ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ದೆಹಲಿ ಸಂಪುಟ ಅಸ್ತು: ಕನ್ನಡಿಗರ ಮನವಿಗೆ ಸ್ಪಂಧಿಸಿದ ಸಿಎಂ ಕೇಜ್ರಿವಾಲ್​​


Updated:August 9, 2018, 4:55 PM IST
ಕನ್ನಡ ಭಾಷಾ ಅಕಾಡೆಮಿ ಸ್ಥಾಪನೆಗೆ ದೆಹಲಿ ಸಂಪುಟ ಅಸ್ತು: ಕನ್ನಡಿಗರ ಮನವಿಗೆ ಸ್ಪಂಧಿಸಿದ ಸಿಎಂ ಕೇಜ್ರಿವಾಲ್​​

Updated: August 9, 2018, 4:55 PM IST
ನ್ಯೂಸ್​-18 ಕನ್ನಡ

ನವದೆಹಲಿ(ಆಗಸ್ಟ್​ 08): ದೆಹಲಿ ಕನ್ನಡ ಸಂಘದ ಮನವಿಗೆ ಸ್ಪಂಧಿಸಿ ಕೇಂದ್ರ ಸರ್ಕಾರವೂ ಭಾರತದ ರಾಜಧಾನಿಯ ಮೆಟ್ರೋ ಸ್ಟೇಷನ್​ವೊಂದಕ್ಕೆ ಭಾರತ ರತ್ನ ಸರ್​.ಎಂ ವಿಶ್ವೇಶ್ವರಯ್ಯ ಅವರ ಹೆಸರನ್ನು ಇಟ್ಟಿತು. ಈ ಬೆನ್ನಲ್ಲೇ ಸಂಘದ ಮತ್ತೊಂದು ಮನವಿಗೆ ಸ್ಪಂಧಿಸಿರುವ ಸಿಎಂ ಕೇಜ್ರಿವಾಲ್​ ಸರ್ಕಾರ ದೆಹಲಿಯಲ್ಲಿ ಕನ್ನಡ ಭಾಷಾ ಅಕಾಡೆಮಿಯನ್ನು ಸ್ಥಾಪಿಸಲು ಮುಂದಾಗಿದೆ.

ಅಧಿಕೃತವಾಗಿ ಇಂದು ದೆಹಲಿ ಸರ್ಕಾರದ ಸಂಪುಟ ಕನ್ನಡ ಭಾಷೆ ಅಕಾಡೆಮಿ ಸ್ಥಾಪನೆಗೆ ಒಪ್ಪಿಗೆ ನೀಡಿದ್ದು, ಲೆಪ್ಟಿನೆಂಟ್ ಗವರ್ನರ್ ಸಹಿ ಆದ ಕೂಡಲೇ ಜಾರಿಗೆ ಬರಲಿದೆ ಎನ್ನಲಾಗಿದೆ. ಸಿಎಂ ಕೇಜ್ರಿವಾಲ್​ ಸರ್ಕಾರ ಸಂಪುಟ ಕನ್ನಡ ಸೇರಿದಂತೆ 15 ಭಾಷೆಗಳ ಅಕಾಡೆಮಿ ಸ್ಥಾಪನೆಗೆ ಒಪ್ಪಿಗೆ ನೀಡಿದೆ ಎನ್ನುತ್ತಿವೆ ಮೂಲಗಳು.

ಈ ಸಂಬಂಧ ನ್ಯೂಸ್​-18 ಜತೆಗೆ ಮಾತಾಡಿದ ದೆಹಲಿ ಕನ್ನಡ ಸಂಘದ ಅಧ್ಯಕ್ಷ ವಸಂತ್​ ಶೆಟ್ಟಿ ಅವರು, ನಾವು ಕನ್ನಡ ಭಾಷೆ ಅಕಾಡೆಮಿ ಸ್ಥಾಪನೆಗಾಗಿ ಹೋರಾಟ ಮಾಡಲಿಲ್ಲ. ಬದಲಿಗೆ ಪಂಚ ದ್ರಾವಿಡ ಭಾಷ ವಿಚಾರ ಸಂಕೀರ್ಣ ಕಾರ್ಯಕ್ರಮವೊಂದರಲ್ಲಿ ಸರ್ಕಾರದ ಗಮನಕ್ಕೆ ತಂದಿದ್ದೆವು ಎಂದರು.

ದೆಹಲಿ ಸರ್ಕಾರದ ನಿರ್ಧಾರ ಸ್ವಾಗತಾರ್ಹ. ನಾಳೆ ದೆಹಲಿ ಉಪ ಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಭೇಟಿ ಮಾಡಲಿದ್ದು, ಸಂಘದ ವತಿಯಿಂದ ದನ್ಯವಾದಗಳನ್ನು ತಿಳಿಸಲಿದ್ದೇವೆ. ನಮ್ಮ ಕನ್ನಡಿಗರು ಕಾರ್ಯಕ್ರಮದಲ್ಲಿ ಮಾಡಿದ ಫಲವಾಗಿ ಸಿಎಂ ಕೇಜ್ರಿವಾಲ್​ ಸರ್ಕಾರ ಒಪ್ಪಿಗೆ ಮಾಡಿದೆ ಎಂದು ವಸತ್​ ಶೆಟ್ಟಿ ಅವರು ತಿಳಿಸಿದರು.

ಈ ಹಿಂದೆಯೂ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಸಂಪರ್ಕಿಸಿ ವಿಶ್ವೇಶ್ವರಯ್ಯ ಅವರ ವಿಚಾರ ಗಮನಕ್ಕೆ ತಂದಿದ್ದೆವು. ಈ ವೇಳೆ ವೆಂಕಯ್ಯ ನಾಯ್ಡು ಅವರು ನಮ್ಮ ಮನವಿಗೆ ಕೂಡಲೇ ಸ್ಪಂಧಿಸಿ ದೆಹಲಿಯ ಮೆಟ್ರೋ ನಿಲ್ದಾಣವೊಂದಕ್ಕೆ ಭಾರತ ರತ್ನ ಸರ್​.ಎಂ ವಿಶ್ವೇಶ್ವರಯ್ಯ ಇಟ್ಟಿದ್ದಾರೆ.

ಅಲ್ಲದೇ ಕೇಂದ್ರ ಸಚಿವ ಅನಂತ್​ ಕುಮಾರ್​ ಅವರೊಂದಿಗೆ ರಾಣಿ ಅಬ್ಬಕ್ಕ ಅವರಿಗೆ ಶೌರ್ಯ ಪ್ರಶಸ್ತಿ ನೀಡುವಂತೆ ಮನವಿ ಮಾಡಿದ್ದೇವೆ. ಅವರು ಕೂಡ ನಮ್ಮ ಬೇಡಿಕೆಯನ್ನು ಈಡೇರಿಸುತ್ತೇವೆ ಎಂದಿದ್ದಾರೆ. ಈ ಸಂಬಂಧ ಮುಂದಿನ ದಿನಗಳಲ್ಲಿ ಕೇಂದ್ರ ಸಚಿವೆ ನಿರ್ಮಲ ಸೀತಾರಾಮನ್​ ಅವರನ್ನು ಭೇಟಿಯಾಗಲಿದ್ದು, ಅದರೊಂದಿಗೂ ಚರ್ಚಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Loading...

ಇನ್ನು ದೆಹಲಿ ಕರ್ನಾಟಕ ಸಂಘ ಜೆಎನ್​ಯೂ ವಿಶ್ವ ವಿದ್ಯಾಲಯದಲ್ಲಿಯೂ ಕನ್ನಡ ಇಲಾಖೆಯನ್ನು ಶುರು ಮಾಡಲು ಮನವಿ ಮಾಡಿತ್ತು. ಬಳಿಕ ಕೇಂದ್ರ ಸರ್ಕಾರ ಮನವಿಗೆ ಸ್ಪಂಧಿಸಿ ಸ್ಥಾಪಿಸಿತು. ಕನ್ನಡ ಸಂಘದ ಮನವಿಗೆ ಸಂದ ನಾಲ್ಕನೇ ಜಯ ಕನ್ನಡ ಭಾಷ ಅಕಾಡೆಮಿ ಸ್ಥಾಪನೆಗೆ ಒಪ್ಪಿಗೆ ನೀಡಿದ ವಿಚಾರವಾಗಿದೆ.
First published:August 9, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...