• Home
  • »
  • News
  • »
  • national-international
  • »
  • Delhi Gang Rape: ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್; ನಾಲ್ವರು ರೈಲ್ವೇ ಉದ್ಯೋಗಿಗಳ ಬಂಧನ

Delhi Gang Rape: ರೈಲು ನಿಲ್ದಾಣದಲ್ಲಿ ಮಹಿಳೆ ಮೇಲೆ ಗ್ಯಾಂಗ್ ರೇಪ್; ನಾಲ್ವರು ರೈಲ್ವೇ ಉದ್ಯೋಗಿಗಳ ಬಂಧನ

ಕೇಂದ್ರ ಡಿಸಿಪಿ ಶ್ರೀನಿವಾಸ್ ಗೌಡ ಆರ್ ಅವರು ಆರೋಪಿಗಳನ್ನು ಬಂಧಿಸಲು ಇನ್ಸ್‌ಪೆಕ್ಟರ್ ಕೆ ಕಾಂತರಾಜ್ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.  (ಸಾಂದರ್ಭಿಕ ಚಿತ್ರ)

ಕೇಂದ್ರ ಡಿಸಿಪಿ ಶ್ರೀನಿವಾಸ್ ಗೌಡ ಆರ್ ಅವರು ಆರೋಪಿಗಳನ್ನು ಬಂಧಿಸಲು ಇನ್ಸ್‌ಪೆಕ್ಟರ್ ಕೆ ಕಾಂತರಾಜ್ ನೇತೃತ್ವದಲ್ಲಿ ತಂಡವನ್ನು ರಚಿಸಿದ್ದರು.  (ಸಾಂದರ್ಭಿಕ ಚಿತ್ರ)

ರೈಲ್ವೆ ಡಿಸಿಪಿ ಹರೇಂದ್ರ ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ, ಮಹಿಳೆ ಬೆಳಿಗ್ಗೆ 3.27 ರ ಸುಮಾರಿಗೆ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ತಿಳಿದಿದೆ. ತಕ್ಷಣ ಠಾಣೆಗೆ ಧಾವಿಸಿದ ಪೊಲೀಸರು ಸಂತೃಸ್ತ ಮಹಿಳೆಯನ್ನು  ರಕ್ಷಿಸಿದ್ದಾರೆ.

  • Share this:

    ದೆಹಲಿ: ರೈಲು ನಿಲ್ದಾಣದಲ್ಲಿ ಪ್ಲಾಟ್‌ಫಾರ್ಮ್‌ನಲ್ಲಿ 30 ವರ್ಷದ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ (Delhi Gang Rape) ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ರೈಲ್ವೆ ಉದ್ಯೋಗಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ನಾಲ್ವರು ಆರೋಪಿಗಳು ರೈಲ್ವೆಯ (Indian Railway) ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ತಡರಾತ್ರಿ ಪ್ಲಾಟ್‌ಫಾರ್ಮ್‌ನಲ್ಲಿರುವ ರೈಲು ದೀಪದ ಗುಡಿಸಲಿನೊಳಗೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂದು ದೆಹಲಿ  ಪೊಲೀಸರು (Delhi Police) ಮಾಹಿತಿ ನೀಡಿದ್ದು ಇಬ್ಬರು ಆರೋಪಿಗಳು ಮಹಿಳೆಯ ಮೇಲೆ ಅತ್ಯಾಚಾರವೆಸಗಿದರೆ, ಇತರರು ಹೊರಗೆ ಕಾವಲು ಕಾಯುತ್ತಿದ್ದರು ಎನ್ನಲಾಗಿದೆ.


    35 ವರ್ಷದ ಸತೀಶ್ ಕುಮಾರ್, 38 ವರ್ಷದ ವಿನೋದ್ ಕುಮಾರ್, 33 ವರ್ಷದ ಮಂಗಲ್ ಚಂದ್ ಮತ್ತು 37 ವರ್ಷದ ಜಗದೀಶ್ ಚಂದ್ ಆರೋಪಿಗಳು ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.


    ಬೆಳಗ್ಗೆ 3.27 ರ ಸುಮಾರಿಗೆ ಪೊಲೀಸ್ ಠಾಣೆಗೆ ಮಾಹಿತಿ
    ರೈಲ್ವೆ ಡಿಸಿಪಿ ಹರೇಂದ್ರ ಸಿಂಗ್ ನೀಡಿರುವ ಮಾಹಿತಿಯ ಪ್ರಕಾರ, ಮಹಿಳೆ ಬೆಳಗ್ಗೆ 3.27 ರ ಸುಮಾರಿಗೆ ಪೊಲೀಸ್ ಠಾಣೆಗೆ ಕರೆ ಮಾಡಿ ಘಟನೆಯ ಬಗ್ಗೆ ಮಾಹಿತಿ ತಿಳಿದಿದೆ. ತಕ್ಷಣ ಠಾಣೆಗೆ ಧಾವಿಸಿದ ಪೊಲೀಸರು ಸಂತೃಸ್ತ ಮಹಿಳೆಯನ್ನು  ರಕ್ಷಿಸಿದ್ದಾರೆ. ಮೊದಲು ಮಹಿಳೆ ಪೊಲೀಸ್ ಠಾಣೆಗೆ ಕರೆ ಮಾಡಿ ವಿವರಿಸಿ ಪೊಲೀಸರು ಸ್ಥಳಕ್ಕೆ ಬಂದಾಗ ಮಹಿಳೆ ಲ್ಲೂ ಕಂಡುಬಂದಿಲ್ಲ.  ಮತ್ತೆ ಮಹಿಳೆಗೆ ಕರೆ ಮಾಡಿದಾಗ ತಾನು ರೈಲ್ವೇ ನಿಲ್ದಾಣದಲ್ಲೇ ನಿಂತಿರುವುದಾಗಿ ಮಹಿಳೆ ತಿಳಿಸಿದ್ದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. 


    ಎರಡು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟಿದ್ದ ಸಂತೃಸ್ತ ಮಹಿಳೆ
    ತಾನು ಹರಿಯಾಣದ ಫರಿದಾಬಾದ್‌ನಲ್ಲಿ ವಾಸಿ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ. ಎರಡು ವರ್ಷಗಳ ಹಿಂದೆ ಪತಿಯಿಂದ ಬೇರ್ಪಟ್ಟು ಕೆಲಸ ಅರಸಿ ಬಂದಿದ್ದರು.


    ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ಹೇಳಿದ್ದ ಆರೋಪಿ
    ಈ ಪೈಕಿ ಆರೋಪಿಗಳಲ್ಲಿ ಒಬ್ಬನಾದ ಸತೀಶ್‌ನನ್ನು ಸ್ನೇಹಿತನೊಬ್ಬನ ಮೂಲಕ ಭೇಟಿಯಾಗಿದ್ದಳು. ಆರೋಪಿ ಸತೀಶ್ ರೈಲ್ವೆಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.


    ಇದನ್ನೂ ಓದಿ: Farewell Dinner: ಮೋದಿ ಆಯೋಜಿಸಿದ ಫೇರ್​ವೆಲ್ ಡಿನ್ನರ್ ಹೀಗಿತ್ತು! ಇಲ್ಲಿವೆ ಫೋಟೋಸ್


    ರಾತ್ರಿ 10.30ರ ಸುಮಾರಿಗೆ ಮಹಿಳೆಯನ್ನು ಭೇಟಿಯಾಗಿದ್ದ ಆರೋಪಿ
    ಗುರುವಾರದಂದು ಬಂಧಿತ ಆರೋಪಿ ಸತೀಶ್ ಸಂತೃಸ್ತ ಮಹಿಳೆಗೆ ಕರೆ ಮಾಡಿ ತಮ್ಮ ಹೊಸ ಮನೆಗೆ ಮಗನ ಹುಟ್ಟುಹಬ್ಬಕ್ಕೆ ಆಹ್ವಾನಿಸಿದ್ದ. ರಾತ್ರಿ 10.30ರ ಸುಮಾರಿಗೆ ಮಹಿಳೆ ಆರೋಪಿ ಸತೀಶ್​​ನನ್ನು ಕೀರ್ತಿನಗರ ಮೆಟ್ರೋ ನಿಲ್ದಾಣದಲ್ಲಿ ಭೇಟಿಯಾಗಿದ್ದರು.


    ರೈಲ್ವೇ ನಿಲ್ದಾಣದ ಕೊಠಡಿಯಲ್ಲೇ ಸಾಮೂಹಿಕ ಅತ್ಯಾಚಾರ
    ನಂತರ ಆಕೆಯನ್ನು ಹೊಸದಿಲ್ಲಿ ರೈಲು ನಿಲ್ದಾಣಕ್ಕೆ ಕರೆದೊಯ್ದು ಅಲ್ಲಿ ಮೂವರು ಆರೋಪಿಗಳು ಭೇಟಿಯಾದರು ಎಂದು ಸಂತೃಸ್ತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾಳೆ. ನಂತರ ರೈಲ್ವೇ ನಿಲ್ದಾಣದ ಕೊಠಡಿಯ ಒಂದರಲ್ಲಿ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಲಾಗಿದೆ ಎಂದು ದೆಹಲಿ ಪೊಲೀಸರು ಆರೋಪದಲ್ಲಿ ಉಲ್ಲೇಖಿಸಿದ್ದಾರೆ.


    ಇದನ್ನೂ ಓದಿ: Leopard: 70 ವರ್ಷಗಳ ಬಳಿಕ ಚಿರತೆಗಳಿಗೆ ನೆಲೆಯಾಗಲಿದೆ ಭಾರತ; ಆಗಸ್ಟ್ ನಲ್ಲಿ ದೇಶಕ್ಕೆ ಬರಲಿವೆಯಂತೆ ನಮೀಬಿಯಾದ 8 ಚಿರತೆಗಳು


    ಎರಡು ಗಂಟೆಯ ಒಳಗೆ ನಾಲ್ವರು ಆರೋಪಿಗಳ ಬಂಧನ
    ಮಹಿಳೆಗೆ ಕರೆ ಮಾಡಿದ ಎರಡು ಗಂಟೆಯೊಳಗೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರನ್ನು ಸ್ಥಳೀಯ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಭಾರತೀಯ ರೈಲ್ವೆ ಅಧಿಕೃತ ಮಾಹಿತಿಯಲ್ಲಿ ತಿಳಿಸಿದೆ.

    Published by:ಗುರುಗಣೇಶ ಡಬ್ಗುಳಿ
    First published: