ದೆಹಲಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ಕೇಜ್ರಿವಾಲ್​ ಸರ್ಕಾರಕ್ಕೆ 25 ಕೋಟಿ ರೂ. ದಂಡ!

ದೆಹಲಿ ಸರ್ಕಾರ 25 ಕೋಟಿ ರೂ. ದಂಡ ಕಟ್ಟದೇ ಹೋದರೆ ಪ್ರತಿತಿಂಗಳು ಹೆಚ್ಚುವರಿಯಾಗಿ 10 ಕೋಟಿ ರೂ. ದಂಡ ಕಟ್ಟಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೇಳಿದೆ.

sushma chakre | news18
Updated:December 4, 2018, 11:08 AM IST
ದೆಹಲಿಯಲ್ಲಿ ನಿಯಂತ್ರಣಕ್ಕೆ ಬಾರದ ವಾಯುಮಾಲಿನ್ಯ; ಕೇಜ್ರಿವಾಲ್​ ಸರ್ಕಾರಕ್ಕೆ 25 ಕೋಟಿ ರೂ. ದಂಡ!
ಸಾಂದರ್ಭಿಕ ಚಿತ್ರ
sushma chakre | news18
Updated: December 4, 2018, 11:08 AM IST
ನವದೆಹಲಿ (ಡಿ.4): ವಾಯು ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ವಿಫಲವಾಗಿರುವ ದೆಹಲಿ ಸರ್ಕಾರಕ್ಕೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ 25 ಕೋಟಿ ರೂ. ದಂಡ ವಿಧಿಸಿದೆ.

ದೆಹಲಿಯಲ್ಲಿ ದಿನದಿಂದ ದಿನಕ್ಕೆ ವಾಯುಮಾಲಿನ್ಯದ ಪ್ರಮಾಣ ಏರುತ್ತಲೇ ಇದೆ. ಆದರೆ, ಆ ಸಮಸ್ಯೆಯನ್ನು ನಿಯಂತ್ರಿಸುವಲ್ಲಿ ದೆಹಲಿ ಸರ್ಕಾರ ವಿಫಲವಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿಯ ಜೊತೆ ಸೇರಿ ದೆಹಲಿ ಸರ್ಕಾರ 25 ಕೋಟಿ ರೂ. ದಂಡ ಕಟ್ಟಬೇಕು ಎಂದು ಆದೇಶ ನೀಡಲಾಗಿದೆ.

ಸರ್ಕಾರದ ಬೊಕ್ಕಸದಲ್ಲಿ ಹಣವಿಲ್ಲದಿದ್ದರೆ ಸರ್ಕಾರದ ಅಧಿಕಾರಿಗಳ ಸಂಬಳ ಮತ್ತು ಮಾಲಿನ್ಯಕ್ಕೆ ಕಾರಣರಾಗುತ್ತಿರುವವರಿಂದ ಹಣವನ್ನು ವಸೂಲಿ ಮಾಡಿ ಕಟ್ಟಬಹುದು. ಮಾಲಿನ್ಯ ಹೆಚ್ಚಾಗಲು ಕಾರಣರಾಗುತ್ತಿರುವವರಿಗೆ ಸೂಕ್ತ ದಂಡ ವಿಧಿಸಿ ಕ್ರಮ ಕೈಗೊಂಡಿದ್ದರೆ ಈ ಸಮಸ್ಯೆ ಇಷ್ಟು ಉಲ್ಬಣವಾಗುತ್ತಿರಲಿಲ್ಲ. ಆದರೆ, ಸರ್ಕಾರ ಈ ನಿಟ್ಟಿನಲ್ಲಿ ನಿರ್ಲಕ್ಷ್ಯ ತೋರಿದೆ ಎಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಆಕ್ಷೇಪಿಸಿದೆ.

ಇದನ್ನೂ ಓದಿ: ಕೊಡಂಗಲ್​​ನಲ್ಲಿ ಕೆಸಿಆರ್ ಸಭೆಗೂ ಮುನ್ನ ತೆಲಂಗಾಣ ಕಾಂಗ್ರೆಸ್​ ನಾಯಕ ರೇವಂತ್ ರೆಡ್ಡಿ ಬಂಧಿಸಿದ ಪೊಲೀಸರು

ಗುರುಗ್ರಾಮ್, ನೊಯ್ಡು, ಪಾರಿದಾಬಾದ್ , ಗಾಜಿಯಾದ್ ಸುತ್ತಮುತ್ತ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗಿದ್ದು, ವಿಷಯುಕ್ತ ಗಾಳಿ ಸೇವನೆಯಿಂದಾಗಿ ಜನರು ನಾನಾ ರೀತಿಯ ತೊಂದರೆ ಎದುರಿಸುವಂತಾಗಿದೆ. ಈ ಹಿನ್ನೆಲೆಯಲ್ಲಿ ಒಂದು ಷರತ್ತನ್ನೂ ವಿಧಿಸಿದ್ದು, ದೆಹಲಿ ಸರ್ಕಾರ 25 ಕೋಟಿ ರೂ. ದಂಡ ಕಟ್ಟದೇ ಹೋದರೆ ಪ್ರತಿತಿಂಗಳು ಹೆಚ್ಚುವರಿಯಾಗಿ 10 ಕೋಟಿ ರೂ. ದಂಡ ಕಟ್ಟಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ಹೇಳಿದೆ.

ಇದನ್ನೂ ಓದಿ: ದೆಹಲಿಯಲ್ಲಿ ಮಿತಿಮೀರಿದ ವಾಯು ಮಾಲಿನ್ಯ; ಖಾಸಗಿ ವಾಹನಗಳ ನಿರ್ಬಂಧಕ್ಕೆ ಯೋಚನೆ

First published:December 4, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...