಹಾಕಬೇಕಿದೆ. ಈ ಪ್ರಕರಣದ ವ್ಯಾಪ್ತಿಯು ದೇಶದ ಹೊರಗೂ ಚಾಚಿದೆ. ಇನ್ನೂ ಆರು ಮಂದಿಯನ್ನು ವಿಚಾರಣೆ ನಡೆಸಬೇಕಿದೆ. ಅದಾದ ಬಳಿಕ ಚಿದಂಬರಮ್ ಅವರನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸುತ್ತೇವೆ. ಈಗಲೇ ಅವರನ್ನು ವಿಚಾರಣೆ ನಡೆಸುವ ಅಗತ್ಯವಿಲ್ಲ. ಅವರನ್ನು ನ್ಯಾಯಾಂಗ ಬಂಧನದಲ್ಲಿ ಮುಂದುವರಿಸುವುದರಿಂದ ಯಾವುದೇ ಸಾಕ್ಷ್ಯನಾಶದ ಭಯ ಇರುವುದಿಲ್ಲ. ತಮಗೆ ಬೇಕನಿಸಿದಾಗ ಅವರನ್ನ ಕಸ್ಟಡಿಗೆ ತೆಗೆದುಕೊಳ್ಳಲು ಕೋರ್ಟ್​ನಲ್ಲಿ ಮನವಿ ಮಾಡಿಕೊಳ್ಳುತ್ತೇವೆ ಎಂದು ಜಾರಿ ನಿರ್ದೇಶನಾಲಯವು ವಾದಿಸಿತ್ತು.

ಆದರೆ, ಜಾರಿ ನಿರ್ದೇಶನಾಲಯದವರು ತನ್ನನ್ನು ಆ. 20ರಂದೇ ಬಂಧಿಸಬೇಕೆಂದಿದ್ದರು. ಈಗ ಅವರು ಬೇರೆಯೇ ಆಲೋಚನೆಯೊಂದಿಗೆ ತನ್ನನ್ನು ಕಸ್ಟಡಿಗೆ ತೆಗೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ತನ್ನನ್ನು ಜೈಲಿನಲ್ಲಿ ಮುಂದುವರಿಸುವುದೇ ಅದರ ಉದ್ದೇಶವಾಗಿದೆ ಎಂಬುದು ಚಿದಂಬರಮ್ ಅವರ ಪ್ರತಿವಾದವಾಗಿತ್ತು.

ಇದನ್ನೂ ಓದಿ: ನಾಳೆಯೇ ಬಿಬಿಎಂಪಿ ಮೇಯರ್-ಉಪಮೇಯರ್, 4 ಸ್ಥಾಯಿ ಸಮಿತಿಗಳಿಗೆ ಚುನಾವಣೆ

ಏನಿದು ಪ್ರಕರಣ?: 2007ರಲ್ಲಿ ಪೀಟರ್ ಮತ್ತು ಇಂದ್ರಾಣಿ ಒಡೆತನದಲ್ಲಿದ್ದ ಐಎನ್​ಎಕ್ಸ್ ಮೀಡಿಯಾ ಸಂಸ್ಥೆಗೆ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟು, 3.5 ಕೋಟಿ ರೂ. ಕಿಕ್ ಬ್ಯಾಕ್ ಪಡೆದ ಆರೋಪ ಪಿ.ಚಿದಂಬರಂ ಹಾಗೂ ಪುತ್ರ ಕಾರ್ತಿ ಚಿದಂಬರಂ ಮೇಲಿದೆ. ಈಗಾಗಲೇ ಪ್ರಕರಣದಲ್ಲಿ ಆರೋಪಿ ಇಂದ್ರಾಣಿ ಮುಖರ್ಜಿ ಅವರು, ದೆಹಲಿ ಹೋಟೆಲ್​​ವೊಂದರಲ್ಲಿ ಕಾರ್ತಿ ಚಿದಂಬರಂ ನನ್ನ ಭೇಟಿ ಮಾಡಿದ್ದರು. ಪಿಐಪಿಬಿ ವ್ಯವಹಾರಕ್ಕೆ ಅನುವು ಮಾಡಿಕೊಡಲು 1 ಮಿಲಿಯನ್ ಡಾಲರ್ 1 ಮಿಲಿಯನ್ ಡಾಲರ್ ಭೇಡಿಕೆ ಇಟ್ಟಿದ್ದರು ಎಂದು ಮ್ಯಾಜಿಸ್ಟ್ರೇಟ್ ಮುಂದೆ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.

ಚಿಂದಬರಂ ಮೇಲಿನ ಆರೋಪ: ಅಲ್ಲದೇ ನವದೆಹಲಿಯ ಕಚೇರಿಯಲ್ಲಿ ಅಂದಿನ ಹಣಕಾಸು ಸಚಿವ ಪಿ.ಚಿದಂಬರಂ ಅವರನ್ನ ಭೇಟಿ ಮಾಡಿದ್ದ ಪೀಟರ್ ಮತ್ತು ಇಂದ್ರಾಣಿ, ಐಎನ್​ಎಕ್ಸ್ ಮೀಡಿಯಾ ವಿದೇಶಿ ಹೂಡಿಕೆಗೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಇದೇವೇಳೆ, ಚಿದಂಬರಂ ಇದಕ್ಕೆ ಪ್ರತಿಯಾಗಿ ತಮ್ಮ ಮಗನ ಉದ್ಯಮಕ್ಕೆ ಅನುಕೂಲ ಮಾಡಿಕೊಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ.----------
First published:September 30, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading