ಅತ್ಯಾಚಾರ ಸಂತ್ರಸ್ತೆ ಮುಖಕ್ಕೆ ಮಸಿಬಳಿದು, ಮೆರವಣಿಗೆ; Delhiಯಲ್ಲಿ ಅಮಾನವೀಯ ಘಟನೆ

ಘಟನೆ ಸಂಬಂಧ ಸ್ವಾತಿ ಮಲಿವಾಲ್​ ತಮ್ಮ ತಂಡದೊಂದಿಗೆ ಆಸ್ಪತ್ರೆಯಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಸಂತ್ರಸ್ತೆಗೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ದೆಹಲಿ (ಜ. 27):  ಸಾಮೂಹಿಕ ಅತ್ಯಾಚಾರಕ್ಕೆ (Gang Rape) ಒಳಗಾದ ಯುವತಿಯ ಮೇಲೆ ಗುಂಪೊಂದು ಅಮಾನವೀಯವಾಗಿ ವರ್ತಿಸಿರುವ ಘಟನೆ ರಾಷ್ಟ್ರರಾಜಧಾನಿಯನ್ನು (Delhi) ಬೆಚ್ಚಿಬೀಳಿಸಿದೆ. ಸಂತ್ರಸ್ತೆಯ ತಲೆ ಕೂದಲು ಬೋಳಿಸಿ, ಆಕೆಯ ಮುಖಕ್ಕೆ ಕಪ್ಪು ಮಸಿ ಬಳಿದು ಆಕೆಯನ್ನು ನಡು ರಸ್ತೆಯಲ್ಲಿ ಸಾರ್ವಜನಿಕರ ಎದುರು ಮೆರವಣಿಗೆ ಮಾಡಲಾಗಿದೆ. ಈ ಪ್ರಕರಣದ ವಿಡಿಯೋ ಬೆಳಕಿಗೆ ಬರುತ್ತಿದ್ದಂತೆ ಮಹಿಳೆ ಮೇಲೆ ದೌರ್ಜನ್ಯ ನಡೆಸಿದ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದೆ ಎಂದು ಮಹಿಳಾ ಆಯೋಗ (Delhi Women Commission) ಟ್ವೀಟ್​ ಮೂಲಕ ತಿಳಿಸಿದೆ.

  ನವದೆಹಲಿಯಲ್ಲಿ ಬುಧವಾರ ಈ ಘಟನೆ ನಡೆದಿದ್ದು, ಈ ಪ್ರದೇಶದಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಗಳು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

  ಪ್ರಕರಣ ಸಂಬಂಧ ದೆಹಲಿ ಮಹಿಳಾ ಆಯೋಗದ (DCW)) ಮುಖ್ಯಸ್ಥೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಇದೊಂದು ದುರದೃಷ್ಟಕರ ಘಟನೆ ಎಂದು ಮಲಿವಾಲ್ ಹೇಳಿದ್ದಾರೆ.

  ಅಕ್ರಮ ಮದ್ಯ ಮಾರಾಟ ದಂಧೆಕೋರರಿಂದ ಕೃತ್ಯದ ಆರೋಪ

  ಅಕ್ರಮ ಮದ್ಯ ಮಾರಾಟ ದಂಧೆ ನಡೆಸುತ್ತಿದ್ದ ಆರೋಪಿಗಳು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಅಲ್ಲದೇ ಸಂತ್ರಸ್ತೆಗೆ ಪಾದರಕ್ಷೆಗಳ ಹಾರಾ ಹಾಕಿ, ಮುಖಕ್ಕೆ ಮಸಿ ಬಳಿದು, ಆ ಪ್ರದೇಶದಲ್ಲಿ ಮೆರವಣಿಗೆ ಮಾಡಲಾಯಿತು. ಅತ್ಯಂತ ದುರದೃಷ್ಟಕರ ಘಟನೆ ಆಗಿದೆ. ತಕ್ಷಣಕ್ಕೆ ಮಹಿಳೆ ಮತ್ತು ಆಕೆಯ ಕುಟುಂಬಕ್ಕೆ ಭದ್ರತೆ ಒದಗಿಸುವಂತೆ ಜೊತೆಗೆ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ದೆಹಲಿ ಪೊಲೀಸರಿಗೆ ಪತ್ರ ಬರೆಯುತ್ತಿದ್ದೇನೆ ಎಂದು ಸ್ವಾತಿ ಹೇಳಿದ್ದಾರೆ.

  ಸಂತ್ರಸ್ತೆ ನೆರವಿಗೆ ಮಹಿಳಾ ಆಯೋಗ

  ಘಟನೆ ಸಂಬಂಧ ಸ್ವಾತಿ ಮಲಿವಾಲ್​ ತಮ್ಮ ತಂಡದೊಂದಿಗೆ ಆಸ್ಪತ್ರೆಯಲ್ಲಿ ಸಂತ್ರಸ್ತೆಯನ್ನು ಭೇಟಿಯಾಗಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಇದೇ ವೇಳೆ ಸಂತ್ರಸ್ತೆಗೆ ಎಲ್ಲ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ.

  ಇದನ್ನು ಓದಿ: ಗೂಗಲ್​​ ಸಿಇಒ Sundar Pichai ವಿರುದ್ಧ ಮುಂಬೈನಲ್ಲಿ ಪ್ರಕರಣ ದಾಖಲು

  ಇನ್ನು ವಿಡಿಯೋದಲ್ಲಿ ಕಂಡು ಬಂದ ಹಾಗೂ ಪ್ರಕರಣ ಸಂಬಂಧ ನಾಲ್ವರು ಮಹಿಳೆಯರನ್ನು ಬಂಧಿಸಲಾಗಿದ್ದು, ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ ಶಹದಾರ, ಆರ್.ಸತ್ಯಸುಂದರಂ ತಿಳಿಸಿದ್ದಾರೆ.
  ಸಂತ್ರಸ್ತರಿಗೆ ಸಾಧ್ಯವಿರುವ ಎಲ್ಲ ಸಹಾಯ ಮತ್ತು ಸಮಾಲೋಚನೆಗಳನ್ನು ನೀಡಲಾಗುತ್ತಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಈಗಾಗಲೇ ತಂಡ ರಚಿಸಲಾಗಿದೆ. ಶೀಘ್ರವೇ ಎಲ್ಲ ಆರೋಪಿಗಳನ್ನು ಬಂಧಿಸುತ್ತೇವೆ ಎಂದಿದ್ದಾರೆ.

  ಮಹಿಳೆಯನ್ನು ಪ್ರೀತಿಸುವಂತೆ ಕಾಡುತ್ತಿದ್ದ ವ್ಯಕ್ತಿ
  ಸಂತ್ರಸ್ತ ಮಹಿಳೆ ಕಳೆದ ಕೆಲವು ವರ್ಷಗಳಿಂದ ಶಹದಾರ ಪ್ರದೇಶದಲ್ಲಿ ವಾಸಿಸುತ್ತಿದ್ದರು. ಮಗುವಿನ ಜೊತೆಗೆ ವಾಸವಿದ್ದ ಸಂತ್ರಸ್ತೆ ಮಹಿಳೆಯನ್ನು ಪ್ರೀತಿಸುವಂತೆ ಆತನ ನೆರೆಮನೆಯ ವ್ಯಕ್ತಿ ಕಾಡುತ್ತಿದ್ದ. ಆದರೆ, ಇದನ್ನು ಆಕೆ ನಿರಾಕರಿಸಿದ್ದಳು. ಈ ಹಿನ್ನಲೆ ಆತ ಆತ್ಮಹತ್ಯೆ ಮಾಡಿಕೊಂಡಿದ್ದ ಎಂದು ಐಎಎನ್​ಎಸ್​​ ತನಿಖೆಯ ಗೌಪ್ಯ ಮೂಲ ವರದಿ ಮಾಡಿದೆ.

  ಇದನ್ನು ಓದಿ: ನಿವೃತ್ತಿಹೊಂದಿದ ರಾಷ್ಟ್ರಪತಿಗಳ ಅಂಗರಕ್ಷಕ ಕುದುರೆ Virat​​; ಪ್ರೀತಿಯಿಂದ ಬೀಳ್ಕೊಟ್ಟ ಪ್ರಧಾನಿ

  ಆತನ ಹತ್ಯೆಗೆ ಸಂತ್ರಸ್ತ ಮಹಿಳೆ ಕಾರಣ ಎಂದು ಆತನ ಕುಟುಂಬಸ್ಥರು ಆಕೆ ಮೇಲೆ ಹಲ್ಲೆ ನಡೆಸಿದ್ದರು. ಈ ಸಂಬಂಧ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.

  ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಆಕೆಯ ಆರೋಗ್ಯ ಸ್ಥಿರವಾಗಿದೆ. ಪೊಲೀಸರು ಆಕೆಯ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪೊಲೀಸರು ಕಾನೂನು ಅಭಿಪ್ರಾಯವನ್ನು ಪಡೆದಿದ್ದಾರೆ.
  Published by:Seema R
  First published: