Delhi: ದೆಹಲಿ ಸರ್ಕಾರದಿಂದ ಭರ್ಜರಿ ಗುಡ್ ನ್ಯೂಸ್, ಹೆಣ್ಣು ಮಗುವಿನ ಹೆಸರಲ್ಲಿ ಬ್ಯಾಂಕ್ ಅಕೌಂಟ್!
ದೆಹಲಿಯ (Delhi) ಜನರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು, ಈ ನೂತನ ಯೋಜನೆಯ ಮೂಲಕ ಹೆಣ್ಣು ಮಕ್ಕಳ ಪೋಷಕರಿಗೆ ಅನುಕೂಲವಾಗಲಿದೆ ಎಂದು ದೆಹಲಿಯ ಸರ್ಕಾರ ತಿಳಸಿದೆ.
ದೆಹಲಿ (ಜೂನ್ 10): ದೆಹಲಿಯ (Delhi) ಜನರಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಹೌದು, ಈ ನೂತನ ಯೋಜನೆಯ ಮೂಲಕ ಹೆಣ್ಣು ಮಕ್ಕಳ ಪೋಷಕರಿಗೆ ಅನುಕೂಲವಾಗಲಿದೆ ಎಂದು ದೆಹಲಿಯ ಸರ್ಕಾರ ತಿಳಸಿದೆ. ಇಂದಿನಿಂದ ವಾಯುವ್ಯ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospitals) ಹೆಣ್ಣು ಶಿಶುಗಗಳಿಗೆ ಜನನ ಪ್ರಮಾಣಪತ್ರ, ಆಧಾರ್ ಕಾರ್ಡ್ (Aadhar) ಮತ್ತು ಬ್ಯಾಂಕ್ (Bank) ಖಾತೆಗಳನ್ನು ನೀಡಲಿದೆ. ಆದರೆ ಇದರಲ್ಲಿ ವಿಶೇಷವಾಗಿ ಮಗುವಿನ ಹೆಜ್ಜೆಯ ಗುರುತು ಮತ್ತು ಫೋಟೋ (Photo) ಇರಲಿದೆ ಎಂದು ತಿಳಿಸಲಾಗಿದೆ. ಇನ್ನು, 'ನನ್ಹಿ ಪರಿ' ಯೋಜನೆ ಎಂದು ಹೇಳಲಾಗಿರುವ ಈ ಯೋಜನೆಯನ್ನು ಜಿಲ್ಲಾ ಮ್ಯಾಜಿಸ್ಟ್ರೇಟ್ ಚೇಷ್ಟಾ ಯಾದವ್ ಇಂದಿನಿಂದ ಜಾರಿಯಲ್ಲಿರಲಿದೆ ಎಂದು ಹೇಳಿದ್ದಾರೆ.
ಪೋಷಕರಿಗೆ ಸಹಾಯವಾಗಲಿದೆ 'ನನ್ಹಿ ಪರಿ' ಯೋಜನೆ:
ಇನ್ನು, 'ನನ್ಹಿ ಪರಿ' ಯೋಜನೆಯು ಹೆಣ್ಣುಮಗುವಿನ ಪೋಷಕರಿಗೆ ವಿಶೇಷವಾಗಿ ಸಹಾಯವಾಗಲಿದೆ. ಹೆಣ್ಣು ಮಗು ಪೋಷಕರು ಆಧಾರ್ ಕಾರ್ಡ್ ಹಾಗೂ ಜನನ ಪ್ರಮಾಣ ಪತ್ರಕ್ಕಾಗಿ ಇನ್ನು ಮುಂದೆ ಯಾವುದೇ ಅಲೆದಾಟ ಮಾಡುವ ಅವಶ್ಯಕತೆ ಇರುವುದಿಲ್ಲ. ನನ್ಹಿ ಪರಿ ಯೋಜನೆಯಿಂದ ಅವರ ಕಷ್ಟಗಳು ದೂರವಾಗಲಿದೆ. ಈ ಕಾರಣದಿಂದಾಗಿಯೇ ಈ ವಿನೂತನ ಕಾರ್ಯಕ್ರಮವನ್ನು ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಚೇಷ್ಟಾ ಯಾದವ್ ಮಾಹಿತಿ ನೀಡಿದ್ದಾರೆ.
ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಿಂದ ಈ ಯೋಜನೆ ಆರಂಭ:
ಇನ್ನು, ಈ ಯೋಜನೆಯ ಕುರಿತು ಈಗಾಗಲೇ ಆಧಾರ್ ಅಧಿಕಾರಿಗಳು ಮತ್ತು ದೆಹಲಿಯ ಮುನ್ಸಿಪಲ್ ಕಾರ್ಪೊರೇಷನ್ ಜೊತೆಗೆ ಚರ್ಚೆಯಾಗಿದ್ದು, ಇಂದಿನಿಂದ ಇಲ್ಲಿನ ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯಲ್ಲಿ ಚಾಲನೆ ದೊರಕಿದೆ. ಇದಲ್ಲದೇ ಇ ಆಸ್ಪತ್ರೆ ಹೊರತಾಗಿಯೂ ವಾಯುವ್ಯ ಜಿಲ್ಲೆಯ 3 ಆಸ್ಪತ್ರೆಗಳಾದ ಬಾಬಾ ಸಾಹೇಬ್ ಅಂಬೇಡ್ಕರ್ ಆಸ್ಪತ್ರೆ, ಭಗವಾನ್ ಮಹಾವೀರ್ ಆಸ್ಪತ್ರೆ ಮತ್ತು ದೀಪ್ ಚಂದ್ ಬಂಧು ಆಸ್ಪತ್ರೆಗಳಲ್ಲಿ ನನ್ಹಿ ಪರಿ ಯೋಜನೆಯನ್ನು ಮುಂದಿನ ದಿನಗಳಲ್ಲಿ ಆರಂಭಿಸಲಾಗುವುದು ಎಂದು ಹೇಳಲಾಗಿದೆ.
'ನನ್ಹಿ ಪರಿ' ಯೋಜನೆ ಹೆಣ್ಣು ಮಕ್ಕಳ ಪೋಷಕರಿಗೆ ಅನೇಕ ರೀತಿಯಲ್ಲಿ ಸಹಾಯಕವಾಗಲಿದೆ. ಇಲ್ಲಿ ಕೇವಲ ಹೆಣ್ಣು ಮಕ್ಕಳ ಆಧಾರ್ ಕಾರ್ಡ್, ಜನನ ಪ್ರಮಾಣಪತ್ರ, ಬ್ಯಾಂಕಿಂಗ್ ದಾಖಲೆ ಸೇರಿದಂತೆ ಸುಕನ್ಯಾ ಸಮೃದ್ಧಿ ಯೋಜನೆ ಮತ್ತು ದೆಹಲಿ ಸರ್ಕಾರ ನೀಡುತ್ತಿರುವ ಲಾಡ್ಲಿ ಯೋಜನೆಗಳ ನೊಂದಣಿಯನ್ನು ಮಾಡಬಹುದಾಗಿದೆ ಎಂದು ಯಾದವ್ ತಿಳಿಸಿದ್ದಾರೆ.
ಈಗಾಗಲೇ ಈ ಯೋಜನೆ ಜಾರಿಗೆ ಬಂದಿದ್ದು, ಸಂಜಯ್ ಗಾಂಧಿ ಸ್ಮಾರಕ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಬಳಿ ‘ನನ್ಹಿ ಪರಿ’ ಯೋಜನೆಯ ಸಹಾಯ ಕೇಂದ್ರವನ್ನು ತೆರೆಯಲಾಗಿದೆ. ಈ ಯೋಜನೆಯ ಫಲಾನುಭವಿಗಳು ಇಲ್ಲಿ ಹೆಚ್ಚಿನ ಮಾಹಿತಿಗಳನ್ನು ಪಡೆದುಕೊಳ್ಳಬಹುದಾಗಿದೆ. ಇದಲ್ಲದೇ ಹೆಣ್ಣು ಮಕ್ಕಳ ಪೋಷಕರು ತಾಯಿ ಮತ್ತು ಮಗು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುವ ಮೊದಲು ಈ ದಾಖಲೆಗಳನ್ನು ಹೊಂದಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಮಾಹಿತಿ ನೀಡಿದ್ದಾರೆ.
ಏನಾದರೂ ಬೇಗನೇ ಡಿಸ್ಚಾರ್ಜ್ ಆದಲ್ಲಿ, ನಂತರದಲ್ಲಿಯೂ ಹೆಣ್ಣು ಮಕ್ಕಳ ಪೋಷಕರು ದಾಖಲಾತಿಗಳನ್ನು ಪಡೆದುಕೊಳ್ಳಲು ಇಲ್ಲಿಗೆ ಬರಬಹುದಾಗಿದೆ. ಅವರಿಗೆ ನೀಡಬೇಕಾದ ಎಲ್ಲಾ ದಾಖಲಾತಿಗಳೂ ಇಲ್ಲಿ ಅವರಿಗೆ ನೀಡಲಾಗುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ.
Published by:shrikrishna bhat
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ