Delhi Govt: ದೆಹಲಿ ಸರ್ಕಾರದ ಸೋಮಾರಿತನದಿಂದ ಆಸ್ಪತ್ರೆ ನಿರ್ಮಾಣ ವಿಳಂಬವಾಗುತ್ತಿದೆ: ಗರಂ ಆದ ದೆಹಲಿ ಹೈಕೋರ್ಟ್​

ಕೇಂದ್ರದ ಪರವಾಗಿ ವಾದಿಸಿದ ವಕೀಲ ಅನುರಾಗ್ ಅಹ್ಲುವಾಲಿಯಾ, ಯೋಜನೆಯು 80% ಪೂರ್ಣಗೊಂಡಿದೆ ಮತ್ತು ಡಿಸೆಂಬರ್ 2018 ರಿಂದ ದೆಹಲಿ ಸರ್ಕಾರದ ಅರಣ್ಯ ಇಲಾಖೆಯಿಂದ ಅನುಮತಿಗಾಗಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.

ದೆಹಲಿ ಹೈಕೋರ್ಟ್

ದೆಹಲಿ ಹೈಕೋರ್ಟ್

 • Share this:
  ದೆಹಲಿ ಹೈಕೋರ್ಟ್ (The Delhi High Court ) ಬುಧವಾರ ನಗರದ ನಜಾಫ್‌ಗರ್​ Najafgarh  ಪ್ರದೇಶದ 100 ಹಾಸಿಗೆಗಳ ಆಸ್ಪತ್ರೆಯನ್ನು ಪೂರ್ಣಗೊಳಿಸದಿರುವುದು ಸಾರ್ವಜನಿಕರ ದೌರ್ಭಾಗ್ಯವಾಗಿದೆ ಏಕೆಂದರೆ ಕೇಂದ್ರವು ಪತ್ರ ಬರೆದರೂ ಅರಣ್ಯ ಪ್ರದೇಶದ ಕ್ಲಿಯರೆನ್ಸ್​  ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ದೆಹಲಿ ಸರ್ಕಾರವು ಆಲಸ್ಯದಿಂದ ವರ್ತಿಸುತ್ತಿದೆ ಎಂದು ಹೈಕೋರ್ಟ್​ ಗರಂ ಆಗಿದೆ.

  ಮುಖ್ಯ ನ್ಯಾಯಮೂರ್ತಿ ಡಿಎನ್ ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ (DN Patel and Justice Jyoti Singh) ಅವರ ಪೀಠವು ದೆಹಲಿ ಸರ್ಕಾರಕ್ಕೆ ತನ್ನ ಉತ್ತರವನ್ನು ಸಲ್ಲಿಸಲು ಸಮಯವನ್ನು ನೀಡಿದೆ ಮತ್ತು ಕಾನೂನಿನ ಅಡಿಯಲ್ಲಿ ಕೇಂದ್ರದ ಅಗತ್ಯವಿರುವ ಅನುಮತಿ/ಮಂಜೂರಾತಿಯನ್ನು ನೀಡಬಹುದಾದ ಕನಿಷ್ಠ ಸಮಯವನ್ನು ಸೂಚಿಸಿ ಮತ್ತು ನವೆಂಬರ್ 8 ರಂದು ವಿಚಾರಣೆಗೆ ವಿಷಯವನ್ನು ಮುಂದೂಡಿದೆ.

  ರಾಜೇಶ್ ಕೌಶಿಕ್ ಎಂಬ ವಕೀಲರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಪೀಠವು ಆಲಿಸುತ್ತಿದ್ದು, ನೈರುತ್ಯ ದೆಹಲಿಯ ನಜಾಫ್‌ಗರ್​ ಗ್ರಾಮೀಣ ಆರೋಗ್ಯ ತರಬೇತಿ ಕೇಂದ್ರದ ಸ್ಥಳದಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಲು ಎರಡು ಸರ್ಕಾರಗಳಿಗೆ ನಿರ್ದೇಶನ ನೀಡಬೇಕೆಂದು ಈ ಅರ್ಜಿಯಲ್ಲಿ ಕೋರಲಾಗಿದೆ.

   ಆಸ್ಪತ್ರೆ ನಿರ್ಮಾಣವು ಮುಗಿಯುವಂತೆ ಏನಾದರೂ ಮಾಡಿ. ನಮ್ಮ ಕೈಲಿ ಆಸ್ಪತ್ರೆ ನಿರ್ಮಾಣ ಮಾಡಲು ಆಗುವುದಿಲ್ಲ ಎಂದು ಕೂಡ ಹೇಳಬಹುದು ಆದರೆ ಬಿಗಿಯಾಗಿ ಏನೂ ಮಾಡದೇ ಕುಳಿತುಕೊಳ್ಳಬೇಡಿ. ನೀವು ಕಾನೂನಿನ ಪ್ರಕಾರ ಏನು ಆಗಬೇಕು ಅದನ್ನು ಆದಷ್ಟು ಬೇಗ ನಿರ್ಧರಿಸಿ ಎಂದು ಪೀಠ ಹೇಳಿದೆ. ದೆಹಲಿ ಸರ್ಕಾರದ ಆಲಸ್ಯದ ಧೋರಣೆಯಿಂದಾಗಿ 100 ಹಾಸಿಗೆಗಳ ಆಸ್ಪತ್ರೆಯನ್ನು ಪೂರ್ಣಗೊಳಿಸಲು ಸಾಧ್ಯವಾಗದಿರುವುದು ಸಾರ್ವಜನಿಕರ ದೌರ್ಭಾಗ್ಯವಾಗಿದೆ ಎಂದು ಸಹ ಕಿಡಿಕಾರಿದೆ.


  ಯೂನಿಯನ್ ಆಫ್ ಇಂಡಿಯಾ ಪತ್ರದ ಮೇಲೆ ಪತ್ರ ಬರೆಯುತ್ತಿದೆ, ಆದರೂ ದೆಹಲಿ ಸರ್ಕಾರವು ಯಾವುದೇ ಉತ್ತರವನ್ನು ಸರಿಯಾಗಿ ನೀಡುತ್ತಿಲ್ಲ. ಯಾವುದೇ ಕೌಂಟರ್ ಸಲ್ಲಿಸಿಲ್ಲ (ದೆಹಲಿ ಸರ್ಕಾರ) ಎಂದು ಪೀಠ ಹೇಳಿದೆ. ಕೇಂದ್ರದ ಪರವಾಗಿ ವಾದಿಸಿದ ವಕೀಲ ಅನುರಾಗ್ ಅಹ್ಲುವಾಲಿಯಾ, ಯೋಜನೆಯು 80% ಪೂರ್ಣಗೊಂಡಿದೆ ಮತ್ತು ಡಿಸೆಂಬರ್ 2018 ರಿಂದ ದೆಹಲಿ ಸರ್ಕಾರದ ಅರಣ್ಯ ಇಲಾಖೆಯಿಂದ ಅನುಮತಿಗಾಗಿ ಕಾಯುತ್ತಿದೆ ಎಂದು ತಿಳಿಸಿದ್ದಾರೆ.


  ವಕೀಲ ಸಮೀರ್ ಚಂದ್ರ ಅವರ ಮೂಲಕ ಸಲ್ಲಿಸಲಾದ ಈ  ಅರ್ಜಿಯಲ್ಲಿ ಕಟ್ಟಡದ ರಚನೆ ಪೂರ್ಣಗೊಂಡಿದೆ ಮತ್ತು ಕೋವಿಡ್ -19 ರ ಮೂರನೇ ಅಲೆ ಪ್ರಾರಂಭವಾಗುವ ಮೊದಲು ಸಾರ್ವಜನಿಕರು ಆಸ್ಪತ್ರೆಯನ್ನು ನಡೆಸುವುದು ಅತ್ಯಗತ್ಯ ಎಂದು ಹೇಳಿದ್ದಾರೆ.


  ಇದನ್ನೂ ಓದಿ: Instagram Viral video: ಇನ್‌ಸ್ಟಾಗ್ರಾಮ್ ವಿಡಿಯೋಗಾಗಿ ರಸ್ತೆಯಲ್ಲಿ ನೃತ್ಯ ಮಾಡಿ ತೊಂದರೆಗೆ ಸಿಲುಕಿದ ಮಹಿಳೆ!

  ಈ ಪ್ರದೇಶದಲ್ಲಿ ಯಾವುದೇ ಉತ್ತಮ ಆಸ್ಪತ್ರೆಗಳಿಲ್ಲ ಮತ್ತು ಈ 100 ಹಾಸಿಗೆಗಳ ಸೌಲಭ್ಯವನ್ನು ಸ್ಥಾಪಿಸುವುದರಿಂದ 10 ಕಿಮೀ ವ್ಯಾಪ್ತಿಯಲ್ಲಿ 73 ಹಳ್ಳಿಗಳಲ್ಲಿ 15 ಲಕ್ಷ ಜನರ ಅಗತ್ಯವನ್ನು ಪೂರೈಸಬಹುದು ಎಂದು ಮನವಿಯಲ್ಲಿ ತಿಳಿಸಲಾಗಿದೆ. ಮುಂದಿನ ನವೆಂಬರ್ 8 ರಂದು ಈ ಪ್ರಕರಣದ ವಿಚಾರಣೆ ನಡೆಯಲಿದೆ.
  ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ. ಹಾಗೂ ಗುಂಪುಗೂಡುವುದನ್ನು ಆದಷ್ಟು ನಿಯಂತ್ರಿಸಬೇಕಿದೆ. ಸರ್ಕಾರ ಕಾಲಕಾಲಕ್ಕೆ ಹೊರಡಿಸುತ್ತಿರುವ ಕೊರೋನಾ ಮಾರ್ಗಸೂಚಿಗಳನ್ನು ಪ್ರತಿಯೊಬ್ಬರೂ ಕಡ್ಡಾಯವಾಗಿ ಪಾಲಿಸಬೇಕಿದೆ.
  Published by:HR Ramesh
  First published: