Lockdown ವೇಳೆ ತನ್ನ ಕಾರ್ಮಿಕರನ್ನು ವಿಮಾನದಲ್ಲಿ ಮನೆಗೆ ಕಳುಹಿಸಿದ್ದ ಪಪ್ಪನ್ ಸಿಂಗ್ ಆತ್ಮಹತ್ಯೆ!

ಅಣಬೆ ಕೃಷಿ ಮಾಡುತ್ತಿದ್ದ ಪಪ್ಪನ್ ಸಿಂಗ್ 2020 ರ ಮೇ ತಿಂಗಳಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ಆವರಿಸಿ ಲಾಕ್​ಡೌನ್ ಹೇರಿದ್ದ ವೇಳೆ, ಕಾರ್ಮಿಕರನ್ನು ವಿಮಾನದ ಮೂಲಕ ಅವರ ಸ್ವಂತ ಊರಿಗೆ ಕಳುಹಿಸಿ ಮತ್ತೆ ಮರಳಿ ಕರೆಸಿಕೊಂಡಿದ್ದ ವಿಚಾರವಾಗಿ ಇಡೀ ದೇಶದ ಗಮನ ಸೆಳೆದಿದ್ದರು. ಆದರೀಗ ಪಪ್ಪನ್ ಸಿಂಗ್ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಆತ್ಮಹತ್ಯೆಗೆ ಶರಣಾದ ರೈತ ಪಪ್ಪನ್ ಸಿಂಗ್

ಆತ್ಮಹತ್ಯೆಗೆ ಶರಣಾದ ರೈತ ಪಪ್ಪನ್ ಸಿಂಗ್

  • Share this:
ನವದೆಹಲಿ(ಆ.24): ಕೊರೋನಾ ವೈರಸ್ (Covid 19) ಸಾಂಕ್ರಾಮಿಕ ರೋಗದಿಂದಾಗಿ ಮೊದಲ ಲಾಕ್‌ಡೌನ್ ಸಮಯದಲ್ಲಿ ತನ್ನ ಕೃಷಿ ಕಾರ್ಮಿಕರನ್ನು (Migrants) ವಿಮಾನದ ಮೂಲಕ ಬಿಹಾರಕ್ಕೆ (Bihar) ಕಳುಹಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದ ರೈತ ಪಪ್ಪನ್ ಸಿಂಗ್ ಗೆಹ್ಲೋಟ್ (Pappan Singh Gehlot) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ನೀಡಿರುವ ದೆಹಲಿ ಪೊಲೀಸ್ (Delhi Police) ಅಧಿಕಾರಿಗಳು, ಪಪ್ಪನ್ ಅವರ ಮನೆಯ ಮುಂಭಾಗದಲ್ಲಿರುವ ದೇವಸ್ಥಾನದ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಪೊಲೀಸರಿಗೆ ಡೆತ್​ನೋಟ್​ ಕೂಡಾ ಲಭ್ಯವಾಗಿದೆ. ಹೀಗಿರುವಾಗ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Bangalore Lockdown​​: ಡ್ರೋನ್​​​ ಕ್ಯಾಮರದಲ್ಲಿ ಸೆರೆಯಾಯ್ತು ಬೆಂಗಳೂರು ನಗರಿ; ಹೇಗಿದೆ ನೋಡಿ ಸುಂದರ ರಾಜಧಾನಿ

ಈ ಬಗ್ಗೆ ಮಾಹಿತಿ ನೀಡಿದ ದೆಹಲಿ ಪೊಲೀಸರು ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಅಲಿಪುರ ಪೊಲೀಸ್ ಠಾಣೆಯ ಶಿವ ದೇವಾಲಯದಲ್ಲಿ ವ್ಯಕ್ತಿಯೊಬ್ಬ ನೇಣು ಬಿಗಿದುಕೊಂಡಿರುವ ಕುರಿತು ಪಿಸಿಆರ್ ಕರೆ ಬಂದಿದ್ದು, ತಕ್ಷಣವೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಪರಿಶೀಲನೆ ನಡೆಸಿದಾಗ 55 ವರ್ಷದ ತಿಗಿಪುರ ಗ್ರಾಮದ ನಿವಾಸಿ ಪಪ್ಪನ್ ಸಿಂಗ್ ದೇವಸ್ಥಾನದ ಫ್ಯಾನ್​ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ ಎಂದಿದ್ದಾರೆ.

ಡೆತ್​ನೋಟ್​ನಲ್ಲಿ ಏನಿದೆ? ಆತ್ಮಹತ್ಯೆ ಮಾಡಿಕೊಂಡಿದ್ದೇಕೆ?

ಪಪ್ಪನ್ ಸಿಂಗ್ ಮನೆ ಶಿವನ ದೇವಸ್ಥಾನದ ಎದುರು ಇದ್ದು ದಿನನಿತ್ಯ ದೇವಸ್ಥಾನಕ್ಕೆ ಭೇಟಿ ನೀಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಫ್ಯಾನ್‌ಗೆ ನೇಣು ಬಿಗಿದುಕೊಂಡಿರುವುದನ್ನು ಪೂಜಾರಿ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರಿಗೆ ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ಡೆತ್​ನೋಟ್​ ಕೂಡಾ ಸಿಕ್ಕಿದೆ. ಇದರಲ್ಲಿ ಪಪ್ಪನ್ ಸಿಂಗ್ ಅನಾರೋಗ್ಯದ ಕಾರಣ (ಬಿಪಿ / ಶುಗರ್ ಇತ್ಯಾದಿ) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದಾರೆ ಎನ್ನಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಬಿಜೆಆರ್‌ಎಂ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು, ಕುಟುಂಬದವರು ಯಾರ ಮೇಲೂ ಅನುಮಾನ ವ್ಯಕ್ತಪಡಿಸಿಲ್ಲ. ಹೀಗಿದ್ದರೂ ಈ ಪ್ರಕರಣದ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Bangalore Lockdown: ಬೆಂಗಳೂರಿನಿಂದ ವಿಮಾನದಲ್ಲಿ ಗುಳೆ ಹೊರಟ ವಲಸಿಗರು; ಏರ್ಪೋರ್ಟ್ ಸಂಪೂರ್ಣ ಬರ್ತಿ

ಇನ್ನು ರೈತನಾಗಿದ್ದ ಪಪ್ಪನ್ ಸಿಂಗ್ ಅಣಬೆಗಳನ್ನು ಬೆಳೆಸುತ್ತಿದ್ದರು. ಮೇ 2020 ರಲ್ಲಿ ಕೊರೋನಾ ವೈರಸ್ ಸಾಂಕ್ರಾಮಿಕ ರೋಗ ವ್ಯಾಪಿಸಿ, ಇದನ್ನು ತಡೆಯಲು ದೇಶಾದ್ಯಂತ ಲಾಕ್‌ಡೌನ್ ಹೇರಲಾಗಿತ್ತು. ಈ ವೇಳೆ ವಲಸೆ ಕಾರ್ಮಿಕರು ನಡೆದುಕೊಂಡೇ ತಮ್ಮ ಮನೆ ಸೇರುತ್ತಿದ್ದರು. ಇಂತಹ ಘೋರ ಪರಿಸ್ಥಿತಿ ದೇಶಾದ್ಯಂತ ಆವರಿಸಿದ್ದಾಗ ಪಪ್ಪನ್ ಸಿಂಗ್ ತಮ್ಮ ಬಳಿ ಕೆಲಸ ಮಾಡಿಕೊಂಡಿದ್ದ ಕಾರ್ಮಿಕರನ್ನು ವಿಮಾನದ ಮೂಲಕ ಮನೆಗೆ ಕಳುಹಿಸಿದ್ದರು. ಅಲ್ಲದೇ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಾಗ ಮರಳಿ ಕರೆಸಿಕೊಂಡಿದ್ದರು. ಅವರ ಈ ನಡೆ ಭಾರೀ ಮೆಚ್ಚುಗೆಗೆ ಪಾತ್ರವಾಗಿತ್ತು.

ಲಾಕ್​ಡೌನ್​ ಸಮಯದಲ್ಲಿ ನೂರಾರು ಬೀದಿ ನಾಯಿಗಳಿಗೆ ಚಿಕನ್ ಬಿರಿಯಾನಿ ಬಡಿಸಿದ ಅಪರೂಪದ ವ್ಯಕ್ತಿ

ರಂಜಿತ್​ ನಾಥ್​ ಎನ್ನುವ ವ್ಯಕ್ತಿ ಪ್ರತಿನಿತ್ಯ 40 ಕಿಲೋಗ್ರಾಂನಷ್ಟು ಚಿಕನ್​ ಬಿರಿಯಾನಿಯನ್ನು(Chicken Biriyani) ತಯಾರಿಸುತ್ತಿದ್ದರು. ಲಾಖ್​ಡೌನ್ ವೇಳೆ ಮಾಲೀಕರಿಲ್ಲದ ಬೀದಿ ಬದಿಯ ಶ್ವಾನಗಳನ್ನು ತನ್ನ ಮಕ್ಕಳು ಎನ್ನುವಂತೆ ನೋಡಿಕೊಂಡು ಬಿರಿಯಾನಿ ಬಡಿಸುತ್ತಾ ಮಾನವೀಯತೆ ಮೆರೆದಿದ್ದರು.

ಎಎನ್​ಐ(INA) ಜೊತೆಗೆ ಮಾತನಾಡಿದ್ದ ರಂಜಿತ್​ ಅವರು, '30 ರಿಂದ 40 ಕಿಲೋಗ್ರಾಂ ಬಿರಿಯಾನಿಯನ್ನು ತಯಾರಿಸಬೇಕಾದ ಕಾರಣ ನಾನು ಬುಧವಾರ, ಭಾನುವಾರ ಮತ್ತು ಶುಕ್ರವಾರ ಸಾಕಷ್ಟು ಬ್ಯುಸಿ ಇರುತ್ತೇನೆ. ಈ ಶ್ವಾನಗಳು ಈಗ ನನ್ನ ಮಕ್ಕಳಂತೆ' ಎಂದಿದ್ದರು.
Published by:Precilla Olivia Dias
First published: