HOME » NEWS » National-international » DELHI ELECTIONS DONE SC TO HEAR PETITIONS ON REMOVING SHAHEEN BAGH PROTESTERS TODAY MAK

ದೆಹಲಿಯ ಶಾಹಿನ್ ಬಾಗ್ ಸಿಎಎ ವಿರೋಧಿ ಹೋರಾಟ; ಇಂದು ಸುಪ್ರೀಂ ಅಂಗಳದಲ್ಲಿ ಪ್ರತಿಭಟನೆ ತೆರವು ಅರ್ಜಿ ವಿಚಾರಣೆ

ಕಳೆದ ಶುಕ್ರವಾರ ಈ ಕುರಿತ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದಿತ್ತು. ಆದರೆ, ದೆಹಲಿ ಚುನಾವಣೆ ನಿಮಿತ್ತ ಈ ವಿಚಾರದಲ್ಲಿ ಕೋರ್ಟ್ ತೆಗೆದುಕೊಳ್ಳುವ ಯಾವುದೇ ತೀರ್ಮಾನ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಭಿಪ್ರಾಯ ಪಟ್ಟಿದ್ದ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು.

news18-kannada
Updated:February 10, 2020, 9:18 AM IST
ದೆಹಲಿಯ ಶಾಹಿನ್ ಬಾಗ್ ಸಿಎಎ ವಿರೋಧಿ ಹೋರಾಟ; ಇಂದು ಸುಪ್ರೀಂ ಅಂಗಳದಲ್ಲಿ ಪ್ರತಿಭಟನೆ ತೆರವು ಅರ್ಜಿ ವಿಚಾರಣೆ
ದೆಹಲಿಯ ಶಾಹಿನ್​ ಬಾಗ್​ನಲ್ಲಿ ನಡೆಯುತ್ತಿರುವ ಸಿಎಎ ವಿರೋಧಿ ಹೋರಾಟ.
  • Share this:
ನವ ದೆಹಲಿ; ಕೇಂದ್ರ ಸರ್ಕಾರದ ವಿವಾದಾತ್ಮಕ ನೂತನ ‘ಪೌರತ್ವ ತಿದ್ದುಪಡಿ ಕಾಯ್ದೆಯ’ ವಿರುದ್ಧ ಕಳೆದ ಎರಡು ತಿಂಗಳಿನಿಂದ ರಾಷ್ಟ್ರ ರಾಜಧಾನಿ ದೆಹಲಿಯ ಶಾಹಿನ್ ಬಾಗ್​ನಲ್ಲಿ ನಿರಂತರವಾಗಿ ಪ್ರತಿಭಟನೆಗಳು ನಡೆಯುತ್ತಲೇ ಇವೆ. ಈ ಪ್ರತಿಭಟನೆಯನ್ನು ತೆರವುಗೊಳಿಸುವಂತೆ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಇಂದು ಕೈಗೆತ್ತಿಕೊಳ್ಳಲಿದೆ.

ಕಳೆದ ಶುಕ್ರವಾರ ಈ ಕುರಿತ ಅರ್ಜಿಯ ವಿಚಾರಣೆ ಸುಪ್ರೀಂ ಕೋರ್ಟ್ ಅಂಗಳಕ್ಕೆ ಬಂದಿತ್ತು. ಆದರೆ, “ದೆಹಲಿ ಚುನಾವಣೆ ನಿಮಿತ್ತ ಈ ವಿಚಾರದಲ್ಲಿ ಕೋರ್ಟ್ ತೆಗೆದುಕೊಳ್ಳುವ ಯಾವುದೇ ತೀರ್ಮಾನ ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ” ಎಂದು ಅಭಿಪ್ರಾಯ ಪಟ್ಟಿದ್ದ ನ್ಯಾಯಾಲಯ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿತ್ತು.

ಈ ವೇಳೆ ಶಾಹಿನ್ ಬಾಗ್​ ಪ್ರತಿಭಟನೆ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದ ನ್ಯಾಯಮೂರ್ತಿಗಳಾದ ಎಸ್.ಕೆ. ಕೌಲ್ ಹಾಗೂ ಕೆ.ಎಂ. ಜೋಸೆಫ್ ಒಳಗೊಂಡ ದ್ವಿಸದಸ್ಯ ಪೀಠ, “ಸಿಎಎ ಕಾಯ್ದೆ ಮತ್ತು ಈ ಕುರಿತ ಶಾಹಿನ್ ಭಾಗ್ ಪ್ರತಿಭಟನೆಯಲ್ಲಿ ಸಮಸ್ಯೆ ಇದೆ ಎಂಬುದು ನ್ಯಾಯಾಲಯಕ್ಕೆ ಮನವರಿಕೆಯಾಗಿದೆ. ಇದನ್ನು ಹೇಗೆ ಪರಿಹರಿಸಬೇಕು ಎಂಬುದನ್ನು ನಾವು ನೋಡಬೇಕಾಗಿದೆ. ಆದರೆ, ಈ ಪ್ರಕರಣವನ್ನು ಸೋಮವಾರ ವಿಚಾರಣೆ ನಡೆಸುವುದೇ ಸೂಕ್ತ. ಆ ವೇಳೆಗಾಗಲೆ ನಾವು ಮತ್ತಷ್ಟು ಉತ್ತಮ ಸ್ಥಾನದಲ್ಲಿರುತ್ತೇವೆ” ಎಂದು ಅಭಿಪ್ರಾಯಪಟ್ಟಿತ್ತು.

ಕಳೆದ ಡಿಸೆಂಬರ್ 12ರಂದು ಕೇಂದ್ರ ಸರ್ಕಾರ ವಿವಾದಾತ್ವಕ ಸಿಎಎ ಕಾಯ್ದೆಯನ್ನು ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಮಂಡಿಸಿ ಅಂಗೀಕಾರ ಪಡೆದಿತ್ತು. ಈ ಕಾಯ್ದೆಗೆ ಸಹಿ ಹಾಕುವ ಮೂಲಕ ರಾಷ್ಟ್ರಪತಿ ಸಹ ಅಂಗೀಕರಿಸಿದ್ದಾರೆ.

ಆದರೆ, ಈ ಕಾಯ್ದೆಯಲ್ಲಿ ಮುಸ್ಲಿಮರಿಗೆ ತಾರತಮ್ಯ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಎಸಗಲಾಗಿದೆ ಎಂದು ಖಂಡನೆ ವ್ಯಕ್ತಪಡಿಸಿರುವ ಹೋರಾಟಗಾರರು ಕಳೆದ ಎರಡು ತಿಂಗಳಿನಿಂದ ಸತತವಾಗಿ ದೆಹಲಿಯ ಶಾಹಿನ್ ಬಾಗ್​ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆ ದೆಹಲಿ ವಿಧಾನಸಭಾ ಚುನಾವಣೆ ಮೇಲೂ ಪರಿಣಾಮ ಬೀರಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದನ್ನೂ ಓದಿ : ಬಿಜೆಪಿಯನ್ನು ವಿರೋಧಿಸಿದರೆ ಹಿಂದೂಗಳನ್ನು ವಿರೋಧಿಸಿದಂತಲ್ಲ ; ಆರ್​​ಎಸ್​ಎಸ್​ ಮುಖಂಡ ಭಯ್ಯಾಜಿ ಜೋಶಿ
First published: February 10, 2020, 9:18 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories