ದೆಹಲಿ ಸರ್ಕಾರದಿಂದ ಲಕ್ಷ್ಮಿ ಪೂಜೆ ಆಯೋಜನೆ; ಪಟಾಕಿ ಹೊಡೆಯುವ ಬದಲು ನೇರ ಪ್ರಸಾರ ವೀಕ್ಷಿಸಿ ಎಂದ ಕೇಜ್ರಿವಾಲ್​

ನೇರಪ್ರಸಾರದಿಂದಾಗಿ ರಾಜ್ಯದ ಎರಡು ಕೋಟಿ ಜನರು ಒಟ್ಟಿಗೆ ದೀಪಾವಳಿ ಆಚರಿಸಲಿದ್ದಾರೆ. ಕಳೆದ ವರ್ಷದಂತೆಯೇ ಈ ವರ್ಷವೂ ನಾವು ದೀಪಾವಳಿಯಂದು ಪಟಾಕಿ ಸಿಡಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂದರು.

ಅರವಿಂದ್ ಕೇಜ್ರಿವಾಲ್

ಅರವಿಂದ್ ಕೇಜ್ರಿವಾಲ್

 • Share this:
  ನವದೆಹಲಿ(ನ.05): ರಾಷ್ಟ್ರ ರಾಜಧಾನಿಯಲ್ಲಿ ಕೊರೋನಾ ಸೋಂಕಿನ ಜೊತೆ ವಾಯುಮಾಲಿನ್ಯ ಸಮಸ್ಯೆ ಬಿಗಡಾಯಿಸಿದ್ದು, ಇದನ್ನು ತಡೆಯಲು ಜನರು ಈ ಬಾರಿ ದೀಪಾವಳಿಯಲ್ಲಿ ಪಟಾಕಿ ಸಿಡಿಸದಂತೆ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಮನವಿ ಮಾಡಿದ್ದಾರೆ. ಅಲ್ಲದೇ, ಇಡೀ ವಿಶ್ವವೇ ಸಂಕಷ್ಟಕ್ಕೆ ಒಳಗಾಗಿರುವ ಸಂದರ್ಭದಲ್ಲಿ ಜನರಲ್ಲಿ ಸಕಾರತ್ಮಕತೆ ಮೂಡಿಸುವ ಸಲುವಾಗಿ ಸರ್ಕಾರವೇ ಈ ಬಾರಿ ಲಕ್ಷ್ಮೀ ಪೂಜೆ ಆಯೋಜನೆ ಮಾಡಲಿದೆ. ಇದರ ನೇರಪ್ರಸಾರಕ್ಕೂ ಅನುವು ಮಾಡಿಕೊಡಲಾಗುವುದು. ಇದರಿಂದ ಲಕ್ಷ್ಮೀ ಪೂಜೆ ಆಚರಣೆ ನಿರ್ವಹಣೆ ಮಾಡದಿರುವುದು ಈ ಮೂಲಕವೇ ಭಾಗವಹಿಸುವಂತೆ ಮನವಿ ಮಾಡಿದರು. ರಾಜಧಾನಿಯಲ್ಲಿ ವಾಯುಮಾಲಿನ್ಯದಿಂದ ಜನರು ತತ್ತರಿಸುತ್ತಿದ್ದು, ಇದೇ ವೇಳೆ ಯಾರು ಕೂಡ ಪಟಾಕಿ ಹೊಡೆಯದಂತೆ ಮನವಿ ಮಾಡಿದರು.

  ನೇರಪ್ರಸಾರದಿಂದಾಗಿ ರಾಜ್ಯದ ಎರಡು ಕೋಟಿ ಜನರು ಒಟ್ಟಿಗೆ ದೀಪಾವಳಿ ಆಚರಿಸಲಿದ್ದಾರೆ. ಕಳೆದ ವರ್ಷದಂತೆಯೇ ಈ ವರ್ಷವೂ ನಾವು ದೀಪಾವಳಿಯಂದು ಪಟಾಕಿ ಸಿಡಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡೋಣ ಎಂದರು.  ಈ ಬಾರಿ ನಾವು ರಾಜ್ಯದ ಜನರು ಒಟ್ಟಿಗೆ ದೀಪಾವಳಿಯಂದು ಲಕ್ಷ್ಮಿ ಪೂಜೆ ನಡೆಸುತ್ತೇವೆ. ಸಂಜೆ 7.39 ನಿಮಿಷದಿಂದ ಇದರ ನೇರಪ್ರಸಾರ ಮಾಡಲಾಗುವುದು. ಸಂಜೆ ಸಮಯದಲ್ಲಿ ಜನರು ಪಟಾಕಿ ಹೊಡೆಯುವ ಬದಲು ಈ ಲಕ್ಷ್ಮಿ ಪೂಜೆ ನೇರ ಪ್ರಸಾರ ವೀಕ್ಷಿಸಬೇಕು. ದೀಪಾವಳಿಯಂದು ಪ್ರತಿ ಮನೆಯಲ್ಲಿ ಲಕ್ಷ್ಮಿ ಪೂಜೆ ನಡೆಸಿದರೆ ಅದು ಸಕಾರಾತ್ಮಕ ವಾತಾವರಣ ಸೃಷ್ಟಿಸುತ್ತದೆ. ಈ ವಿಶೇಷ ಪೂಜೆಯಲ್ಲಿ ಕ್ಯಾಬಿನೆಟ್​ ಸಚಿವರು ಭಾಗಿಯಾಗಲಿದ್ದಾರೆ ಎಂದರು.

  ಇದನ್ನು ಓದಿ: ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ವಿರುದ್ಧ ರಾಜ್ಯಾದ್ಯಂತ ರೈತ ಸಂಘಟನೆಗಳಿಂದ ಪ್ರತಿಭಟನೆ

  ರಾಜ್ಯದಲ್ಲಿ ಮಾಲಿನ್ಯದಿಂದಾಗಿ ಕೊರೋನಾ ಪ್ರಕರಣಗಳು ಕೂಡ ಹೆಚ್ಚುತ್ತಿವೆ. ಪ್ರತಿ ವರ್ಷ ದೆಹಲಿಯಲ್ಲಿ ಈ ಸಮಯದಲ್ಲಿ ಮಾಲಿನ್ಯ ಹೆಚ್ಚುತ್ತದೆ. ನೆರೆಯ ಪಂಜಾಬ್​, ಹರಿಯಾಣ ಮತ್ತು ಉತ್ತರ ಪ್ರದೇಶದಲ್ಲಿ ಕೃಷಿ ತ್ಯಾಜ ಸುಡುವಿಕೆಯಿಂದ ದೆಹಲಿಯಲ್ಲಿ ಮಾಲಿನ್ಯ ಹೆಚ್ಚುತ್ತದೆ. ಮುಂದಿನ ವರ್ಷದಿಂದ ಈ ತ್ಯಾಜ್ಯ ನಿರ್ವಹಣೆಗೆ ರಾಸಾಯನಿಕ ದ್ರಾವಣ ಬಳಸುತ್ತವೆ ಎಂಬುದು ನಮ್ಮ ಆಶಯ ಎಂದರು.

  ದೆಹಲಿಯಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ (ಎಕ್ಯೂಐ) 452ಕ್ಕೆ ತಲುಪಿದರ ಪರಿಣಾಮ ಮಾಲಿನ್ಯ ಹೆಚ್ಚಿದೆ. ಈ ನಡುವೆ ರಾಜಧಾನಿಯಲ್ಲಿ ಗುರುವಾರ 6.842 ಹೊಸ ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿದೆ. ಇದೆರಡನ್ನು ನಿಯಂತ್ರಿಸಲು ಸರ್ಕಾರ ಈ ತಂತ್ರದ ಮೊರೆ ಹೋಗಿದೆ.
  Published by:Seema R
  First published: