Delhi Rape: ಬಾಲಕಿಯನ್ನು ರೇಪ್ ಮಾಡಲು ಗಂಡನಿಗೆ ಹೆಂಡತಿಯ ಸಾಥ್; ಆ್ಯಸಿಡ್​ ಕುಡಿಸಿ ಕ್ರೌರ್ಯ!

ಆರೋಪಿ ಪ್ರಕಾಶ್ ತನ್ನ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡುವ ನೆಪದಲ್ಲಿ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದಿದ್ದಾನೆ. ನಂತರ ಆತ ತನ್ನ ಪತ್ನಿಯ ಸಹಾಯದೊಂದಿಗೆ ಆಕೆಯ ಸಮ್ಮುಖದಲ್ಲೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ದೆಹಲಿ: ಹೆಣ್ಣಿನ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯಗಳಿಗೆ (Sexual harassment) ಕೊನೆಯೇ ಇಲ್ಲವೇ ಎಂಬಷ್ಟು ಅತ್ಯಾಚಾರ ಪ್ರಕರಣಗಳ (Rape Cases) ದೇಶಾದ್ಯಂತ ವರದಿಯಾಗುತ್ತಲೇ ಇರುತ್ತವೆ. ಗಂಡನ ಅತ್ಯಾಚಾರಕ್ಕೆ ಹೆಂಡತಿಯೇ ಸಾಥ್​ ನೀಡಿರುವ ಆಘಾತಕಾರಿ ಘಟನೆ ವರದಿಯಾಗಿದೆ. ಇಲ್ಲಿನ ಕಾರ್ಖಾನೆಯೊಂದರ ಮ್ಯಾನೇಜರ್ (Factory Manager) ತನ್ನ ಕೈಕೆಳಗೆ ಕೆಲಸ ಮಾಡುತ್ತಿದ್ದ 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ದುಷ್ಕೃತ್ಯದ ಬಳಿಕ ಬಾಲಕಿಗೆ ಆಸಿಡ್ ಕುಡಿಯುವಂತೆ ಒತ್ತಾಯಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ಕಾರ್ಖಾನೆಯ ವ್ಯವಸ್ಥಾಪಕ ಜೈ ಪ್ರಕಾಶ್ (31) ಎಂಬಾತನನ್ನು ಬಂಧಿಸಲಾಗಿದೆ. ಪೊಲೀಸರ ಪ್ರಕಾರ, ಜುಲೈ 2 ರಂದು ಪ್ರಕಾಶ್ ತನ್ನ ಅನಾರೋಗ್ಯದ ಪತ್ನಿಯನ್ನು ಭೇಟಿ ಮಾಡುವ ನೆಪದಲ್ಲಿ ಸಂತ್ರಸ್ತೆಯನ್ನು ತನ್ನ ಮನೆಗೆ ಕರೆದಿದ್ದಾನೆ. ನಂತರ ಆತ ತನ್ನ ಪತ್ನಿಯ ಸಹಾಯದೊಂದಿಗೆ ಆಕೆಯ ಸಮ್ಮುಖದಲ್ಲೇ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ.

ಬಾಲಕಿ ಅತ್ಯಾಚಾರದ ಬಗ್ಗೆ ಬಾಯ್ಬಿಡಬಾರದೆಂದು ಆಸಿಡ್​ ಕುಡಿಸಿದ್ರು!

ಘಟನೆ ನಡೆದ ಕೆಲ ದಿನಗಳ ನಂತರ, ಸಂತ್ರಸ್ತೆ ಮನೆಗೆ ಹೋಗುತ್ತಿದ್ದಾಗ ಪ್ರಕಾಶ್ ಆಕೆಯನ್ನು ತಡೆದು ಬಾಯಿಗೆ ಆಸಿಡ್ ತರಹದ ದ್ರವವನ್ನು ಸುರಿದಿದ್ದಾನೆ. ಮನೆಗೆ ತಲುಪಿದ ನಂತರ ಬಾಲಕಿ ಪ್ರಜ್ಞಾಹೀನಳಾಗಿದ್ದಾಳೆ. ಗಂಭೀರ ಸ್ಥಿತಿಯಲ್ಲಿದ್ದ ಆಕೆಯನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಎಐಐಎಂಎಸ್) ಗೆ ದಾಖಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ (ಹೊರ) ಸಮೀರ್ ಶರ್ಮಾ ತಿಳಿಸಿದ್ದಾರೆ.

ಸಂತ್ರಸ್ತೆಯಿಂದ ಹೇಳಿಕೆ ದಾಖಲು

ಶನಿವಾರ ಎನ್‌ಜಿಒ ಸದಸ್ಯರೊಬ್ಬರ ಸಮ್ಮುಖದಲ್ಲಿ ಸಂತ್ರಸ್ತೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ. ನಂಗ್ಲೋಯ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಮತ್ತು ಪೋಕ್ಸೊ ಕಾಯ್ದೆಯ ಸೆಕ್ಷನ್ 307 (ಕೊಲೆ ಯತ್ನ), 376 (ಅತ್ಯಾಚಾರಕ್ಕೆ ಶಿಕ್ಷೆ) ಮತ್ತು 34 (ಸಾಮಾನ್ಯ ಉದ್ದೇಶ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಮಹಿಳಾ ಆಯೋಗವು (ಡಿಸಿಡಬ್ಲ್ಯು) ಈ ವಿಷಯಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ನೋಟಿಸ್ ನೀಡಿದೆ.

ಇದನ್ನೂ ಓದಿ: Minor Raped: ಅಪ್ರಾಪ್ತೆಯನ್ನು ರೇಪ್ ಮಾಡಿದ ವ್ಯಕ್ತಿ, ಆತನ ಪತ್ನಿಯಿಂದಲೇ ವಿಡಿಯೋ ಶೂಟ್

ಬಾಲಕಿಯ ತಂದೆಯ ಹೇಳಿಕೆ

15 ವರ್ಷದ ಬಾಲಕಿಯ ಅತ್ಯಾಚಾರ ಮತ್ತು ಕೊಲೆ ಯತ್ನದ ಬಗ್ಗೆ ದೂರು ಸ್ವೀಕರಿಸಲಾಗಿದೆ. ಬಾಲಕಿಯ ತಂದೆ ದಿನಗೂಲಿ ಕಾರ್ಮಿಕನಾಗಿದ್ದು, ತನ್ನ ಕುಟುಂಬದೊಂದಿಗೆ ದೆಹಲಿಯಲ್ಲಿ ವಾಸಿಸುತ್ತಿದ್ದಾನೆ ಎಂದು ಆಯೋಗಕ್ಕೆ ತಿಳಿಸಿದ್ದಾರೆ. ಅವರ ಮಗಳು ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಒಂದು ದಿನ, ಕಾರ್ಖಾನೆಯ ಗುತ್ತಿಗೆದಾರನು ತನ್ನ ಹೆಂಡತಿಯ ಅನಾರೋಗ್ಯದ ನೆಪದಲ್ಲಿ ತನ್ನ ಮಗಳನ್ನು ತನ್ನ ಮನೆಗೆ ಕರೆದೊಯ್ದು ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ದೂರುದಾರರು ಆರೋಪಿಸಿದ್ದಾರೆ. ಜುಲೈ 5 ರಂದು ಆರೋಪಿಯು ತನ್ನ ಮಗಳಿಗೆ ಬಲವಂತವಾಗಿ ಆಸಿಡ್ ಕುಡಿಸಿದ್ದಾನೆ ಎಂದು ತಂದೆ ಆರೋಪಿಸಿದ್ದಾರೆ. ಸದ್ಯ ಬಾಲಕಿಯ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ದಾಖಲಾಗಿದ್ದಾಳೆ.

ಪೊಲೀಸರಿಗೆ ಮಹಿಳಾ ಆಯೋಗದಿಂದ ನೋಟಿಸ್​

ಈ ವಿಷಯವನ್ನು ಅರಿತುಕೊಂಡ ಮಹಿಳಾ ಆಯೋಗದ ಅಧ್ಯಕ್ಷೆ ಸ್ವಾತಿ ಮಲಿವಾಲ್ ದೆಹಲಿ ಪೊಲೀಸರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎಫ್‌ಐಆರ್ ದಾಖಲಾದ ಮತ್ತು ಬಂಧನಗಳ ವಿವರಗಳನ್ನು ಆಯೋಗ ಕೇಳಿದೆ. ಮಹಿಳಾ ಹಕ್ಕುಗಳ ಸಂಸ್ಥೆಯು ಆಸ್ಪತ್ರೆಯಲ್ಲಿ ಬದುಕುಳಿದವರ ಹೇಳಿಕೆಯನ್ನು ತಕ್ಷಣವೇ ದಾಖಲಿಸಲು ಮತ್ತು ಅದನ್ನು ಮ್ಯಾಜಿಸ್ಟ್ರೇಟ್‌ಗೆ ಸಲ್ಲಿಸುವಂತೆ ಪೊಲೀಸರನ್ನು ಕೇಳಿದೆ. 15 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮತ್ತು ಕೊಲೆ ಯತ್ನದ ಗಂಭೀರ ದೂರು ಬಂದಿದೆ. ಬಾಲಕಿಗೆ ಬಲವಂತವಾಗಿ ಆಸಿಡ್ ಕುಡಿಸಲಾಗಿತ್ತು ಎನ್ನಲಾಗಿದೆ. ನಮ್ಮ ತಂಡವು ಬಾಲಕಿಯ ಸ್ಥಿತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ.  ಆಕೆ ಮತ್ತು ಆಕೆಯ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವು ನೀಡುತ್ತಿದೆ ಎಂದು ಮಲಿವಾಲ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Published by:Kavya V
First published: