• Home
  • »
  • News
  • »
  • national-international
  • »
  • Delhi: ತನ್ನಿಚ್ಛೆಗೆ ವಿರುದ್ಧವಾಗಿ ಮದುವೆಯಾದ ಮಗಳನ್ನು ಕೊಂದ ತಂದೆ, ಸೂಟ್​ಕೇಸ್​ನಲ್ಲಿ ಶವ ತುಂಬಿಸಿದ ಅಮ್ಮ!

Delhi: ತನ್ನಿಚ್ಛೆಗೆ ವಿರುದ್ಧವಾಗಿ ಮದುವೆಯಾದ ಮಗಳನ್ನು ಕೊಂದ ತಂದೆ, ಸೂಟ್​ಕೇಸ್​ನಲ್ಲಿ ಶವ ತುಂಬಿಸಿದ ಅಮ್ಮ!

ಮಗಳನ್ನೇ ಕೊಂದ ಹೆತ್ತವರು

ಮಗಳನ್ನೇ ಕೊಂದ ಹೆತ್ತವರು

ಮೃತ ಯುವತಿ ಆಯುಷಿ ಯಾದವ್ (21) ತನ್ನ ಪೋಷಕರಿಗೆ ತಿಳಿಸದೆ ಕೆಲವು ದಿನಗಳಿಂದ ಹೊರಗೆ ಹೋಗಿದ್ದಳು. ಇದರಿಂದ ಕೋಪಗೊಂಡ ಆಕೆಯ ತಂದೆ ನವೆಂಬರ್ 17 ರಂದು ದೆಹಲಿಯ ಬದರ್‌ಪುರದ ಮೋಡ್‌ಬಂದ್ ಗ್ರಾಮದ ತಮ್ಮ ಮನೆಯಲ್ಲಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳಲಾಗಿದೆ.

  • News18 Kannada
  • Last Updated :
  • Lucknow, India
  • Share this:

ಲಕ್ನೋ(ನ.22): ಉತ್ತರ ಪ್ರದೇಶವು (Uttar Pradesh) ಕಳೆದ ವಾರ ಮಥುರಾದ ಯಮುನಾ ಎಕ್ಸ್‌ಪ್ರೆಸ್‌ವೇ (Mathura Expressway) ಬಳಿ ಟ್ರಾಲಿ ಬ್ಯಾಗ್‌ನಲ್ಲಿ ಪತ್ತೆಯಾದ 21 ವರ್ಷದ ಯುವತಿಯ ಹತ್ಯೆಯ (Murder) ಹಿಂದಿನ ರಹಸ್ಯವನ್ನು ಭೇದಿಸಿದ್ದಾರೆ. ಇದೊಂದು ಮರ್ಯಾದಾ ಹತ್ಯೆ (Honor Killing) ಎಂದು ಶಂಕಿಸಿರುವ ಪೊಲೀಸರು ಆಕೆಯ ಪೋಷಕರನ್ನು ಬಂಧಿಸಿದ್ದಾರೆ. ಹೆತ್ತವರ ಅವರ ಒಪ್ಪಿಗೆಯಿಲ್ಲದೆ ಮದುವೆಯಾದ ಕಾರಣ ಮನೆಯವರು ಅಸಮಾಧಾನಗೊಂಡಿದಷ್ದರು. ಇದೇ ಕೋಪದಲ್ಲಿ ಮೃತ ಯುವತಿಯ ತಂದೆಯೇ ಆಕೆಯನ್ನು ಕೊಂದಿದ್ದಾರೆ. ಬಳಿಕ ಆಕೆಯ ತಾಯಿ ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಆಯುಷಿ ಯಾದವ್ ಸಹೋದರನಿಗೂ ಕೊಲೆಯ ಬಗ್ಗೆ ತಿಳಿದಿತ್ತು ಎಂಬ ವಿಚಾರವೂ ಬಹಿರಂಗಗೊಂಡಿದೆ. ಕೊಲೆಗೆ ಬಳಸಿದ್ದ ಶಸ್ತ್ರಾಸ್ತ್ರವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.


ನವೆಂಬರ್ 17 ರಂದು ಆಯುಷಿ ತನ್ನ ತಂದೆಯೊಂದಿಗೆ ಜಗಳವಾಡಿದ್ದಳು. ಆಕೆ ತನ್ನ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗಿದ್ದಳು, ಇದರಿಂದಾಗಿ ಅವಳ ಕುಟುಂಬವು ಅತೃಪ್ತವಾಗಿತ್ತು. ಈ ವಿಚಾರವಾಗಿ ಕೋಪಗೊಂಡ ಆಕೆಯ ತಂದೆ ನವೆಂಬರ್ 17 ರಂದು ಜಗಳವಾಡಿದ್ದಾರೆ. ಬಳಿಕ ಎರಡು ಬಾರಿ ಗುಂಡು ಹಾರಿಸಿ ಆಯುಚಿಯನ್ನು ಕೊಂದಿದ್ದಾರೆ ಎಂದು ಹಂಗಾಮಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ಹೇಳಿದ್ದಾರೆ.


Deadly Murder: ಪ್ರಿಯತಮೆಯನ್ನು ಕೊಂದು 35 ಪೀಸ್ ಮಾಡಿ ಫ್ರಿಡ್ಜ್​ನಲ್ಲಿಟ್ಟ, ಆಮೇಲೆ ಮಾಡಿದ್ದು ಕೇಳಿದ್ರೆ ಮೈ  ಜುಂ ಎನ್ನುತ್ತೆ!


ಸಂತ್ರಸ್ತೆ ಆಯುಷಿ ಯಾದವ್ ತನ್ನ ಪೋಷಕರಿಗೆ ತಿಳಿಸದೆ ಕೆಲವು ದಿನಗಳ ಹಿಂದೆ ಹೊರಗೆ ಹೋಗಿದ್ದಳು. ಇದರಿಂದ ಕುಪಿತಗೊಂಡ ಆಕೆಯ ತಂದೆ, ನವೆಂಬರ್ 17 ರಂದು ದೆಹಲಿಯ ಬದರ್‌ಪುರದ ಮೋಡ್‌ಬಂದ್ ಗ್ರಾಮದ ತಮ್ಮ ಮನೆಯಲ್ಲಿ ಆಕೆಯನ್ನು ಗುಂಡಿಕ್ಕಿ ಕೊಂದಿದ್ದಾರೆ. ಅದೇ ರಾತ್ರಿ ಆಕೆಯ ದೇಹವನ್ನು ಟ್ರಾಲಿ ಬ್ಯಾಗ್‌ನಲ್ಲಿ ತುಂಬಿ ಯಮುನಾ ಎಕ್ಸ್‌ಪ್ರೆಸ್‌ವೇಯಲ್ಲಿ ರಾಯ ಕಟ್ ಬಳಿ ಎಸೆದಿದ್ದಾರೆ.


ಸಂತ್ರಸ್ತೆಯ ತಂದೆ ನಿತೇಶ್ ಯಾದವ್ ಮತ್ತು ತಾಯಿ ಬ್ರಜ್ಬಾಲಾ ಯಾದವ್ ಅವರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗಿದೆ. ಅವರ ವಿರುದ್ಧ ಐಪಿಸಿಯ ಸೆಕ್ಷನ್ 302 (ಕೊಲೆ ಶಿಕ್ಷೆ) ಮತ್ತು 201 (ಅಪರಾಧದ ಪುರಾವೆಗಳು ಕಣ್ಮರೆ ಮಾಡಿದ ಅಥವಾ ತಪ್ಪು ಮಾಹಿತಿ ನೀಡಿದ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹಂಗಾಮಿ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ಹೇಳಿದ್ದಾರೆ.


"ಬ್ರಜ್ಬಾಲಾ ಯಾದವ್ ತನ್ನ ಮಗಳಿಗೆ ಗುಂಡು ಹಾರಿಸಿಲ್ಲ, ಆದರೆ ಅವಳು ದೇಹವನ್ನು ವಿಲೇವಾರಿ ಮಾಡುವಲ್ಲಿ ಸಹಾಯ ಮಾಡಿದ್ದಳು. ಮತ್ತು ಕಾರಿನಲ್ಲಿ ಮಥುರಾಗೆ ತನ್ನ ಪತಿಯೊಂದಿಗೆ ಆಕೆಯೂ ಹೋಗಿದ್ದಳು" ಎಂದು ಅವರು ಹೇಳಿದ್ದಾರೆ.


ಇದನ್ನೂ ಓದಿ: Explainer: ಅನುಪಮಾ ಗುಲಾಟಿ ಪ್ರಕರಣದ ಕರಾಳತೆ ನೆನಪಿಸಿದ ಶ್ರದ್ಧಾ ಕೊಲೆ ಕೇಸ್​​: ಪತ್ನಿಯನ್ನು 72 ತುಂಡು ಮಾಡಿದ್ದ ಪತಿ!


ಮಥುರಾದಲ್ಲಿ ಆಯುಷಿ ಯಾದವ್ ಅವರ ದೇಹವಿದ್ದ ಟ್ರಾಲಿಯನ್ನು ಪತ್ತೆ ಹಚ್ಚಿದ ಪೊಲೀಸರು, ಬಳಿಕ ಫೋನ್‌ಗಳನ್ನು ಟ್ರೇಸ್​ ಮಾಡಿದ್ದಾರೆ. ಅಲ್ಲದೇ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಮೃತ ಯುವತಿಯ ಗುರುತು ಪತ್ತೆಹಚ್ಚಲು ಸಾಮಾಜಿಕ ಮಾಧ್ಯಮವನ್ನು ಬಳಸಿ ಪೋಸ್ಟರ್‌ಗಳನ್ನೂ ಹಾಕಿದ್ದಾರೆ. ಭಾನುವಾರ ಬೆಳಗ್ಗೆ ಅಪರಿಚಿತರೊಬ್ಬರಿಂದ ಆಕೆಯ ಬಗ್ಗೆ ಪೊಲೀಸರಿಗೆ ಕರೆ ಬಂದಿತ್ತು. ನಂತರ, ಆಕೆಯ ತಾಯಿ ಮತ್ತು ಸಹೋದರ ಫೋಟೋ ಮೂಲಕ ಆಕೆಯನ್ನು ಗುರುತಿಸಿದ್ದಾರೆ. ಅವರು ಮಥುರಾದಲ್ಲಿರುವ ಶವಾಗಾರಕ್ಕೆ ಆಗಮಿಸಿ ಶವ ಆಯುಷಿ ಯಾದವ್ ಅವರದ್ದು ಎಂದು ದೃಢಪಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.


ಕುಟುಂಬವು ಉತ್ತರ ಪ್ರದೇಶದ ಗೋರಖ್‌ಪುರದ ಬಲುನಿ ಮೂಲದವರಾಗಿದ್ದು, ನಿತೇಶ್ ಯಾದವ್ ಅಲ್ಲಿ ಕೆಲಸ ಕಂಡುಕೊಂಡ ನಂತರ ರಾಷ್ಟ್ರ ರಾಜಧಾನಿಗೆ ವಲಸೆ ಹೋಗಿ ಜೀವನ ಸಾಗಿಸುತ್ತಿದ್ದರೆನ್ನಲಾಗಿದೆ.

Published by:Precilla Olivia Dias
First published: