• ಹೋಂ
  • »
  • ನ್ಯೂಸ್
  • »
  • ದೇಶ-ವಿದೇಶ
  • »
  • Fog In Delhi: ದೆಹಲಿಯಲ್ಲಿ ನಡೆದಾಡಲೂ ಆಗದಂತೆ ಕಾಣಿಸಿಕೊಂಡ ಮಂಜು! ಬೆಚ್ಚಿಬಿದ್ದ ಹೈಟೆಕ್‌ ಸಿಟಿ ಜನರು!

Fog In Delhi: ದೆಹಲಿಯಲ್ಲಿ ನಡೆದಾಡಲೂ ಆಗದಂತೆ ಕಾಣಿಸಿಕೊಂಡ ಮಂಜು! ಬೆಚ್ಚಿಬಿದ್ದ ಹೈಟೆಕ್‌ ಸಿಟಿ ಜನರು!

ದೆಹಲಿಯನ್ನು ಮುತ್ತಿಕ್ಕಿದ ಮಂಜು

ದೆಹಲಿಯನ್ನು ಮುತ್ತಿಕ್ಕಿದ ಮಂಜು

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪದೇ ಪದೇ ಹವಾಮಾನ ವೈಪರೀತ್ಯ ಕಂಡುಬರುತ್ತದೆ. ಇದೀಗ ಮತ್ತೊಮ್ಮೆ ನವದೆಹಲಿಯಲ್ಲಿ ಅಸಾಧಾರಣ ಮಟ್ಟದಲ್ಲಿ ಮಂಜು ಕಾಣಿಸಿಕೊಂಡು ಜನರು ಬೆಚ್ಚಿ ಬೀಳುವಂತೆ ಮಾಡಿದೆ.

  • Share this:

Delhi experienced an unusual veil of shallow fog on Thursday morning to much bemusement of its residents
ಗುರುವಾರ ಬೆಳಗ್ಗೆ ದೆಹಲಿ ನಗರದಲ್ಲಿ ಮಂಜು ಮುಸುಕಿದ ವಾತಾವರಣ ಉಂಟಾಗಿದ್ದು, ಸಾಮಾನ್ಯವಾಗಿ ಮೇ ತಿಂಗಳಲ್ಲಿ ಇಂತಹ ವಾತಾವರಣ ದೆಹಲಿ ಸೇರಿದಂತೆ ದೇಶದ ಬಹುತೇಕ ಭಾಗಗಳಲ್ಲಿ ಕಂಡು ಬರುವುದಿಲ್ಲ.

Delhi experienced an unusual veil of shallow fog on Thursday morning to much bemusement of its residents
ಸದ್ಯ ದೆಹಲಿ ನಗರದಲ್ಲಿ ಸರಾಸರಿ ಗರಿಷ್ಠ ತಾಪಮಾನ 39.5 ಡಿಗ್ರಿ ಸೆಲ್ಸಿಯಸ್‌ ಇದ್ದು, ಇದು ವರ್ಷದ ಅತ್ಯಂತ ಹೆಚ್ಚು ಬಿಸಿ ಇರುವ ತಿಂಗಳಾಗಿದೆ. ಅದಾಗ್ಯೂ ಅಸಾಧಾರಣ ಮಂಜು ಮುಸುಕಿದ ವಾತಾವರಣ ಸೃಷ್ಟಿಯಾಗಿರೋದು ಅಚ್ಚರಿ ಮೂಡಿಸಿದೆ.

Delhi experienced an unusual veil of shallow fog on Thursday morning to much bemusement of its residents
ಗಾಳಿಯಲ್ಲಿ ಹೆಚ್ಚಿನ ತೇವಾಂಶ, ಶಾಂತ ಗಾಳಿ ಮತ್ತು ಹಗಲು-ರಾತ್ರಿ ತಾಪಮಾನದ ನಡುವೆ ಉಂಟಾಗುವ ಗಮನಾರ್ಹ ವ್ಯತ್ಯಾಸದಿಂದ ಮಂಜು ಸೃಷ್ಟಿಯಾಗುತ್ತದೆ ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

Delhi experienced an unusual veil of shallow fog on Thursday morning to much bemusement of its residents
ದೆಹಲಿಯಲ್ಲಿ 501 ಮತ್ತು 1000 ಮೀಟರ್‌ಗಳ ನಡುವೆ ಮಂಜು ಕಂಡು ಬಂದಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ಅಧಿಕೃತವಾಗಿ ಮಾಹಿತಿ ನೀಡಿದ್ದಾರೆ.

Delhi experienced an unusual veil of shallow fog on Thursday morning to much bemusement of its residents
ಇನ್ನು ದೆಹಲಿಯ ಪ್ರಾಥಮಿಕ ಹವಾಮಾನ ಕೇಂದ್ರವಾದ ಸಫ್ದರ್‌ಜಂಗ್ ವೀಕ್ಷಣಾಲಯವು ಗುರುವಾರ ಬೆಳಿಗ್ಗೆ 8.30ರ ವೇಳೆಗೆ 24 ಗಂಟೆಗಳಲ್ಲಿ 30 ಮಿಮೀ ಮಳೆಯನ್ನು ದಾಖಲಿಸಿದೆ.

Delhi experienced an unusual veil of shallow fog on Thursday morning to much bemusement of its residents
ಬುಧವಾರದಂದು 30.6 ಡಿಗ್ರಿ ಸೆಲ್ಸಿಯಸ್‌ನ ಗರಿಷ್ಠ ತಾಪಮಾನವನ್ನು ದಾಖಲಿಸಿತ್ತು, ಆದರೆ ಗುರುವಾರ ಕನಿಷ್ಠ ತಾಪಮಾನ 15.8 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿ, ಕಳೆದ 13 ವರ್ಷಗಳಲ್ಲಿಯೇ ಕನಿಷ್ಠ ತಾಪಮಾನ ಎನಿಸಿಕೊಂಡಿದೆ.

top videos

    Delhi experienced an unusual veil of shallow fog on Thursday morning to much bemusement of its residents
    ದೆಹಲಿಯು ಏಪ್ರಿಲ್‌ನಲ್ಲಿ 20 ಮಿ.ಮೀ ಗಿಂತ ಹೆಚ್ಚು ಮಳೆಯನ್ನು ದಾಖಲಿಸಿತ್ತು, ಶುಕ್ರವಾರದಿಂದ (ನಾಳೆ) ಮತ್ತೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಅಧಿಕಾರಿಗಳು ತಿಳಿಸಿದ್ದಾರೆ.

    First published: