ಐಎನ್​​ಎಕ್ಸ್​​ ಮೀಡಿಯಾ ಪ್ರಕರಣ: ಪಿ ಚಿದಂಬರಂಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್

ಆಗಸ್ಟ್​ 21ರಂದು 74 ವರ್ಷದ ಚಿದಂಬರಂರನ್ನು ಸಿಬಿಐ ಚೆನ್ನೈನ ನಿವಾಸದಲ್ಲಿ ಬಂಧಿಸಿತ್ತು. ಅದಾದ ನಂತರ ಜಾಮೀನು ಎಂಬುದು ಮಾಜಿ ಸಚಿವರಿಗೆ ಮರೀಚಿಕೆಯಾಗಿದೆ.

news18-kannada
Updated:November 15, 2019, 7:24 PM IST
ಐಎನ್​​ಎಕ್ಸ್​​ ಮೀಡಿಯಾ ಪ್ರಕರಣ: ಪಿ ಚಿದಂಬರಂಗೆ ಜಾಮೀನು ನಿರಾಕರಿಸಿದ ದೆಹಲಿ ಹೈಕೋರ್ಟ್
ಆಗಸ್ಟ್​ 21ರಂದು 74 ವರ್ಷದ ಚಿದಂಬರಂರನ್ನು ಸಿಬಿಐ ಚೆನ್ನೈನ ನಿವಾಸದಲ್ಲಿ ಬಂಧಿಸಿತ್ತು. ಅದಾದ ನಂತರ ಜಾಮೀನು ಎಂಬುದು ಮಾಜಿ ಸಚಿವರಿಗೆ ಮರೀಚಿಕೆಯಾಗಿದೆ.
  • Share this:
ನವದೆಹಲಿ(ನ.15): ಐಎನ್​ಎಕ್ಸ್​ ಮೀಡಿಯಾ ಖಾಸಗಿ ಲೇವಾದೇವಿ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಜಾಮೀನು ಅರ್ಜಿಯನ್ನು ದೆಹಲಿ ಹೈಕೋರ್ಟ್​​ ತಿರಸ್ಕರಿಸಿದೆ. ಪ್ರಕರಣದ ಪ್ರಮುಖ ಆರೋಪಿ ಚಿದಂಬರಂಗೆ ಜಾಮೀನು ನೀಡಿದರೆ ಸಮಾಜಕ್ಕೆ ತಪ್ಪು ಸಂದೇಶ ರವಾನೆಯಾಗುತ್ತದೆ ಎಂದು ನ್ಯಾಯಲಯ ಅಭಿಪ್ರಾಯಪಟ್ಟಿದೆ.

ಕಳೆದ ತಿಂಗಳು ಆರೋಗ್ಯ ಸ್ಥಿತಿಯನ್ನು ಉಲ್ಲೇಖಿಸಿ ಚಿದಂಬರಂ ಮಧ್ಯಂತರ ಜಾಮೀನು ಕೋರಿದ್ದರು. ಆದರೆ ಇದನ್ನು ಪರಿಗಣಿಸದ ನ್ಯಾಯಾಲಯ ನವೆಂಬರ್​ 27ರವರೆಗೆ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂರನ್ನು ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಹಾಗೆಯೇ ನ್ಯಾಯಾಂಗ ಬಂಧನದಿಂದ ಬಿಡುಗಡೆ ಮಾಡಿ ಜಾಮೀನು ನೀಡುವಂತೆ ಸಲ್ಲಿಸಿದ ಅರ್ಜಿಯನ್ನು ದೆಹಲಿ ಹೈಕೋರ್ಟ್​ ಕೈಗೆತ್ತಿಕೊಂಡಿತ್ತು. ವಿಚಾರಣೆ ವೇಳೆ ಕಾಂಗ್ರೆಸ್​ ಹಿರಿಯ ನಾಯಕನಿಗೆ ಬಂಧ ಮುಕ್ತಿ ಸದ್ಯಕ್ಕಿಲ್ಲ ಎಂದು ಅರ್ಜಿ ತಿರಸ್ಕರಿಸಿದೆ.

ನ್ಯಾಯಲಯ ಈಗಾಗಲೇ ಪಿ ಚಿದಂಬರಂ ಅನಾರೋಗ್ಯದ ಹಿನ್ನೆಲೆಯಲ್ಲಿ ಕೋರ್ಟ್​ ತಿಹಾರ್​ ಜೈಲು ಅಧಿಕಾರಿಗಳಿಗೆ ಕೆಲ ಸೂಚನೆಗಳನ್ನು ನೀಡಿದೆ. ಚಿದಂಬರಂಗೆ ಔಷದಿ, ವೆಸ್ಟರ್ನ್​ ಟಾಯ್ಲೆಟ್​, ಭದ್ರತೆ ಮತ್ತು ಪ್ರತ್ಯೇಕ ಸೆಲ್​ ನೀಡುವಂತೆ ಆದೇಶಿಸಿದೆ. ಮನೆ ಅಡುಗೆಯನ್ನೂ ಅವರಿಗೆ ನೀಡುವಂತೆ ಕೋರ್ಟ್​ ಸೂಚಿಸಿದೆ.

ಇದನ್ನೂ ಓದಿ: CBI Raids: ಅಮ್ನೆಸ್ಟಿ ಸಂಸ್ಥೆ ಮೇಲೆ ಸಿಬಿಐ ದಾಳಿ: ತನಿಖೆ ಮುಂದುವರಿಸಿದ ಅಧಿಕಾರಿಗಳು

ಆಗಸ್ಟ್​ 21ರಂದು 74 ವರ್ಷದ ಚಿದಂಬರಂರನ್ನು ಸಿಬಿಐ ಚೆನ್ನೈನ ನಿವಾಸದಲ್ಲಿ ಬಂಧಿಸಿತ್ತು. ಅದಾದ ನಂತರ ಜಾಮೀನು ಎಂಬುದು ಮಾಜಿ ಸಚಿವರಿಗೆ ಮರೀಚಿಕೆಯಾಗಿದೆ.

ಏನಿದು ಪ್ರಕರಣ?: 2017ರ ಮೇ 15ರಂದು ಐಎನ್​ಎಕ್ಸ್​ ಮಿಡಿಯಾ ಖಾಸಗಿ ಲೇವಾದೇವಿ ಪ್ರಕರಣ ಚಿದಂಬರಂ ವಿರುದ್ಧ ದಾಖಲಾಗಿತ್ತು. ಐಎನ್​ಎಕ್ಸ್​ ಮೀಡಿಯಾ ಸಂಸ್ಥೆ ವಿದೇಶಿ ಮೂಲಗಳಿಂದ ರೂ. 305 ಕೋಟಿಯನ್ನು 2007ರಲ್ಲಿ ಸ್ವೀಕರಿಸಿತ್ತು. ಈ ವೇಳೆ ಚಿದಂಬರಂ ಕೇಂದ್ರದ ಹಣಕಾಸು ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಅವರ ಪ್ರಭಾವವನ್ನು ಬಳಸಿಕೊಂಡು ಅವ್ಯವಹಾರ ನಡೆಸಲಾಗಿದೆ ಎಂಬ ಗಂಭೀರ ಆರೋಪ ಅವರ ಮೇಲಿದೆ.
------------
First published: November 15, 2019, 7:15 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading